ಮೋದಿ ಹೆಸರಲ್ಲೂ ಕಾಶ್ಮೀರ ‘ಕೈ’ವಶ! – ‘ಜುಲನಾ ದಂಗಲ್’ ಗೆದ್ದ ವಿನೇಶ್
2 ರಾಜ್ಯ.. 2 ನಿರ್ಧಾರ.. ಲೆಕ್ಕಾಚಾರವೇನು?

ಮೋದಿ ಹೆಸರಲ್ಲೂ ಕಾಶ್ಮೀರ ‘ಕೈ’ವಶ! – ‘ಜುಲನಾ ದಂಗಲ್’ ಗೆದ್ದ ವಿನೇಶ್2 ರಾಜ್ಯ.. 2 ನಿರ್ಧಾರ.. ಲೆಕ್ಕಾಚಾರವೇನು?

ಭಾರತದ ಚುನಾವಣಾ ಅಖಾಡ ಮತ್ತೆ ರಂಗೇರಿದೆ, ಅದರಲ್ಲೂ ಹರಿಯಾಣ & ಜಮ್ಮು ಕಾಶ್ಮೀರ ವಿಧಾನಸಭೆ ಚುನಾವಣೆ ಭಾರತದಲ್ಲಿ ