ಜೂ. ಎನ್ಟಿಆರ್, ಹೃತಿಕ್ ರೋಷನ್‌ನಿಂದ ರಶ್ಮಿಕಾ ಸಿನಿಮಾ ಪ್ರಚಾರ! – ಕೂರ್ಗ್ ಬ್ಯೂಟಿ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡುತ್ತಾ?

ಕೂರ್ಗ್ ಬ್ಯೂಟಿ ರಶ್ಮಿಕಾ ಮಂದಣ್ಣ ಈಗ ಮುಟ್ಟಿದ್ದೆಲ್ಲಾ ಚಿನ್ನ. ಒಂದಾದ ಮೇಲೊಂದು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಕಾಂಟ್ರವರ್ಸಿ ಕ್ವೀನ್ ಬಾಲಿವುಡ್ ಅಂಗಳದಲ್ಲೂ ಸದ್ದು ಮಾಡ್ತಿದ್ದಾರೆ.. ಇದೀಗ ರಶ್ಮಿಕಾ, ‘ಥಮಾ’ ಹಾರರ್ ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಸಿನಿಮಾದ ಪ್ರಚಾರಕ್ಕೆ ಜೂನಿಯರ್ ಎನ್ಟಿಆರ್ ಹಾಗೂ ಹೃತಿಕ್ ರೋಷನ್ ಸಹಾಯ ಮಾಡಲಿದ್ದಾರೆ.
ಇದನ್ನೂ ಓದಿ: ಅಮ್ರಿಟಾ Vs ಮಾನ್ಯ.. ಸಿಂಗರ್‌ಗೆ ಈಕೆಯೇ ಬೇಕು! – ಮದುವೆ ಬಗ್ಗೆ ಮೌನ ಮುರಿದ ಸುನೀಲ್
ದಿನೇಶ್ ವಿಜನ್ ನಿರ್ಮಾಣದ ಹಾರರ್ ಕಾಮಿಡಿ ಚಿತ್ರ ‘ಥಮಾ’ದಲ್ಲಿ ರಶ್ಮಿಕಾ ಕಾಣಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಆಯುಷ್ಮಾನ್ ಖುರಾನಾ ಹೀರೋ. ಈ ಸಿನಿಮಾ ದೀಪಾವಳಿಗೆ ರಿಲೀಸ್ ಆಗಲಿದೆ. ಈ ಚಿತ್ರದ ಪ್ರಚಾರಕ್ಕೆ ದಿನೇಶ್ ದೊಡ್ಡ ತಂತ್ರವನ್ನು ರೂಪಿಸಿದ್ದಾರೆ. ಆಗಸ್ಟ್ 14ರಂದು ರಿಲೀಸ್ ಆಗಲಿರುವ ಜೂ.ಎನ್ಟಿಆರ್ ಹಾಗೂ ಹೃತಿಕ್ ರೋಷನ್ ನಟನೆಯ ‘ವಾರ್ 2’ ಚಿತ್ರವನ್ನು ತಮ್ಮ ಸಿನಿಮಾ ಪ್ರಚಾರಕ್ಕೆ ಬಳಕೆ ಮಾಡಿಕೊಳ್ಳಲಿದ್ದಾರೆ.
‘ವಾರ್ 2’ ಸಿನಿಮಾ ಥಿಯೇಟರ್ನಲ್ಲಿ ಪ್ರಸಾರ ಕಾಣುವಾಗ ಆರಂಭದಲ್ಲಿ ಈ ಚಿತ್ರದ ಟೀಸರ್ ಪ್ರಸಾರ ಕಾಣಲಿದೆ. ಈ ಮೂಲಕ ಅವರು ತಮ್ಮ ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಪ್ರಚಾರ ಕೊಡಲು ನಿರ್ಧರಿಸಿದ್ದಾರೆ. ಈಗಾಗಲೇ ಮ್ಯಾಡಾಕ್ ಸಂಸ್ಥೆ ಮೂಲಕ ಬಂದ ಸಿನಿಮಾಗಳನ್ನು ಜನರು ಮೆಚ್ಚಿಕೊಂಡಿದ್ದಾರೆ. ಅದರಲ್ಲೂ ‘ಸ್ತ್ರೀ 2’ ಸಿನಿಮಾ ದೊಡ್ಡ ಯಶಸ್ಸು ಕಂಡಿದೆ. ಈಗ ರಶ್ಮಿಕಾ ಮಂದಣ್ಣ ಅವರ ಸಿನಿಮಾ ಕೂಡ ಇದೇ ರೀತಿಯಲ್ಲಿ ಸಕ್ಸಸ್ ಕಾಣುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಕಳೆದ ವರ್ಷ ದೀಪಾವಳಿಗೆ ‘ಭೂಲ್ ಭುಲಯ್ಯ 3’ ಸಿನಿಮಾ ರಿಲೀಸ್ ಆಗಿ ಒಳ್ಳೆಯ ಗಳಿಕೆ ಮಾಡಿತ್ತು. ಈ ಬಾರಿ ರಶ್ಮಿಕಾ ಸಿನಿಮಾ ಕಮಾಲ್ ಮಾಡಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. ರಶ್ಮಿಕಾ ಮಂದಣ್ಣ ಅವರು ಇದೇ ಮೊದಲ ಬಾರಿಗೆ ಹಾರರ್ ಚಿತ್ರ ಒಪ್ಪಿಕೊಂಡಿದ್ದಾರೆ. ಈವರೆಗೆ ಅವರು ರೊಮ್ಯಾಂಟಿಕ್ ಸಿನಿಮಾಗಳ ಮೂಲಕ ಗಮನ ಸೆಳೆದಿದ್ದರು.

ನೋಡಿರಿ

