ನೆಟ್ಟಗೆ ಆಡಿ.. ಗಂಭೀರ್ ವಾರ್ನಿಂಗ್ – KLಗೆ ಗೋಯೆಂಕಾ ಟಾರ್ಚರ್
ಸೂರ್ಯವಂಶಿ ಭವಿಷ್ಯ ಹೇಳಿದ ಬಟ್ಲರ್

ನೆಟ್ಟಗೆ ಆಡಿ.. ಗಂಭೀರ್ ವಾರ್ನಿಂಗ್  – KLಗೆ ಗೋಯೆಂಕಾ ಟಾರ್ಚರ್ಸೂರ್ಯವಂಶಿ ಭವಿಷ್ಯ ಹೇಳಿದ ಬಟ್ಲರ್

ಕ್ರಿಕೆಟ್ ಲೋಕದ ಇಂಟ್ರೆಸ್ಟಿಂಗ್ ಸುದ್ದಿಗಳು

ಟೀಂ ಇಂಡಿಯಾ ಕೋರ್ ಕಮಿಟಿ ಜೊತೆ ಬಿಸಿಸಿಐ  ನಡೆಸಬೇಕಿದ್ದ ಮಹತ್ವದ ಪರಾಮರ್ಶನಾ ಸಭೆಯು ಕೊನೆ ಕ್ಷಣದಲ್ಲಿ ಮುಂದೂಡಲ್ಪಟ್ಟಿದೆ. ಇಡೀ ವಿಮರ್ಶೆಯ ನೇತೃತ್ವ ವಹಿಸಬೇಕಿದ್ದ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ಇದ್ದಕ್ಕಿದ್ದಂತೆ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಕಾರ್ಯದರ್ಶಿಗಳ ಆರೋಗ್ಯ ಕೈಕೊಟ್ಟಿರುವುದರಿಂದ ಬಿಸಿಸಿಐ ಈ ಸಭೆಯನ್ನು ಅಧಿಕೃತವಾಗಿ ಮುಂದೂಡಿದೆ.

ಆಗಸ್ಟ್ 15ರಿಂದ ಶ್ರೀಲಂಕಾ ವಿರುದ್ಧ ಪ್ರಾರಂಭವಾಗಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಶುಭಮನ್ ಗಿಲ್ ನೇತೃತ್ವದ ಭಾರತ ತಂಡ ಸಿದ್ಧವಾಗಿದೆ. ಕೊಲಂಬೋದಲ್ಲಿ ಅಭ್ಯಾಸ ಆರಂಭಿಸಿರುವ ತಂಡಕ್ಕೆ, ಮೊದಲ ದಿನವೇ ಗಂಭೀರ್ ವಾರ್ನಿಂಗ್ ಕೊಟ್ಟಿದ್ದಾರೆ.  ದೈಹಿಕವಾಗಿ ಮತ್ತು ಮಾನಸಿಕವಾಗಿ ಸಿದ್ಧರಿರಬೇಕು, ಈ ಸರಣಿ ಗೆಲ್ಲಬೇಕಾದ್ರೆ ಚೆನ್ನಾಗಿ ಆಡಬೇಕೆಂದು ಕೋಚ್ ಗೌತಮ್ ಗಂಭೀರ್ ಕರೆ ನೀಡಿದ್ದಾರೆ. ಹಾಗೇ ಹೊಸ ಆಟಗಾರರಾದ ಸಾರಂಶ್ ಜೈನ್, ಔಕಿಬ್ ನಬಿಯವರನ್ನು ಸ್ವಾಗತಿಸಿದ ಅವರು, WTC ರೇಸ್‌ನಲ್ಲಿ ಯಶಸ್ಸು ಗಳಿಸುವ ನಿಟ್ಟಿನಲ್ಲಿ ಶ್ರಮಿಸಲು ಸಲಹೆ ನೀಡಿದ್ದಾರೆ.

ಇದನ್ನೂ ಓದಿ:LSG ಮಾಲೀಕರಿಂದ ಪ್ರತಿಬಾರಿಯೂ ಮಾನಸಿಕ ಹಿಂಸೆ – ಕಹಿ ಅನುಭವವನ್ನು ವಿವರಿಸಿದ ಕೆ.ಎಲ್ ರಾಹುಲ್

