ಅಯ್ಯಪ್ಪನ ಸನ್ನಿಧಿಯಲ್ಲಿ ದುರಂತ! – ಕರ್ನಾಟಕದ ಮಾಲಾಧಾರಿಗೆ ಆಗಿದ್ದೇನು?
ಮೊಬೈಲ್‌ನಲ್ಲಿ ಸೂಸೈ*ಡ್ ಹಿಂದಿನ ಸತ್ಯ!  

ಅಯ್ಯಪ್ಪನ ಸನ್ನಿಧಿಯಲ್ಲಿ ದುರಂತ! – ಕರ್ನಾಟಕದ ಮಾಲಾಧಾರಿಗೆ ಆಗಿದ್ದೇನು?ಮೊಬೈಲ್‌ನಲ್ಲಿ ಸೂಸೈ*ಡ್ ಹಿಂದಿನ ಸತ್ಯ!  

ಸ್ವಾಮಿ ಅಯ್ಯಪ್ಪ.. ಶರಣಂ ಅಯ್ಯಪ್ಪ.. ಅಯ್ಯಪ್ಪ ಅಂದ್ರೆ ಭಕ್ತಿ ಹೆಚ್ಚುತ್ತೆ.. ಕೋಟಿ ಕೋಟಿ ಜನ ಅಯ್ಯಪ್ಪನ ಭಕ್ತಯಲ್ಲಿ ಮುಳುಗಿ ಹೋಗ್ತಾರೆ..  ಕಠಿಣ ವ್ರತ ಮಾಡಿ ಶಬರಿಮೈಲೆಯಲ್ಲಿ ನೆಲೆಸಿರೋ ಅಯ್ಯಪ್ಪನ ದರ್ಶನ ಪಡೆಯುತ್ತಾರೆ.. ಅಯ್ಯಪ್ಪನ ದರ್ಶನ ಪಡೆಯೋಕೆ ದೇಶದ ನಾನಾ ರಾಜ್ಯಗಳಿಂದ ಕೇರಳಕ್ಕೆ ಜನ ಹೋಗ್ತಾರೆ.. ಕರ್ನಾಟಕದಲ್ಲೂ ಲಕ್ಷಾಂತರ ಜನ ಅಯ್ಯಪ್ಪನ ದರ್ಶನ ಪಡೆಯುತ್ತಾರೆ.. ಆ ಸನ್ನಿಧಾನದಲ್ಲಿ ನಡೆಯ ಬಾರದ ಘೋರ ದುರಂತ ನಡೆದು ಹೋಗಿದೆ.. ನೂರಾರು ಭಕ್ತರ ಮಧ್ಯೆಯೇ ಅವಘಡ ನಡೆದಿದೆ.

ಇದನ್ನೂ ಓದಿ: 15 ಇನ್ನಿಂಗ್ಸ್.. 1 ಶತಕ.. 318 ರನ್ ಗಳಿಸಿದ ಕೊಹ್ಲಿ!- ವಿರಾಟ್ ಕೊಹ್ಲಿ ಟೆಸ್ಟ್ ಫೇಲ್ಯೂರ್!

