ದೃಷ್ಟಶಾಲಿ ಹೇಜಲ್‌ವುಡ್‌ನಿಂದ ಆರ್ ಸಿಬಿಗೆ ಕಪ್ ಫಿಕ್ಸ್
ಫೈನಲ್‌ ಪಂದ್ಯಗಳಲ್ಲಿ ಸೋತೇ ಇಲ್ಲ ಜೋಶ್

ದೃಷ್ಟಶಾಲಿ ಹೇಜಲ್‌ವುಡ್‌ನಿಂದ  ಆರ್ ಸಿಬಿಗೆ ಕಪ್ ಫಿಕ್ಸ್ಫೈನಲ್‌ ಪಂದ್ಯಗಳಲ್ಲಿ ಸೋತೇ ಇಲ್ಲ ಜೋಶ್

ಆರ್‌ಸಿಬಿ ತಂಡ ಸೇರಿದ ಬಳಿಕ ಜೋಶ್ ಹೇಜಲ್‌ವುಡ್ ಅವರ ಅದ್ಭುತ ಬೌಲಿಂಗ್ ಪ್ರದರ್ಶನದಿಂದ ತಂಡದ ಲಕ್ ಫುಲ್ ಚೇಂಜ್ ಆಗಿದೆ.  ಹೇಜಲ್​ವುಡ್ ಇಲ್ಲದೆ ಬ್ಯಾಕ್ ಟು ಬ್ಯಾಕ್ ಪಂದ್ಯಗಳಲ್ಲಿ ದುಬಾರಿಯಾಗಿದ್ದ ಆರ್​ಸಿಬಿ ಬೌಲಿಂಗ್ ಪಡೆ, ಹೇಜಲ್​ವುಡ್ ತಂಡವನ್ನು ಸೇರಿಕೊಂಡ ಬಳಿಕ ಪಂಜಾಬ್ ಕಿಂಗ್ಸ್ ವಿರುದ್ಧ ಮಾರಕ ಪ್ರದರ್ಶನ ನೀಡಿ ಬಲಿಷ್ಠ ತಂಡವನ್ನು 101 ರನ್​ಗಳಿಗೆ ಆಲೌಟ್ ಮಾಡಿತ್ತು. ಹೀಗಾಗಿಯೇ ಆರ್‌ಸಿಬಿ ವೇಗಿ ಜೋಶ್  ಹೇಜಲ್‌ವುಡ್ ಆರ್‌ಸಿಬಿ ಫ್ಯಾನ್ಸ್ ಹೃದಯದಲ್ಲಿ ಮನೆ ಮಾಡಿದ್ದಾರೆ.  ಈ ವೇಗದ ಬೌಲರ್ ಆರ್‌ಸಿಬಿ ತಂಡವನ್ನು ಫೈನಲ್‌ಗೆ ಕೊಂಡೊಯ್ಯುವಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಹೇಜಲ್‌ವುಡ್ ಇದುವರೆಗೆ 11 ಪಂದ್ಯಗಳಲ್ಲಿ 21 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಈ ಬಾರಿಯ ಮೆಗಾ ಹರಾಜಿನಲ್ಲಿ ಹೇಜಲ್‌ವುಡ್‌ ಅವರನ್ನು ಖರೀದಿಸಲು ಸಾಕಷ್ಟು ತಂಡಗಳ ನಡುವೆ ಪೈಪೋಟಿ ಇತ್ತು. ಹೀಗಾಗಿ ಹೇಜಲ್‌ವುಡ್ ಅವರನ್ನು ತನ್ನ ತಂಡಕ್ಕೆ ಸೇರಿಸಿಕೊಳ್ಳಲು ಆರ್‌ಸಿಬಿ ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಯಿತು. ಅಂತಿಮವಾಗಿ ಈ ಬಲಗೈ ವೇಗದ ಬೌಲರ್‌ನನ್ನು ಆರ್​ಸಿಬಿ 12.5 ಕೋಟಿ ರೂ.ಗೆ ಸಿಕ್ಕಿದ್ರು. ಇಷ್ಟು ಹಣ ಕೊಟ್ಟಿದ್ದಕ್ಕೂ ಸಾರ್ಥಕ ಆಗಿದೆ ಅಂದ್ರೆ ತಪ್ಪಿಲ್ಲ.  ಐಪಿಎಲ್‌ನಿಂದ ಹೇಜಲ್‌ವುಡ್  32 ಕೋಟಿ 50 ಲಕ್ಷ ರೂ.ಗಳನ್ನು ಗಳಿಸಿದ್ದಾರೆ. ಹೇಜಲ್‌ವುಡ್‌ಗೆ ಕಳೆದ ಬಾರಿಯ ಐಪಿಎಲ್ ಆಡಲು ಸಾಧ್ಯವಾಗಲಿಲ್ಲ. ಇನ್ನು ಹೇಜಲ್‌ವುಡ್ ಎಷ್ಟು ಕೋಟಿಗಳ ಒಡೆಯ ಎಂಬುದನ್ನು ನೋಡುವುದಾದರೆ. ಮಾಧ್ಯಮ ವರದಿಗಳ ಪ್ರಕಾರ, ಹೇಜಲ್‌ವುಡ್ ಅವರ ನಿವ್ವಳ ಮೌಲ್ಯ 80 ಕೋಟಿ ರೂ.ಗಳಿಗಿಂತ ಹೆಚ್ಚು. ಹೇಜಲ್‌ವುಡ್ ಅಪಾರ ಪ್ರಮಾಣದ ಆಸ್ತಿಯನ್ನು ಹೊಂದಿದ್ದಾರೆ. ಅವರ ಮನೆ ಸಿಡ್ನಿಯ ಹಂಟರ್ಸ್ ಹಿಲ್‌ನಲ್ಲಿದ್ದು, ಅಲ್ಲಿ ಅವರು ಐಷಾರಾಮಿ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ. ಹೇಜಲ್‌ವುಡ್ ಈ ಮನೆಯನ್ನು 2016 ರಲ್ಲಿ 29 ಕೋಟಿ ರೂ.ಗಳಿಗೆ ಖರೀದಿಸಿದ್ದರು.

