ನಟ ಕಮಲ್ ಹಾಸನ್ ಆಸ್ಪತ್ರೆಗೆ ದಾಖಲು – ಅಭಿಮಾನಿಗಳಲ್ಲಿ ಹೆಚ್ಚಿದ ಆತಂಕ
ಸಾಮಾನ್ಯ ತಪಾಸಣೆಗೆ ಆಸ್ಪತ್ರೆಗೆ ದಾಖಲು-ವೈದ್ಯರ ಸ್ಪಷ್ಟನೆ
‘ವಿಕ್ರಮ್’ ಸಿನಿಮಾ ಯಶಸ್ಸಿನ ಅಲೆಯಲ್ಲಿರುವ ತಮಿಳು ಚಿತ್ರರಂಗದ ಖ್ಯಾತನಟ ಕಮಲ್ ಹಾಸನ್ ಈಗ ‘ಇಂಡಿಯನ್ 2’ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ನಟ ಕಮಲ್ ಹಾಸನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.
ಇದನ್ನೂ ಓದಿ : ರೇಟ್ ದುಬಾರಿಯಾದರೂ ತಲೆಕೆಡಿಸಿಕೊಳ್ಳದ ಫ್ಯಾನ್ಸ್- ‘ಅವತಾರ್ ಟು’ ಚಿತ್ರದ ಟಿಕೆಟ್ಸ್ ಸೋಲ್ಡ್ ಔಟ್
ಚೆನ್ನೈನ ಶ್ರೀ ರಾಮಚಂದ್ರ ಮೆಡಿಕಲ್ ಸೆಂಟರ್ ಆಸ್ಪತ್ರೆಗೆ ನಟ ಕಮಲ್ ಹಾಸನ್ ದಾಖಲಾಗಿದ್ದಾರೆ. ಈ ವಿಚಾರ ಅಭಿಮಾನಿಗಳಿಗೆ ತಿಳಿಯುತ್ತಿದ್ದಂತೆ ಆತಂಕಕ್ಕೊಳಗಾಗಿದ್ದಾರೆ. ಆದರೆ ಕಮಲ್ ಹಾಸನ್ ಅವರನ್ನ ನೋಡಿಕೊಳ್ಳುತ್ತಿರೋ ವೈದ್ಯರು, ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ. ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ಬಂದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಕೆಲ ದಿನಗಳಿಂದ ನಟ ಕಮಲ್ ಹಾಸನ್, ‘ಇಂಡಿಯನ್ 2’ ಸಿನಿಮಾದ ಶೂಟಿಂಗ್ನಲ್ಲಿ ತೊಡಗಿಕೊಂಡಿದ್ದಾರೆ. 68 ವಯಸ್ಸಿನಲ್ಲೂ ನಟ ಕಮಲ್ ಹಾಸನ್ ಸಿನಿಮಾ ರಂಗದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಇದರ ಜತೆಗೆ ‘ತಮಿಳು ಬಿಗ್ ಬಾಸ್ ಸೀಸನ್ 6’ನ್ನು ಇವರೇ ನಡೆಸಿಕೊಡುತ್ತಿದ್ದಾರೆ. ಸಾಮಾನ್ಯವಾಗಿ ಸೆಲೆಬ್ರಿಟಿಗಳು ಆಸ್ಪತ್ರೆಗೆ ದಾಖಲಾದರೆ ಈ ರೀತಿ ಆತಂಕ, ವದಂತಿ ಹುಟ್ಟಿಕೊಳ್ಳುವುದು ಸಾಮಾನ್ಯ. ಹಾಗಂತಾ ನಟ ಕಮಲ್ ಹಾಸನ್ ಆಸ್ಪತ್ರೆಗೆ ತೆರಳಿರುವುದು ಆರೋಗ್ಯ ತಪಾಸಣೆಗೆ ಅಷ್ಟೇ ಎಂದು ವೈದ್ಯರು ಸ್ಪಷ್ಟನೆ ನೀಡಿದ ಮೇಲೆ ಅಭಿಮಾನಿಗಳು ಕೂಡಾ ಆತಂಕ ವ್ಯಕ್ತಪಡಿಸುವ ಅಗತ್ಯವಿಲ್ಲ ಎಂದಿವೆ ಆಸ್ಪತ್ರೆ ಮೂಲಗಳು.