ಸೋತರೂ ‘ವಿಶ್ವ’ ಗೆದ್ದ ಇಟಲಿ ಟೀಂ – ಮೊಸ್ಕಾ ಬ್ರದರ್ಸ್ ಮಾಸ್ ಆಟ
ಮೊದಲ ಎಂಟ್ರಿಯಲ್ಲೇ ಹಲ್ಚಲ್

ಜಸ್ಟಿನ್ ಮೊಸ್ಕಾ ಮತ್ತು ಆಂಧೋನಿ ಮೊಸ್ಕಾ.. ಇಟಲಿ ಟಿ20 ವಿಶ್ವಕಪ್ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟ್ಸ್ಮನ್ಗಳು.. ಎಲ್ಲದ್ದಕ್ಕಿಂತ ಹೆಚ್ಚಾಗಿ ಸ್ವಂತ ಅಣ್ಣ,ತಮ್ಮ.. T20 ವರ್ಲ್ಡ್ ಕಪ್ ಪಂದ್ಯದಲ್ಲಿ ಇಟಲಿ ಪರ ಇವರಿಬ್ಬರು ಅದ್ಫುತವಾಗಿ ಆಟ ಆಡುತ್ತಿದ್ದಾರೆ. ಆದ್ರೆ ಇವರಿಬ್ಬರು ಹೆಚ್ಚು ಸುದ್ದಿಯಾಗಿದ್ದು ನೇಪಾಳ ವಿರುದ್ಧದ ಪಂದ್ಯದಲ್ಲಿ.. ಅಂದಹಾಗೇ ಫೆಬ್ರವರಿ 12 ರಂದು ಇಟಲಿ ಮತ್ತು ನೇಪಾಳ ಮ್ಯಾಚ್ ನಡೆದಿತ್ತು. ಮೊದಲು ಬ್ಯಾಟಿಂಗ್ ಮಾಡಿದ ನೇಪಾಳ 124 ರನ್ ಟಾರ್ಗೆಟ್ ನೀಡಿತ್ತು. ಈ ಟಾರ್ಗೆಟ್ ಬೆನ್ನಟ್ಟಿದ ಇಟಲಿ ಯಾವುದೇ ವಿಕೆಟ್ ಕಳೆದುಕೊಳ್ಳದೇ 10 ವಿಕೆಟ್ಗಳಿಂದ ಮ್ಯಾಚ್ ಗೆಲ್ತು.. ಆರಂಭಿಕರಾಗಿ ಕಣಕ್ಕಿಳಿದ ಆಂಥೋನಿ ಮೊಸ್ಕಾ ಮತ್ತು ಜಸ್ಟಿನ್ ಮೊಸ್ಕಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಮೊದಲ ಓವರ್ನಿಂದಲೇ ಬಿರುಸಿನ ಬ್ಯಾಟಿಂಗ್ ಒತ್ತು ನೀಡಿದ ಈ ಜೋಡಿಯು ಪವರ್ ಪ್ಲೇನಲ್ಲೇ 68 ರನ್ ಕಲೆಹಾಕಿದ್ದರು. ಈ ಮೂಲಕ ಈ ಅಣ್ಣ, ತಮ್ಮ ವಿಶ್ವದ ಗಮನ ಸೆಳೆದ್ರು. ಇವರಿಬ್ಬರ ಬ್ಯಾಟಿಂಗ್ ಸ್ಟೈಲ್, ಟೈಮಿಂಗ್ ಮತ್ತು ಆಕ್ರಮಣಕಾರಿ ಆಟಕ್ಕೆ ಫ್ಯಾನ್ಗಳು ಫಿದಾ ಆಗಿದ್ದಾರೆ.. ಈ ಪಂದ್ಯದಿಂದ ಇವರಿಬ್ಬರು ಕ್ರಿಕೆಟ್ ಪ್ರೇಮಿಗಳ ಮನಸ್ಸಿನಲ್ಲಿ ಉಳಿದಿದ್ದಾರೆ.
