ಜೋಡಿ No.1 ಅಲ್ಲ.. ಡಿವೋರ್ಸ್ No.1! – ಸಂಸಾರದ ವಿಷ್ಯ.. ಶೋನಲ್ಲೇ ಜಗಳ.. TRPಗಾಗಿ ಜೋಡಿ ಗುಟ್ಟು ರಟ್ಟು!

ಜೀ ಕನ್ನಡದಲ್ಲಿ ಪ್ರಸಾರವಾಗ್ತಿರುವ ಜನಪ್ರೀಯ ಶೋಗಳಲ್ಲಿ ಜೋಡಿ ನಂಬರ್ 1 ಕೂಡ ಒಂದು. ಸೆಲೆಬ್ರಿಟಿ ಜೋಡಿಗಳನ್ನ ಕರೆಸಿ ಗಂಡ-ಹೆಂಡತಿ ತಮ್ಮ ತಮ್ಮ ಬದುಕನ್ನು ಹೇಗೆ ಅರ್ಥೈಸಿಕೊಂಡಿದ್ದಾರೆ. ಬೇರೆಯವರಿಗೆ ಯಾವ ಅಂಶಗಳು ಮಾದರಿಯಾಗುತ್ತವೆ. ಒಂದು ಸುಂದರ ಕುಟುಂಬದಲ್ಲಿ ಯಾವುದೆಲ್ಲಾ ಸೂತ್ರಗಳು ಬೇಕಾಗುತ್ತವೆ ಅನ್ನೋದನ್ನ ಈ ಶೋ ಮೂಲಕ ತೋರಿಸಲಾಗುತ್ತೆ. ಜೋಡಿಗಳ ಮಧ್ಯೆ ಪ್ರೀತಿ, ನಂಬಿಕೆ ಹೆಚ್ಚಿಸಬೇಕಿದ್ದ ಶೋನಲ್ಲಿ ಜಗಳ ತಂದಿಡಲಾಗ್ತಿದ್ಯಾ ಅನ್ನೋ ಪ್ರಶ್ನೆ ವೀಕ್ಷಕರಲ್ಲಿ ಮೂಡಿದೆ. ಇದಕ್ಕೆ ಕಾರಣ ಈ ವಾರದ ಸಂಚಿಕೆ.
ಇದನ್ನೂ ಓದಿ: ಒಂದೇ ದಿನ 3 ರೆಡ್ ಕಾರ್ಡ್..! – ಫುಟ್ಬಾಲ್ ಮೈದಾನದಿಂದಲೇ ಹೊರನಡೆದ ಆಟಗಾರರು
ಜೋಡಿ ನಂ 1 ಶೋನಲ್ಲಿ ನಗು, ಅಳು, ಬಾಂಧವ್ಯ, ಬದುಕಿನ ಬಂಡಿ, ಕಷ್ಟ ಸುಖ, ಇಷ್ಟ – ಕಷ್ಟ ಎಲ್ಲವೂ ಎಲ್ಲವನ್ನ ತಿಳಿದುಕೊಳ್ಳಲು ಒಂದಲ್ಲ ಒಂದು ಟಾಸ್ಕ್ಗಳನ್ನ ನೀಡಲಾಗುತ್ತೆ. ಈ ಮೂಲಕ ವೀಕ್ಷಕರಿಗೆ ಸಂಸಾರ ಸಾಗರದಲ್ಲಿ ಎಲ್ಲವನ್ನ ಅನುಸರಿಸಿಕೊಂಡು ಹೋಗ್ಬೇಕು. ಇಷ್ಟ ಕಷ್ಟಗಳನ್ನ ಸಮವಾಗಿ ಸ್ವೀಕರಿಸಿ ಖುಷಿಯಿಂದ ಬಾಳ್ಬೇಕು ಈ ಶೋನ ಪ್ರತಿ ಸಂಚಿಕೆಯೂ ವೀಕ್ಷಕರಿಗೂ ಮಾದರಿಯಾಗ್ಬೇಕು ಅನ್ನೋ ಉದ್ದೇಶ ಇರುತ್ತೆ. ಆದ್ರೀಗ ಜೋಡಿ ನಂಬರ್ 1 ಶೋ ಮೇಲೆ ವೀಕ್ಷಕರು ಸಿಟ್ಟಾಗಿದ್ದಾರೆ. ಇದು ಜೋಡಿ ನಂಬರ್ 1 ಶೋ ಅಲ್ಲ.. ಡಿವೋರ್ಸ್ ನಂಬರ್ 1 ಶೋ.. ಸುಂದರ ಸಂಸಾದಲ್ಲಿ ಹುಳಿ ಹಿಂಡೋ ಕೆಲಸ ಮಾಡ್ಬೇಡಿ ಅಂತ ಕಮೆಂಟ್ ಹಾಕ್ತಿದ್ದಾರೆ.
