ಬಲಿಷ್ಠ ಭಾರತವನ್ನೇ ನಡುಗಿಸಿದ ಜಪಾನ್ – 5 ಓವರ್.. ಅಭಿ 0.. 2 ರನ್ ಗೆಲುವು
ಅಕ್ಷರ್ ಜಾದೂ.. ವೈಡ್ ಬಾಲ್ ವಿವಾದ

ಟಿ-20 ವಿಶ್ವಕಪ್ನಲ್ಲಿ ಬ್ಯಾಕ್ ಟು ಬ್ಯಾಕ್ ಚಾಂಪಿಯನ್ಸ್.. ಟಿ-20ಐ ರ್ಯಾಂಕಿಂಗ್ನಲ್ಲೂ ಟಾಪರ್ಸ್. ವರ್ಲ್ಡ್ಸ್ ಮೋಸ್ಟ್ ಡೇಂಜರಸ್ ಪ್ಲೇಯರ್ಸ್ ಟೀಂ ಎನ್ನುವಂಥ ಟ್ಯಾಗ್ಲೈನ್. ಹೀಗಿರೋ ಬಲಿಷ್ಠ ಭಾರತ ಕ್ರಿಕೆಟ್ನಲ್ಲಿ ಅಂಬೆಗಾಲಿಡ್ತಿರೋ ಜಪಾನ್ ಮುಂದೆ ಜ್ವಾಲೆಯಾಗ್ತಾರೆ ಅಂತಾನೇ ಎಲ್ರೂ ಅನ್ಕೊಳ್ತಿದ್ರು. ಆದ್ರೆ ಅಲ್ಲಿ ಸೀನೇ ಉಲ್ಟಾ. ಮಳೆ ಕಣ್ಣಾಮುಚ್ಚಾಲೆ ನಡುವೆ ಲೇಟ್ ಆಗಿ ಸ್ಟಾರ್ಟ್ ಆದ ಪಂದ್ಯದಲ್ಲಿ ಭಾರತ ಅಕ್ಷರಶಃ ತಿಣುಕಾಡಿದೆ. ಬ್ಯಾಟಿಂಗ್ & ಬೌಲಿಂಗ್ ಎರಡ್ರಲ್ಲೂ ಒದ್ದಾಡಿ ಒದ್ದಾಡಿ ಕೊನೆಯಲ್ಲಿ ವಿನ್ ಆಗಿದ್ದಾರೆ.
ಇದನ್ನೂ ಓದಿ : ಯೆಲ್ಲೋ ಆರ್ಮಿಗಿನ್ನು ಜಹೀರ್ ಗುರು – ಬಿದ್ದಿರೋ ಚೆನ್ನೈನಲ್ಲಿ POWER ಬರುತ್ತಾ?
ಇದನ್ನ ಓವರ್ ಕಾನ್ಫಿಡೆನ್ಸ್ ಅನ್ಬೇಕೋ ಅಥವಾ ಪಿಚ್ ಸಪೋರ್ಟ್ ಸಿಕ್ಕಿಲ್ವೋ ಅಥವಾ ಎಲ್ರಿಗೂ ಫಾರ್ಮ್ ಕೈಕೊಟ್ಟಿದೆ ಅಂತಾ ಹೇಳ್ಬೇಕೋ ಗೊತ್ತಿಲ್ಲ. ಜಪಾನ್ ವಿರುದ್ಧದ ಏಕೈಕ ಟಿ-20 ಪಂದ್ಯದಲ್ಲಿ ಭಾರತ ಸೋತೇ ಬಿಡ್ತು ಎನ್ನುವಂಥ ಸ್ಟೇಜ್ಗೆ ಹೋಗಿ ಲಾಸ್ಟ್ ಬಾಲಲ್ಲಿ ವಿನ್ ಆಗಿದೆ. ಟಿ-20 ವಿಶ್ವಕಪ್ನ ಚಾಂಪಿಯನ್ಸ್ಗೆ ಜಪಾನ್ ಪಡೆ ಅಕ್ಷರಶಃ ಬೆವರಿಳಿಸಿದೆ.
ಮಳೆ ಕಾರಣಕ್ಕೆ 5 ಓವರ್ ಗಳಿಗೆ ಪಂದ್ಯ.. ಒದ್ದಾಡಿದ ಭಾರತ!
ಕ್ರಿಕೆಟ್ ಇತಿಹಾಸದಲ್ಲೇ ಫಾರ್ ದಿ ಫಸ್ಟ್ ಟೈಂ ಭಾರತ ಹಾಗೇ ಜಪಾನ್ ತಂಡಗಳು ಮೆನ್ಸ್ ಸೀನಿಯರ್ ಕ್ರಿಕೆಟ್ನಲ್ಲಿ ಮುಖಾಮುಖಿಯಾಗಿದ್ರು. ಪಂದ್ಯದ ಆರಂಭಕ್ಕೂ ಮುನ್ನ ಭಾರತ ಈಸಿಯಾಗಿ ಗೆಲ್ಲುತ್ತೆ ಅಂತಾನೇ ಎಲ್ರೂ ಅನ್ಕೊಳ್ತಿದ್ರು. ಬೆಳಗ್ಗೆ 9.30ಕ್ಕೆಲ್ಲಾ ಮ್ಯಾಚ್ ಸ್ಟಾರ್ಟ್ ಆಗ್ಬೇಕಿತ್ತು. ಆದ್ರೆ ಮಳೆಯ ಕಾರಣದಿಂದಾಗಿ ಮೈದಾನ ಒದ್ದೆಯಾಗಿದ್ದರಿಂದ ಪಂದ್ಯ ಸ್ಟಾರ್ಟ್ ಆಗಿದ್ದೇ ಸಿಕ್ಕಾಪಟ್ಟೆ ಡಿಲೇ ಆಯ್ತು. ಮ್ಯಾಚ್ ಮುಗಿಯೋ ಹೊತ್ತಿಗೆ ಅಂದ್ರೆ ಮಧ್ಯಾಹ್ನ 12.30ಕ್ಕೆ ಪಂದ್ಯ ಶುರುವಾಗಿದ್ದು. ಪಂದ್ಯ ಸಿಕ್ಕಾಪಟ್ಟೆ ಡಿಲೇ ಆಗಿದ್ರಿಂದ 20 ಓವರ್ಗಳ ಪಂದ್ಯವನ್ನ ಕೇವಲ 5 ಓವರ್ಗಳಿಗೆ ಸೀಮಿತ ಮಾಡಲಾಯ್ತು. ಟಾಸ್ ಗೆದ್ದ ಭಾರತದ ನಾಯಕ ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಚೂಸ್ ಮಾಡಿಕೊಂಡ್ರು. ಅಲ್ಲಿಂದಲೇ ನೋಡಿ ಶುರುವಾಗಿದ್ದು ಡ್ರಾಮಾ.
ಒದ್ದಾಡಿ ಒದ್ದಾಡಿ ಗೆದ್ದ ಭಾರತ!
