35 ವರ್ಷಗಳ ನಂತರ ಒಂದಾದ ಸೂಪರ್ ಹಿಟ್ ಜೋಡಿ!

35 ವರ್ಷಗಳ ನಂತರ ಒಂದಾದ ಸೂಪರ್ ಹಿಟ್ ಜೋಡಿ!

ದಕ್ಷಿಣ ಭಾರತ ಚಿತ್ರರಂಗದ ಸೂಪರ್ ಹಿಟ್ ಜೋಡಿ ಎಂದು ಕರೆಸಿಕೊಂಡಿದ್ದ ಕಮಲ್ ಹಾಸನ್ ಮತ್ತು ಮಣಿರತ್ನಂ ಬರೋಬ್ಬರಿ 35 ವರ್ಷಗಳ ನಂತರ ಒಂದಾಗಿದ್ದಾರೆ. ಸಿನಿಮಾ ಜಗತ್ತನ್ನೇ ತನ್ನತ್ತ ನೋಡುವಂತೆ ಮಾಡಿದ ಸೂಪರ್ ಹಿಟ್ ಸಿನಿಮಾ ನಾಯಗನ್ ನಂತರ ಈ ಜೋಡಿ ಮತ್ತೊಮ್ಮೆ ಒಂದಾಗಿದ್ದು ಅಭಿಮಾನಿಗಳಲ್ಲಿ ಸಂತಸ ತಂದಿದೆ. 1987ರಲ್ಲಿ ನಾಯಗನ್ ಸಿನಿಮಾ  ಮೂಲಕ ಈ ಜೋಡಿ ಸಿನಿಮಾ ರಂಗದಲ್ಲಿ ಹೊಸ ಇತಿಹಾಸವನ್ನೇ ಬರೆದಿತ್ತು. ಇದೇ ಜೋಡಿ ಈಗ ತಮ್ಮ ಹೊಸ ಚಿತ್ರದ ಬಗ್ಗೆ ಹೇಳಿಕೊಳ್ಳುವ ಮೂಲಕ ಮತ್ತೆ ತೆರೆಗಪ್ಪಳಿಸಲಿದ್ದಾರೆ.

ಇದನ್ನೂ ಓದಿ:  ಮತ್ತೆ ಮುಂದಕ್ಕೆ ಹೋದ ಆದಿಪುರುಷ್ ಚಿತ್ರ ರಿಲೀಸ್ ಡೇಟ್: ಕಾರಣ ಏನು ಗೊತ್ತಾ?

ನವೆಂಬರ್ 8ರಂದು 68ನೇ ಜನ್ಮದಿನಾಚರಣೆ ಆಚರಿಸಿಕೊಂಡ ಖುಷಿಯಲ್ಲಿರುವ ನಟ ಕಮಲ್ಹಾಸನ್ ಈ ವಿಚಾರದ  ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಟ್ವೀಟ್ ಮಾಡಿರುವ ಕಮಲ್ ಹಾಸನ್ , ನನ್ನ ಮುಂದಿನ ಸಿನಿಮಾ, ಚಿತ್ರರಂಗದ ಮಾಸ್ಟರ್ ಮಣಿರತ್ನಂ ಅವರ ಜೊತೆಗೆ ಎಂದು ಬರೆದುಕೊಂಡಿದ್ದಾರೆ. ಮತ್ತೊಮ್ಮೆ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. #ಕೆಎಚ್ 234 ಎಂದು ಹೊಸ ಟೀಸರ್ನೊಂದಿಗೆ ಟ್ವೀಟ್ ಮಾಡಿದ್ದಾರೆ.

ಉದಯನಿಧಿ ಸ್ಟಾಲಿನ್ ಅವರ ರೆಡ್ಗೈಂಟ್ ಮೂವೀಸ್ ಮತ್ತು ಕಮಲ್ ಹಾಸನ್ ಅವ್ರ ರಾಜ್ಕಮಲ್ ಫಿಲಂಸ್ ಒಟ್ಟಾಗಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಎ.ಆರ್ ರೆಹಮಾನ್ ಅವರ ಸಂಗೀತ ಈ ಚಿತ್ರಕ್ಕಿದೆ.

suddiyaana