ಹೊಸ ಲೋಕ ತೆರೆದಿಟ್ಟ Kalki – ವಿಶ್ವದ ಮೊದಲ, ಕೊನೆಯ ನಗರ ಕಾಶಿ
ಪ್ರಭಾಸ್ ಡೈಲಾಗ್ ಗೆ ಫ್ಯಾನ್ಸ್ ಥ್ರಿಲ್
ಟಾಲಿವುಡ್ ರೆಬಲ್ ಸ್ಟಾರ್ ಪ್ರಭಾಸ್ ಅಭಿನಯ ಕಲ್ಕಿ 2898 AD ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ.. ಈ ಭೂಮಿಯ ಮೊದಲ ನಗರ.. ಈ ವರ್ಲ್ಡ್ ಲ್ಲಿ ಕೊನೆಯ ನಗರ ಕಾಶಿ.. ಎನ್ನುವ ಮಾತಿನೊಂದಿಗೆ ಕಲ್ಕಿ ಲೋಕ ಪ್ರಾರಂಭವಾಗುತ್ತೆ.. ಪಂಚ್ ಡೈಲಾಗ್ಸ್.. ಫೈಟ್ಸ್ ನಿಂದಲೇ ಶುರುವಾಗುವ ಕಲ್ಕಿ ಸಿನಿಮಾದ ಟ್ರೈಲರ್ ಪ್ರೇಕ್ಷಕರನ್ನು ಥ್ರಿಲ್ ಆಗುವಂತೆ ಮಾಡಿದ್ದು, ಸಿನಿಮಾ ಬಗ್ಗೆ ಇರೋ ನಿರೀಕ್ಷೆ ದುಪ್ಪಟ್ಟು ಆಗಿದೆ..
ಇದನ್ನೂ ಓದಿ: PAK ಬಗ್ಗಿಸಿದ್ದೇ ಪರಾಕ್ರಮಿ ಪಂತ್ – ಟೀಂ ಇಂಡಿಯಾ ಲಕ್ಕಿ ಸ್ಟಾರ್ ಆಗಿದ್ದೇಗೆ?
ಪ್ಯಾನ್ ಇಂಡಿಯಾ, ಬಿಗ್ ಬಜೆಟ್ ʼಕಲ್ಕಿ 2898 ಎಡಿʼ ಚಿತ್ರದ ಬಹುನಿರೀಕ್ಷಿತ ಟ್ರೇಲರ್ ರಿಲೀಸ್ ಆಗಿದೆ. ನಾಗ್ ಅಶ್ವಿನ್ ನಿರ್ದೇಶನದ ಸೈನ್ಸ್ ಫೀಕ್ಷನ್ ʼಕಲ್ಕಿ 2898 ಎಡಿʼ ಟ್ರೇಲರ್ ಅಮೋಘ ದೃಶ್ಯಾವಳಿ ಹಾಗೂ ವಿಎಫ್ ಎಕ್ಸ್ ನಿಂದ ಗಮನ ಸೆಳೆದಿದೆ. ಹಾಲಿವುಡ್ ರೇಂಜಿಗೆ ದೃಶ್ಯಗಳು ಮೂಡಿಬಂದಿದೆ.
ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಮಹಾಭಾರತದಿಂದ ಕಥೆ ಆರಂಭ ಆಗುತ್ತದೆ ಎಂದು ನಿರ್ದೇಶಕರು ಹೇಳಿಕೊಂಡಿದ್ದರು. ಅದರಂತೆ ಟ್ರೈಲರ್‌ನಲ್ಲೂ ಜಗತ್ತಿನ ಮೊದಲ ಪ್ರದೇಶ, ಈ ಜಗತ್ತಿನ ಕೊನೆ ಪ್ರದೇಶ ʼಕಾಶಿʼ ಎನ್ನುವ ಡೈಲಾಗ್ ನೊಂದಿಗೆ ʼಕಲ್ಕಿʼ ಲೋಕ ಪ್ರಾರಂಭವಾಗುತ್ತೆ.. ಮೇಲೆ ನೀರು ಇರುತ್ತದೆಯಂತೆ. ಭೂಮಿನ ಪೂರ್ತಿ ನಾಶ ಮಾಡಿದರೆ ಎಲ್ಲರೂ ಅಲ್ಲೇ ಇರುತ್ತಾರೆ’ ಎನ್ನುವ ಧ್ವನಿ ಬರುತ್ತದೆ.
