ವಿಶ್ವದೆಲ್ಲೆಡೆ ಕಬ್ಜ ಹವಾ – 50 ದೇಶ, 4,000 ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಅಬ್ಬರ

ವಿಶ್ವದೆಲ್ಲೆಡೆ ಕಬ್ಜ ಹವಾ – 50 ದೇಶ, 4,000 ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಅಬ್ಬರ

ವಿಶ್ವದಾದ್ಯಂತ ಭಾರೀ ಕುತೂಹಲ ಮೂಡಿಸಿದ್ದ ‘ರಿಯಲ್ ಸ್ಟಾರ್’ ಉಪೇಂದ್ರ, ಕಿಚ್ಚ ಸುದೀಪ್, ಡಾ ಶಿವರಾಜ್‌ಕುಮಾರ್ ನಟನೆಯ ‘ಕಬ್ಜ’ ಸಿನಿಮಾ ಏಳು ಭಾಷೆಗಳಲ್ಲಿ ರಿಲೀಸ್ ಆಗಿದೆ.

ಮೂವರು ಶ್ರೇಷ್ಠ ನಟರು ಕಬ್ಜ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು, ಸಿನಿಮಾ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಇದೀಗ ಎಲ್ಲಾ ಕಾತುರ ಮತ್ತು ಕುತೂಹಲಕ್ಕೆ ತೆರೆ ಬಿದ್ದಿದೆ. ಅಭಿಮಾನಿಗಳು ಬೆಳಗ್ಗೆಯೇ ಚಿತ್ರ ಮಂದಿರಕ್ಕೆ ಬಂದು ಸಿನಿಮಾ ನೋಡಿ ಆನಂದಿಸುತ್ತಿದ್ದಾರೆ.

ಇದನ್ನೂ ಓದಿ: ‘ಬೆಟ್ಟದ ಹೂ’ವಾಗಿ ಅರಳಿ ‘ಪರಮಾತ್ಮ’ನ ಮುಡಿ ಸೇರಿದ ‘ಭಾಗ್ಯವಂತ’ – ಇಂದು ಅಪ್ಪು ಇಲ್ಲದ ಎರಡನೇ ಹುಟ್ಟುಹಬ್ಬ!

ಇಂದು ವಿಶೇಷ ಎಂದರೆ ಪವರ್ ಸ್ಟಾರ್ ಪುನೀತ್ ಅವರ ಜನ್ಮ ದಿನ. ಈ ವಿಶೇಷ ದಿನದಂದು ಕಬ್ಜ ಸಿನಿಮಾ ತೆರೆಗೆ ಬಂದಿದೆ. ಅನೇಕ ಚಿತ್ರಮಂದಿರಗಳಲ್ಲಿ ಅಪ್ಪು ಕಟೌಟ್ ಕೂಡ ರಾರಾಜಿಸುತ್ತಿದೆ. ಈಗಾಗಲೇ ಕಬ್ಜ ಸಿನಿಮಾ ಸುಮಾರು 50ಕ್ಕೂ ಅಧಿಕ ದೇಶಗಳಲ್ಲಿ ಬಿಡುಗಡೆಯಾಗಿದೆ. ವಿಶೇಷ ಎಂದರೆ 4,000ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಕಬ್ಜ ತೆರೆಗೆ ಬಂದಿದೆ. ಕರ್ನಾಟಕದಲ್ಲಿ ಕಬ್ಜ ಬರೋಬ್ಬರಿ 450 ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದೆ.

ಇನ್ನು ಬೆಂಗಳೂರಿನಲ್ಲೂ ಕಬ್ಜ ಹವಾ ಜೋರಾಗಿದೆ. ರಾಜಧಾನಿಯಲ್ಲೇ ಸುಮಾರು 200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆಗೆ ಬಂದಿದೆ. ಈಗಾಗಲೇ ಅನೇಕ ಚಿತ್ರಮಂದಿರಗಳು ಹೌಸ್ ಫುಲ್ ಆಗಿವೆ.

ಆರ್.ಚಂದ್ರು ನಿರ್ದೇಶನದಲ್ಲಿ ಮೂಡಿ ಬಂದಿರುವ ಕಬ್ಜ ಸಿನಿಮಾದಲ್ಲಿ ರಿಯಲ್ ಸ್ಟಾರ್‌ಗೆ ನಾಯಕಿಯಾಗಿ ಶ್ರೀಯಾ ಶರಣ್ ಕಾಣಿಸಿಕೊಂಡಿದ್ದಾರೆ. ಬಿಡುಗಡೆಗೂ ಮುನ್ನವೇ ಶ್ರೀಯಾ ಪಾತ್ರ ಕೂಡ ಭಾರಿ ನಿರೀಕ್ಷೆ ಮೂಡಿಸಿತ್ತು. ಇದೀಗ ಶ್ರೀಯಾ ಲುಕ್ ಅಭಿಮಾನಿಗಳ ಹೃದಯ ಗೆದ್ದಿದೆ.

ಶುಕ್ರವಾರ ರಾತ್ರಿ ಬೆಂಗಳೂರಿನಲ್ಲಿ ಕಬ್ಜ ಸಿನಿಮಾ ಪ್ರೀಮಿಯರ್ ಶೋ ಇಡಲಾಗಿತ್ತು. ಈ ವೇಳೆ ಉಪೇಂದ್ರ ಕುಟುಂಬಸ್ಥರು, ಕಬ್ಜ ಚಿತ್ರ ತಂಡ ಕೆಲ ಸೆಲೆಬ್ರಿಟಿಗಳು ಸೇರಿ ಒಂದಷ್ಟು ಜನರು ಸಿನಿಮಾ ವೀಕ್ಷಿಸಿದ್ದರು.

suddiyaana