JUSTICE FOR ರಿಂಕು ಸಿಂಗ್ – ದುಬೆ & ಸುಂದರ್ ಗಂಭೀರ್ ಮಕ್ಕಳಾ?
T-20I ತಂಡವನ್ನೂ ಹಳ್ಳ ಹಿಡಿಸ್ತಾರಾ?

JUSTICE FOR ರಿಂಕು ಸಿಂಗ್ – ದುಬೆ & ಸುಂದರ್ ಗಂಭೀರ್ ಮಕ್ಕಳಾ?T-20I ತಂಡವನ್ನೂ ಹಳ್ಳ ಹಿಡಿಸ್ತಾರಾ?

ಭಾರತ ಮತ್ತು ಸೌತ್ ಆಫ್ರಿಕಾ ನಡುವಿನ ಏಕದಿನ ಸರಣಿ ಇನ್ನೇನು ಕ್ಲೈಮ್ಯಾಕ್ಸ್ ಹಂತದಲ್ಲಿದೆ. ಶನಿವಾರ ವಿಶಾಖಪಟ್ಟಣದಲ್ಲಿ ಮೂರನೇ ಪಂದ್ಯ ನಡೆಯಲಿದ್ದು ಗೆದ್ದವ್ರು ಸರಣಿ ಕೈವಶ ಮಾಡಿಕೊಳ್ತಾರೆ. ಇದಾದ್ಮೇಲೆ ಐದು ಪಂದ್ಯಗಳ ಟಿ-20ಐ ಸರಣಿ ಶುರುವಾಗುತ್ತೆ. ಈ ಸರಣಿಗೆ ಆಲ್ರೆಡಿ ಭಾರತ 15 ಸದಸ್ಯರ ತಂಡ ಪ್ರಕಟ ಮಾಡಿದೆ. ಆದರೆ ಟೀಂ ಅನೌನ್ಸ್ ಆದ್ಮೇಲೆ ಸೋಶಿಯಲ್ ಮೀಡಿಯಾದಲ್ಲಿ ಜಸ್ಟೀಸ್ ಫಾರ್ ರಿಂಕು ಸಿಂಗ್ ಅನ್ನೋ ಕ್ಯಾಂಪೇನ್ ಶುರುವಾಗಿದೆ.

ಇದನ್ನೂ ಓದಿ : Devil ಬರ್ತಿದೆ ಚಿನ್ನ – D BOSS ಗ್ರಹಣ ಬಿಡ್ತಾ? – ಜೈಲಿನ TVಯಲ್ಲಿ ಡೆವಿಲ್ ‘ದರ್ಶನ’

ಭಾರತ ಮತ್ತು ಸೌತ್ ಆಫ್ರಿಕಾ ನಡುವಿನ 5 ಪಂದ್ಯಗಳ ಟಿ-20ಐ ಸರಣಿ ಡಿಸೆಂಬರ್ 9ರಿಂದ ಆರಂಭವಾಗಲಿದೆ. ಇದಕ್ಕಾಗಿ ಸೂರ್ಯಕುಮಾರ್ ಯಾದವ್ ಕ್ಯಾಪ್ಟನ್ಸಿಯಲ್ಲಿ 15 ಆಟಗಾರರ ತಂಡವನ್ನ ಬಿಸಿಸಿಐ ಅನೌನ್ಸ್ ಮಾಡಿದೆ. ಹಾಗೇ ಇಂಜುರಿಯಿಂದ ರಿಕವರ್ ಆಗಿರೋ ಶುಭ್​ಮನ್ ಗಿಲ್ ತಂಡಕ್ಕೆ ಕಂ ಬ್ಯಾಕ್ ಮಾಡಿದ್ದು ವೈಸ್ ಕ್ಯಾಪ್ಟನ್ಸಿ ವಹಿಸಿಕೊಂಡಿದ್ದಾರೆ. ಹಾರ್ದಿಕ್ ಪಾಂಡ್ಯ ತಂಡಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ. ಉಳಿದಂತೆ ಆಸ್ಟ್ರೇಲಿಯಾ ಸಿರೀಸ್​ನಲ್ಲಿ ಇದ್ದವ್ರೇ ಇಲ್ಲೂ ಕಂಟಿನ್ಯೂ ಆಗಿದ್ದಾರೆ. ಆದ್ರೆ ಈ ಸರಣಿಯಿಂದ ರಿಂಕುಸಿಂಗ್​ರನ್ನ ಕೈಬಿಟ್ಟಿರೋದೇ ಜನಾಕ್ರೋಶಕ್ಕೆ ಕಾರಣವಾಗಿದೆ. ಕಳೆದೊಂದು ವರ್ಷದಿಂದ ಟೀಂ ಇಂಡಿಯಾ ಮ್ಯಾಚ್ ಫಿನಿಶರ್ ಆಗಿ ಗುರುತಿಸಿಕೊಂಡಿದ್ದ ರಿಂಕು ಸಿಂಗ್ ಅವರನ್ನು ಇದ್ದಕ್ಕಿದ್ದಂತೆ ಭಾರತ ತಂಡದಿಂದ ಕೈಬಿಡಲಾಗಿದೆ.

