ಮಹಿಳಾ ಬಸ್‌ ಡ್ರೈವರ್‌ ಕಷ್ಟಕ್ಕೆ ಸ್ಪಂದಿಸಿದ ಕಮಲ್‌ ಹಾಸನ್‌  – ಕಾರು ಗಿಫ್ಟ್‌ ನೀಡಿದ ನಟ!

ಮಹಿಳಾ ಬಸ್‌ ಡ್ರೈವರ್‌ ಕಷ್ಟಕ್ಕೆ ಸ್ಪಂದಿಸಿದ ಕಮಲ್‌ ಹಾಸನ್‌  – ಕಾರು ಗಿಫ್ಟ್‌ ನೀಡಿದ ನಟ!

ತಮಿಳುನಾಡಿನ ಕೊಯಮತ್ತೂರಿನ ಮಹಿಳಾ ಡ್ರೈವರ್‌ ಶರ್ಮಿಳಾ ಎಂಬಾಕೆ ಭಾರಿ ಸುದ್ದಿಯಲ್ಲಿದ್ದಾರೆ. ಟಿಕೆಟ್‌ ವಿಚಾರವಾಗಿ ಬಸ್‌ ಕಂಡಕ್ಟರ್‌ ಹಾಗೂ ಶರ್ಮಿಳಾ ಮಧ್ಯೆ ವಾಗ್ವಾದ ನಡೆದಿದೆ. ಬಳಿಕ ಅವರು ಕೆಲಸದಿಂದ ವಜಾಗೊಂಡಿದ್ದಾರೆ ಎಂಬ ಸುದ್ದಿ ಹರಿದಿತ್ತು. ಇದೀಗ ಬಸ್‌ ಚಾಲಕಿ ಶರ್ಮಿಳಾಗೆ ನಟ, ರಾಜಕಾರಣಿ ಕಮಲ್‌ ಹಾಸನ್‌ ಅವರು ಸ್ಪೆಷಲ್‌ ಗಿಫ್ಟ್‌ ನೀಡಿದ್ದಾರೆ.

ಶರ್ಮಿಳಾ ಅವರ ಕಷ್ಟಕ್ಕೆ ತಮಿಳು ನಟ ಕಮಲ್‌ ಹಾಸನ್‌ ಸ್ಪಂದಿಸಿದ್ದಾರೆ. ಆಕೆ ಡ್ರೈವರ್‌ ಆಗುವ ಕನಸನ್ನು ನನಸು ಮಾಡಿದ್ದಾರೆ. ಕಮಲ್‌ ಹಾಸನ್‌ ಅವರು ಶರ್ಮಿಳಾಗೆ ಕಾರು ಗಿಫ್ಟ್‌ ನೀಡಿದ್ದಾರೆ. ಅಷ್ಟೇ ಅಲ್ಲದೇ ಶರ್ಮಿಳಾ ಕುಟುಂಬಸ್ಥರನ್ನು ಕಮಲ್‌ ಹಾಸನ್‌ ಮನೆಗೆ ಕರೆಸಿ ಕೆಲ ಕಾಲ ಮಾತನಾಡಿಸಿದ್ದಾರೆ. ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗುತ್ತಿದೆ.

ಇದನ್ನೂ ಓದಿ: ‘ಮಗಳು ಚೆನ್ನಾಗಿ ಹಾಡಿದ್ದಾಳೆ ತುಂಬಾ ಹೆಮ್ಮೆ ಆಗ್ತಿದೆ ಸಾನ್ವಿ’ – ಮುದ್ದಿನ ಪುತ್ರಿಯನ್ನು ಹಾಡಿ ಹೊಗಳಿದ ಕಿಚ್ಚ ಸುದೀಪ್

