ಖ್ಯಾತ ಖಳನಟನಿಗೆ ಕೂಡಿ ಬಂದ ಕಂಕಣ – ಶಿಕ್ಷಕಿಯನ್ನು ವರಿಸಲಿದ್ದಾರೆ ಕಬೀರ್ ದುಹಾನ್ ಸಿಂಗ್

ಖ್ಯಾತ ಖಳನಟನಿಗೆ ಕೂಡಿ ಬಂದ ಕಂಕಣ – ಶಿಕ್ಷಕಿಯನ್ನು ವರಿಸಲಿದ್ದಾರೆ ಕಬೀರ್ ದುಹಾನ್ ಸಿಂಗ್

ಸ್ಯಾಂಡಲ್‌ವುಡ್‌ನಲ್ಲಿ ಖಳನಟನಾಗಿ ಮಿಂಚುತ್ತಿರುವ ಬಾಲಿವುಡ್‌ನ ಖ್ಯಾತ ನಟ ಕಬೀರ್ ದುಹಾನ್ ಸಿಂಗ್ ಮದುವೆಗೆ ಕೌಂಟ್‌ಡೌನ್ ಶುರುವಾಗಿದೆ. ಪೈಲ್ವಾನ್, ಹೆಬ್ಬುಲಿ, ಕಬ್ಜ ಸಿನಿಮಾಗಳಲ್ಲಿ ವಿಲನ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದ ಕಬೀರ್ ದುಹಾನ್ ಕನ್ನಡ ಸಿನಿಪ್ರಿಯರ ಫೆವರೇಟ್ ನಟನೂ ಹೌದು. ಖಳನಟನ ಪಾತ್ರಗಳಲ್ಲಿ ಖಡಕ್ ಆಗಿ ಮಿಂಚುತ್ತಿರುವ ಕಬೀರ್ ದುಹಾನ್ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಇದನ್ನೂ ಓದಿ:  ಆದಿಪುರುಷ್ ಸಿನಿಮಾದ ಗ್ರಾಫಿಕ್ಸ್ ನೋಡಿ ಸಿಟ್ಟಿಗೆದ್ದ ಫ್ಯಾನ್ಸ್ – ರಾವಣನ ಹತ್ತು ತಲೆ ನೋಡಿ ಅಭಿಮಾನಿಗಳು ಹೇಳಿದ್ದೇನು?

ಜೂನ್ 23ರಂದು ಬಾಲಿವುಡ್ ನಟ ಕಬೀರ್ ದುಹಾನ್ ಮದುವೆಯಾಗಲಿದ್ದಾರೆ. ಶಿಕ್ಷಕಿಯಾಗಿರುವ ಸೀಮಾ ಚಹಾಲ್ ಮೆಚ್ಚಿಕೊಂಡಿರುವ ಕಬೀರ್ ದೆಹಲಿಯಲ್ಲಿ ಮದುವೆಯಾಗಲಿದ್ದಾರೆ. ಮೂರು ದಿನಗಳ ಕಾಲ ದೆಹಲಿಯ ರೆಸಾರ್ಟ್ ನಲ್ಲಿ ವಿವಾಹ ಮಹೋತ್ಸವ ನಡೆಯಲಿದೆ. ಭಾರತೀಯ ಸಿನಿಮಾ ರಂಗದ ಅನೇಕ ಗಣ್ಯರು ಭಾಗಿಯಾಗಲಿದ್ದಾರೆ. ಜೂನ್ 21 ರಂದು ಸಂಗೀತ, 22ಕ್ಕೆ ಮೆಹೆಂದಿ ಮತ್ತು 23 ರಂದು ವಿವಾಹ ನಡೆಯಲಿದೆ. ಕನ್ನಡವೂ ಸೇರಿದಂತೆ ತಮಿಳು, ತೆಲಗು, ಹಿಂದಿ ಚಿತ್ರಗಳಲ್ಲಿ ನಟಿಸಿರುವ ಕಬೀರ್ ದುಹಾನ್ ಸಿಂಗ್  ಸಾಕ್ಷಿಂ, ಸರ್ದಾರ್ ಗಬ್ಬರ್ ಸಿಂಗ್, ಶಾಕುಂತಲಂ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಇತ್ತೀಚೆಗೆ ರಿಲೀಸ್ ಆಗಿರುವ ಕಬ್ಜ ಚಿತ್ರದಲ್ಲೂ ಇವರು ನಟಿಸಿದ್ದಾರೆ. ಈಗಾಗಲೇ ಹಲವರಿಗೆ ಆಹ್ವಾನ ಪತ್ರಿಕೆಯನ್ನು ನೀಡಿರುವ ಕಬೀರ್ ಸಿಂಗ್ ಮದುವೆಗೆ ಸ್ಯಾಂಡಲ್‌ವುಡ್ ನಟರು ಕೂಡಾ ಪಾಲ್ಗೊಳ್ಳಲಿದ್ದಾರೆ.

suddiyaana