ಅಯ್ಯಪ್ಪನ ಸಾನಿಧ್ಯಕ್ಕೆ ಒಮ್ಮೆಯಾದ್ರೂ ಹೋಗಲೇ ಬೇಕು ಅನ್ನೋದು ಕೋಟಿ ಕೋಟಿ ಭಕ್ತರ ಆಸೆ..ಹೀಗಾಗಿಯೇ ಕಠಿಣ ವ್ರತ ಮಾಡಿ ಅಯ್ಯಪ್ಪನ ದರ್ಶನ ಪಡೆಯೋಕೆ ಭಕ್ತರು ಹೋಗ್ತಾರೆ.. ಕೇರಳದ ಶಬರಿಮಲೆಯ ಸೀಸನ್ ಆಗಿರೋದ್ರಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಶಬರಿಮಲೆ ದೇವಸ್ಥಾನಕ್ಕೆ ಭೇಟಿ ನೀಡಿ ಅಯ್ಯಪ್ಪನ ದರ್ಶನ ಪಡೆಯುತ್ತಾರೆ. ಈ ಬಾರಿ ಕೂಡ ಶಬರಿಮಲೆ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಭಾರಿ ಹೆಚ್ಚಳವಾಗಿದೆ.ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.25 ರಷ್ಟು ಹೆಚ್ಚು ಭಕ್ತರು ಭೇಟಿ ನೀಡಿ ದರ್ಶನ ಪಡೆದಿದ್ದಾರೆ. ಇನ್ನು ದೇವಸ್ಥಾನದ ಆದಾಯವೂ ಹೆಚ್ಚಳವಾಗಿದೆ .. ಎಲ್ಲರಂತೆ ಕರ್ನಾಟಕ ಕನಕಪುರ ಭಕ್ತನಾದ ಕುಮಾರಸ್ವಾಮಿ ಕೂಡ ಅಯ್ಯಪ್ಪನ ದರ್ಶನಕ್ಕೆ ಹೋಗಿದ್ದಾರೆ. ಸ್ವಾಮಿಯೇ ಶರಣಂ ಅಯ್ಯಪ್ಪ ಅನ್ನೋ ಕೂಗು ಒಂದ್ಕಡೆ ಕೇಳುತ್ತಿದ್ದರೆ, ಮತ್ತೊಂದ್ಕಡೆ ಈ ಕುಮಾರ್ ಜೀವಕ್ಕೆ ಕುತ್ತು ತುಂದುಕೊಂಡಿದ್ದ.. ತುಪ್ಪದ ಅಭಿಷೇಕ ಕೌಂಟರ್ ಮಂಟಪದ ಮೇಲಿನಿಂದ ಅವರು ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯ ವೀಡಿಯೊ ಭಕ್ತರೊಬ್ಬರ ಮೊಬೈಲ್‌ನಲ್ಲಿ ಸೆರೆಯಾಗಿ ಈಗ ವೈರಲ್ ಆಗಿದೆ.

ಅಂದಹಾಗೇ ಬೆಂಗಳೂರಿನಿಂದ ಕೇರಳದ ಶಬರಿಮಲೆಗೆ ಹೋದ ಕುಮಾರ್ ದೇವಸ್ಥಾನದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಶಬರಿಮಲೆಯ ತುಪ್ಪದ ಅಭಿಷೇಕ ಕೌಂಟರ್‌ಗಳ ಮಂಟಪದಿಂದ ಜಿಗಿದು ಕೆಳಗೆ ಬಿದ್ದಿದ್ದಾರೆ. ಅವರು ಹಾರುತ್ತಿದ್ದಂತೆ ಅಕ್ಕಪಕ್ಕದಲ್ಲಿದ್ದ ಭಕ್ತರು ಪಕ್ಕಕ್ಕೆ ಸರಿದಿದ್ದಾರೆ.. ಆದ್ರೆ ಅಲ್ಲಿದ್ದವರು ಕನಿಷ್ಠ ಪಕ್ಷ ಆತನನ್ನ ಎತ್ತುವ ಪ್ರಯತ್ನ ಕೂಡ ಮಾಡಿಲ್ಲ.. ನಂತ್ರ ಅಲ್ಲಿದ್ದ ಪೊಲೀಸರು ಕೈ ಕಾಲು ಮುರಿದುಕೊಂಡಿದ್ದ ಕುಮಾರ್‌ನನ್ನ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರು. ಬಳಿಕ ಕೊಟ್ಟಾಯಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ. ಕುಮಾರಸ್ವಾಮಿ ಖಿನ್ನತೆಯಿಂದ ಬಳಲುತ್ತಿದ್ದು ಈ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದ್ರೆ ಅಯ್ಯಪ್ಪನ ಸನ್ನಿಧಿಯಲ್ಲಿ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದು ನಿಜಕ್ಕೂ ವಿಪರ್ಯಾಸ. ಇದೇ ಮೊದಲ ಬಾರಿಗೆ ಅಯ್ಯಪ್ಪ ಸನ್ನಧಿಯಲ್ಲಿ ಇಂತಹ ಘಟನೆ ನಡೆದಿದ್ದು, ಭಕ್ತರ ಆತಂಕ ಹೆಚ್ಚಿದೆ.

Shwetha M

Leave a Reply

Your email address will not be published. Required fields are marked *