ನಾನಿನ್ನೂ ಮದುವೆಯಾಗಿಲ್ಲ ಎಂದು ಹೇಗೆ ಗೊತ್ತು? – ಮದುವೆ ಬಗ್ಗೆ ನಟಿ ಕಂಗನಾ ಶಾಕಿಂಗ್‌ ಹೇಳಿಕೆ!

ನಾನಿನ್ನೂ ಮದುವೆಯಾಗಿಲ್ಲ ಎಂದು ಹೇಗೆ ಗೊತ್ತು? – ಮದುವೆ ಬಗ್ಗೆ ನಟಿ ಕಂಗನಾ ಶಾಕಿಂಗ್‌ ಹೇಳಿಕೆ!

ಬಾಲಿವುಡ್‌ ನಟಿ, ಸಂಸದೆ ಕಂಗನಾ ರನೌತ್ ಸದಾ ಒಂದಲ್ಲ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಆಗಾಗ ತಮ್ಮ ಹೇಳಿಕೆಗಳ ಮೂಲಕವೇ ಟ್ರೋಲ್‌ಗೂ ಒಳಗಾಗುತ್ತಿರುತ್ತಾರೆ. ಇದೀಗ ನಟಿ ಸಂದರ್ಶನವೊಂದ್ರಲ್ಲಿ ನನಗೆ ಮದ್ವೆ ಆಗಿಲ್ಲ ಎಂದು ಯಾರು ಹೇಳಿದ್ದು ಯಾರು ಅಂತಾ ಕೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಭೀಕರ ಅಗ್ನಿ ಅವಘಡಕ್ಕೆ ಓರ್ವ ಬಲಿ – ಸಾವಿನ ಸಂಖ್ಯೆ ಏರಿಕೆ ಸಾಧ್ಯತೆ

ನಟಿ ಕಂಗನಾ ಇತ್ತೀಚೆಗೆ ಸಂಸರ್ಶನವೊಂದ್ರಲ್ಲಿ ಭಾಗವಹಿಸಿದ್ರು. ಈ ವೇಳೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಈ ವೇಳೆ ಕಂಗನಾ ಅವರಿಗೆ ಮದುವೆಯ ಬಗ್ಗೆ ಕೇಳಲಾಯಿತು. ಇದಕ್ಕೆ ಕಂಗನಾ, ‘ನಾನು ಇನ್ನೂ ಮದುವೆಯಾಗಿಲ್ಲ ಎಂದು ನಿಮಗೆ ಹೇಗೆ ಗೊತ್ತು. ನೀವು ನನ್ನನ್ನು ತಿಳಿದಿದ್ದೀರಿ ಎಂದು ಭಾವಿಸಬೇಡಿ..  ಎಂದು ಹೇಳಿದರು. ಬಳಿಕ ಕಂಗನಾ ನಗಲು ಪ್ರಾರಂಭಿಸಿದರು.  ಬಳಿಕ ಇದು ತಮಾಷೆಗಾಗಿ ಹೇಳಿದ್ದು.. ಮದುವೆ ನನ್ನ ಲಿಸ್ಟ್​​ನಲ್ಲಿ ಇದೆ. ಈಗಾಗಲೇ ತಡವಾಗಿದೆ ಎಂದು ನನಗೆ ತಿಳಿದಿದೆ. ಆದರೆ ನಾನು ಖಂಡಿತವಾಗಿಯೂ ಮದುವೆಯಾಗಲಿದ್ದೇನೆ  ಎಂದು ಕಂಗನಾ ಹೇಳಿದರು. ಅಷ್ಟೇ ಅಲ್ಲ, ಮದುವೆಯಾಗಲು ಕುಟುಂಬದಿಂದ ಸಾಕಷ್ಟು ಒತ್ತಡವಿದೆ, ಆದರೆ ಎಲ್ಲವೂ ಆಗಲು ಒಂದು ನಿಗದಿತ ಸಮಯವಿದೆ ಎಂದು ಕಂಗನಾ ಹೇಳಿದ್ದಾರೆ.

ಕಂಗನಾ ಕೂಡ ಲಿವ್-ಇನ್ ಸಂಬಂಧಗಳ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ. ಮದುವೆ ಎಂಬುದು ಜೀವನದಲ್ಲಿ ನಡೆಯುವ ಒಂದು ಒಳ್ಳೆಯ ವಿಷಯ. ಆದರೆ ಇಂದಿನ ಪೀಳಿಗೆ ಲಿವ್-ಇನ್ ಸಂಬಂಧಗಳಲ್ಲಿ ಹೆಚ್ಚು ನಂಬಿಕೆ ಇಡುತ್ತದೆ. ಲಿವ್-ಇನ್ ಸಂಬಂಧಗಳು ಮಹಿಳೆಯರ ಕಲ್ಯಾಣಕ್ಕೆ ಒಳ್ಳೆಯದಲ್ಲ. ನಾನು ಎಂದಿಗೂ ಲಿವ್-ಇನ್ ಸಂಬಂಧದಲ್ಲಿ ಇರಲಿಲ್ಲ. ಲಿವ್-ಇನ್ ಸಂಬಂಧದಲ್ಲಿರುವ ಯುವತಿಯರು ಗರ್ಭಿಣಿಯಾಗುತ್ತಾರೆ, ನಂತರ ಗರ್ಭಪಾತ ಮಾಡಿಸಿಕೊಳ್ಳಬೇಕಾಗುತ್ತದೆ. ಲಿವ್-ಇನ್ ಸಂಬಂಧಗಳು ಮಹಿಳೆಯರಿಗೆ ಸೂಕ್ತವಲ್ಲ ಎಂದು ನಾನು ಭಾವಿಸುತ್ತೇನೆ ಎನ್ನುತ್ತಾರೆ.

Shwetha M