ಭಾರತದ ಅಗ್ರ ಕ್ರಮಾಂಕದ ಬ್ಯಾಟರ್ ಸಾಯಿ ಸುದರ್ಶನ್ ಶನಿವಾರ ಶ್ರೀಲಂಕಾಕ್ಕೆ ತೆರಳಿ ತಂಡವನ್ನು ಕೂಡಿಕೊಳ್ಳಲಿದ್ದಾರೆ ಅನ್ನೋ ಮಾಹಿತಿ ಹೊರ ಬಿದ್ದಿದೆ. ಕಾಲಿನ ಹೆಬ್ಬೆರಳಿನ ನೋವಿನಿಂದಾಗಿ ಸಾಯಿ ಸುದರ್ಶನ್ ತಂಡದೊಂದಿಗೆ ಲಂಕೆಗೆ ತೆರಳಿಲ್ಲ. ಸದ್ಯ ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್‌’ನಲ್ಲಿ ಚಿಕಿತ್ಸೆ ಪಡೆಯುತ್ತಿರೋ ಸಾಯಿ ಸುದರ್ಶನ್,  ಆಲ್ ಕ್ಲಿಯರ್ ಸರ್ಟಿಫಿಕೆಟ್ ಸಿಕ್ಕ ತಕ್ಷಣ ಲಂಕೆಗೆ ಹೋಗಲಿದ್ದಾರೆ. ಶನಿವಾರ ಹೋಗುವುದು ಬಹುತೇಕ ಖಚಿತವಾಗಿದೆ.

ಟೀಂ ಇಂಡಿಯಾ  ಪದೇ ಪದೇ ಕ್ಯಾಚ್‌ಗಳನ್ನು ಕೈಚೆಲ್ಲುತ್ತಿದ್ದು, ಇದರಿಂದಲೇ ಸಾಕಷ್ಟು ಪಂದ್ಯ ಸೋತಿದೆ. ಹೀಗಾಗಿ ಲಂಕಾದಲ್ಲಿ ಬೀಡು ಬಿಟ್ಟಿರೋ ಟೀಂ ಇಂಡಿಯಾ ಕ್ಯಾಚಿಂಗ್ ಅಭ್ಯಾಸ ಮಾಡುತ್ತಿದೆ.  ಎನ್‌ಸಿಸಿ ಮೈದಾನದಲ್ಲಿ, ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ರಿಷಭ್ ಪಂತ್, ಧ್ರುವ್ ಜುರೆಲ್ ಸ್ಲಿಪ್ ಕ್ಯಾಚಿಂಗ್ ಕೌಶಲ್ಯವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಅಭ್ಯಾಸ ನಡೆಸಿದ್ದಾರೆ.

ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಯಲ್ಲಿ ತಮಗಾದ ಕಹಿ ಅನುಭವಗಳನ್ನು  ಕೆ.ಎಲ್. ರಾಹುಲ್ ಬಿಚ್ಚಿಟ್ಟಿದ್ದಾರೆ. ಐಪಿಎಲ್‌ನಲ್ಲಿ ಕಪ್ ಗೆಲ್ಲುವುದಷ್ಟೇ ಅಲ್ಲ, ಕ್ರಿಕೆಟ್‌ ಹಿನ್ನೆಲೆಯೇ ಇಲ್ಲದ ಕಾರ್ಪೊರೇಟ್‌ ಮಾಲೀಕರ ಪ್ರಶ್ನೆಗಳಿಗೆ ಉತ್ತರಿಸುವುದೇ ದೊಡ್ಡ ತಲೆ ನೋವು ಎಂದಿದ್ದಾರೆ. ಆಟಗಾರರ ಆಯ್ಕೆ, ಕಳಪೆ ಪ್ರದರ್ಶನ ಹೀಗೆ ಪ್ರತಿಯೊಂದಕ್ಕೂ ನಾನು ವಿವರಣೆ ನೀಡಬೇಕಿತ್ತು. ಕ್ರೀಡಾ ಹಿನ್ನಲೆ ಇಲ್ಲದವರಿಗೆ ಇವೆಲ್ಲವನ್ನೂ ವಿವರಿಸಿ ಅರ್ಥ ಮಾಡಿಸುವುದು ಕಷ್ಟ ಎಂದು ಕೆಎಲ್ ಎಲ್‌ಎಸ್‌ಜಿ ಮಾಲೀಕ ಸಂಜೀವ್ ಗೋಯೆಂಕಾಗೆ ಟಾಂಗ್ ನೀಡುವಂತೆ ಹೇಳಿಕೆ ನೀಡಿದ್ದಾರೆ.

ಟೀಂ ಇಂಡಿಯಾ ಕ್ರಿಕೆಟಿ ಇಶಾನ್ ಕಿಶಾನ್  RBI ನಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ನೇಮಕಗೊಂಡಿದ್ದು, ಅವು ಪಟ್ನಾ ಆರ್‌ಬಿಐ ಕಚೇರಿಗೆ ಭೇಟಿ ನೀಡಿದ್ರು. ಕ್ರೀಡಾ ಕೋಟಾದಡಿ ಈ ಹುದ್ದೆ ಪಡೆದಿರುವ ಕಿಶನ್, ತಿಂಗಳಿಗೆ 1 ಲಕ್ಷ ದಿಂದ 1. 4 ಲಕ್ಷದ ತನಕ  ವೇತನ ಪಡೆಯುತ್ತಾರೆ. ಆರ್‌ಬಿಐ ಗುರುತಿನ ಚೀಟಿ ಧರಿಸಿ ಇಶಾನ್ ಕಿಶನ್ ಪಾಟ್ನಾ ಕಚೇರಿಗೆ ಹೋದಾಗ, ಅವರನ್ನು ಭೇಟಿ ಮಾಡಲು ಹಾಗೂ ಅವರೊಂದಿಗೆ ಫೋಟೋ ತೆಗೆದುಕೊಳ್ಳಲು ನೌಕರರು ಮುಗಿಬಿದ್ದರು.

