RCBಯಿಂದ ಜೋಶ್, ಬೆಥೆಲ್ ಔಟ್ – ಕೊಹ್ಲಿ-ಸಾಲ್ಟ್.. ಪ್ಲೇಯಿಂಗ್ 11 ಹೇಗೆ?

RCBಯಿಂದ ಜೋಶ್, ಬೆಥೆಲ್ ಔಟ್ – ಕೊಹ್ಲಿ-ಸಾಲ್ಟ್.. ಪ್ಲೇಯಿಂಗ್ 11 ಹೇಗೆ?

ಬಹುನಿರೀಕ್ಷಿತ ಚಾಂಪಿಯನ್ಸ್ ಟ್ರೋಫಿಗೆ ಕೌಂಟ್​ಡೌನ್ ಶುರುವಾಗಿದೆ. ಫೆಬ್ರವರಿ 19 ಅಂದ್ರೆ ಇದೇ ಬುಧವಾರದಿಂದ ಐಸಿಸಿಯ ಮಹಾಕದನ ಆರಂಭವಾಗ್ಲಿದೆ. ಮಾರ್ಚ್ 9ರವರೆಗೆ ಫೈಟ್ ನಡೆಯಲಿದ್ದು ಆ ಬಳಿಕ ಭಾರತದಲ್ಲಿ ಐಪಿಎಲ್ ಹಬ್ಬ ಶುರುವಾಗ್ಲಿದೆ. ಎರಡು ತಿಂಗಳವರೆಗೂ ಕ್ರಿಕೆಟ್ ಪ್ರಿಯರಿಗೆ ಹಬ್ಬವೋ ಹಬ್ಬ. ಅದ್ರಲ್ಲೂ ಆರ್​ಸಿಬಿ ಫ್ಯಾನ್ಸ್ ಅಂತೂ ಕಾಯ್ತಿದ್ದಾರೆ. ಬಟ್ 18ನೇ ಸೀಸನ್ ಐಪಿಎಲ್ ಆರಂಭಕ್ಕೂ ಮುನ್ನವೇ ಅಭಿಮಾನಿಗಳಿಗೆ ಆಘಾತ ಎದುರಾಗಿದೆ. ಪ್ಲೇಯಿಂಗ್ 11ನಲ್ಲಿ ಆಡ್ಬೇಕಿದ್ದ ಇಬ್ಬರು ಆಟಗಾರರು ಲೀಗ್​ನಿಂದಲೇ ಹೊರ ಬೀಳೋ ಆತಂಕದಲ್ಲಿದ್ದಾರೆ.

ಇದನ್ನೂ ಓದಿ : WPL ನಲ್ಲಿ RCB ಹಾವಳಿ – ಇತಿಹಾಸ ನಿರ್ಮಿಸಿದ ಬೆಂಗಳೂರು ಹುಡುಗಿಯರು

ಫೆಬ್ರವರಿ 19ರಿಂದ ಚಾಂಪಿಯನ್ಸ್ ಶುರುವಾಗ್ತಾ ಇದ್ದು, ಫೈನಲ್ ಪಂದ್ಯವು ಮಾರ್ಚ್ 9 ರಂದು ನಡೆಯಲಿದೆ. ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್ ಅಂದ್ರೆ ಐಪಿಎಲ್ ಮಾರ್ಚ್ 21 ರಿಂದ ಆರಂಭವಾಗಲಿದೆ. ಆದ್ರೀಗ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿದಿರುವ ಆರ್​ಸಿಬಿ ಆಟಗಾರರು ಐಪಿಎಲ್​ನಲ್ಲಿ ಕಾಣಿಸಿಕೊಳ್ಳುತ್ತಾರಾ ಅನ್ನೋ ಅನುಮಾನ ಶುರುವಾಗಿದೆ. ಆರ್​ಸಿಬಿ ತಂಡದಲ್ಲಿರುವ ಆಸ್ಟ್ರೇಲಿಯಾ ತಂಡದ ವೇಗಿ ಜೋಶ್ ಹ್ಯಾಝಲ್​ವುಡ್ ಚಾಂಪಿಯನ್ಸ್ ಟ್ರೋಫಿಯಿಂದ ಹೊರ ಬಿದ್ದಿದ್ದಾರೆ. ಕಣಕಾಲಿನ ಹಿ೦ಭಾಗದ ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಹ್ಯಾಝಲ್​ವುಡ್ ಫಿಟ್​ನೆಸ್ ಸಮಸ್ಯೆಯ ಕಾರಣ ಚಾಂಪಿಯನ್ಸ್ ಟ್ರೋಫಿಯಿಂದ ಹಿಂದೆ ಸರಿದಿದ್ದಾರೆ.

