ಆಧಾರ್ ವಿವರಗಳನ್ನ ಅಪ್ಡೇಟ್ ಮಾಡಿಸಲು ಜೂನ್ 14 ಕೊನೆಯ ದಿನ – ನಂತರ ಎಷ್ಟು ಶುಲ್ಕ ಪಾವತಿ ಮಾಡಬೇಕು?

ಆಧಾರ್ ವಿವರಗಳನ್ನ ಅಪ್ಡೇಟ್ ಮಾಡಿಸಲು ಜೂನ್ 14 ಕೊನೆಯ ದಿನ – ನಂತರ ಎಷ್ಟು ಶುಲ್ಕ ಪಾವತಿ ಮಾಡಬೇಕು?

ಆಧಾರ್ ಕಾರ್ಡ್ ಭಾರತದ ಪ್ರಮುಖ ದಾಖಲೆಗಳಲ್ಲಿ ಒಂದಾಗಿದ್ದು, ಇವಾಗಂತೂ ಆಧಾರ್ ಕಾರ್ಡ್ ಎಲ್ಲದಕ್ಕೂ ಕಡ್ಡಾಯ ಮಾಡಲಾಗಿದೆ. ಜೊತೆಗೆ ಆಧಾರ್ ಮೂಲಕ ಅನೇಕ ಸೌಲಭ್ಯಗಳನ್ನ ಮಾಡಬಹುದಾಗಿದೆ. ಇದೀಗ ಆಧಾರ್‌ ಕಾರ್ಡ್‌ (Aadhaar Card) ಮಾಡಿಸಿ 10 ವರ್ಷಕ್ಕಿಂತ ಜಾಸ್ತಿಯಾಗಿರುವವರು ಅದನ್ನು ಉಚಿತವಾಗಿ ಅಪ್ಡೇಟ್‌ ಮಾಡಿಸಲು ಅವಕಾಶ ಕಲ್ಪಿಸಲಾಗಿದೆ. ಇದುವರೆಗೆ ಒಮ್ಮೆಯೂ ಅಪ್ಡೇಟ್‌ ಮಾಡಿಸದೇ ಇರುವವರು ಜೂನ್‌ 14ರ ಒಳಗೆ ಅಪ್ಡೇಟ್‌ ಮಾಡಿಸಿಕೊಳ್ಳಬೇಕಾಗಿದೆ.

ಆಧಾರ್ ಕಾರ್ಡ್ ಹೊಂದಿರುವವರು ಮುಂದಿನ 8 ದಿನಗಳಲ್ಲಿ (ಜೂ.14) ತಮ್ಮ ಆಧಾರ್ ವಿವರಗಳನ್ನು (ಹೆಸರು, ವಿಳಾಸ, ಜನ್ಮದಿನಾಂಕ ಇತ್ಯಾದಿ ಬದಲಾವಣೆ) ಉಚಿತವಾಗಿ ನವೀಕರಿಸಬಹುದು. ಏಕೆಂದರೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ)ವು ನಾಗರಿಕರಿಗೆ ತಮ್ಮ ಆಧಾರ್‌ನಲ್ಲಿನ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ನವೀಕರಿಸಲು ಶುಲ್ಕ ವಿಧಿಸುವುದಿಲ್ಲ. ಜೂ.14 ರ ನಂತರ ಆಧಾರ್‌ ಅಪ್ಡೇಟ್‌ ಮಾಡುವವರು ಶುಲ್ಕ ಪಾವತಿಸಬೇಕಾಗುತ್ತಿದೆ. ಡಿಜಿಟಲ್ ಇಂಡಿಯಾ ಯೋಜನೆಯ ಭಾಗವಾಗಿ ಮೈಆಧಾರ್ ಪೋರ್ಟಲ್‌ನಲ್ಲಿ ಉಚಿತವಾಗಿ ಆಧಾರ್‌ ಅಪ್ಡೇಟ್‌ ಮಾಡುವ ಸೇವೆಯ ಲಾಭವನ್ನು ಪಡೆಯಲು ಜನರಿಗೆ ಅವಕಾಶ ಕಲ್ಪಿಸಲಾಗಿದೆ. ‘ನಿಮ್ಮ ಆಧಾರ್‌ ವಿವರಗಳನ್ನು ಆನ್‌ಲೈನ್‌ನಲ್ಲಿ https://myaadhaar.uidai.gov.in ನಲ್ಲಿ ಮಾರ್ಚ್‌ 15 ರಿಂದ ಜೂನ್ 14 ರ ವರೆಗೆ ಉಚಿತವಾಗಿ ನವೀಕರಿಸಬಹುದು’ ಎಂದು ಈ ಹಿಂದೆ ಯುಐಡಿಎಐ ಟ್ವೀಟ್‌ ಮಾಡಿತ್ತು.