ಅಭಿಷೇಕ್ 0(1), ಸಂಜು ಸ್ಯಾಮ್ಸನ್ 9(7), ಇಶಾನ್ ಕಿಶನ್ 3(6)
ಶ್ರೇಯಸ್ ಅಯ್ಯರ್ 16(12), ತಿಲಕ್ 1*(3), ದುಬೆ 0*(1)
ಭಾರತದ ಪರ 30 ಬಾಲ್ ಗಳಲ್ಲಿ ಒಂದೂ ಸಿಕ್ಸ್ ಇಲ್ಲ.. 2 ಫೋರ್
ಜಪಾನ್ ಪರ ಚಾರ್ಲೆಸ್ ಹಿಂಜೆ 2, ಇಬ್ರಾಹಿಂ & ಬೆಂಜಮಿನ್ ತಲಾ 1 ವಿಕೆಟ್
5 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 32 ರನ್ ಕಲೆ ಹಾಕಿದ ಭಾರತ
33 ರನ್ ಗಳ ಟಾರ್ಗೆಟ್ ಬೆನ್ನಟ್ಟಿದ ಜಪಾನ್ ಪರ ಕೆಂಡೆಲ್ 12 ರನ್
5 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 30 ರನ್.. 2 ರನ್ ಗಳಿಂದ ಸೋಲು
ಭಾರತದ ಪರ ಅಕ್ಷರ್ 7 ರನ್ ನೀಡಿ ವಿಕೆಟ್ ಇಲ್ಲ, ಸುಂದರ್ 2 ವಿಕೆಟ್
ಒಂದೇ ಓವರ್ ನಲ್ಲಿ 10 ರನ್ ನೀಡಿ ವಿಕೆಟ್ ಪಡೆಯದ ರವಿ ಬಿಷ್ಣೋಯ್
ಹೀಗೆ ಭಾರತ ಜಪಾನ್ ವಿರುದ್ಧ ಸೋತೇ ಬಿಡ್ತಾರೇನೋ ಅನ್ನೋ ಮಟ್ಟಿಗೆ ಟೆನ್ಷನ್ ಕ್ರಿಕೆಟ್ ಮಾಡಿ ಲಾಸ್ಟ್ ಮೂಮೆಂಟ್ನಲ್ಲಿ ಗೆದ್ದಿದ್ದಾರೆ. ಭಾರತಕ್ಕೆ ಆಗಬಹುದಾದ ಅತಿದೊಡ್ಡ ಅವಮಾನ & ಮುಖಭಂಗ ಜಸ್ಟ್ ಮಿಸ್ ಆಗಿದೆ. ಭಾರತದ ಬೌಲರ್ಗಳೇ ಈ ಪಂದ್ಯವನ್ನ ಗೆಲ್ಲಿಸಿದ್ದಾರೆ. ಹೀಗಿದ್ರೂ ವೈಡ್ ಬಾಲ್ ವಿವಾದ ಭುಗಿಲೆದ್ದಿದೆ.
ವೈಡ್ ಬಾಲ್ ನಿರ್ಧಾರ ಹಿಂಪಡೆದಿದ್ದಕ್ಕೆ ಗೆದ್ದಿತಾ ಭಾರತ?
ಇನ್ನು ಈ ಪಂದ್ಯದಲ್ಲಿ ಭಾರತದ ಗೆಲುವಿಗೆ ಒಂದು ವೈಡ್ ಬಾಲ್ ನಿರ್ಧಾರ ಹಿಂಪಡೆದಿದ್ದೇ ಕಾರಣ ಅನ್ನೋ ವಾದ ಕೂಡ ಶುರುವಾಗಿದೆ. ಜಪಾನ್ ಬ್ಯಾಟಿಂಗ್ ವೇಳೆ ಅಂತಿಮ ಓವರ್‌ನಲ್ಲಿ ಅಂಪೈರ್ ನೀಡಿದ ವೈಡ್ ಬಾಲ್ ನಿರ್ಧಾರವನ್ನು ಹಿಂಪಡೆದಿದ್ದು ತೀವ್ರ ವಿವಾದಕ್ಕೆ ಕಾರಣವಾಗಿದೆ. 