‘ಪುಷ್ಪಕ ವಿಮಾನ’ ಸಿನಿಮಾ ತೆರೆಕಂಡು 35 ವರ್ಷಗಳು – ಸಿನಿಮಾ ನೆನಪಿಸಿಕೊಂಡ ನಟ ಕಮಲ್ ಹಾಸನ್
‘ಪುಷ್ಪಕ ವಿಮಾನ’ ಸಿನಿಮಾದ ಬಗ್ಗೆ ಕಮಲ್ ಹಾಸನ್ ಭಾವನಾತ್ಮಕ ಪೋಸ್ಟ್

‘ಪುಷ್ಪಕ ವಿಮಾನ’ ಸಿನಿಮಾ ತೆರೆಕಂಡು 35 ವರ್ಷಗಳು – ಸಿನಿಮಾ ನೆನಪಿಸಿಕೊಂಡ ನಟ ಕಮಲ್ ಹಾಸನ್‘ಪುಷ್ಪಕ ವಿಮಾನ’  ಸಿನಿಮಾದ ಬಗ್ಗೆ ಕಮಲ್ ಹಾಸನ್ ಭಾವನಾತ್ಮಕ ಪೋಸ್ಟ್

1987ರಲ್ಲಿ ಭಾರತೀಯ ಸಿನಿಜಗತ್ತಿನಲ್ಲಿ ಹೊಸ ದಾಖಲೆ ಬರೆದ ಸಿನಿಮಾ ಪುಷ್ಪಕ ವಿಮಾನ. ಸಿನಿಮಾದ ಮೂಲಕ ಕಮಲ್ ಹಾಸನ್ ತಾನೊಬ್ಬ ಶ್ರೇಷ್ಠ ನಟ ಅನ್ನೋದನ್ನ ಸಾಬೀತು ಪಡಿಸಿದ್ದರು. ಇಡೀ ಚಿತ್ರದಲ್ಲಿ ಒಂದೇ ಒಂದು ಮಾತಿಲ್ಲದ್ದಿದ್ದರೂ ಸಿನಿ ಪ್ರಿಯರು ಈ ಸಿನಿಮಾವನ್ನು ಒಪ್ಪಿಕೊಂಡು ಮೆಚ್ಚಿಕೊಂಡಿದ್ದರು. ಅಷ್ಟೇ ಅಲ್ಲ, ಆ ಕಾಲದಲ್ಲಿ ಈ ಸಿನಿಮಾಕ್ಕೆ ಅನೇಕ ಪ್ರಶಸ್ತಿಗಳು ಒಲಿದು ಬಂದಿದ್ದವು.  ಪುಷ್ಪಕ ವಿಮಾನ ಸಿನಿಮಾ ತೆರೆಗೆ ಬಂದು ನವೆಂಬರ್ 27ಕ್ಕೆ 35 ವರ್ಷಗಳು ಕಳೆದಿವೆ.

ಇದನ್ನೂ ಓದಿ: ಉದ್ಯಮಿ ಯಶಸ್ ಜೊತೆ ಹಸೆಮಣೆಯೇರಿದ ಅದಿತಿ ಪ್ರಭುದೇವ – ಗಣ್ಯರು, ಅಭಿಮಾನಿಗಳಿಂದ ಶುಭ ಹಾರೈಕೆ

ತಮ್ಮ ವೃತ್ತಿ ಬದುಕನ್ನು ಮತ್ತೊಂದು ಎತ್ತರಕ್ಕೆ ಕರೆದುಕೊಂಡ ಹೋದ ಈ ಸಿನಿಮಾದ ಬಗ್ಗೆ ನಟ ಕಮಲ್ ಹಾಸನ್ ಹೆಮ್ಮೆಯಿಂದ ಬರೆದುಕೊಂಡಿದ್ದಾರೆ.  ಈ ಚಿತ್ರವನ್ನು ನಿರ್ದೇಶನ ಮಾಡಿದ ಸಿಂಗೀತಂ ಶ್ರೀನಿವಾಸ ರಾವ್ ಅವರ ಕೆಲಸಕ್ಕೂ ಮೆಚ್ಚುಗೆ ಸೂಚಿಸಿದ್ದಾರೆ. ಪುಷ್ಪಕ ವಿಮಾನ ಚಿತ್ರ ಭಾರತದ ಮೊದಲ ಪೂರ್ಣ ಪ್ರಮಾಣದ ಮೂಕಿ ಚಿತ್ರ ಎಂಬ ಹೆಗ್ಗಳಿಕೆ ಪಾತ್ರವಾದ ಚಿತ್ರ. ಈ ಚಿತ್ರಕ್ಕೆ ವಿಮರ್ಶಕರ ಪ್ರಶಂಸೆ ಸೇರಿದಂತೆ ಅನೇಕ ಪ್ರಶಸ್ತಿಗಳು ಲಭಿಸಿತ್ತು. ಈ ಚಿತ್ರ ಬೆಂಗಳೂರಿನಲ್ಲೇ ಸುಮಾರು 35 ವಾರಗಳಷ್ಟು ಭರ್ಜರಿ ಪ್ರದರ್ಶನ ಈ ಚಿತ್ರ ಕಂಡಿತ್ತು. 35 ಲಕ್ಷ ಬಜೆಟ್​ನಲ್ಲಿ ಸಿದ್ಧವಾದ ಈ ಸಿನಿಮಾ 35 ವರ್ಷಗಳ ಹಿಂದೆ 1 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿತ್ತು.

suddiyaana