ಕಿಚ್ಚ ಸುದೀಪ್ ಅಭಿನಯದ ʼK46ʼ ಚಿತ್ರದ ಟೀಸರ್ ರಿಲೀಸ್ ಡೇಟ್ ಅನೌನ್ಸ್!

ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ಅವರು ವಿಕ್ರಾಂತ್ ರೋಣ ಸಿನಿಮಾ ಬಳಿಕ ದೊಡ್ಡ ಗ್ಯಾಪ್ ತೆಗೆದುಕೊಂಡಿದ್ದರು. ಯಾವುದೇ ಹೊಸ ಸಿನಿಮಾಗಳನ್ನು ಘೋಷಿಸಿರಲಿಲ್ಲ. ಕಿಚ್ಚನ ಹೊಸ ಸಿನಿಮಾಗಳ ಬಗ್ಗೆ ಅಪ್ಡೇಟ್ ಸಿಗದೇ ಫಾನ್ಸ್ ನಿರಾಶೆಗೊಂಡಿದ್ದರು. ಸುದೀಪ್ ಅವರ ಮುಂದಿನ ಚಿತ್ರ ಯಾವಾಗ ಅಂತ ಜನ ಕ್ಯೂರಿಯಸ್ ಆಗಿದ್ರು. ಇದೀಗ ಕಿಚ್ಚ ಫ್ಯಾನ್ಸ್ ಗೆ ತನ್ನ ಮುಂದಿನ ಸಿನಿಮಾ ಬಗ್ಗೆ ಬಿಗ್ ಅಪ್ಡೇಟ್ ಒಂದನ್ನು ನೀಡಿದ್ದಾರೆ.
ಇದನ್ನೂ ಓದಿ: ‘ಧೂಮಂ’ ಸಿನಿಮಾ ರಿಲೀಸ್ – ಸಿಗರೇಟ್ ಸೇದುವ ಪ್ರತಿ ವ್ಯಕ್ತಿಗೂ ಕನೆಕ್ಟ್ ಆಗುತ್ತಿದೆ ಈ ಸಿನಿಮಾ..!
ಕಿಚ್ಚ ಸುದೀಪ್ ಇಷ್ಟು ದಿನಗಳ ಕಾಲ ಬಿಗ್ ಬಾಸ್ ಸೀಸನ್ ನಲ್ಲಿ ಬ್ಯುಸಿಯಾಗಿದ್ರು. ಇತ್ತೀಚಿಗೆ ಕಿಚ್ಚ ‘ಕೆ46’ (ಕಿಚ್ಚ 46) ಸಿನಿಮಾ ಬರೋದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ರು. ಈಗ ಮತ್ತೆ ತಮ್ಮ ಚಿತ್ರದ ಬಗ್ಗೆ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಇದೇ ಜೂನ್ 25ಕ್ಕೆ ಕಿಚ್ಚ 46 (K46) ಸಿನಿಮಾದ ಟೀಸರ್ ರಿವೀಲ್ ಮಾಡುವುದಾಗಿ ಸುದೀಪ್ ಟ್ವೀಟ್ ಮಾಡಿದ್ದಾರೆ.
‘K46 ಚಿತ್ರದ ಟೀಸರ್ ಸಿದ್ಧವಾಗಿದೆ. ತಂಡ ಸಾಕಷ್ಟು ಕಷ್ಟಪಟ್ಟಿದೆ. ಅದನ್ನು ನಿಮ್ಮ ಮುಂದಿಡಲು ಎಗ್ಸೈಟ್ ಆಗಿದ್ದೇವೆ. ದಿನಾಂಕ ಘೋಷಣೆ ಜೂನ್ 27ರಂದು ಆಗಲಿದೆ’ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.
ಇನ್ನು ಸುದೀಪ್ ಅಕ್ಕನ ಮಗ ಸಂಚಿತ್ ಸಂಜೀವ್ ಕೂಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಆ ಸಿನಿಮಾದ ಮುಹೂರ್ತ ಇತ್ತೀಚೆಗೆ ನಡೆಯಿತು. ಈಗ ಜೂನ್ 25ರಂದು ದೊಡ್ಡ ಮಟ್ಟದಲ್ಲಿ ಅನೌನ್ಸ್ಮೆಂಟ್ ಮಾಡಲಾಗುತ್ತಿದೆ. ಆ ಬಗ್ಗೆಯೂ ಸುದೀಪ್ ಮಾಹಿತಿ ನೀಡಿದ್ದಾರೆ. ಒಟ್ಟಿನಲ್ಲಿ ಕಿಚ್ಚನ ಹೊಸ ಸಿನಿಮಾದ ಅಪ್‌ಡೇಟ್ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ‘ವಿಕ್ರಾಂತ್ ರೋಣ’ ಸಿನಿಮಾದ ಬಳಿಕ ಕಿಚ್ಚನ ನಯಾ ಅವತಾರ ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ.