ಬ್ರ್ಯಾಂಡೆಡ್ ಎಣ್ಣೆ, ಕೈಯಲ್ಲಿ ಸಿಗರೇಟ್‌, ಇಸ್ಪೀಟ್‌ ಆಟ – ಇದು ರೆಸಾರ್ಟ್ ಅಲ್ಲ ಕಲಬುರುಗಿ ಜೈಲಿನ ಕರ್ಮಕಾಂಡ

ಬ್ರ್ಯಾಂಡೆಡ್ ಎಣ್ಣೆ, ಕೈಯಲ್ಲಿ ಸಿಗರೇಟ್‌, ಇಸ್ಪೀಟ್‌ ಆಟ – ಇದು ರೆಸಾರ್ಟ್ ಅಲ್ಲ ಕಲಬುರುಗಿ ಜೈಲಿನ ಕರ್ಮಕಾಂಡ

ಕಲಬುರಗಿ  ಕೇಂದ್ರ ಕಾರಾಗೃಹದಲ್ಲಿ ನಡೆಯುತ್ತಿರೋ ಅಕ್ರಮಗಳು  ಬಯಲಾಗುತ್ತಿದೆ.   ಕೈದಿಗಳ ಬಿಂದಾಸ್ ಲೈಫ್   ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್  ಆಗ್ತಿದೆ . ಜೈಲು ಎನ್ನುವ ಗಂಭೀರ ಸ್ಥಳ ಕ್ಲಬ್‌ಗಳನ್ನು  ವೈರಲ್ ವಿಡಿಯೊದಲ್ಲಿ ಕೈದಿಗಳು ಬ್ರ್ಯಾಂಡೆಡ್ ಎಣ್ಣೆ ಸೇವಿಸುತ್ತಾ, ಸಿಗರೇಟ್ ಸೇದುತ್ತಾ, ಗುಂಪು ಗುಂಪಾಗಿ ಇಸ್ಪೀಟ್‌ ಆಟದಲ್ಲಿ ತೊಡಗಿರುವುದು ಸ್ಪಷ್ಟವಾಗಿ ಕಾಣುತ್ತದೆ. ಬಿಗಿ ಭದ್ರತೆ ಇರುವ ಜೈಲಿನೊಳಗೆ ನಿಷೇಧಿತ ವಸ್ತುಗಳು ಹೇಗೆ ಸಪ್ಲೈ ಆಗುತ್ತಿವೆ ಎಂಬ ಪ್ರಶ್ನೆ ಇದೀಗ ಗಂಭೀರ ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ: ಹೊಸ ವರ್ಷ ಆಚರಣೆಯಲ್ಲಿ ಮದ್ಯ ಸೇವನೆ ಮಾಡಿದವರಿಗೆ ಡ್ರಾಪ್‌ ವ್ಯವಸ್ಥೆ ವಿವಾದ! – ಯೂಟರ್ನ್‌ ಹೊಡೆದ ಗೃಹಸಚಿವ!  

ಇಷ್ಟೊಂದು ಅಕ್ರಮಗಳು ಜೈಲಿನೊಳಗೆ ನಡೆಯುತ್ತಿದ್ದರೂ ಜೈಲ್ ಚೀಫ್ ಸೂಪರಿಂಟೆಂಡೆಂಟ್ ಡಾ. ಅನಿತಾ ಅವರು ಕಣ್ಮುಚ್ಚಿ ಕುಳಿತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಮಂಗಳವಾರವಷ್ಟೇ ಆರ್.ಡಿ. ಪಾಟೀಲ್ ವಿಡಿಯೊ ವೈರಲ್ ಆಗಿದ್ದು, ಜೈಲ್ ಅಧಿಕ್ಷಕಿ ಡಾ. ಅನಿತಾ ವಿರುದ್ಧ 10 ಲಕ್ಷ ಲಂಚ ಆರೋಪವನ್ನು ಆತ ಮಾಡಿದ್ದ. ಅದರ ಬೆನ್ನಲ್ಲೇ ಬುಧವಾರ ಕೈದಿಗಳ ಹೈಫೈ ಲೈಫ್‌ಗೆ ಸಂಬಂಧಿಸಿದ ಮತ್ತೊಂದು ವಿಡಿಯೋ ವೈರಲ್ ಆಗಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಜೈಲಿನ ಭದ್ರತಾ ವ್ಯವಸ್ಥೆ, ಅಧಿಕಾರಿಗಳ ಪಾತ್ರ ಹಾಗೂ ನಿಷೇಧಿತ ವಸ್ತುಗಳ ಸರಬರಾಜು ಕುರಿತು ತಕ್ಷಣವೇ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಸಾರ್ವಜನಿಕ ವಲಯದಲ್ಲಿ ಒತ್ತಾಯ ಕೇಳಿಬರುತ್ತಿದೆ. ಈ ವಿಚಾರದಲ್ಲಿ ಜೈಲು ಇಲಾಖೆ ಹಾಗೂ ಜಿಲ್ಲಾ ಆಡಳಿತ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಗೃಹ ಸಚಿವ ಪರಮೇಶ್ವರ್​​ ಪ್ರತಿಕ್ರಿಯೆ

ಕಲಬುರಗಿ ಜೈಲಿನಲ್ಲಿ ಎಣ್ಣೆ ಪಾರ್ಟಿ ವಿಡಿಯೋ ವೈರಲ್ ಆಗಿದ್ದು, ಈ ಬಗ್ಗೆ ಗೃಹ ಸಚಿವ ಪರಮೇಶ್ವರ್​ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಹಳೆಯ ವಿಡಿಯೊನಾ ಎಂದು ಚೆಕ್​​ ಮಾಡುತ್ತಿದ್ದಾರೆ. ಕೆಲವರು ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಹೀಗೆ ಮಾಡುತ್ತಿದ್ದಾರೆ ಎಂದು ಪರಿಶೀಲನೆ ನಡೆಸಲಾಗುತ್ತಿದೆ. ಅದು ನಿನ್ನೆ, ಮೊನ್ನೆ ವಿಡಿಯೊ ಆಗಿದ್ದರೆ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

Kishor KV