ಬಸ್ ಚಾಲಕಿಯಾಗುವ ಸವಾಲಿನ ಕೆಲಸವನ್ನು ಸಮರ್ಥವಾಗಿ ನಿರ್ವಹಿಸಿದ ಶರ್ಮಿಳಾ ಕೆಲಸಕ್ಕೆ ನಾನಾ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ಶರ್ಮಿಳಾ ಅನೇಕ ಯುವತಿಯರಿಗೆ ಮಾದರಿಯಾಗಿದ್ದಾರೆ. ಶರ್ಮಿಳಾ ಕೆಲಸ, ಕಷ್ಟದ ದಿನಗಳನ್ನು ಕೇಳಿ  ನನಗೆ ತುಂಬಾ ನೋವಾಯಿತು. ಶರ್ಮಿಳಾ ಡ್ರೈವರ್ ಅಷ್ಟೇ, ಸಹಸ್ರಾರು ಶರ್ಮಿಳಾರನ್ನು ಸೃಷ್ಟಿಸಬೇಕೆಂಬುದು ನನ್ನ ಆಶಯ. ಶರ್ಮಿಳಾ ಈ ಕಾರಿನ ಮೂಲಕ ತಮ್ಮ ಪ್ರಯಾಣವನ್ನು ಪುನರಾರಂಭಿಸಲಿದ್ದಾರೆ. ಸಂಸ್ಕಾರವಂತ ಸಮಾಜವಾಗಿ ನಾವು ವರ್ಷಗಳಿಂದ ದಮನಕ್ಕೊಳಗಾದ ಮಹಿಳೆಯರ ಬೆಂಬಲಕ್ಕೆ ನಿಂತು ಅವರಿಗೆ ಸಹಾಯ ಮಾಡಬೇಕಿದೆ. ಶರ್ಮಿಳಾ ಮತ್ತಷ್ಟು ಬೆಳೆಯಬೇಕು ಎಂಬುದು ನನ್ನ ಆಶಯ ಎಂದು ಕಮಲ್ ಹಾಸನ್ ಹೇಳಿದ್ದಾರೆ.

ಕೊಯಮತ್ತೂರಿನಲ್ಲಿ ಸಾರಿಗೆ ಬಸ್​ ಓಡಿಸಿದ ಮೊದಲ ಮಹಿಳಾ ಚಾಲಕಿ ಎಂಬ ಹೆಗ್ಗಳಿಕೆಗೂ ಶರ್ಮಿಳಾ ಪಾತ್ರರಾಗಿದ್ದಾರೆ. ಶರ್ಮಿಳಾ ತಮ್ಮ ಕೆಲಸ ಮೂಲಕ ಅನೇಕರಿಗೆ ಮಾದರಿಯಾಗಿದ್ದಾರೆ. ಹೀಗಾಗಿ ಶರ್ಮಿಳಾ ಅವರು ಕರ್ತವ್ಯದಲ್ಲಿದ್ದಾಗ ಹಲವು ರಾಜಕೀಯ ಪಕ್ಷದ ಮುಖಂಡರು, ಸಾರ್ವಜನಿಕರು ಭೇಟಿ ನೀಡಿ ಅಭಿನಂದಿಸುತ್ತಿದ್ದಾರೆ.

ಇತ್ತೀಚಿಗೆ  ವಿವಿಧ ಕಾರ್ಯಕ್ರಮಗಳಿಗೆ ಕೊಯಮತ್ತೂರ್ ಗೆ ಬಂದಿದ್ದ ಸಂಸದೆ ಕನಿಮೊಳಿ , ಶರ್ಮಿಳಾ ಅವರು ಭೇಟಿಯಾಗಿದ್ದಾರೆ.  ಶರ್ಮಿಳಾ ಓಡಿಸುತ್ತಿದ್ದ ಬಸ್ ಹತ್ತಿ ಯುವತಿಯನ್ನು ಹೊಗಳಿ ಆಕೆಯ ಜೊತೆ ಫೋಟೋ ತೆಗೆಸಿಕೊಂಡರು. ಇದಾದ ಬಳಿಕ ಕನಿಮೋಳಿ ಟಿಕೆಟ್ ಕೇಳುವ ವಿಚಾರವಾಗಿ ಶರ್ಮಿಳಾ ಹಾಗೂ ಕಂಡಕ್ಟರ್ ನಡುವೆ ವಾಗ್ವಾದ ನಡೆದಿದೆ ಎನ್ನುವ ಸುದ್ದಿ ಕೂಡ ಹಬ್ಬಿತ್ತು. ಈ ವಿಚಾರವಾಗಿ ಬಸ್ ಮಾಲೀಕರು ತಮ್ಮನ್ನು ಟೀಕಿಸಿದ್ದಾರೆ ಎಂದು ಶರ್ಮಿಳಾ ಆರೋಪಿಸಿದ್ದರು. ಈ ಗಲಾಟೆ ಬಳಿಕ ಕೆಲಸದಿಂದ ಶರ್ಮಿಳಾ ಅವರನ್ನು ವಜಾ ಮಾಡಲಾಗಿದೆ ಎಂಬ ಸುದ್ದಿ ಭಾರೀ ವಿವಾದಕ್ಕೆ ಕಾರಣವಾಗಿತ್ತು.

suddiyaana