33 ರನ್‌ಗಳ ಸುಲಭ ಗುರಿಯನ್ನು ಬೆನ್ನಟ್ಟಿದ ಜಪಾನ್, ಕೊನೆಯ ಓವರ್‌ನಲ್ಲಿ ಭರ್ಜರಿ ಪೈಪೋಟಿ ನೀಡಿ ಇತಿಹಾಸ ನಿರ್ಮಿಸುವ ಸನಿಹವಿತ್ತು. ಜಪಾನ್ ತಂಡಕ್ಕೆ ಗೆಲ್ಲಲು ಕೊನೆಯ ಓವರ್‌ನಲ್ಲಿ 8 ರನ್‌ಗಳ ಅಗತ್ಯವಿತ್ತು. ಭಾರತದ ಪರ ಅಕ್ಷರ್ ಪಟೇಲ್ ಎಸೆದ ಅಂತಿಮ ಓವರ್‌ನ ಎಸೆತವೊಂದನ್ನು ಅಂಪೈರ್ ಮೊದಲು ವೈಡ್ ಎಂದು ಘೋಷಿಸಿದರು. ಆದರೆ, ಭಾರತೀಯ ಆಟಗಾರರು ತೀವ್ರವಾಗಿ ಪ್ರತಿಭಟಿಸಿ ಅಪೀಲ್ ಮಾಡಿದ ತಕ್ಷಣ, ಅಂಪೈರ್ ತಮ್ಮ ನಿರ್ಧಾರವನ್ನು ಬದಲಾಯಿಸಿ ಅದನ್ನು ಲೀಗಲ್ ಡೆಲಿವರಿ ಎಂದು ಘೋಷಿಸಿದರು. ಅಂಪೈರ್ ಅವರ ಈ ನಿರ್ಧಾರದಿಂದಾಗಿ ಜಪಾನ್‌ಗೆ ಸಿಗಬೇಕಾಗಿದ್ದ 1 ಹೆಚ್ಚುವರಿ ರನ್ ಹಾಗೂ ಬಾಲ್ ಲಾಸ್ ಆಯ್ತು. ಅಂತಿಮವಾಗಿ ಜಪಾನ್ ತಂಡ 5 ಓವರ್‌ಗಳಲ್ಲಿ 30 ರನ್ ಗಳಿಸಿ, ಕೇವಲ 2 ರನ್‌ಗಳಿಂದ ಸೋಲೊಪ್ಪಿಕೊಂಡಿತು. ಆದ್ರೆ ಭಾರತದ ಆಟಗಾರರ ಒತ್ತಡಕ್ಕೆ ಮಣಿದು ಅಂಪೈರ್‌ಗಳು ತಪ್ಪು ನಿರ್ಧಾರ ಮಾಡಿದ್ರು. DRS/UltraEdge ಫೈಂಡ್ ಮಾಡಲು ಟೆಕ್ನಿಕಲ್ ಮೊರೆ ಹೋಗಿಲ್ಲ. ಜಪಾನ್ ತಂಡಕ್ಕೆ ಅನ್ಯಾಯವಾಗಿದೆ ಅಂತಾ ಸಿಕ್ಕಾಪಟ್ಟೆ ಟ್ರೋಲ್ ಮಾಡಿದೆ. ಒಟ್ನಲ್ಲಿ ಜಪಾನ್ ವಿರುದ್ಧ ಒನ್ ಸೈಡೆಡ್ ಆಗಿ ವಿನ್ ಆಗ್ತಾರೆ ಅನ್ಕೊಂಡ್ರೆ ಭಾರತ ತಿಣುಕಾಡಿ ತಿಣುಕಾಡಿ ಗೆದ್ದಿದೆ. ಈ ಪಂದ್ಯದ ಸೋಲು ಗೆಲುವು ಎಫೆಕ್ಟ್ ಆಗದೇ ಇದ್ರೂ ಏಷ್ಯನ್ ಗೇಮ್ಸ್ನಲ್ಲಿ ಭಾರತದ ಆಟಗಾರರು ಹೇಗೆ ಪರ್ಫಾಮ್ ಮಾಡ್ತಾರೆ ಅನ್ನೋ ಪ್ರಶ್ನೆಗಳು ಮೂಡಿವೆ.

ನೋಡಿರಿ

