ಪಾಕ್ನಲ್ಲೂ KOHLIಯೇ ಕಿಂಗ್ – ವೈರಿ ರಾಷ್ಟ್ರದಲ್ಲೂ RO-KO ಗುಣಗಾನ
ಚಾಂಪಿಯನ್ಸ್ ಟ್ರೋಫಿಗಾಗಿ ಗಿಮಿಕ್?

ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿಗೆ ಇಡೀ ಜಗತ್ತಿನಾದ್ಯಂತ ಫ್ಯಾನ್ಸ್ ಇರೋದು ಗೊತ್ತೇ ಇದೆ. ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ ಭಾರತಕ್ಕೆ ಬದ್ಧ ವೈರಿ ರಾಷ್ಟ್ರವಾಗಿರೋ ಪಾಕಿಸ್ತಾನದಲ್ಲಿ ಅವ್ರದ್ದೇ ಆಟಗಾರರಿಗಿಂತ ಹೆಚ್ಚು ಫ್ಯಾನ್ಸ್ ವಿರಾಟ್ಗೆ ಇದ್ದಾರಂತೆ. ಹೀಗಂತ ಯಾರೋ ಮೂರನೇ ವ್ಯಕ್ತಿ ಹೇಳಿಲ್ಲ. ಪಾಕಿಸ್ತಾನದ ಮಾಜಿ ಕ್ರಿಕೆಟಿಗನೇ ಇಂಥಾದ್ದೊಂದು ಅಚ್ಚರಿಯ ಸ್ಟೇಟ್ಮೆಂಟ್ ಕೊಟ್ಟಿದ್ದಾರೆ. ಅಷ್ಟಕ್ಕೂ ಭಾರತವನ್ನ ಕಂಡ್ರೆ ಕೆಂಡ ಕಾರುವ ಪಾಕ್ನಲ್ಲಿ ಭಾರತೀಯ ಆಟಗಾರ ವಿರಾಟ್ಗೆ ಹೆಚ್ಚು ಫ್ಯಾನ್ಸ್ ಇರೋದೇಕೆ? ಇದ್ರಿಂದ ಅಲ್ಲಿನ ಆಟಗಾರರಿಗೆ ಏನು ಎಫೆಕ್ಟ್ ಆಗ್ತಿದೆ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಬಿಗ್ ಬಾಸ್ ನಟ – ನಟಿಯರಿಗೆ ಮಾತ್ರ? – ದೊಡ್ಮನೆಯಲ್ಲಿ ಭಾರೀ ಬದಲಾವಣೆ?
ಕ್ರಿಕೆಟ್ನ ಗಂಧ ಗಾಳಿಯೂ ಗೊತ್ತಿಲ್ಲದ ನೆಲದಲ್ಲೂ ಇಂದು ಬ್ಯಾಟ್, ಬಾಲ್ ಸದ್ದು ಮಾಡ್ತಿದೆ. ಜಗತ್ತಿನಲ್ಲಿ ಫುಟ್ಬಾಲ್ ಬಳಿಕ ಕ್ರಿಕೆಟ್ ಅಷ್ಟರ ಮಟ್ಟಿಗೆ ಜನಪ್ರಿಯತೆ ಪಡ್ಕೊಳ್ಳೋಕೆ ಒನ್ ಆಫ್ ದಿ ರೀಸನ್ ವಿರಾಟ್ ಕೊಹ್ಲಿ. ಅಷ್ಟೇ ಯಾಕೆ ಶತಮಾನದ ಬಳಿಕ ಒಲಿಂಪಿಕ್ಸ್ಗೆ ಮತ್ತೆ ಕ್ರಿಕೆಟ್ ಸೇರ್ಪಡೆ ಮಾಡುವಲ್ಲಿ ಕೊಹ್ಲಿಯೇ ಪ್ರಮುಖ ಕಾರಣ ಅಂತಾ ಆಯೋಜಕರು ಹೇಳಿದ್ದೂ ಕೂಡ ನಿಮಗೆ ನೆನಪಿರಬಹುದು. ವಿರಾಟ್ ಕೊಹ್ಲಿಯವ್ರ ಜನಪ್ರಿಯತೆಯನ್ನ ಕೊಂಡಾಡಿರುವ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಕಮ್ರಾನ್ ಅಕ್ಮಲ್ ಹೊಸ ಪೀಠಿಕೆ ಬೇರೆ ಹಾಕಿದ್ದಾರೆ. ಇತ್ತೀಚೆಗೆ ಪಾಕಿಸ್ತಾನ ಕ್ರಿಕೆಟರ್ಸ್ ಸಾಲು ಸಾಲು ಫ್ಲ್ಯಾಪ್ ಶೋಗಳನ್ನ ಕೊಡ್ತಿದ್ದಾರೆ. ಟಿ-20 ವಿಶ್ವಕಪ್ನಲ್ಲಿ ಕ್ರಿಕೆಟ್ ಶಿಶು ಅಂತಾ ಕರೆಸಿಕೊಳ್ಳೋ ಅಮೆರಿಕದ ಎದುರೇ ಸೋತು ಲೀಗ್ ಹಂತದಲ್ಲೇ ಟೂರ್ನಿಯಿಂದ ಹೊರ ಬಿದ್ದಿತ್ತು. ಆ ಬಳಿಕ ಇತ್ತೀಚೆಗೆ ಬಾಂಗ್ಲಾ ವಿರುದ್ಧ ನಡೆದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ತಮ್ಮದೇ ನೆಲದಲ್ಲಿ ಬಾಂಗ್ಲಾ ಎದುರು ಮಣ್ಣು ಮುಕ್ಕಿತ್ತು. ಆರ್ಥಿಕವಾಗಿ ಪಾತಾಳಕ್ಕೆ ಕುಸಿದಿರೋ ಪಾಕ್ನಲ್ಲಿ ಆಟಗಾರರು ಬರೀ ಬಿಲ್ಡಪ್ ಕೊಟ್ಕೊಂಡು ಓಡಾಡ್ತಿದ್ದಾರೆಯೇ ಹೊರತು ಗೆಲುವನ್ನ ಮರೆತಿದ್ದಾರೆ. ಹೀಗಾಗಿ ತಮ್ಮದೇ ಆಟಗಾರರಿಗೆ ಚಾಟಿ ಬೀಸಿರುವ ಕಮ್ರಾನ್, ವಿರಾಟ್ ಮತ್ತು ರೋಹಿತ್ರನ್ನ ಹಾಡಿ ಹೊಗಳಿದ್ದಾರೆ. ಅದಕ್ಕೆ ಕಾರಣವೂ ಇದೆ.
ಪಾಕ್ ನಲ್ಲೂ ಕೊಹ್ಲಿಯೇ ಕಿಂಗ್!
ಭಾರತದ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿಯವ್ರನ್ನ ಪಾಕ್ನ ಮಾಜಿ ಕ್ರಿಕೆಟಿಗ ಕಮ್ರಾನ್ ಅಕ್ಮಲ್ ಗುಣಗಾನ ಮಾಡಿದ್ದಾರೆ. ಪಾಕಿಸ್ತಾನದಲ್ಲಿ ವಿರಾಟ್ ಕೊಹ್ಲಿ ಅತ್ಯಂತ ಜನಪ್ರಿಯ ಕ್ರಿಕೆಟಿಗ. ಕೊಹ್ಲಿಗಿಂತ ಜನಪ್ರಿಯ ಯಾವ ಕ್ರಿಕೆಟಿಗನೂ ನಮ್ಮಲ್ಲಿ ಇಲ್ಲ. ಅವರಿಗೆ ಪಾಕ್ನಲ್ಲಿ ಅಷ್ಟೊಂದು ಅಭಿಮಾನಿಗಳಿದ್ದಾರೆ. ಹೀಗಾಗಿ ವಿರಾಟ್ ಕೊಹ್ಲಿ ಒಮ್ಮೆಯಾದರೂ ಪಾಕಿಸ್ತಾನದಲ್ಲಿ ಆಡಬೇಕೆಂದು ನಾನು ಬಯಸುತ್ತೇನೆ ಎಂದು 2025ರ ಚಾಂಪಿಯನ್ಸ್ ಟ್ರೋಫಿಗೆ ಇನ್ವಿಟೇಷನ್ ಕೊಟ್ಟಿದ್ದಾರೆ. ಇಷ್ಟಕ್ಕೇ ಸುಮ್ಮನಾಗದ ಕಮ್ರಾನ್, ಪಾಕಿಸ್ತಾನದಲ್ಲಿ ವಿರಾಟ್ ಕೊಹ್ಲಿಗೆ ನೀಡುವ ಗೌರವ ಮತ್ತು ಪ್ರೀತಿ ಬೇರೆ ಯಾವುದೇ ಆಟಗಾರನಿಗೆ ಸಿಗುವುದಿಲ್ಲ. ಹೀಗಾಗಿ ಭಾರತೀಯ ಕ್ರಿಕೆಟ್ ದಿಗ್ಗಜರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ನಿವೃತ್ತಿಯಾಗುವ ಮೊದಲು ಒಮ್ಮೆಯಾದರೂ ಕ್ರಿಕೆಟ್ ಆಡಲು ಪಾಕಿಸ್ತಾನಕ್ಕೆ ಬರಬೇಕು. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಎಲ್ಲಾ ದೇಶಗಳಲ್ಲೂ ಆಡಿದ್ದಾರೆ. ಇವರಿಬ್ಬರು ಎಲ್ಲೇ ಹೋದರೂ ಅಭಿಮಾನಿಳು ಸಂಭ್ರಮಿಸುತ್ತಿದ್ದಾರೆ. ಆದರೆ ಪಾಕಿಸ್ತಾನದಲ್ಲಿರುವ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅಭಿಮಾನಿಗಳು ಎಲ್ಲರನ್ನು ಹಿಂದಿಕ್ಕುವುದರಲ್ಲಿ ಅನುಮಾನವೇ ಇಲ್ಲ. ಅಷ್ಟೊಂದು ಮಂದಿ ವಿರಾಟ್ ಕೊಹ್ಲಿಯನ್ನು ರೋಲ್ ಮಾಡೆಲ್ ಎಂದು ಪರಿಗಣಿಸಿದ್ದಾರೆ. ಹಾಗೆಯೇ ರೋಹಿತ್ ಶರ್ಮಾ ಅವರನ್ನು ಇಷ್ಟಪಡುತ್ತಿದ್ದಾರೆ. ಹೀಗಾಗಿ ಇವರಿಬ್ಬರು ಪಾಕ್ ನೆಲದಲ್ಲಿ ಆಡಿದರೆ, ಪಾಕಿಸ್ತಾನಿ ಅಭಿಮಾನಿಗಳ ಸಂತಸಕ್ಕೆ ಮಿತಿಯೇ ಇರುವುದಿಲ್ಲ ಎಂದು ಕಮ್ರಾನ್ ಅಕ್ಮಲ್ ಹೇಳಿದ್ದಾರೆ. ಹೌದು ಕಮ್ರಾನ್ ಅಕ್ಮಲ್ ಇಷ್ಟರ ಮಟ್ಟಿಗೆ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾರನ್ನ ಹೊಗಳೋಕೆ ಕಾರಣ ಚಾಂಪಿಯನ್ಸ್ ಟ್ರೋಫಿ. 2025ರ ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲಿ ನಡೆಯಲಿದೆ. ಆದರೆ ಪಾಕ್ನಲ್ಲಿ ಆಡಲು ಟೀಮ್ ಇಂಡಿಯಾ ಹಿಂದೇಟು ಹಾಕುತ್ತಿದೆ. ಇದೇ ಕಾರಣಕ್ಕೆ ಕಮ್ರಾನ್ ಅಕ್ಮಲ್, ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅಭಿಮಾನಿಗಳಿಗೋಸ್ಕರನಾದ್ರೂ ಪಾಕ್ಗೆ ಬನ್ನಿ ಅಂತಾ ಹೊಸ ವರಸೆ ತೆಗೆದಿದ್ದಾರೆ.
ಪಾಕ್ ಕ್ರಿಕೆಟಿಗರ ಮೇಲೆ ಅಭಿಮಾನಿಗಳ ಕ್ರೇಜ್ ಕಮ್ಮಿ ಆಗೋಕೆ ಕಾರಣ ಅವ್ರ ಫ್ಲ್ಯಾಪ್ ಶೋ. ಪಾಕಿಸ್ತಾನದ ಸ್ಟಾರ್ ಬ್ಯಾಟರ್ ಅಂತಾನೇ ಕರೆಸಿಕೊಳ್ಳೋ ಬಾಬರ್ ಅಜಮ್ ಬ್ಯಾಟ್ ಕೂಡ ಸದ್ದು ಮಾಡುತ್ತಿಲ್ಲ. ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಮೊದಲ ಇನ್ನಿಂಗ್ಸ್ನಲ್ಲಿ ಡಕ್ಔಟ್ ಆಗಿದ್ರು. 2ನೇ ಇನ್ನಿಂಗ್ಸ್ನಲ್ಲಿ 22 ರನ್ ಅಷ್ಟೇ ಗಳಿಸಿದ್ಉರ. ಇದ್ರ ಎಫೆಕ್ಟ್ ಈಗ ಐಸಿಸಿ ಟೆಸ್ಟ್ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಹಿನ್ನಡೆ ಅನುಭವಿಸುವಂತಾಯ್ತು. 3ನೇ ಸ್ಥಾನದಿಂದ 9ನೇ ಸ್ಥಾನಕ್ಕೆ ಕುಸಿದಿದ್ದಾರೆ. ಒಟ್ನಲ್ಲಿ ವಿರಾಟ್ ಕೊಹ್ಲಿ ಬರೀ ಸ್ಟಾರ್ ಬ್ಯಾಟರ್ ಮಾತ್ರ ಅಲ್ಲ. ಅವ್ರ ಅಗ್ರೆಶನ್, ಌಟಿಟ್ಯೂಟ್ನಿಂದ ಇಡೀ ಜಗತ್ತನ್ನೇ ಸೆಳೆದಿದ್ದಾರೆ. ಇದಕ್ಕೆ ಪಾಕಿಸ್ತಾನವೂ ಕೂಡ ಹೊರತಾಗಿಲ್ಲ.