ಬಳಿಕ ಜಗತ್ತಿನ ಎಲ್ಲವನ್ನು ಕಿತ್ತುಕೊಂಡರೆ ಎಲ್ಲವೂ ಇರುತ್ತದೆ ಎನ್ನುವ ಕುತೂಹಲವುಳ್ಳ ಸಂಭಾಷಣೆಯಿಂದ ಟ್ರೇಲರ್ ಶುರುವಾಗುತ್ತದೆ. 6,000 ವರ್ಷಗಳ ಹಿಂದಿನ ಶಕ್ತಿ ಮತ್ತೆ ಬಂದಿದೆ ಎಂದು, ಅಳಿವು – ಉಳಿವಿನ ನಡುವೆ ಹೋರಾಡುವವರ ದೃಶ್ಯವನ್ನು ತೋರಿಸಲಾಗಿದೆ.
ಟ್ರೇಲರ್‌ನಲ್ಲಿ ಸಿನಿಮಾದ ಪಂಚ್ ಡೈಲಾಗ್, ಫೈಟ್ಸ್ ನೋಡಿ ಅಭಿಮಾನಿಗಳು ದಶಕದ ಟ್ರೈಲರ್ ಎಂದು ಹೇಳುತ್ತಿದ್ದಾರೆ. ಸಿನಿಮಾದ ಟ್ರೇಲರ್ ನೋಡುವವರಿಗೆ ಇದು ಯುಗಗಳ ಕಥೆ ಎಂಬುದು ಸ್ಪಷ್ಟವಾಗುತ್ತದೆ. ಒಂದು ವಿಜ್ಞಾನದ ಆಧಾರದ ಮೇಲೆ ಮತ್ತು ಇನ್ನೊಂದು ಪುರಾಣಗಳ ಪ್ರಕಾರ. ಇಬ್ಬರೂ ಭೇಟಿಯಾದಾಗ ‘ಕಲ್ಕಿ 2898 ಕ್ರಿಸ್ತ ಶಕ ರಚನೆಯಾಗುತ್ತದೆ ಎಂಬುದು ಅರ್ಥವಾಗುತ್ತದೆ. ಕಲ್ಕಿ 2898 AD ನಿಜವಾಗಿಯೂ ನಮ್ಮನ್ನು ಹೊಸ ಲೋಕಕ್ಕೆ ಕೊಂಡೊಯ್ಯುತ್ತದೆ.
ರೆಕಾರ್ಡ್‌ನಲ್ಲಿ ಇಲ್ಲಿಯವರೆಗೂ ಒಂದೇ ಒಂದು ಫೈಟ್ ಸೋತಿಲ್ಲ ಎಂದು ಪ್ರಭಾಸ್ ಹೇಳುವ ಡೈಲಾಗ್ ಟ್ರೇಲರ್‌ನ ಹೈಲೈಟ್ ಆಗಿದೆ. ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ, ದಿಶಾ ಪಟಾನಿ, ಅಮಿತಾಬ್ ಬಚ್ಚನ್ ನಟಿಸಿದ್ದಾರೆ. ಈ ಸಿನಿಮಾ ಕಾಲ್ಪನಿಕ ಕಥೆಯ ಜತೆಗೆ ಕೆಟ್ಟದ್ದರ ವಿರುದ್ಧ ಒಳಿತಿನ ವಿಜಯವನ್ನು ಚಿತ್ರಿಸುತ್ತದೆ. ಯುಗವು ಯಾವುದೇ ಆಗಿರಲಿ, ಒಳ್ಳೆಯದು ಯಾವಾಗಲೂ ಕೆಟ್ಟದ್ದನ್ನು ಗೆದ್ದಿ ಎಂದು ಚಿತ್ರ ತೋರಿಸುತ್ತದೆ.
