SLOT ಕೊಡದೆ KL ಸೈಡ್ ಲೈನ್ – ಮುಂಬೈಕರ್ ಗಳಿಗಾಗಿ ರೋಹಿತ್ ಗೇಮ್?
ರಾಹುಲ್ ಮುಗಿಸಲು ನಡೀತಾ ಷಡ್ಯಂತ್ರ?

SLOT ಕೊಡದೆ KL ಸೈಡ್ ಲೈನ್ – ಮುಂಬೈಕರ್ ಗಳಿಗಾಗಿ ರೋಹಿತ್ ಗೇಮ್?ರಾಹುಲ್ ಮುಗಿಸಲು ನಡೀತಾ ಷಡ್ಯಂತ್ರ?

ಟೀಂ ಇಂಡಿಯಾದಲ್ಲಿ ಕನ್ನಡಿಗ ಕೆಎಲ್ ರಾಹುಲ್ ಪರಿಸ್ಥಿತಿ ಈಗ ಮಾಡು ಇಲ್ಲವೆ ಮಡಿ ಎನ್ನುವಂತಾಗಿದೆ. ಇನ್ಯಾರಿಗೋ ಅವಕಾಶ ಕೊಡುವ ಭರದಲ್ಲಿ ನಮ್ಮ ಕನ್ನಡಿಗನ ಭವಿಷ್ಯವನ್ನೇ ಅಡಕತ್ತರಿಯಲ್ಲಿ ಇರಿಸಲಾಗ್ತಿದೆ. ಅದಕ್ಕೆ ತಕ್ಕಂತೆ ರಾಹುಲ್ ಬ್ಯಾಟ್ ಕೂಡ ಪದೇಪದೇ ಕೈ ಕೊಡ್ತಿದೆ. ಒಂದೊಂದು ಮ್ಯಾಚ್ ಶುರುವಾದಾಗಲೆಲ್ಲಾ ಒಂದೊಂದು ಪ್ರಾಬ್ಲಮ್ಸ್ ಕ್ರಿಯೇಟ್ ಆಗಿರುತ್ತೆ. ಸದ್ಯ ಬಾಂಗ್ಲಾ ಸರಣಿಯಲ್ಲೂ ಅದೇ ಆಗ್ತಿದೆ. ಬಟ್ ಈ ಎಲ್ಲಾ ಗೋಜಲುಗಳಿಂದ ಕೆಎಲ್ ಹೊರಬರಬೇಕು ಅಂದ್ರೆ ಇರೋದು ಒಂದೇ ದಾರಿ.

ಇದನ್ನೂ ಓದಿ: ದರ್ಶನ್‌ ಗೆ ಮತ್ತೆ ನಿರಾಸೆ –  ಜಾಮೀನು ಅರ್ಜಿ ವಿಚಾರಣೆ ಅ.4ಕ್ಕೆ ಮುಂದೂಡಿಕೆ

ಕೆಎಲ್ ರಾಹುಲ್. ಒಂಥರಾ ಟೀಂ ಇಂಡಿಯಾದಲ್ಲಿ ಎಕ್ಸ್​ಪೆರಿಮೆಂಟ್ ಪ್ಲೇಯರ್ ಇದ್ದಂತೆ. ಯಾರೇ ಕ್ಯಾಪ್ಟನ್ ಆಗ್ಲಿ, ಯಾರೇ ನಾಯಕ ಆಗ್ಲಿ ಅವ್ರ ಪ್ರಯೋಗ ನಡೆಯೋದೇ ನಮ್ಮ ರಾಹುಲ್ ಮೇಲೆ. ಫಸ್ಟ್ ಆರ್ಡರ್ ನಲ್ಲಿ ಕಣಕ್ಕಿಳಿ ಅಂದ್ರೂ ಇಳಿದು ಆಡ್ಬೇಕು. ಅದೂ ಬೇಡ ಅಂತಾ ಮೂರು, ನಾಲ್ಕು ಮತ್ತು ಐದನೇ ಕ್ರಮಾಂಕದಲ್ಲೂ ಆಡಿದ್ದಾಯ್ತು. ಈಗ ಆರು, ಏಳು ಅಂತಾ ರಾಹುಲ್ ರನ್ನ ಕಂಪ್ಲೀಟ್ ಸೈಡ್ ಲೈನ್ ಮಾಡ್ತಿದ್ದಾರೆ. ಬಟ್ ಇಲ್ಲಿ ರಾಹುಲ್ ರನ್ನ ಸೈಡ್ ಲೈನ್ ಮಾಡ್ತಿರೋದ್ರ ಹಿಂದಿರೋ ಅಜೆಂಡಾವೇ ಬೇರೆ. ಬೇರೆಯವ್ರಿಗೆ ಅವಕಾಶ ಮಾಡಿಕೊಡೋಕಾಗಿ ರಾಹುಲ್​ರನ್ನ ಮತ್ತೆ ಮತ್ತೆ ಹಿಂದೆ ತಳ್ತಿದ್ದಾರೆ. ಮ್ಯಾನೇಜ್​ಮೆಂಟ್​ನ ಇದೇ ಚೆಲ್ಲಾಟವೇ ರಾಹುಲ್ ಕರಿಯರ್​ಗೆ ದೊಡ್ಡ ಹೊಡೆತ ನೀಡ್ತಿರೋದು.