ಅಂದ್ಹಾಗೆ ಈ ವಾರದ ಸಂಚಿಕೆಯಲ್ಲಿ Face your Partner Round ಅನ್ನೋ ಕಾನ್ಸೆಪ್ಟ್ ಇಡಲಾಗಿತ್ತು. ಸ್ಪರ್ಧಿಗಳಿಗಾಗಿ ಸ್ಟೇಜ್ನಲ್ಲಿ ಒಂದು ಸೆಟ್ ರೆಡಿ ಮಾಡಿ ಆಕ್ಟಿವಿಟಿ ನೀಡಲಾಗಿತ್ತು. ಇದ್ರಲ್ಲಿ ಜೋಡಿಗಳು ತಮಗೆ ತನ್ನ ಸಂಗಾತಿಯ ಯಾವ ವಿಚಾರಗಳು ಇಷ್ಟ.. ಯಾವುದು ಇಷ್ಟ ಇಲ್ಲ.. ತನ್ನ ಜೊತೆ ಹೇಗಿದ್ರೆ ಇಷ್ಟ ಆಗುತ್ತೆ.. ಅನ್ನೋದನ್ನ ಹೇಳಿಕೊಳ್ಬೇಕಿತ್ತು. ಸ್ಪರ್ಧಿಗಳು ಕೂಡ ಕೊಟ್ಟ ಟಾಸ್ಟ್ಗಳನ್ನ ಚೆನ್ನಾಗೇ ಮಾಡಿದ್ದಾರೆ. ಜೋಡಿಗಳ ಭಾವನೆಗಳ ಮಹಾಪೂರವೇ ಹರಿದಿದೆ. ಸುಶ್ಮಿತಾ, ಜಗ್ಗಪ್ಪ, ಬಾಳು ಬೆಗಳುಂದಿ ದಂಪತಿ, ಮಾಲತಿ-ಪ್ರಭಾಕರ್, ಗೋಪಿ –ಉಷಾರಾಣಿ ಸೇರಿದಂತೆ ಎಲ್ಲ ಜೋಡಿಗಳು ಕಿತ್ತಾಡಿಕೊಂಡಿದ್ದಾರೆ. ಶೋ ವೇಳೆಯೇ ಕಣ್ಣೀರು ಹಾಕಿದ್ದಾರೆ. ಅದ್ರಲ್ಲೂ ನಟಿ ಗೀತಾಭಾರತಿ ಭಟ್ ಅವರ ಮಾತುಗಳು ವೇದಿಕೆಯಲ್ಲಿ ಇದ್ದವರನ್ನಷ್ಟೇ ಅಲ್ಲ, ವೀಕ್ಷಕರ ಮನಗಳನ್ನೂ ಮುಟ್ಟಿವೆ.
ನಟಿ ಗೀತಾಭಾರತಿ ಭಟ್ ತನ್ನ ಗಂಡ ರಾಜಾ ರಾಮ್ ಬಳಿ, ನಾನು ಏನಾದ್ರೂ ಹೇಳಿದ್ರೆ ಹೆಚ್ಚಿಗೆ ಮಾತಾಡಬೇಡ ಅಂತ ಹೇಳ್ತೀರಾ… ನಮಗೆ ಒಂದು ನ್ಯಾಯ, ನಿಮಗೊಂದು ನ್ಯಾಯ ಎಂದಿದ್ದಾರೆ. ಇನ್ನು ಗೀತಾ ಅವರ ಮಾತಿಗೆ ರಾಜಾರಾಮ್ ಸಿಟ್ಟಲ್ಲೇ ಮಾತನಾಡಿದ್ದಾರೆ. ಹೊಡಿ ಹೊಡಿ ನನ್ನ ಬುರುಡೆಯನ್ನೇ ಹೊಡಿ ಎಂದಿದ್ದಾರೆ. ಈ ಬೆನ್ನಲ್ಲೇ ತನ್ನ ಗಂಡ ಪೋಟೋ ಇರುವ ಮಡಕೆಯನ್ನ ಹೊಡೆದು ಇದು ಇಲ್ಲೇ ಫುಲ್ಸ್ಟಾಪ್ ಆಗ್ಬೇಕು ಅಂದಿದ್ದಾರೆ. ಬಳಿಕ ನಾನು ಎಷ್ಟು ಬಾರಿ ಅತ್ತುಕೊಂಡು ಮಲಗಿದ್ದೀನಿ ಗೊತ್ತಾ? ದಯವಿಟ್ಟು ನಾನು ಅತ್ತು ಅತ್ತು ಮಲಗೋಕೆ ಬಿಡಬೇಡಿ ಎಂದಿದ್ದು, ಆಗ ರಾಜಾರಾಮ್ ಕೂಡ ಭಾವುಕರಾಗಿದ್ದಾರೆ. ಇದು ಜಡ್ಜಸ್ ಮಾತ್ರವಲ್ಲ ವೀಕ್ಷಕರು ಕೂಡ ಭಾವುಕರಾಗಿದ್ದಾರೆ. ಈ ಬೆನ್ನಲ್ಲೇ ಶೋ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.