ಪಾಂಡ್ಯ ಕಂ ಬ್ಯಾಕ್ ಬೆನ್ನಲ್ಲೇ ರಿಂಕುಗೆ ಗೇಟ್ ಪಾಸ್!

ಟೀಂ ಇಂಡಿಯಾದ ಸ್ಟಾರ್ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ ಸೆಪ್ಟೆಂಬರ್ 26ರಂದು ಏಷ್ಯಾಕಪ್ ಟೂರ್ನಿಯ ಶ್ರೀಲಂಕಾ ಎದುರಿನ ಸೂಪರ್ 4 ಹಂತದ ಪಂದ್ಯದ ವೇಳೆಯಲ್ಲಿ ಗಾಯಗೊಂಡಿದ್ರು. ಆ ನಂತ್ರ ತಂಡದಿಂದ ಹೊರಬಿದ್ದಿದ್ದರು. ಆದ್ರೀಗ ಕಂಪ್ಲೀಟ್ ಆಗಿ ಫಿಟ್ ಌಂಡ್ ಫೈನ್ ಆಗಿದ್ದು ಇತ್ತಿಚೆಗಷ್ಟೇ ಸೈಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಪಂಜಾಬ್ ವಿರುದ್ದ ಬರೋಡಾ ಪರ ಕಣಕ್ಕಿಳಿದಿದ್ದ ಹಾರ್ದಿಕ್ ಪಾಂಡ್ಯ ಅಜೇಯ 77 ರನ್ ಸಿಡಿಸುವ ಮೂಲಕ ತಮ್ಮ ಫಿಟ್ನೆಸ್ ಸಾಬೀತುಪಡಿಸಿದ್ದರು. ಹೀಗಾಗಿ ಬಿಸಿಸಿಐ ತಂಡಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಹಾಗಂತ ರಿಂಕು ಬಿಟ್ಟಿರೋದು ಅಸಮಾಧಾನಕ್ಕೆ ಕಾರಣವಾಗಿದೆ. ಶಿವಂ ದುಬೆ ಅವರನ್ನು ಫಸ್ಟ್ ಪ್ರಿಪರೆನ್ಸ್ ಆಲೌಂಡರ್ ಆಗಿ ಸೇರಿಸಿಕೊಂಡಿರೋದು ಆಕ್ರೋಶಕ್ಕೆ ಕಾರಣವಾಗಿದೆ. ರಿಂಕು ಸಿಂಗ್ ಕಳೆದ ಐಪಿಎಲ್ ನಲ್ಲಿ 29.43 ರ ಸರಾಸರಿಯಲ್ಲಿ 206 ರನ್ ಗಳಿಸಿದರು. ಆದ್ರೆ ಯಾವುದೇ ಶತಕ ಅಥವಾ ಅರ್ಧಶತಕ ಬಂದಿರಲಿಲ್ಲ. ಆದ್ರೆ ಆ ನಂತ್ರ  ಯುಪಿ ಟಿ-20 ಲೀಗ್‌ನಲ್ಲಿ ಕಂ ಬ್ಯಾಕ್ ಮಾಡಿದ್ರು. ಒಂಬತ್ತು ಇನ್ನಿಂಗ್ಸ್‌ಗಳಿಂದ ಸರಾಸರಿ 62 ರನ್‌ಗಳನ್ನು ಗಳಿಸಿದರು ಮತ್ತು ಒಂದು ಶತಕವೂ ಬಂದಿತ್ತು. ಬಳಿಕ 2025-26 ರ ರಣಜಿ ಎಲೈಟ್ ಸೀಸನ್​ನಲ್ಲೂ  ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಎರಡೂ ಇನ್ನಿಂಗ್ಸ್‌ಗಳಲ್ಲಿ ಎರಡು ಶತಕಗಳೊಂದಿಗೆ ಸರಾಸರಿ 341 ರನ್ ಗಳಿಸಿದರು. ಆದರೂ, ಭಾರತದ ಏಷ್ಯಾ ಕಪ್ 2025 ಅಭಿಯಾನದ ಭಾಗವಾಗಿದ್ದರೂ ಅವರು ತಂಡದಿಂದ ಹೊರಗುಳಿದಿದ್ದಾರೆ. ಹೀಗಾಗಿ ಸೋಶಿಯಲ್ ಮೀಡಿಯಾ ಬಳಕೆದಾರರು ಜಸ್ಟೀಸ್ ಫಾರ್ ರಿಂಕು ಸಿಂಗ್ ಅನ್ನೋ ಹ್ಯಾಷ್​ಟ್ಯಾಗ್​ನಲ್ಲಿ ಪೋಸ್ಟ್​ಗಳನ್ನ ಹಾಕ್ತಿದ್ದಾರೆ.