ಪದೇಪದೆ ಆರ್ಡರ್ ಬದಲಾವಣೆಯಿಂದ ಕೆಎಲ್ ಫೇಲ್ಯೂರ್!

ಈಗ ಟೀಂ ಇಂಡಿಯಾದಲ್ಲಿ ರೋಹಿತ್ ಶರ್ಮಾ ಅಂದ್ರೆ ಓಪನರ್ ಸ್ಲಾಟ್ ಫಿಕ್ಸ್. ವಿರಾಟ್ ಕೊಹ್ಲಿ ಅಂದ್ರೆ ಮೂರನೇ ಕ್ರಮಾಂಕ ಫಿಕ್ಸ್. ಬಟ್ ಇತ್ತೀಚಿನ ಕೆಲ ಮ್ಯಾಚ್​ಗಳಲ್ಲಿ ಕೊಹ್ಲಿಗೆ ಬದಲಾವಣೆ ಆಗಿರ್ಬೋದು. ಬಟ್ ಕೆಎಲ್ ರಾಹುಲ್ ವಿಚಾರದಲ್ಲಿ ಹಂಗಲ್ಲ. ಕಂಟಿನ್ಯುಯಸ್ ಕ್ಯಾಪ್ಟನ್ಸಿನೂ ಕೊಡ್ಲಿಲ್ಲ. ವಿಕೆಟ್ ಕೀಪಿಂಗ್ ಜವಾಬ್ದಾರಿನೂ ಬಿಡ್ಲಿಲ್ಲ. ಹೋಗ್ಲಿ ಬ್ಯಾಟಿಂಗ್ ಆರ್ಡರ್ ಅಂತಾ ಬಂದ್ರೆ ಅಲ್ಲಿ ಓಪನರ್ ಸ್ಲಾಟ್​ನಿಂದ ಹಿಡಿದು ಆಲ್​ರೌಂಡರ್ ಖೋಟಾದವರೆಗೂ ರಾಹುಲ್​ ಪ್ರಯೋಗ ನಡೆದಿದೆ. ಹೀಗಿರುವಾಗ ಸ್ಥಿರ ಪ್ರದರ್ಶನ ಹೇಗೆ ತಾನೇ ಕೊಡೋಕೆ ಆಗುತ್ತೆ. ಯಾವ ಸ್ಲಾಟ್​ನಲ್ಲಿ ಆಡ್ತೇನೆ ಅನ್ನೋ ಐಡಿಯಾನೇ ಇಲ್ದೇ ರಾಹುಲ್ ಉತ್ತಮ ಪ್ರದರ್ಶನ ನೀಡೋದಾದ್ರೂ ಹೇಗೆ.

ಚೆನ್ನೈನಲ್ಲಿ ಬೇಕಂತಲೇ ಇನ್ನಿಂಗ್ಸ್ ಡಿಕ್ಲೇರ್ ಮಾಡಿದ್ರಾ?

ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಮ್ಯಾಚ್​ನಲ್ಲೂ ಇದೇ ಆಗಿತ್ತು. ಚೆನ್ನೈನಲ್ಲಿ ನಡೆಯುತ್ತಿದ್ದ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್’ನಲ್ಲಿ ರಾಹುಲ್ ಚೆನ್ನಾಗಿಯೇ ಬ್ಯಾಟ್ ಬೀಸ್ತಿದ್ರು. ಕನ್ನಡಿಗರು ಕೂಡ ನಮ್ಮ ಹಳೇ ಕೆಎಲ್ ನೋಡ್ಬೋದು ಅಂತಾ ಖುಷಿಯಲ್ಲಿದ್ರು. ಬಟ್ ಅಷ್ಟ್ರಲ್ಲೇ ಇನ್ನಿಂಗ್ಸ್ ಡಿಕ್ಲೇರ್ ಘೋಷಿಸಿಯಾಗಿತ್ತು. ಬಟ್ ಇಲ್ಲಿ ಇನ್ನೊಂದು ವಾದವೂ ಇದೆ. ಬೇಕಂತಲೇ ಡಿಕ್ಲೇರ್ ಮಾಡಿಕೊಂಡ್ರು ಅನ್ನೋದು. ಇನ್ನೂ ಎರಡೂ ದಿನಗಳ ಆಟ ಬಾಕಿಯಿತ್ತು. ರಾಹುಲ್ ಏನಾದ್ರೂ 50 ಮಾಡ್ಕೊಳ್ಳಿ ಅಂತಾ ಬಿಟ್ಟಿದ್ರೆ ತಮಗೆ ಬೇಕಾದವ್ರನ್ನ ತಂಡದೊಳಗೆ ಕರೆ ತರುವುದು ಹೇಗೆ ಅಂತಾ ರಾಹುಲ್ ಆಡೋಕೆ ಅವಕಾಶ ಕೊಡ್ಲಿಲ್ಲ ಅನ್ನೋದು ಕೆಲವರ ವಾದ.