ಚಿತ್ರದಲ್ಲಿ ಪ್ರಭಾಸ್ ಭೈರವನಾಗಿ, ಅಶ್ವತ್ಥಾಮ ಪಾತ್ರದಲ್ಲಿ ಅಮಿತಾಬ್ ಬಚ್ಚನ್ ಕಾಣಿಸಿಕೊಳ್ಳಲಿದ್ದಾರೆ. ಪ್ರಭಾಸ್ ಮತ್ತು ಅಮಿತಾಬ್ ಬಚ್ಚನ್ ಕೂಡ ಅದ್ಭುತವಾದ ಆಕ್ಷನ್ ಅನ್ನು ಮಾಡಿರುವುದು ಟ್ರೇಲರ್‌ನಿಂದ ತಿಳಿಯುತ್ತದೆ. ಅತಿಥಿ ಪಾತ್ರ ಮತ್ತು ಖಳನಾಯಕನ ಪಾತ್ರವನ್ನು ನಿರ್ವಹಿಸಿರುವ ಉಲಗನಾಯಗನ್ ಕಮಲ್ ಹಾಸನ್ ಟ್ರೇಲರ್‌ನ ಕೊನೆಯಲ್ಲಿ ಭಯ ಪಡಬೇಡಿ ನವಯುಗ ಆರಂಭಗೊಳ್ಳಲಿದೆ ಎಂಬ ಡೈಲಾಗ್ ಹೇಳುವ ಮೂಲಕ ಗುರುತಿಸಲಾಗದ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಕಲ್ಕಿ ಸಿನಿಮಾ ತೆಲುಗು ಮಾತ್ರವಲ್ಲದೆ ಹಿಂದಿ, ತಮಿಳು, ಮಲಯಾಳಂ, ಕನ್ನಡ ಮತ್ತು ಇಂಗ್ಲಿಷ್ ಸೇರಿದಂತೆ ಬಹು ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ಇದೀಗ ಟ್ರೇಲರ್ ಸಹ ಎಲ್ಲ ಭಾಷೆಗಳಲ್ಲಿ ಹೊರಬಂದಿದೆ. ಟ್ರೈಲರ್ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಕೊಟ್ಯಾಂತರ ವೀವ್ಸ್ ಪಡೆದುಕೊಂಡಿದೆ. ಅಂದಹಾಗೆ ಈ ಚಿತ್ರಕ್ಕಾಗಿ ಅಮಿತಾಬ್ ಬಚ್ಚನ್, ದೀಪಿಕಾ, ಕಮಲ್ ಹಾಸನ್ ತಾವೇ ತೆಲುಗಿಗೆ ಡಬ್ ಮಾಡಿದ್ದಾರೆ. ನಾಗ್ ಅಶ್ವಿನ್ ನಿರ್ದೇಶನದ ಈ ಸಿನಿಮಾ ಜೂನ್ 27ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ರಿಲೀಸ್ ಆಗಿರುವ ಟೀಸರ್ ಹಾಗೂ ಪೋಸ್ಟರ್‌ಗಳಿಂದಲೇ ಸಿನಿಮಾ ಸಂಚಲನ ಮೂಡಿಸಿದ್ದು, ಟ್ರೇಲರ್ ಮತ್ತಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದೆ. ಸಿನಿಮಾ ಬಿಡುಗಡೆಯಾದ ನಂತರ ಇನ್ನೆಷ್ಟು ಸೆನ್ಸೆಷನ್ ಕ್ರಿಯೇಟ್ ಮಾಡುತ್ತದೇ ಎಂಬುದುನ್ನು ನೋಡಬೇಕಿದೆ.