WWE ಸ್ಟಾರ್ ಜಾನ್ ಸಿನಾ ನಿವೃತ್ತಿ – ಹೀರೋ ಕನಸು.. ರಿಂಗ್ ಗೆ ವಿದಾಯ
ರೆಸ್ಲಿಂಗ್ ಬಾದಷಾ ರೋಚಕ ಜರ್ನಿ
ನೆವರ್ ಗೀವ್ ಅಪ್.. ಈ ಒಂದು ಘೋಷವಾಕ್ಯದೊಂದಿಗೆ ರಿಂಗ್‌ಗೆ ಎಂಟ್ರಿ ಕೊಟ್ರೆ ಸಾಕು, ಎದುರಾಳಿಯನ್ನು ಕೆಡವಿ ಹಾಕುವ ಕಿಚ್ಚು.. ಚಿರತೆಯ ವೇಗದ ಚಲನೆ, ಎದುರಾಳಿ ಎಷ್ಟೇ ಬಲಿಷ್ಟನಾದ್ರೂ ಕೂಡ ಕೆಡವಿ ಹಾಕುವ ತಾಕತ್ತು.. ಜಾನ್‌ಸೆನಾ ರಿಂಗ್‌ನಲ್ಲಿ ಕಾಣಿಸಿಕೊಳ್ತಿದ್ದಿದ್ದು ಹೀಗೆ.. ಆದ್ರೀಗ ಜಾನ್ ಸಿನಾ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ಇದೆ. ಇನ್ಮುಂದೆ ರೆಸ್ಲಿಂಗ್ ಬಾದಷಾನ ರೋಮಾಂಚನ ಆಟ ನೋಡಲು ಸಾಧ್ಯ ಆಗಲ್ಲ.. ಹೌದು, ಇಷ್ಟು ದಿನ ಜಾನ್ ಸಿನಾ ಅವರ ಸಾಹಸ ನೋಡುತ್ತಾ ಕೇಕೆ ಹಾಕಿ ಎಂಜಾಯ್ ಮಾಡುತ್ತಿದ್ದ ಅಭಿಮಾನಿಗಳಿಗೆ ಇದು ಬೇಸರದ ಸಂಗತಿಯೇ.. WWE ಬಾಕ್ಸಿಂಗ್ ರಿಂಗ್‌ನಲ್ಲಿ 16 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಖ್ಯಾತ ರಸ್ಲರ್ ಜಾನ್ ಸಿನಾ ತಮ್ಮ ಬಾಕ್ಸಿಂಗ್ ವೃತ್ತಿ ಜೀವನಕ್ಕೆ ತೆರೆ ಎಳೆಯಲು ಸಿದ್ಧರಾಗಿದ್ದಾರೆ.
ಇದನ್ನೂ ಓದಿ: ಅಭಿಷೇಕ್ ಶರ್ಮಾ ಸೆಂಚೂರಿ ಸೀಕ್ರೆಟ್ – ರೋಹಿತ್ ಶರ್ಮಾ ಉತ್ತಾರಾಧಿಕಾರಿ ಇವರೇ
WWE ಸೂಪರ್ ಸ್ಟಾರ್ ಜಾನ್ ಸಿನಾ ಜಗತ್ತಿನ ವಿವಿಧ ದೇಶಗಳಲ್ಲಿ ಚಿರಪರಿಚಿತ. ಅದ್ರಲ್ಲೂ ಜಾನ್ ಸೆನಾ ಅವರಿಗೆ ಕೋಟಿ ಕೋಟಿ ಅಭಿಮಾನಿಗಳು ಇದ್ದಾರೆ. ಜಾನ್ ಸೆನಾ ಯಾವಾಗಲೂ ಒಂದು ಟೀ ಶರ್ಟ್, ಹಾಫ್ ಜೀನ್ಸ್, ತಲೆಗೆ ಹ್ಯಾಟ್ ಹಾಗೂ ಮೊಣಕೈಗೆ ಒಂದು ಬ್ಯಾಂಡ್ ಹಾಕೊಂಡು ರಿಂಗ್‌ಗೆ ಎಂಟ್ರಿ ಕೊಡುತ್ತಿದ್ದರು. ಇವರ ಎಂಟ್ರಿಗೆ ಎಷ್ಟೋ ಜನರು ಫಿದಾ ಆಗುತ್ತಿದ್ದರು. ಆದ್ರೀಗ ಜಾನ್ ಸೆನ ಫ್ಯಾನ್ಸ್ ಗೆ ಶಾಕಿಂಗ್ ಸುದ್ದಿ ಕೊಟ್ಟು ಸಂಚಲನ ಸೃಷ್ಟಿ ಮಾಡಿದ್ದಾರೆ. ಕೋಟ್ಯಂತರ ಫ್ಯಾನ್ಸ್ ಹೊಂದಿರುವ ಜಾನ್ ಸಿನಾ ಬಾಕ್ಸಿಂಗ್ ಜೀವನಕ್ಕೆ ತೆರೆ ಎಳೆಯಲು ಸಿದ್ಧರಾಗಿದ್ದಾರೆ. ಟೊರೊಂಟಒದಲ್ಲಿ ನಡೆದ ಮನಿ ಇನ್ ದಿ ಬ್ಯಾಂಕ್ ಟೂರ್ನಿಯಲ್ಲಿ ತನ್ನ ನಿವೃತ್ತಿ ಪ್ರಕಟಿಸಿದ್ದಾರೆ. ‘ದಿ ಲಾಸ್ಟ್ ಟೈಮ್ ಈಸ್ ನೌ” ಎಂದು ಬರೆದ ಟಿ-ಶರ್ಟ್ ಧರಿಸಿ ಸೀನಾ ತನ್ನ ನಿವೃತ್ತಿಯನ್ನು ಪ್ರಕಟಿಸಿದರು. ಈ ವರ್ಷ ನಡೆಯುವ 2024ರ ರಾಯಲ್ ರಂಬಲ್, ಎಲಿಮಿನೇಶನ್ ಚೇಂಬರ್ ಮತ್ತು ರಸಲ್ ಮೇನಿಯಾ 41ರಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ. ಮುಂದಿನ ವರ್ಷ ಅಂದ್ರೆ 2025 ರಲ್ಲಿ ನಿವೃತ್ತಿಯಾಗಲಿದ್ದಾರೆ.
2002ರಲ್ಲಿ ಡಬ್ಲ್ಯೂ ಡಬ್ಲ್ಯೂಇ ಕಂಪನಿಗೆ ಸೇರಿದ ಜಾನ್ ಸೀನ 13 ಬಾರಿ ಡಬ್ಲ್ಯೂ ಡಬ್ಲ್ಯೂಇ ಟೈಟಲ್, ಮೂರು ಬಾರಿ ಹೆವಿವೈಟ್ ಚಾಂಪಿಯನ್ ಶಿಪ್ ಮತ್ತು ಎರಡು ಬಾರಿ ರಾಯಲ್ ರಂಬಲ್ ಗೆಲುವು ಸಾಧಿಸಿದ್ದಾರೆ. ಅಂದ್ಹಾಗೆ ಈ ಜಾನ್ ಸೆನ ಅನ್ನೋ ಹೆಸರು ಸುಮ್ಮನೆ ಬಂದಿಲ್ಲ.. ಈತ ಹುಟ್ಟು ಹೋರಾಟಗಾರ.. ಹತ್ತಾರು ವರ್ಷಗಳ ಕಾಲ ಕಷ್ಟಪಟ್ಟಿದ್ದ ಜಾನ್ ಸೀನ ಕೊನೆಗೂ 2002 ರಲ್ಲಿ ಕಷ್ಟಪಟ್ಟು WWE ಕುಸ್ತಿ ಅಖಾಡಕ್ಕೆ ಬಂದಿದ್ದರು. ಆ ಬಳಿಕ ಜಾನ್ ಸೀನ ಅವರ ಬದುಕು ಬದಲಾಗಿ ಹೋಗಿತ್ತು. ಯಾಕಂದ್ರೆ ಜಾನ್ ಸೀನ ತಮ್ಮ ಜೀವನ ಪೂರ್ತಿ ಕಷ್ಟಗಳನ್ನೇ ನೋಡುತ್ತಾ ಬೆಳೆದವರು. ಕೈಯಲ್ಲಿ ಕಾಸು ಇಲ್ಲದೆ, ಊಟಕ್ಕೆ ಕೂಡ ಪರದಾಡಿದ್ದ ವ್ಯಕ್ತಿ.
