‘ಜೀವನದಲ್ಲಿ ಒಮ್ಮೆಯಾದ್ರೂ ಕಂಬಳ ನೋಡ್ಬೇಕು’ – ಸಂಸ್ಕೃತಿ ಸಚಿವಾಲಯ ಟ್ವೀಟ್

‘ಜೀವನದಲ್ಲಿ ಒಮ್ಮೆಯಾದ್ರೂ ಕಂಬಳ ನೋಡ್ಬೇಕು’ – ಸಂಸ್ಕೃತಿ ಸಚಿವಾಲಯ ಟ್ವೀಟ್

ಬೆಂಗಳೂರು: ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಜನಪದ ಕ್ರೀಡೆ ಕಂಬಳ ಈಗಾಗಲೇ ಶುರುವಾಗಿದೆ. ಆದರೆ, ಜನಪದ ಕ್ರೀಡೆ ಕಂಬಳವನ್ನು ಮತ್ತೆ ನಿಷೇಧಿಸಬೇಕು ಎಂಬ ಕೂಗು ಕೇಳಿಬರುತ್ತಿದ್ದು, ಪ್ರಾಣಿ ದಯಾ ಸಂಘದವರು ಕಂಬಳ ಕೂಟ ನಿಷೇಧಿಸುವಂತೆ ಮತ್ತೆ ಸುಪ್ರಿಂ ಕೋರ್ಟ್ ಮೊರೆ ಹೋಗಿದ್ದಾರೆ. ಇದರ ಬೆನ್ನಲ್ಲೇ ತುಳುನಾಡಿನ ಜಾನಪದ ಕ್ರೀಡೆ ಕಂಬಳದ ಕುರಿತಂತೆ ಕೇಂದ್ರ ಸಂಸ್ಕೃತಿ ಸಚಿವಾಲಯ ಪೋಸ್ಟರ್‌ ಒಂದನ್ನು ತನ್ನ ಟ್ವಿಟರ್‌ ಖಾತೆಯಲ್ಲಿ ಹಾಕಿದ್ದು, ಜೀವಮಾನದಲ್ಲಿ ಒಮ್ಮೆಯಾದರೂ ಕಂಬಳ ನೋಡಬೇಕು ಎಂದು ಹೇಳಿದೆ.

ಇದನ್ನೂ ಓದಿ:ಕಂಬಳ ಕ್ರೀಡೆಯ ಮೇಲೆ ಮತ್ತೆ ನಿಷೇಧದ ತೂಗುಕತ್ತಿ ?

‘ಗ್ರಾಮಸ್ಥರಿಗೆ ಮತ್ತು ಪ್ರವಾಸಿಗರಿಗೆ ಇದೊಂದು ಮರೆಯಲಾಗದ ಸಂದರ್ಭವಾಗಿದ್ದು, ನೀವು ಇದಕ್ಕೂ ಮುಂಚೆ ಯಾವತ್ತಾದರೂ ಕಂಬಳ ನೋಡಿದ್ದೀರಾ’ ಎಂದು ಪ್ರಶ್ನಿಸಿದೆ. ಗೇಮ್ಸ್‌ ಆಫ್‌ ಇಂಡಿಯಾ ಮತ್ತು ಅಮೃತ ಮಹೋತ್ಸವ ಹ್ಯಾಷ್‌ ಟ್ಯಾಗ್‌ನಲ್ಲಿ ಟ್ವೀಟ್ ಮಾಡಲಾಗಿದೆ.

‘ಕಂಬಳ ಕರಾವಳಿ ಕರ್ನಾಟಕದ ರೈತ ಸಮುದಾಯದ ನೆಚ್ಚಿನ ಕ್ರೀಡೆಯಾಗಿದೆ. ವಾರ್ಷಿಕ ಕ್ರೀಡೆಯಾಗಿ ಕಂಬಳ ಓಟವನ್ನು ಆಯೋಜಿಸುತ್ತಾರೆ. 150ಕ್ಕೂ ಹೆಚ್ಚು ಜೋಡಿ ಕೋಣಗಳು ತರಬೇತಿ ಪಡೆದು ಇದರಲ್ಲಿ ಪಾಲ್ಗೊಳ್ಳುತ್ತವೆ’ ಎಂದು ಪೋಸ್ಟರ್‌ನಲ್ಲಿ ಮಾಹಿತಿ ನೀಡಲಾಗಿದೆ. ಕೇಂದ್ರ ಸಂಸ್ಕೃತಿ ಇಲಾಖೆಯ ಕಂಬಳ ಕುರಿತ ಟ್ವೀಟ್‌ಗೆ ಕಂಬಳ ಪ್ರೇಮಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

suddiyaana