ಇದನ್ನೂ ಓದಿ: ರಣಜಿ ಟೂರ್ನಿಯ ಸೆಮಿಫೈನಲ್ ಶಮಿ ಬೆಂಕಿ ಬೌಲಿಂಗ್ – ಒಂದೇ ಪಂದ್ಯದಲ್ಲಿ 8 ವಿಕೆಟ್
ಟಿ20 ವಿಶ್ವಕಪ್ನಲ್ಲಿ ಬಿಗ್ ಫೈಟ್ ಕೊಟ್ಟ ಇಟಲಿ
ಇನ್ನೂ ಟಿ20ಯಲ್ಲಿ ಡಮ್ಮಿ ಟೀಂ ಎನ್ನುತ್ತಿದ್ದ ಇಟಲಿ ಈ ಸ ಬಿಗ್ ಫೈಟ್ ಕೊಟ್ಟಿದೆ. ನೇಪಾಳ ವಿರುದ್ಧ ಗೆದ್ದು, ಇಂಗ್ಲೆಂಡ್ ವಿರುದ್ಧ ಸೋತಿದೆ. ಸೋತ್ರು ಕೂಡ ಇಂಗ್ಲೆಂಡ್ಗೆ ಬಿಗ್ ಫೈಟ್ ನೀಡಿದೆ. ಇಟಲಿ ವಿರುದ್ಧದ ಪಂದ್ಯದಲ್ಲೂ ಇಂಗ್ಲೆಂಡ್ಗೆ ಏಕಪಕ್ಷೀಯವಾಗಿ ಗೆಲುವು ದಕ್ಕಲಿಲ್ಲ. ಮೊದಲ ಬಾರಿಗೆ ಟಿ20 ವಿಶ್ವಕಪ್ ಆಡುತ್ತಿರುವ ಇಟಲಿ ಕೂಡ ಇಂಗ್ಲೆಂಡ್ ವಿರುದ್ಧ ಕೆಚ್ಚೆದೆಯ ಹೋರಾಟ ನೀಡ್ತು.. ಗೆದ್ದಿಲ್ಲ ಅಂದ್ರೂ ನಾವು ಸಖತ್ ಸ್ಟ್ರಾಂಗ್ ಇದ್ದೇನೆ ಅನ್ನೋದ್ದನ್ನ ತೋರಿಸಿದ್ದಾರೆ. ಇಂಗ್ಲೆಂಡ್ 7 ವಿಕೆಟ್ಗೆ 202 ರನ್ ಗಳಿಸಿತು. ಈ ರನ್ ಚೇಸ್ ಮಾಡಿದ ಇಟಲಿ ಟಫ್ ನೀಡಿ 178ಗೆ ಆಲೌಟ್ ಆಯ್ತು. ಇಲ್ಲಿ ಇಟಲಿ ಸೋಲುವುದ್ದಕ್ಕೆ ಆರಂಭ ಕಳಪೆ ಆಗಿತ್ತು. ಇಲ್ಲಿ ಮೊಸ್ಕಾ ಬ್ರದರ್ ಪೈಕಿ ಆಂಥೋನಿ ಮೊಸ್ಕಾ ಗೋಲ್ಡನ್ ಡಕ್ಗೆ ಔಟಾದರು. ಜಸ್ಟಿನ್ ಮೊಸ್ಕಾ43 ರನ್ ಗಳಿಸಿ ತಂಡಕ್ಕಾಗಿ ಹೊರಾಡಿದ್ರು.
ಸೂಪರ್ 8 ಗೆ ಎಂಟ್ರಿ ಕೊಡುವುದ್ದಕ್ಕೆ ಇಟಲಿ ಕೂಡ ಸಾಕಷ್ಟು ಕಷ್ಟಪಟ್ಟಿದೆ. ಆದ್ರೆ ಅದು ಕೈ ಹಿಡಿದಿಲ್ಲ. ಇಟಲಿ ಆರಂಭದಲ್ಲಿ ಸ್ವಲ್ಪ ಚೆನ್ನಾಗಿ ಆಡಿದ್ರೆ ಇಂಗ್ಲೆಂಡ್ ವಿರುದ್ಧ ಈಸಿಯಾಗಿ ಗೆಲ್ಲಬಹುದಿತ್ತು. ಒಂದು ವೇಳೆ ಚೊಚ್ಚಲ ವಿಶ್ವಕಪ್ನಲ್ಲಿ ಸೂಪರ್ 8ಗೆಎಂಟ್ರಿ ಕೊಟ್ಟಿದ್ರೆ, ಮುಂದೆ ಕೂಡ ಕ್ರಿಕೆಟ್ ಜಗತ್ತು ಇಟಲಿ ಕಡೆ ತಿರುಗಿ ನೋಡುತಿತ್ತು.. ಅದೇನೆ ಇರಲಿ ಕ್ರಿಕೆಟ್ನಲ್ಲಿ ಅಂಬೆಗಾಲು ಇಡುತ್ತಿರೋ ಇಟಲಿ ಕ್ರಿಕೆಟ್ನಲ್ಲ ಸಾಧನೆ ಮಾಡಲಿ, ಹಾಗೇ ಮೊಸ್ಕಾ ಬ್ರದರ್ಸ್ ಕೂಡ ಮತ್ತಷ್ಟು ಹೆಸರು ಮಾಡಲಿ.

ನೋಡಿರಿ

