ಉಪ್ಪಿ, ಶಿವಣ್ಣ, ಕಿಚ್ಚನ ಕಾಂಬಿನೇಷನ್​ ಗೆ ಫ್ಯಾನ್ಸ್ ಫಿದಾ – ₹100 ಕೋಟಿ ಬಾಚಿಕೊಂಡ ‘ಕಬ್ಜ’!

ಉಪ್ಪಿ, ಶಿವಣ್ಣ, ಕಿಚ್ಚನ ಕಾಂಬಿನೇಷನ್​ ಗೆ ಫ್ಯಾನ್ಸ್ ಫಿದಾ – ₹100 ಕೋಟಿ ಬಾಚಿಕೊಂಡ ‘ಕಬ್ಜ’!

ಮಲ್ಟಿಸ್ಟಾರರ್ ಸಿನಿಮಾ ‘ಕಬ್ಜ’ ಬಾಕ್ಸಾಫೀಸ್​ನಲ್ಲಿ ಧೂಳೆಬ್ಬಿಸುತ್ತಿದೆ. ಕಿಚ್ಚ ಸುದೀಪ್, ರಿಯಲ್ ಸ್ಟಾರ್ ಉಪೇಂದ್ರ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕಾಂಬಿನೇಷನ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ವೀಕೆಂಡ್ ಬೇರೆ ಇದ್ದಿದ್ದರಿಂದ ಭರ್ಜರಿ ಕಲೆಕ್ಷನ್ ಆಗಿದೆ.

ನಿರ್ದೇಶಕ ಆರ್.ಚಂದ್ರು (R. Chandru) ಆಕ್ಷನ್ ಕಟ್ ಹೇಳಿರುವ ಈ ಸಿನಿಮಾ ಬಿಡುಗಡೆಯಾದ ಎರಡೇ ದಿನಕ್ಕೆ 100 ಕೋಟಿ ಬಾಚಿಕೊಂಡಿದೆ. ಪತ್ರಿಕಾಗೋಷ್ಟಿ ನಡೆಸಿ ಚಿತ್ರತಂಡವೇ ಅಧಿಕೃತವಾಗಿ ಮಾಹಿತಿ ನೀಡಿದೆ.  ಕಬ್ಜ ನೂರು ಕೋಟಿ ಕ್ಲಬ್ (100 Crore Club) ಸೇರುತ್ತಿದ್ದಂತೆಯೇ ಚಿತ್ರೋದ್ಯಮದಲ್ಲಿ ಹುಮ್ಮಸ್ಸು ಹೆಚ್ಚಿದೆ. ಸ್ಯಾಂಡಲ್ ವುಡ್ ನ ಅನೇಕ ಕಲಾವಿದರು ಹಾಗೂ ತಂತ್ರಜ್ಞರು ಚಿತ್ರಕ್ಕೆ ಶುಭಾಶಯಗಳನ್ನು ತಿಳಿಸಿದ್ದಾರೆ.

ಇದನ್ನೂ ಓದಿ : ಕೆಜಿಎಫ್ 1, ಕಾಂತಾರ ಸಿನಿಮಾಗಳ ದಾಖಲೆಗಳು ಉಡೀಸ್ – ₹50 ಕೋಟಿ ‘ಕಬ್ಜ’ ಕಲೆಕ್ಷನ್!

ಕಬ್ಜ ಸಿನಿಮಾ ಯಶಸ್ಸಿಗೆ ಚಿತ್ರತಂಡ ಕೂಡ ಹರ್ಷ ವ್ಯಕ್ತಪಡಿಸಿದ್ದಾರೆ. ಸಕ್ಸಸ್ ಜರ್ನಿ ಬಗ್ಗೆ ಮಾತನಾಡಿರುವ ಉಪೇಂದ್ರ (Upendra), ‘ಇದು ನಿರೀಕ್ಷೆಗೂ ಮೀರಿ ಬಂದ ಪ್ರತಿಕ್ರಿಯೆ. ಒಂದು ಸಿನಿಮಾ ಗೆದ್ದರೆ ಉದ್ಯಮ ಉಸಿರಾಡುತ್ತದೆ’ ಎಂದಿದ್ದಾರೆ. ಪರೋಕ್ಷವಾಗಿ ಕಬ್ಜ ಮತ್ತೆ ಚಿತ್ರೋದ್ಯಮವನ್ನು ಉಸಿರಾಡುವಂತೆ ಮಾಡಿದೆ ಎಂದು ಹೆಮ್ಮೆಯಿಂದ ಮಾತನಾಡಿದ್ದಾರೆ. ಕೆಜಿಎಫ್, ಕಾಂತಾರ ಸಿನಿಮಾದ ನಂತರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕಬ್ಜ ಸಖತ್ ಸದ್ದು ಮಾಡುತ್ತಿದೆ. ಆರ್.ಚಂದ್ರು ಅವರ ಆಪ್ತರ ಮಾಹಿತಿಯಂತೆ, ಹಲವು ಸಿನಿಮಾ ರಂಗಗಳಿಂದ ಚಂದ್ರು ಅವರಿಗೆ ಆಫರ್ ಕೂಡ ಬರುತ್ತಿವೆಯಂತೆ. ಅದರಲ್ಲೂ ಬಾಲಿವುಡ್ ನ ಹೆಸರಾಂತ ಸಂಸ್ಥೆಯೊಂದು ಕಬ್ಜ ಸಿನಿಮಾ ವೀಕ್ಷಿಸಿದ ನಂತರ ಚಂದ್ರು ಅವರನ್ನು ಕಾಂಟ್ಯಾಕ್ಟ್ ಮಾಡಿದೆ ಎಂದು ಹೇಳಲಾಗುತ್ತಿದೆ.

ಕರ್ನಾಟಕದಲ್ಲೇ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಕಬ್ಜ ಸಿನಿಮಾ ರಿಲೀಸ್ ಆಗಿದ್ದು, ವೀಕೆಂಡ್ ನಲ್ಲಿ ಬಹುತೇಕ ಚಿತ್ರಮಂದಿರಗಳು ಹೌಸ್ ಫುಲ್ ಪ್ರದರ್ಶನ ಕಾಣುತ್ತಿವೆ ಎಂದು ವಿತರಕ ಮೋಹನ್ ತಿಳಿಸಿದ್ದಾರೆ.  ಕಳೆದ ಮೂರು ದಿನಗಳಿಂದ ಭಾರತದಾದ್ಯಂತ ಕಬ್ಜ ಕ್ರೇಜ್ ಕ್ರಿಯೇಟ್ ಮಾಡಿದ್ದು, ಕನ್ನಡದ ಮತ್ತೊಂದು ಚಿತ್ರ ರಾಷ್ಟ್ರಮಟ್ಟದಲ್ಲಿ ಗುರುತಿಸುವಂತಾಗಿದೆ.

suddiyaana