ಮೆಸ್ಸಿ ಜೊತೆ ಸೆಲ್ಫೀಗೆ ಜಸ್ಟ್ ₹10 ಲಕ್ಷ !- ಕೇವಲ 100 ಮಂದಿಗಷ್ಟೇ ಈ ಚಾನ್ಸ್!

ಮೆಸ್ಸಿ ಜೊತೆ ಸೆಲ್ಫೀಗೆ ಜಸ್ಟ್ ₹10 ಲಕ್ಷ !- ಕೇವಲ 100 ಮಂದಿಗಷ್ಟೇ ಈ ಚಾನ್ಸ್!

ಅರ್ಜೆಂಟೀನಾದ ಪುಟ್ಬಾಲ್ ಲೆಜೆಂಡರಿ ಲಿಯೋನೆಲ್ ಮೆಸ್ಸಿ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಪುಟ್ಬಾಲ್ ಹೀರೋ ಸ್ವಾಗತಕ್ಕೆ ಭಾರತ ಕೂಡಾ ಕಾಯುತ್ತಿದೆ. ಇದರ ನಡುವೆ ಒಂದು ಇಂಟ್ರಸ್ಟಿಂಗ್ ವಿಚಾರವಿದೆ. ಮೆಸ್ಸಿ ಜೊತೆ ಫೋಟೋ ತೆಗಿಸಿಕೊಳ್ಳಬೇಕಂದರೆ ಕೈಯಲ್ಲಿ 10 ಲಕ್ಷ ಬಜೆಟ್ ಇರಲೇಬೇಕು.

ಇದನ್ನೂ ಓದಿ:ಆರ್‌ಸಿಬಿ ಫ್ಯಾನ್ಸ್‌ಗೆ ಖುಷಿ ಸುದ್ದಿ! – ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ IPL ಮ್ಯಾಚ್‌ ನಡೆಸಲು ಗ್ರೀನ್‌ ಸಿಗ್ನಲ್!

ಅರ್ಜೆಂಟೀನಾದ ಪುಟ್ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾರತಕ್ಕೆ ಆಗಮಿಸಲಿದ್ದಾರೆ. ಮೆಸ್ಸಿಗಾಗಿ ಭಾರತದ ಅಭಿಮಾನಿಗಳು ಕಾಯುತ್ತಿದ್ದಾರೆ. ಜೊತೆಗೆ ಮೆಸ್ಸಿ ಜೊತೆ ನಮ್ಮದೊಂದು ಫೋಟೋ ಇರಲಿ ಅನ್ನೋದು ಅಭಿಮಾನಿಗಳ ಆಸೆ. ಆದರೆ, ಈ ಕನಸು ಈಡೇರಿಸಿಕೊಳ್ಳಲು ಜೇಬು ತುಂಬಾ ದುಡ್ಡು ಬೇಕು. ಮೆಸ್ಸಿ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಬೇಕು ಅನ್ನೋ ಕನಸು ಕಂಡವರು ಬರೋಬ್ಬರಿ 10 ಲಕ್ಷ ರುಪಾಯಿ ಟೋಕನ್ ಕೊಡಲೇಬೇಕು.

ಅರ್ಜೆಂಟೀನಾದ ಫೇಮಸ್ ಫುಟ್ಬಾಲ್‌ ಆಟಗಾರ ದಿಗ್ಗಜ ಲಿಯೋನಲ್‌ ಮೆಸ್ಸಿ ಮೂರು ದಿನಗಳ ಭಾರತ ಪ್ರವಾಸ ಕೈಗೊಂಡಿದ್ದಾರೆ. ಲಿಯೋನೆಲ್ ಮೆಸ್ಸಿ, ಕೋಲ್ಕತಾ, ಹೈದರಾಬಾದ್, ಮುಂಬೈ ಹಾಗೂ ದೆಹಲಿಗೆ ಭೇಟಿ ನೀಡಲಿದ್ದಾರೆ. ಮೆಸ್ಸಿಗಾಗಿ ಪ್ರತಿ ನಗರಗಳಲ್ಲೂ ವಿಶೇಷ ಹಾಗೂ ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಡಿಸೆಂಬರ್ 14ರಂದು ಹೈದರಾಬಾದ್‌ನಲ್ಲಿ ಇರಲಿದ್ದು, ಉಪ್ಪಲ್ ಕ್ರೀಡಾಂಗಣದಲ್ಲಿ ಫುಟ್ಬಾಲ್‌ ಪಂದ್ಯ ಸೇರಿದಂತೆ 3 ಗಂಟೆಗಳ ಕಾಲ ವಿಶೇಷ ಕಾರ್ಯಕ್ರಮ ನಡೆಯಲಿದೆ. ಕೇವಲ 100 ಮಂದಿಗಷ್ಟೇ ಮೆಸ್ಸಿ ಜತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಹೈದರಾಬಾದ್‌ನ ಫಲಕ್ನುಮಾ ಅರಮನೆಯಲ್ಲಿ ಮೆಸ್ಸಿ ಜೊತೆ ಫೋಟೋಶೂಟ್‌ಗೆ ಅವಕಾಶ ನೀಡಲಾಗಿದೆ. ಟಿಕೆಟ್‌ಗೆ ₹9.95 ಲಕ್ಷ ಇದ್ದು, ಜಿಎಸ್‌ಟಿ ಸೇರಿದಂತೆ ₹10 ಲಕ್ಷಕ್ಕೂ ಹೆಚ್ಚಾಗುತ್ತದೆ. ಟಿಕೆಟ್‌ಗಳನ್ನು ಡಿಸ್ಟ್ರಿಕ್ಟ್‌ ಆ್ಯಪ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ.

Sulekha