ಗಂಭೀರ್ & ಅಗರ್ಕರ್ ಗೆ ಪ್ರಶ್ನೆಗಳ ಸುರಿಮಳೆ!

ಇನ್ನು ಸೋಶಿಯಲ್ ಮೀಡಿಯಾ ಮೂಲಕವೇ ಗಂಭೀರ್ ಹಾಗೂ ಅಗರ್ಕರ್​ಗೆ ಕ್ಲಾಸ್ ತೆಗೆದುಕೊಳ್ತಿದ್ದಾರೆ. ಮೊದಲು ಪ್ಲೇಯಿಂಗ್ 11ನಿಂದ ಹೊರಗಿಟ್ರು. ಈಗ ತಂಡದಿಂದಲೇ ಹೊರಗಿಡ್ತಿದ್ದಾರೆ. ಗೌತಮ್ ಗಂಭೀರ್ ಮತ್ತು ಅಜಿತ್ ಅಗರ್ಕರ್ ನಿಜಕ್ಕೂ ಏನ್ ಮಾಡ್ತಿದ್ದಾರೆಂದು ಪ್ರಶ್ನಿಸಿದ್ದಾರೆ. ಹಾಗೇ ಗಿಲ್​ರನ್ನ ತಂಡಕ್ಕೆ ಕರೆಸಿ ಸಂಜು ಸ್ಯಾಮ್ಸನ್ ಕರಿಯರ್​ನೂ ಹಾಳು ಮಾಡಿದ್ರೆಂದು ಆರೋಪಿಸಿದ್ದಾರೆ. ಗಿಲ್ ಕಂ ಬ್ಯಾಕ್ ತಂಡಕ್ಕೆ ರಿವರ್ಸ್ ಫೈರ್ ಆಗುತ್ತೆಂದು ಎಚ್ಚರಿಸಿದ್ದಾರೆ. ಹಾಗೇ ಗಂಭೀರ್ ಅವ್ರ ಇಬ್ಬರು ಮಕ್ಕಳಾದ ವಾಷಿಂಗ್ಟನ್ ಸುಂದರ್ ಮತ್ತು ಶಿವಂ ದುಬೆ ತಂಡದಲ್ಲೇ ಇದ್ದಾರೆಂದು ಟೀಕಿಸಿದ್ದಾರೆ. 40+ ಸರಾಸರಿ 160+ ಸ್ಟ್ರೈಕ್​ರೇಟ್ ಇರೋ ರಿಂಕುಗೆ ಏಕೆ ಅವಕಾಶ ಸಿಗ್ತಿಲ್ಲ, ಟಿ-20ಐ ತಂಡವನ್ನೂ ಹಳ್ಳ ಹಿಡಿಸೋಕೆ ಹೊರಟಿದ್ದೀರಾ ಅಂತಾ ಅಸಮಾಧಾನ ಹೊರ ಹಾಕಿದ್ದಾರೆ. ಒಟ್ನಲ್ಲಿ ಗಂಭೀರ್ ಮತ್ತು ಅಗರ್ಕರ್ ಒಂದಿಲ್ಲೊಂದು ವಿಚಾರಗಳಿಂದ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗ್ತಿದ್ದಾರೆ.

Shantha Kumari