1977 ಏಪ್ರಿಲ್ 23ರಂದು ಅಮೆರಿಕದಲ್ಲಿ ಜನಿಸಿದ ಜಾನ್ ಸೀನಾ ರೆಸ್ಲರ್ ಆಗುವ ಕನಸು ಕೂಡ ಕಂಡವರಲ್ಲ.. ಇವರ ಕನಸು ಏನಿದ್ದರೂ ಬಾಡಿ ಬಿಲ್ಡಿಂಗ್ ಮಾಡ್ಬೇಕು.. ಸಿನಿಮಾದಲ್ಲಿ ನಟಿಸಿ ದೊಡ್ಡ ಸ್ಟಾರ್ ಆಗ್ಬೇಕು ಅನ್ನೋದು ಮಾತ್ರ ತಲೆಯಲ್ಲಿತ್ತು.. ಇದಕ್ಕಾಗಿಯೇ ಆರು ಅಡಿ ಒಂದು ಇಂಚು ಎತ್ತರದ ಮತ್ತು 114 ಕಿಲೋಗ್ರಾಂ ತೂಕ ಇದ್ದ ಜಾನ್ ಸೀನಾ ಜಿಮ್ ತರಬೇತಿಯ ಮೂಲಕ ಕಟ್ಟುಮಸ್ತಾದ ಮತ್ತು ಹುರಿಮಾಡಿದ ಬಾಡಿ ಬಿಲ್ಡಿಂಗ್ ಮಾಡಿಕೊಂಡಿದು.. 1999ರ ನವೆಂಬರ್ ತಿಂಗಳ ಹೊತ್ತಿಗೆ ಯಾರದ್ದೋ ಸವಾಲನ್ನು ಸ್ವೀಕಾರ ಮಾಡಿ ರೆಸ್ಲಿಂಗ್ ಬೆಲ್ಟ್ ಧರಿಸಿದ ಜಾನ್ ಸೀನಾ ಮೊದಲ ಪಂದ್ಯದಲ್ಲಿಯೇ ಸೋತು ಸುಣ್ಣವಾಗಿದ್ರು.. ಸೋತದ್ದು ಮಾತ್ರ ಅಲ್ಲ ತನ್ನ ಎರಡೂ ದವಡೆಗಳನ್ನು ಮುರಿದುಕೊಂಡಿದ್ರು.. ಈ ಸೋಲೇ ಕಿಚ್ಚು ಹೊತ್ತಿಕೊಳ್ಳುವಂತೆ ಮಾಡ್ತು.. ಇಲ್ಲಿಂದಲೇ ಈತನ ಜೀವನದಲ್ಲಿ ಬದಲಾವಣೆಯ ಗಾಳಿ ಬೀಸಿತು.. ಮೊದಲ ಸೋಲು ಈತನ ನಿದ್ದೆಗೆಡಿಸ್ತು.. ಸೋತಲ್ಲೇ ಗೆಲುವು ಸಾಧಿಸ್ಬೇಕು ಅನ್ನೋ ಛಲ ಹುಟ್ಟಿಕೊಳ್ತು.. ಹೀಗಾಗಿಯೇ ಮುಂದೆ ಎರಡು ವರ್ಷ ಕಠಿಣ ಪರಿಶ್ರಮ ಪಟ್ಟು ಬೆವರು ಹರಿಸಿದ್ರು. ಕೋಚ್ ಹೇಳಿದನ್ನೆಲ್ಲಾ ಕರಾರುವಾಕ್ಕಾಗಿ ಪಾಲಿಸಿದ. ಯಾಕಂದ್ರೆ ಆತನ ತಲೆಯಲ್ಲಿದ್ದಿದ್ದು ಒಂದೇ.. ಎಲ್ಲಿ ಸೋತೆನೋ ಅಲ್ಲೇ ಗೆದ್ದು ನಿಲ್ಲ ಬೇಕು ಅಂತಾ. ಹೀಗಾಗಿಯೇ ಮಾನಸಿಕ ಮತ್ತು ದೈಹಿಕವಾಗಿ ಮುಂದಿನ ಪಂದ್ಯಗಳಿಗೆ ಸಿದ್ಧರಾದ್ರು..
ಆದಾದ್ಮೇಲೆ 2002 ರಲ್ಲಿ ಜಾನ್ ಸೆನ WWE ಗೆ ಪಾದಾರ್ಪಣೆ ಮಾಡಿದ್ರು.. ಅಂತಾರಾಷ್ಟ್ರೀಯ ರೆಸ್ಲಿಂಗ್ ಫೆಡರೇಶನ್ ಜೊತೆ ಒಪ್ಪಂದ ಮಾಡಿಕೊಂಡ ಜಾನ್ ಸೆನಾ ವೃತ್ತಿಪರ ರೆಸ್ಲರ್ ಆಗಿ ಬದಲಾದ್ರು. ಇಲ್ಲಿಂದಲೇ ಜಾನ್ ಸೆನಾ ಆರ್ಭಟ ಶುರುವಾಯ್ತು.. ಆತನ ಸ್ಟ್ರಾಂಗ್ ಪಂಚ್‌ಗೆ ಎದುರಾಳಿಗಳು ನಲುಗಿ ಹೋಗ್ತಿದ್ರು.. ಈತನ ಮುಂದೆ ಶಕ್ತಿ ಪ್ರದರ್ಶನ ಮಾಡಲು ಬಂದವರೆಲ್ಲಾ ಧೂಳಿಪಟವಾಗಿ ಹೋಗ್ತಿದ್ರು.. ಬೇರೆಯವರ ಆಟಕ್ಕಿಂತ ಸೀನಾ ಆಟ ತುಂಬಾ ಭಿನ್ನ ಆಗಿರುತ್ತದೆ. ಆತನು ಆರಂಭದಲ್ಲಿ ಆಕ್ರಮಣವನ್ನು ಮಾಡುವುದಿಲ್ಲ. ಆದರೆ ಆಟ ಕುದುರಿದ ಹಾಗೆ ಅವನು ಹೆಚ್ಚು ಆಕ್ರಮಣಕ್ಕೆ ಇಳಿಯುತ್ತಾನೆ. ಎಷ್ಟು ಬಾರಿ ಕೆಳಗೆ ಬಿದ್ದರೂ ಅರ್ಧ ಕ್ಷಣದಲ್ಲಿ ಮತ್ತೆ ಎದ್ದುಬರುವುದು ಆತನ ಶಕ್ತಿ.. ಹೀಗೆ ಜಾನ್ ಸೀನಾ ಕೆಲವೇ ತಿಂಗಳಲ್ಲಿ ರೆಸ್ಲಿಂಗ್ ಬಾದಷಾ ಆಗಿ ಬದಲಾದ. ಅತಿರಥ ಮಹಾರಥ ಪಟುಗಳನ್ನು ಸೋಲಿಸಿ ದಾಖಲೆಯ ಮೇಲೆ ದಾಖಲೆಯನ್ನು ಬರೆದ್ರು.. ಬ್ರೂಕ್ ಲೆಸ್ನಾರ್, ರಾಂಡಿ ಆರ್ಟನ್, ಶಾನ್ ಮೈಕೆಲ್, ಬಟಿಸ್ಟಾ, ಅಂಡರ್ ಟೇಕರ್, ಬಿಗ್ ಶಾ ಇವರೆಲ್ಲಾ ನಿದೆಗೆಡುವಂತೆ ಮಾಡಿದ್ದ ಜಾನ್ ಸಿನಾ.. ಇವರೆಲ್ಲರೂ ಜಾನ್ ಸಿನಾ ಕೈಯ್ಯಲ್ಲಿ ಹಲವು ಬಾರಿ ಸೋಲ್ಲನ್ನ ಒಪ್ಪಿಕೊಂಡಿದ್ರು..
ಹೆಚ್ಚು ಸ್ಪರ್ಧಾತ್ಮಕ ಆದ ಮತ್ತು ಅಪಾಯಕಾರಿಯೆ ಆದ ‘ರೆಸ್ಟಲ್ ಮೇನಿಯಾ’ ಎಂಬ ವಾರ್ಷಿಕ ಇವೆಂಟಿನಲ್ಲಿ ಸೀನಾ ಕಳೆದ ಇಪ್ಪತ್ತು ವರ್ಷಗಳ ಅವಧಿಯಲ್ಲಿ ಸೋತಿರುವ ಉದಾಹರಣೆ ತುಂಬಾ ಕಡಿಮೆ. ಜಾನ್ ಸಿನಾ ಕುಸ್ತಿಯ ಜೊತೆಗೆ ಫಾಸ್ಟ್ ಎಕ್ಸ್, ದಿ ಇಂಡಿಪೆಂಡೆಂಟ್, ದಿ ಸೂಸೈಡ್ ಸ್ಕ್ವಾಡ್‌ನಂತಹ ಚಲನ ಚಿತ್ರಗಳಲ್ಲಿ ಜಾನ್ ಸೀನಾ ಅಭಿನಯಿಸಿದ್ದಾರೆ.. ಹೀಗೆ ಸಿನಿಮಾದಲ್ಲಿ ನಟಿಸೋ ಮೂಲಕ ತನ್ನ ಕನಸನ್ನು ನನಸು ಮಾಡಿಕೊಂಡಿದ್ದಾರೆ.. ಆದ್ರೆ ಈಗ ಲೆಜೆಂಡರಿ ಐಕಾನ್ ಬಾಕ್ಸಿಂಗ್ ಗೆ ವಿದಾಯ ಹೇಳಲು ಸಜ್ಜಾಗಿರುವುದು ನಿಜಕ್ಕೂ ಬೇಸರದ ಸಂಗತಿಯೇ..