ಇದನ್ನೂ ಓದಿ : ಒಡಿಶಾ ರೈಲು ದುರಂತದ ಬಗ್ಗೆ ಸಿಬಿಐ ತನಿಖೆ – 40 ಮೃತದೇಹಗಳ ಮೇಲೆ ಸಣ್ಣ ಗಾಯವೂ ಆಗಿಲ್ಲ!

ಜೂ.14 ರ ವರೆಗೆ ಈ ಸೇವೆಯನ್ನು ಉಚಿತವಾಗಿ ಪಡೆಯಬಹುದು. ನಂತರ ನೀವು ಆಧಾರ್‌ ಅಪ್ಡೇಟ್‌ ಮಾಡಲು 50 ರೂ. ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಆನ್‌ಲೈನ್‌ ಮೂಲಕವೋ ಅಥವಾ ಸ್ಥಳೀಯ ಆಧಾರ್ ಕೇಂದ್ರಕ್ಕೆ ಹೋಗಿ ನಿಮ್ಮ ಆಧಾರ್‌ ವಿವರಗಳನ್ನು ನವೀಕರಿಸಲು ಅವಕಾಶ ಇದೆ.

ಆಧಾರ್‌ ವಿವರ ಅಪ್ಡೇಟ್‌ ಮಾಡೋದು ಹೇಗೆ?

https://myaadhaar.uidai.gov.in/ ಲಾಗಿನ್‌ ಮಾಡಿ. ಇಲ್ಲಿ ನಿಮ್ಮ ಆಧಾರ್ ನಂಬರ್ ಹಾಕಿ, Captcha ಎಂಟರ್ ಮಾಡಿ, Send OTP ಬಟನ್ ಮೇಲೆ ಕ್ಲಿಕ್ ಮಾಡಿ, OTP enter ಮಾಡಿ ಲಾಗಿನ್ ಆಗಿ. Document Update Option Select ಮಾಡಿ, ನಿಮ್ಮ ಡೀಟೇಲ್ಸ್ ಅಪ್ಡೇಟ್ ಮಾಡಿ ಮತ್ತು ಅದಕ್ಕೆ ಬೇಕಾದ Documents ಅಪ್ಲೋಡ್ ಮಾಡಿ.

ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಬೇಕು. ಈ ತಿಂಗಳ ಅಂತ್ಯದೊಳಗೆ ಕೆಲಸ ಪೂರ್ಣಗೊಳ್ಳಬೇಕು. ಇಲ್ಲದಿದ್ದರೆ ತೊಂದರೆಯಾಗುತ್ತದೆ. ಆಧಾರ್ ಕಾರ್ಡ್ ಅನ್ನು ಪ್ಯಾನ್ ಕಾರ್ಡ್‌ನೊಂದಿಗೆ ಲಿಂಕ್ ಮಾಡದಿದ್ದರೆ, ಜುಲೈ 1 ರಿಂದ ಪ್ಯಾನ್ ಕಾರ್ಡ್ ಅಮಾನ್ಯವಾಗಲಿದೆ. ಸಾಮಾನ್ಯವಾಗಿ, ಆಧಾರ್ ಕಾರ್ಡ್‌ನೊಂದಿಗೆ ಪ್ಯಾನ್ ಕಾರ್ಡ್ ಅನ್ನು ಲಿಂಕ್ ಮಾಡಲು 31 ಮಾರ್ಚ್ 2023ರ ಗಡುವು ನೀಡಲಾಗಿತ್ತು. ಆದರೆ ಅದನ್ನು ಜೂನ್ 30ರವರೆಗೆ ವಿಸ್ತರಿಸಲು ತೀರ್ಮಾನಿಸಲಾಯಿತು. ಈ ಹಿಂದೆ ಹಲವು ಬಾರಿ ಪ್ಯಾನ್ ಕಾರ್ಡ್ ಆಧಾರ್ ಕಾರ್ಡ್ ವಿಸ್ತರಣೆ ಮಾಡಲಾಗಿದೆ.

ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡದಿದ್ದರೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲಾಗುವುದಿಲ್ಲ. ಹೂಡಿಕೆಯೂ ಸಾಧ್ಯವಿಲ್ಲ. ಈ ರೀತಿಯಾಗಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಎರಡನ್ನೂ ತಕ್ಷಣವೇ ಲಿಂಕ್ ಮಾಡಬೇಕಾಗಿದೆ. ಜೂನ್ 30 ರೊಳಗೆ ಆಧಾರ್ ಪ್ಯಾನ್ ಕಾರ್ಡ್ ಲಿಂಕ್ ಮಾಡದಿದ್ದರೆ 1,000 ರೂಪಾಯಿ ದಂಡ ಕಟ್ಟಬೇಕು. ಪ್ಯಾನ್ ಕಾರ್ಡ್ ಹೊಂದಿರುವವರು ತಕ್ಷಣ ಅದನ್ನು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಬೇಕು.

suddiyaana