ಮುಂಬೈಕರ್ ಗಳ ಮೇಲೆ ರೋಹಿತ್ ಗೆ ಮಮಕಾರ?

ಟೀಂ ಇಂಡಿಯಾದಲ್ಲಿ ಯಾರು ಆಡ್ಬೇಕು, ಯಾವ ಸ್ಲಾಟ್​ನಲ್ಲಿ ಆಡ್ಬೇಕು ಅನ್ನೋ ಬಗ್ಗೆ ಮ್ಯಾನೇಜ್​ ಮೆಂಟ್ ಜೊತೆ ನಾಯಕನ ಅಭಿಪ್ರಾಯವೂ ಮುಖ್ಯ ಆಗಿರುತ್ತೆ. ಈಗ ರೋಹಿತ್ ಶರ್ಮಾಗೆ ಕೆಎಲ್ ರಾಹುಲ್ ಗಿಂತ ಮುಂಬೈಕರ್ ಗಳ ಮೇಲೆ ಜಾಸ್ತಿ ಒಲವಿದೆ ಅನ್ನೋ ಸುದ್ದಿಯೂ ಇದೆ. ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಶಿವಂ ದುಬೆ ಮತ್ತು ಶಾರ್ದೂಲ್ ಠಾಕೂರ್ ಮೇಲೆ ರಾಹುಲ್​ಗೆ ಜಾಸ್ತಿ ಮಮಕಾರ. ಈ ಪೈಕಿ ಶ್ರೇಯಸ್ ಅಯ್ಯರ್ ಟೆಸ್ಟ್ ತಂಡದಿಂದ ಹೊರ ಬಿದ್ದಿದ್ದಾನೆ. ಅವನನ್ನು ಆದಷ್ಟು ಬೇಗ ತಂಡದೊಳಗೆ ಕರೆ ತರಬೇಕಾಗಿದೆ. ಅಲ್ದೇ ಐಪಿಎಲ್​ನಲ್ಲಿ KKR ಭಾಗವಾಗಿದ್ದ ಕೋಚ್ ಗೌತಮ್ ಗಂಭೀರ್’ಗೂ ಕೂಡ ರಾಹುಲ್’ಗಿಂತ ಶ್ರೇಯಸ್ ಅಯ್ಯರ್ ಮೇಲೆಯೇ ಇಂಟ್ರೆಸ್ಟ್ ಇದೆ. ಹೀಗಾಗಿ ರಾಹುಲ್ ವಿಚಾರದಲ್ಲಿ ಇಬ್ಬರೂ ಗೇಮ್ ಆಡ್ತಿದ್ದಾರೆ ಅನ್ನೋ ಚರ್ಚೆಯೂ ಇದೆ.

5ನೇ ಕ್ರಮಾಂಕದಲ್ಲಿ ಜಗತ್ತಿನ ಬೆಸ್ಟ್ ಬ್ಯಾಟರ್!