ಭಾರತ ಟೆಸ್ಟ್ ಕ್ರಿಕೆಟ್‌ನ ಭವಿಷ್ಯದ ಬಗ್ಗೆ ಅಂಜಿಕ್ಯಾ ರಹಾನೆ ಕಳವಳ ವ್ಯಕ್ತಪಡಿಸಿದ್ದಾರೆ.  ಟೆಸ್ಟ್ ಕ್ರಿಕೆಟ್‌ಗೆ 7-8 ಹಿರಿಯ ಆಟಗಾರರು ಮತ್ತು 2-3 ಕಿರಿಯ ಆಟಗಾರರು ಅಗತ್ಯವಿದೆ ಎಂದು ನಾನು ಇನ್ನೂ ಭಾವಿಸುತ್ತೇನೆ. ನಾವು ಈಗ ನೋಡುತ್ತಿರುವುದು ಎಲ್ಲಾ ಆಟಗಾರರು ವಾಸ್ತವವಾಗಿ ಹೊಸಬರು. ಯಾವುದೇ ಹಿರಿಯ ಕ್ರಿಕೆಟಿಗ ಉಳಿದಿಲ್ಲ. ಆದ್ದರಿಂದ ಹಿರಿಯರನ್ನ ಉಳಿಸಿಕೊಳ್ಳಬೇಕು ಹಾಗೂ ಗೌರವಿಸಬೇಕು ಎಂದು ರಹಾನೆ ಹೇಳಿದ್ದಾರೆ.

ಇಂಗ್ಲೆಂಡ್ ತಂಡದ ಬ್ಯಾಟರ್ ಜೋಸ್ ಬಟ್ಲರ್, ವೆಸ್ಟ್ ಇಂಡೀಸ್‌ನ ದಿಗ್ಗಜ ಕೀರನ್ ಪೊಲಾರ್ಡ್​ ಅವರ ವಿಶ್ವದಾಖಲೆಯನ್ನು ಧೂಳೀಪಟ ಮಾಡಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎಂಬ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ. ದಿ ಹಂಡ್ರೆಡ್ ಲೀಗ್​ನ 21ನೇ ಪಂದ್ಯದಲ್ಲಿ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ಪರ ಕಣಕ್ಕಿಳಿದ ಜೋಸ್ ಬಟ್ಲರ್ 20 ಎಸೆತಗಳಲ್ಲಿ 51 ರನ್ ಬಾರಿಸಿದ್ದರು. ಈ ಐವತ್ತೊಂದು ರನ್​ಗಳೊಂದಿಗೆ ಬಟ್ಲರ್ ತಮ್ಮ ಟಿ20 ರನ್​ಗಳ ಸಂಖ್ಯೆಯನ್ನು 14833 ಕ್ಕೇರಿಸಿದ್ದಾರೆ.

ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್‌ಗಳಿಸಿರೋ ಜೋಸ್ ಬಟ್ಲರ್, ವೈಭವ್ ಸೂರ್ಯವಂಶಿಯನ್ನು ಹಾಡಿಹೊಗಳಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸುವುದು ನಿಜಕ್ಕೂ ಅದ್ಭುತ ಘಳಿಗೆ. ಆದರೆ ದಾಖಲೆಗಳನ್ನು ಮುರಿಯಲೇಬೇಕು. ಒಂದು ದಿನ, ಯಾರಾದರೂ ಖಂಡಿತವಾಗಿಯೂ ಈ ದಾಖಲೆಯನ್ನು ಮುರಿಯುತ್ತಾರೆ, ಮತ್ತು ಆ ಆಟಗಾರ ಬಹುಶಃ ವೈಭವ್ ಸೂರ್ಯವಂಶಿ ಆಗಿರುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

ಪೋರ್ಟ್ ಆಫ್ ಸ್ಪೇನ್‌ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ  ಪಾಕಿಸ್ತಾನ ತಂಡ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 1-1 ರಿಂದ ಸಮಬಲಗೊಳಿಸುವಲ್ಲಿ ಯಶಸ್ವಿಯಾಗಿದೆ. ಇದು ವಿದೇಶಿ ನೆಲದಲ್ಲಿ ಪಾಕಿಸ್ತಾನಕ್ಕೆ ಕಳೆದ ಮೂರು ವರ್ಷಗಳಲ್ಲೇ ಸಿಕ್ಕ ಮೊದಲ ಟೆಸ್ಟ್ ಗೆಲುವಾಗಿದ್ದು, ಈ ಮೂಲಕ ಸತತ 8 ಪಂದ್ಯಗಳ ಸೋಲಿನ ಸರಪಳಿಯನ್ನು ಕಳಚಿಕೊಂಡಿದೆ

Kishor KV

Leave a Reply

Your email address will not be published. Required fields are marked *