ಫೈನಲ್‌ನಲ್ಲಿ ಹೇಜಲ್‌ವುಡ್ ಸೋಲನ್ನೇ ನೋಡಿಲ್ಲ

ಇನ್ನು ಹೆಜಲ್‌ವುಡ್ ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ ಯಾವುದೇ ಫೈನಲ್ ಪಂದ್ಯವನ್ನು ಸೋತಿಲ್ಲ. ಇವರು ತಮ್ಮ ವೃತ್ತಿಜೀವನದಲ್ಲಿ 6 ಫೈನಲ್ ಪಂದ್ಯಗಳನ್ನು ಆಡಿದ್ದಾರೆ. ಅವರು ಇದ್ದ ತಂಡ ಇವೆಲ್ಲವುಗಳಲ್ಲಿ ಗೆದ್ದಿದೆ. . 2021 ರಲ್ಲಿ, ಹ್ಯಾಜಲ್‌ವುಡ್ ಸಿಡ್ನಿ ಸಿಕ್ಸರ್ಸ್‌ ಪರ ಚಾಂಪಿಯನ್ಸ್ ಲೀಗ್ ಟಿ20 ಫೈನಲ್‌ನಲ್ಲಿ ಆಡಿದ್ದರು. ಅವರ ತಂಡ ಗೆದ್ದಿತ್ತು. 2015 ರ ವಿಶ್ವಕಪ್ ಫೈನಲ್‌ನಲ್ಲಿ ಅವರು ತಂಡದ ಭಾಗವಾಗಿದ್ದರು. 2020 ರ ಬಿಗ್ ಬ್ಯಾಷ್ ಲೀಗ್, 2021 ರ ಐಪಿಎಲ್ ಮತ್ತು 2021 ರ ಟಿ20 ವಿಶ್ವಕಪ್ ವಿಜೇತ ತಂಡದಲ್ಲಿ ಜೋಶ್ ಹ್ಯಾಜಲ್‌ವುಡ್ ಕೂಡ ಇದ್ದರು. ಇದಲ್ಲದೆ, ಆಸ್ಟ್ರೇಲಿಯಾ 2023 ರ ವಿಶ್ವಕಪ್ ಗೆದ್ದಿತು. ಆ ಪಂದ್ಯದಲ್ಲಿ ಕೂಡ ಹ್ಯಾಜಲ್‌ವುಡ್ ಆಡಿದ್ದರು. ಇವೆಲ್ಲದ್ರಲ್ಲೂ ಗೆದ್ದಿದ್ದಾರೆ. ಈ ಸಲ ಆರ್‌ಸಿಬಿ ಫೈನಲ್‌ಗೆ ಹೋಗಿದ್ರೆ ಅದ್ರಲ್ಲಿ ಹ್ಯಾಜಲ್‌ವುಡ್ ಇದ್ದಾರೆ.. ಹೀಗಾಗಿ ಆರ್‌ಸಿಬಿ ಕೂಡ ಕಪ್ ಗೆಲ್ಲೋದು ಫಿಕ್ಸ್ ಅಂತ ಸಾಕಷ್ಟು ಜನ ಅಭಿಪ್ರಾಯ ಪಟ್ಟಿದ್ದಾರೆ.

ಐಪಿಎಲ್ 2025 ರಲ್ಲಿ ಜೋಶ್ ಹೇಜಲ್ ವುಡ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಅವರು ಕ್ವಾಲಿಫೈಯರ್-1 ರಲ್ಲಿಯೂ ಅದ್ಭುತ ಬೌಲಿಂಗ್ ಮಾಡಿ ಪಂಜಾಬ್‌ ಪ್ರಮುಖ ವಿಕೆಟ್ ತೆಗೆದು ಆರ್‌ಸಿಬಿಯನ್ನ ಗೆಲ್ಲಿಸಿಕೊಟ್ರು.  ನ ಪರ್ಪಲ್ ಕ್ಯಾಪ್ ಸ್ಪರ್ಧೆಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. 10 ಕ್ಕಿಂತ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳಲ್ಲಿ ಹೇಜಲ್ ವುಡ್ ಅತ್ಯುತ್ತಮ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಅವರ ಎತ್ತರದ ಇರೋದ್ರಿಂದ ಪಿಚ್ ನಲ್ಲೂ ಚೆಂಡನ್ನು ಬೌನ್ಸ್ ಮಾಡಲು ಸಹಕಾರಿಯಾಗಿದೆ. ಜೊತೆಗೆ ಸರಿಯಾದ ಜಾಗದಲ್ಲಿ ಚೆಂಡೆಸೆಯುವುದರಲ್ಲಿ ಅವರು ಪರಿಣತರಾಗಿದ್ದಾರೆ.  ಎತ್ತರವಾಗಿರುವುದರಿಂದ ಚೆಂಡನ್ನು ಎತ್ತರದಿಂದ ಎಸೆಯಲು ಸಾಧ್ಯವಾಗುತ್ತದೆ. ಇದರಿಂದ ಚೆಂಡಿಗೆ ಹೆಚ್ಚುವರಿ ನೆಗತ ದೊರಕಿ ವಿಕೆಟ್ ಪಡೆಯಲು ಸಹಾಯ ಮಾಡುತ್ತದೆ. ಇದು ಅವರ ಪ್ಲಸ್ ಪಾಯಿಂಟ್.

Kishor KV