ನಟಿ ಕಂಗನಾ ಮದುವೆಗೆ ಕೇಸ್‌ಗಳೇ ವಿಘ್ನ? – ಪೊಲೀಸರನ್ನು ಕಂಡು ಓಡಿ ಹೋಗ ಗಂಡಿನ ಕಡೆಯವರು!
ಬಾಲಿವುಡ್ ನಟಿ ಕಂಗನಾ ರಣಾವತ್ ಕಾಂಟ್ರವರ್ಸಿ ಕ್ವೀನ್ ಅಂತಾನೇ ಫೇಮಸ್.. ಸದಾ ಒಂದಲ್ಲ ಒಂದು ವಿವಾದಗಳಿಂದ ಸುದ್ದಿಯಲ್ಲಿರೋ ನಟಿ.. ಇತ್ತೀಚೆಗಷ್ಟೇ ರಾಜಕೀಯಕ್ಕೂ ಎಂಟ್ರಿ ಕೊಟ್ಟಿದ್ರು.. ವಯಸ್ಸು 38 ದಾಟಿದ್ರೂ ಮದುವೆ ಆಗಿಲ್ಲ ಅನ್ನೋ ಪ್ರಶ್ನೆ ಅಭಿಮಾನಿಗಳನ್ನ ಕಾಡ್ತಾ ಇದೆ. ಇದೀಗ ಕಂಗನಾ ಶಾಕಿಂಗ್ ವಿಚಾರವನ್ನ ಹೇಳಿದ್ದಾರೆ. ಮದುವೆ ಯಾಕೆ ಆಗಿಲ್ಲ ಅನ್ನೋ ವಿಚಾರವನ್ನ ತಿಳಿಸಿದ್ದಾರೆ.
ಇದನ್ನೂ ಓದಿ: ಮುಡಾ ಕೇಸ್: ಸಿಎಂ ಸಿದ್ದರಾಮಯ್ಯಗೆ ರಿಲೀಫ್ – ಸೆ.9ಕ್ಕೆ ಮತ್ತೆ ವಿಚಾರಣೆ ಮುಂದೂಡಿಕೆ!
ಕಂಗನಾ ರಾಣಾವತ್ ತಮ್ಮ ಮದುವೆ ಬಗ್ಗೆ ‘ಆಪ್ ಕಿ ಅದಾಲತ್’ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಕಂಗನಾಗೆ ಮದುವೆ ಬಗ್ಗೆ ಪ್ರಶ್ನೆ ಎದುರಾಗಿದೆ. ಅದಕ್ಕೆ ಅವರು ವಿವರವಾಗಿ ಉತ್ತರ ನೀಡಿದ್ದಾರೆ. ತಮ್ಮ ಮದುವೆಗೆ ಕೋರ್ಟ್ ಕೇಸ್ಗಳು ಅಡ್ಡಿಯಾಗಿವೆ ಎಂದು ಅವರು ಹೇಳಿದ್ದಾರೆ. ಜೊತೆಗೆ ಒಂದು ಅಚ್ಚರಿಯ ಘಟನೆಯನ್ನು ಕೂಡ ಕಂಗನಾ ರಣಾವತ್ ನೆನಪಿಸಿಕೊಂಡಿದ್ದಾರೆ.
ಅಷ್ಟಕ್ಕೂ ಕಂಗನಾ ಹೇಳಿದ್ದೇನು?
‘ಮದುವೆ ಬಗ್ಗೆ ನಾನೇನು ಹೇಳಲಿ. ಮದುವೆ ಕುರಿತು ನನ್ನ ಒಳ್ಳೆಯ ಅಭಿಪ್ರಾಯ ಇದೆ. ಎಲ್ಲರಿಗೂ ಸಂಗಾತಿ ಬೇಕು. ಮಕ್ಕಳು ಕೂಡ ಆಗಬೇಕು. ಜನರು ನನ್ನ ಹೆಸರನ್ನು ಎಷ್ಟು ಕೆಡಿಸಿದ್ದಾರೆ ಎಂದರೆ, ನನಗೆ ಮದುವೆ ಆಗಲು ಸಾಧ್ಯವಾಗುತ್ತಿಲ್ಲ. ಯಾರ ಜೊತೆಗಾದರೂ ನನ್ನ ಮದುವೆ ಮಾತುಕತೆ ನಡೆಯುತ್ತಿದೆ ಎನ್ನುವಾಗಲೆಲ್ಲ ಕೋರ್ಟ್ ಕೇಸ್ಗಳು ಬರುತ್ತವೆ’ ಎಂದು ಕಂಗನಾ ಹೇಳಿದ್ದಾರೆ.
‘ಪೊಲೀಸರು ಮನೆಗೆ ಬಂದು ನನ್ನನ್ನು ಕರೆದುಕೊಂಡು ಹೋಗುತ್ತಾರೆ. ಒಮ್ಮೆಯಂತೂ ಗಂಡಿನ ಕಡೆಯವರು ನಮ್ಮ ಮನೆಯಲ್ಲಿ ಇದ್ದಾಗಲೇ ಸಮನ್ಸ್ ಬಂತು. ಅದನ್ನು ಕಂಡು ಗಂಡಿನ ಕಡೆಯವರು ಓಡಿಹೋದರು. ಇದು ಕೂಡ ಒಂದು ಸೈಡ್ ಎಫೆಕ್ಟ್. ಇಲ್ಲ.. ನಾನು ತಮಾಷೆ ಮಾಡಿದೆ’ ಎಂದು ಕಂಗನಾ ರಣಾವತ್ ಹೇಳಿದ್ದಾರೆ. ಆದಷ್ಟು ಬೇಗ ಅವರು ಮದುವೆ ಆಗಲಿ ಎಂದು ಫ್ಯಾನ್ಸ್ ಬಯಸಿದ್ದಾರೆ.