ಜನ ಮೆಚ್ಚಿದ ಜೋಡಿಯೇ ಜೋಡಿ ನಂ.1 ಶೋ ತೀರ್ಪುಗಾರರು! – ಹೊಸ ಶೋಗೆ ಡುಮ್ಮು ಸರ್‌, ಭೂಮಿ ಟೀಚರ್‌ ಜಡ್ಜಸ್!

ಜನ ಮೆಚ್ಚಿದ ಜೋಡಿಯೇ ಜೋಡಿ ನಂ.1 ಶೋ ತೀರ್ಪುಗಾರರು! – ಹೊಸ ಶೋಗೆ ಡುಮ್ಮು ಸರ್‌, ಭೂಮಿ ಟೀಚರ್‌ ಜಡ್ಜಸ್!

ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ರಿಯಾಲಿಟಿ ಶೋಗಳಲ್ಲಿ ಜೋಡಿ ನಂಬರ್ 1 ಕೂಡ ಒಂದು.  ಈಗಾಲೇ ಎರಡು ಸೀಸನ್‌ಗಳು ಯಶಸ್ವಿಯಾಗಿದ್ದು, ಇದೀಗ ಜೋಡಿ ನಂ.1 ಸೀಸನ್‌ 3 ಆರಂಭವಾಗಲಿದೆ. ಈಗಾಗಲೇ ಜೋಡಿ ನಂ 1 ಕಾರ್ಯಕ್ರಮದ ಪ್ರೋಮೋ ಔಟ್‌ ರಿಲೀಸ್‌ ಆಗಿದ್ದು ಯಾರೆಲ್ಲಾ ಸ್ಪರ್ಧಿಗಳಾಗಿ ಭಾಗವಹಿಸಲಿದ್ದಾರೆ ಅನ್ನೋದು ರಿವೀಲ್‌ ಆಗಿತ್ತು. ಇದೀಗ ಜೋಡಿ ನಂ.1 ಕಾರ್ಯಕ್ರಮದ ಜಡ್ಜಸ್‌ ಯಾರು ಅನ್ನೋದು ಕೂಡ ರಿವೀಲ್‌ ಆಗಿದೆ.

ಇದನ್ನೂ ಓದಿ:‌ ಅನ್ನ ಕೊಟ್ಟ ಕೈ ಇನ್ನಿಲ್ಲ.. – ಅಜ್ಜಿ ಮೃತದೇಹ ಹಿಡಿದು ಕಣ್ಣೀರು ಹಾಕಿದ ಕೋತಿ!

ಜೀ ಕನ್ನಡ ವಾಹಿನಿ ವಿಭಿನ್ನ ಕಾರ್ಯಕ್ರಮಗಳ ಮೂಲಕ ವೀಕ್ಷಕರನ್ನು ರಂಜಿಸುತ್ತಲೇ ಬಂದಿದೆ. ಇದೀಗ ಜೋಡಿ ನಂ.1 ಕಾರ್ಯಕ್ರಮ ಏ.4 ರಿಂದ ಆರಂಭವಾಗಲಿದೆ. ಇದೀಗ ಈ ಕಾರ್ಯಕ್ರಮಕ್ಕೆ ಹಳೆ ತೀರ್ಪುಗಾರರ ಜೊತೆಗೆ ಹೊಸ ಜಡ್ಜ್ ಗಳು ಕೂಡ ಸೇರಿಕೊಂಡಿದ್ದಾರೆ. ಅದು ಬೇರೆ ಯಾರು ಅಲ್ಲ.. ಭೂಮಿ ಟೀಚರ್‌ ಮತ್ತು ಡುಮ್ಮು ಸರ್‌ ಎಂದೇ ಫೇಮಸ್‌ ಆಗಿರುವ ನಟಿ ಛಾಯಾ ಸಿಂಗ್ ಹಾಗೂ ನಟ ರಾಜೇಶ್ ನಟರಂಗ ಅವರು.