ಮತ್ತೊಂದೆಡೆ ಇಂಗ್ಲೆಂಡ್ ತಂಡದ ಯುವ ಆಲ್​ರೌಂಡರ್ ಜೇಕಬ್ ಬೆಥೆಲ್ ಕೂಡ ಚಾಂಪಿಯನ್ಸ್ ಟ್ರೋಫಿಯಿಂದ ಹೊರಬಿದ್ದಿದ್ದಾರೆ. ಮಂಡಿರಜ್ಜು ಗಾಯದ ಸಮಸ್ಯೆಯ ಕಾರಣ ಬೆಥೆಲ್ ಭಾರತದ ವಿರುದ್ಧದ ಸರಣಿಗೆ ಹಾಗೂ ಮುಂಬರುವ ಚಾಂಪಿಯನ್ಸ್ ಟ್ರೋಫಿಗೆ ಅಲಭ್ಯರಾಗಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿದಿರುವ ಈ ಇಬ್ಬರು ಆಟಗಾರರು ಈ ಬಾರಿಯ ಐಪಿಎಲ್​ನಲ್ಲಿ ಆರ್​ಸಿಬಿ ಪರ ಕಣಕ್ಕಿಳಿಯುತ್ತಾರಾ ಎಂಬುದೇ ಪ್ರಶ್ನೆ. ಏಕೆಂದರೆ ಐಸಿಸಿ ಟೂರ್ನಿಯಿಂದ ಹೊರಗುಳಿದಿರುವ ಕಾರಣ ಸಂಪೂರ್ಣ ಫಿಟ್​ನೆಸ್ ಸಾಧಿಸದ ಹೊರತು ಐಪಿಎಲ್​ ಆಡಲು ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್ ಮತ್ತು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಅನುಮತಿ ನೀಡುವುದಿಲ್ಲ. ಹೀಗಾಗಿ ಹ್ಯಾಝಲ್​ವುಡ್ ಹಾಗೂ ಬೆಥೆಲ್ ಐಪಿಎಲ್​ನಲ್ಲಿ ಆಡೋದು ಡೌಟಿದೆ. ಐಪಿಎಲ್ ವೇಳೆಗೆ ಈ ಇಬ್ಬರು ಆಟಗಾರರು ಕಂಪ್ಲೀಟ್ ಫಿಟ್ ಆದ್ರೆ ಮಾತ್ರ RCB ಪರ ಕಣಕ್ಕಿಳಿಯಲಿದ್ದಾರೆ. ಇಲ್ಲದಿದ್ದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಬದಲಿ ಆಟಗಾರರನ್ನ ಹುಡುಕಬೇಕಾಗುತ್ತೆ.

ಸದ್ಯದ ಆಟಗಾರರ ಪೈಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಯಾರು ಪ್ಲೇಯಿಂಗ್ 11ನಲ್ಲಿ ಕಾಣಿಸಿಕೊಳ್ಬೋದು ಅನ್ನೋದು ಕೂಡ ಕುತೂಹಲ ಮೂಡಿಸಿದೆ. ಅಸಲಿಗೆ ಬೆಂಗಳೂರು ತಂಡದ ಪರ ರನ್ ಮಷಿನ್ ವಿರಾಟ್ ಕೊಹ್ಲಿ ಓಪನರ್ ಆಗಿ ಕಣಕ್ಕಿಳಿಯುವುದು ಗ್ಯಾರಂಟಿ. ದಶಕದಿಂದಲೂ ಆರ್ ಸಿಬಿ ಪರ ಓಪನ‌ರ್ ಆಗಿ ಕಣಕ್ಕಿಳಿಯುತ್ತಿದ್ದಾರೆ. ಈ ಸಲವೂ ಅವರೇ ಇನ್ನಿಂಗ್ಸ್ ತೆರೆಯಲಿದ್ದಾರೆ. ಅವರೊಂದಿಗೆ ಫಿಲ್ ಸಾಲ್ಟ್ ಆರಂಭಿಕರಾಗಿ ಕಣಕ್ಕಿಳಿಯುವುದು ಖಚಿತವಾಗಿದೆ. ಇವರು ವಿಕೆಟ್ ಕೀಪರ್ ಜವಾಬ್ದಾರಿ ಕೂಡ ನಿಭಾಯಿಸಲಿದ್ದಾರೆ. ಮೂರನೇ ಕ್ರಮಾಂಕದಲ್ಲಿ ರಜತ್‌ ಪಾಟೀದಾರ್, ನಾಲ್ಕನೇ ಕ್ರಮಾಂಕದಲ್ಲಿ ಜಿತೇಶ್ ಶರ್ಮಾ ಅಥವಾ ದೇವದತ್ ಪಡಿಕ್ಕಲ್ ಕಣಕ್ಕಿಳಿಯುವ ನಿರೀಕ್ಷೆ ಇದೆ. ಲಿಯಾಮ್ ವಿಲಿಂಗ್‌ಸ್ಮನ್, ಟಿಮ್ ಡೇವಿಡ್ ಫಿನಿಷರ್‌ಗಳಾಗಲಿದ್ದಾರೆ. ಕೃನಾಲ್ ಪಾಂಡ್ಯ ಸ್ಪಿನ್ ಆಲ್‌ರೌಂಡ‌ರ್ ಆಗಿದ್ದು, ರಸಿಖ್ ಸಲಾಂ ದಾರ್, ಭುವನೇಶ್ವರ್ ಕುಮಾರ್, ಜೋಶ್ ಹೇಜಲ್‌ವುಡ್, ಯಶ್ ದಯಾಳ್ ವೇಗಿಗಳಾಗಲಿದ್ದಾರೆ. ಸುಯಾಶ್ ಶರ್ಮಾ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಳಸಿಕೊಳ್ಳಬಹುದು.

Shantha Kumari