ಕೆಎಲ್ ರಾಹುಲ್ ಒಬ್ಬ ಅದ್ಭುತ ಆಟಗಾರ ಅನ್ನೋದ್ರಲ್ಲಿ ಡೌಟೇ ಇಲ್ಲ. ಅದ್ರಲ್ಲೂ ಅಂಕಿ ಅಂಶಗಳೇ ಇದಕ್ಕೆ ಸಾಕ್ಷಿ. ಕೆ.ಎಲ್ ರಾಹುಲ್ ಈಗ 5ನೇ ಕ್ರಮಾಂಕದಲ್ಲಿ ಜಗತ್ತಿನಲ್ಲೇ ಬೆಸ್ಟ್ ಬ್ಯಾಟರ್. ಜಗತ್ತಿನ ಭಯಾನಕ ಬೌನ್ಸಿ ಪಿಚ್ ದಕ್ಷಿಣ ಆಫ್ರಿಕಾದ ಸೆಂಚೂರಿಯನ್’ನಲ್ಲಿ 5ನೇ ಕ್ರಮಾಂಕದಲ್ಲಿ ಆಡಿ ಸೆಂಚುರಿ ಹೊಡೆದಿದ್ದೇ ಇದಕ್ಕೆ ಬೆಸ್ಟ್ ಎಕ್ಸಾಂಪಲ್. ರಾಹುಲ್’ಗಿರೋ ಸಾಮರ್ಥ್ಯಕ್ಕೆ, ಪ್ರತಿಭೆಗೆ ಆಧುನಿಕ ಕ್ರಿಕೆಟ್’ನ ದಿಗ್ಗಜರಲ್ಲಿ ಇಷ್ಟೊತ್ತಿಗೆ ಪೀಕ್​ನಲ್ಲಿರಬೇಕಿತ್ತು. ಆದ್ರೆ ಕೆಲವೊಮ್ಮೆ ಅದೃಷ್ಟ ಕೈ ಕೊಟ್ರೆ ಮತ್ತೆ ಕೆಲವೊಮ್ಮೆ ಬಿಸಿಸಿಐ ಒಳಗಿನ ರಾಜಕೀಯ ಶಕ್ತಿಗಳು ಅಡ್ಡಗಾಲು ಹಾಕ್ತಿವೆ. ಟಿಂ ಇಂಡಿಯಾದಲ್ಲಿ ರಾಹುಲ್’ರನ್ನು ಸರಿಯಾಗಿ ನಡೆಸಿಕೊಳ್ಳಲಾಗುತ್ತಿಲ್ಲ  ಎಂದು 1983ರ ವಿಶ್ವಚಾಂಪಿಯನ್ ತಂಡದ ಆಟಗಾರ ಕೃಷ್ಣಮಾಚಾರಿ ಶ್ರೀಕಾಂತ್ ಧ್ವನಿ ಎತ್ತಿದ್ದಾರೆ.

ಕಳೆದ ಮಾರ್ಚ್ ತಿಂಗಳಲ್ಲಿ ನಡೆದಿದ್ದ ಟೆಸ್ಟ್‌ ಪಂದ್ಯದಲ್ಲಿ ಕೆಎಲ್‌ ರಾಹುಲ್‌ ಉತ್ತಮ ಪ್ರದರ್ಶನ ನೀಡಿದ್ದರು.  ಎರಡೂ ಇನಿಂಗ್ಸ್‌ಗಳಿಂದ ಕ್ರಮವಾಗಿ 86 ಮತ್ತು 26 ರನ್‌ಗಳನ್ನು ಗಳಿಸಿದ್ದರು. ಆದರೆ, ಸ್ಥಿರ ಪ್ರದರ್ಶನ ಸಾಧ್ಯ ಆಗ್ತಿಲ್ಲ. ಲಂಕಾ ವಿರುದ್ಧದ ಏಕದಿನ ಸರಣಿಯಲ್ಲೂ ಎಡವಿದ್ದ ಕೆಎಲ್ ಈಗ ಬಾಂಗ್ಲಾ ಸರಣಿಯಲ್ಲೂ ಸದ್ದು ಮಾಡಿಲ್ಲ. ಸದ್ಯ ಕಾನ್ಪುರದಲ್ಲಿ ನಡೆಯುತ್ತಿರೋ ಎರಡನೇ ಟೆಸ್ಟ್ ಮ್ಯಾಚ್​ನತ್ತ ಎಲ್ಲರ ಚಿತ್ತ ನೆಟ್ಟಿದ್ದು ಇಲ್ಲಾದ್ರೂ ರಾಹುಲ್ ತನ್ನ ಸಾಮರ್ಥ್ಯವನ್ನ ಪ್ರೂವ್ ಮಾಡ್ಬೇಕಿದೆ. ಇಲ್ದಿದ್ರೆ ಮುಂದಿನ ದಿನಗಳಲ್ಲಿ ಟೆಸ್ಟ್‌ ತಂಡದಲ್ಲಿ ತಮ್ಮ ಸ್ಥಾನವನ್ನು ಕಳೆದುಕೊಂಡ್ರೂ ಅಚ್ಚರಿ ಪಡ್ಬೇಕಿಲ್ಲ. ಯಾಕಂದ್ರೆ ಈಗಾಗ್ಲೇ ರಾಹುಲ್ ಸ್ಥಾನಕ್ಕೆ ಸರ್ಫರಾಝ್‌ ಖಾನ್‌ ಮತ್ತು ಧ್ರುವ್‌ ಜುರೆಲ್‌ ಕಾಯುತ್ತಿದ್ದಾರೆ.

Shwetha M

Leave a Reply

Your email address will not be published. Required fields are marked *