ಹೌದು. ಜೋಡಿ ನಂ.1 ಶೋಗೆ ಕನ್ನಡ ಸಿನಿಮಾ ನಟ ನೆನಪಿರಲಿ ಪ್ರೇಮ್ ಹಾಗೂ ಜನಪ್ರಿಯ ನಟಿ ಮಾಳವಿಕಾ ಈ ಹಿಂದೆ ತೀರ್ಪುಗಾರರಾಗಿದ್ದರು. ಅವರು ಈ ಬಾರಿಯೂ ತೀರ್ಪುಗಾರರಾಗಿ ಮುಂದುವರೆದಿದ್ದಾರೆ.  ಅವರ ಜೊತೆ ಅಮೃತಧಾರೆ ಸೀರಿಯಲ್‌ನ ಗೌತಮ್ ದಿವಾನ್ ಹಾಗೂ ಭೂಮಿಕಾ ಪಾತ್ರದ ಮೂಲಕ ಕನ್ನಡಿಗರ ಮನ ಹಾಗೂ ಪ್ರತಿ ಮನೆಯನ್ನು ಗೆದ್ದಿರುವ ಕಿರುತೆರೆಯ ಬೆಸ್ಟ್ ಜೋಡಿಗಳಾದ ನಟಿ ಛಾಯಾ ಸಿಂಗ್ ಹಾಗೂ ನಟ ರಾಜೇಶ್ ನಟರಂಗ ಅವರು ಈ ಬಾರಿ ಜೋಡಿ ನಂಬರ್ 1 ಜಡ್ಜ್ ಗಳಾಗಿ ಕಾಣಿಸಿಕೊಳ್ಳಲಿದ್ದಾರೆ. ಕನ್ನಡ ಕಿರುತೆರೆಯಲ್ಲಿ ಪ್ರಬುದ್ಧ ಪ್ರೇಮ ಕಾವ್ಯಕ್ಕೆ ಹೆಸರಾದಂತಹ ಜೋಡಿ ಭೂಮಿ ಹಾಗೂ ಗೌತಮ್ ಅವರದ್ದು. ಇವರಿಬ್ಬರ ನಟನೆ ಕೂಡ ಅಷ್ಟೇ ಅದ್ಭುತ. ಹಾಗಾಗಿ ಪ್ರತಿ ಮನಸ್ಸನ್ನು ಕೂಡ ಈ ಜೋಡಿಯ ನಟನೆ ಗೆದ್ದಿದೆ. ಗಂಡ -ಹೆಂಡತಿ ಎಂದರೆ ಹೀಗೆ ಇರಬೇಕು, ಎನ್ನುವಷ್ಟು ಅದ್ಭುತವಾದ ಜೋಡಿ ಇವರದ್ದು. ಹಾಗಾಗಿಯೇ ಜನಪ್ರಿಯ ಜೋಡಿ ಈ ಬಾರಿ ಜೋಡಿ ನಂಬರ್ 1ತೀರ್ಪುಗಾರರಾಗಿ ಮಾಳವಿಕಾ ಹಾಗೂ ಪ್ರೇಮ್ ಜೊತೆ ಸೇರಿಕೊಂಡಿದ್ದಾರೆ.

ಈ ಬಾರಿಯೂ ಶ್ವೇತಾ ಚೆಂಗಪ್ಪ ಮತ್ತು ಕುರಿ ಪ್ರತಾಪ್ ನಿರೂಪಣೆ ಮಾಡಲಿದ್ದಾರೆ. ಜೋಡಿಗಳಾದ ಧನರಾಜ್ ಆಚಾರ್ -ಪ್ರಜ್ಞಾ, ರಜಿನಿ -ಅರುಣ್ ಗೌಡ, ರುದ್ರ ಮಾಸ್ಟರ್ -ನಿರೀಕ್ಷಾ,ಕೋಟೆ ಪ್ರಭಾಕರ್ -ಮಾಲತಿ , ಗೀತಾ ಭಾರತಿ – ಜಯರಾಮ್, ಮಿಮಿಕ್ರಿ ಗೋಪಿ- ಉಷಾ ರಾಣಿ, ಬಾಳು ಬೆಳಗುಂದಿ-ಮಾಲಾಶ್ರೀ, ಅಭಿಲಾಷ್- ಅಪೂರ್ವ, ಜಗ್ಗಪ್ಪ -ಸುಷ್ಮಿತಾ, ನಯನಾ ನಾಗರಾಜ್ -ಸುಹಾಸ್ ಈ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

Shwetha M