ಎಲೆಕ್ಷನ್‌ಗೆ ನಿಂತ ಬೆನ್ನಲ್ಲೇ  2.46 ಕೋಟಿ ರೂಪಾಯಿ ಬೆಲೆಯ ಕಾರು ಖರೀದಿಸಿದ ಕಂಗನಾ!

ಎಲೆಕ್ಷನ್‌ಗೆ ನಿಂತ ಬೆನ್ನಲ್ಲೇ  2.46 ಕೋಟಿ ರೂಪಾಯಿ ಬೆಲೆಯ ಕಾರು ಖರೀದಿಸಿದ ಕಂಗನಾ!

ಬಾಲಿವುಡ್ ನಟಿ ಕಂಗನಾ ರಣವಾತ್ ಈಗ ಬಿಜೆಪಿ ಅಭ್ಯರ್ಥಿ. ಲೋಕಸಭಾ ಚುನಾವಣಾ ಅಖಾಡಕ್ಕೆ ಧುಮುಕಿದ ಬೆನ್ನಲ್ಲೇ ಮತ್ತೊಂದು ದುಬಾರಿ ಕಾರು ಖರೀದಿಸಿ ಸುದ್ದಿಯಾಗಿದ್ದಾರೆ. ರಾಜಕೀಯಕ್ಕೆ ಸೇರಿಕೊಂಡ ಬೆನ್ನಲ್ಲೇ ಕಂಗನಾ 2ನೇ ಬೆಂಜ್ ಕಾರಿನ ಒಡತಿಯಾಗಿದ್ದಾರೆ.

ಇದನ್ನೂ ಓದಿ: ರಾಹುಲ್‌ ಗಾಂಧಿ ಪ್ರಚಾರ ವೇದಿಕೆಯ ಫ್ಲೆಕ್ಸ್‌ನಲ್ಲಿ ಬಿಜೆಪಿ ಅಭ್ಯರ್ಥಿಯ ಫೋಟೋ!

ಲೋಕಸಭಾ ಚುನಾವಣೆಗೆ ಧುಮುಕಿರುವ ಕಂಗನಾ ರಣಾವತ್ ಹಲವು ಕಾರಣಗಳಿಂದ ಭಾರಿ ಸುದ್ದಿಯಲ್ಲಿದ್ದಾರೆ. ಕಂಗನಾ ವಿರುದ್ಧ ಕಾಂಗ್ರೆಸ್ ಮಾಡಿದ ಕೀಳು ಕಮೆಂಟ್‌ನಿಂದ ಸುದ್ದಿಯಾಗಿದ್ದರು. ಅದಾದ ಬಳಿಕ ಕಂಗನಾ ರಾಹುಲ್‌ ಗಾಂಧಿಯವರನ್ನು ಟಾರ್ಗೆಟ್‌ ಮಾಡಿ ಹೇಳಿಕೆ ನೀಡಿ ಸುದ್ದಿಯಲ್ಲಿದ್ದರು. ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ನಟಿ ಕಂಗನಾ, ಈಗಾಗಲೇ ಪ್ರಚಾರ ನಡೆಸುತ್ತಿದ್ದಾರೆ. ಇದೀಗ ಕಂಗನಾ ಹೊಸ ಕಾರು ಖರೀದಿಸಿ ಸುದ್ದಿಯಾಗಿದ್ದಾರೆ.

ಕಂಗನಾ ರಣಾವತ್ ಖರೀದಿಸಿದ ಮರ್ಸಿಡಿಸ್ ಬೆಂಜ್ ಮೆಬ್ಯಾಕ್ ಕಾರಿನ ಬೆಲೆ 2.4 ಕೋಟಿ ರೂಪಾಯಿ(ಎಕ್ಸ್ ಶೋ ರೂಂ). ಇದು ಮೇಬ್ಯಾಕ್ ಜಿಎಲ್‌ಎಸ್ ಎಡಿಶನ್ ಕಾರು. ಮುಂಬೈನಲ್ಲಿ ಕಂಗನಾ ರಣವಾತ್ ತಮ್ಮ ಹೊಸ ಕಾರಿನಲ್ಲಿ ಕಾಣಿಸಿಕೊಂಡಿದ್ದಾರೆ. ಮುಂಬೈ ಸಲೂನ್‌ನಿಂದ ಹೊರಬಂದ ಕಂಗನಾ, ತಮ್ಮ ಹೊಸ ಕಾರಿನ ಮೂಲಕ ತೆರಳಿದ್ದಾರೆ.

Shwetha M