ಶೋ ವಿರುದ್ದ ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಹಾಕ್ತಿರುವ ವೀಕ್ಷಕರು.. ಇದು ಜೋಡಿ ನಂಬರ್ 1 ಶೋ ಅಲ್ಲ.. ಡಿವೋರ್ಸ್ ನಂಬರ್ 1 ಶೋ.. ಈ ಶೋಗೆ ಬರಬೇಕಾದ್ರೆ ಏನು ನೋವಿಲ್ಲ ಅನ್ನೋತರ ಬಂದಿದ್ರು ಈ ಜೋಡಿಗಳು. ಒಬ್ಬರನ್ನ ಒಬ್ಬರು ಬಿಟ್ಟಿರೋಕೆ ಸಾಧ್ಯವಿಲ್ಲ ಅನ್ನೋತವೇ ಬಂದಿದ್ರು. ಆದ್ರೀಗ ವೇದಿಕೆ ಮೇಲೆಯೇ ಕಿತ್ತಾಡ್ತಿದ್ದಾರೆ. ಎಲ್ಲರ ಮನೆ ದೋಸೇನು ತೂತೆ.. ಅಂತ ತೋರಿಸ್ತಾ ಇದಾರೆ…ಗಂಡ ಹೆಂಡತಿ ಬೇರೆ ಬೇರೆ ಮಾಡುವ ಶೋ, ಪ್ರೋಗ್ರಾಮ್ ಕೆ ಹೋದವರೆಲ್ಲ ಗ್ಯಾರೆಂಟಿ ಡೈವರ್ಸ್ ಕೊಟ್ಟೆ ಕಳಿಸ್ತಾರೆ. ತಮ್ಮ TRP ಗೋಸ್ಕರ ಈ ತರ ಸ್ಕ್ರಿಪ್ಟ್ ಮಾಡಿ ಸಮಾಜಕ್ಕೆ ಯಾವ ಸಂದೇಶ ಕೊಡ್ತಿದ್ದೀರಾ? ನೀವು ನಿಮ್ಮ ಸಂಸಾರದ ವಿಚಾರವನ್ನ ಮನೆಯಲಿ ಕೂತು ಮಾತಾಡಿ ಬಗೆಹರಿಸಿಕೊಳ್ಳಿ. ಇದೆಲ್ಲಾ ರಿಯಾಲಿಟಿ ಶೋನಲ್ಲಿ ಮಾತಾಡುವ ವಿಷಯ ಅಲ್ಲ. ಇದು ನಿಮ್ಮ ಜೀವನ ಅಳು ಮಾಡುತ್ತದೆ ಎಂದು ಕಮೆಂಟ್ ಮಾಡ್ತಿದ್ದಾರೆ. ಇದೀಗ ವೀಕ್ಷಕರ ಕಮೆಂಟ್ ನೋಡ್ತಿದ್ದಂತೆ ನಟಿ ಗೀತಾ ಭಾರತಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ವೊಂದನ್ನ ಹಂಚಿಕೊಂಡಿದ್ದಾರೆ. ಗೀತಾ ಗಂಡನ ಜೊತೆಗಿನ ಕೆಲವು ಮುದ್ದಾದ ಫೋಟೊಗಳನ್ನು ಹಂಚಿಕೊಂಡು, Guys Chill, ನಾವು ಚೆನ್ನಾಗಿದ್ದೇವೆ ಎಂದಿದ್ದಾರೆ. ಇದನ್ನು ನೋಡಿ ಸದ್ಯ ಅಭಿಮಾನಿಗಳು ಸಹ ನಿಟ್ಟುಸಿರು ಬಿಟ್ಟಿದ್ದಾರೆ.

ನೋಡಿರಿ

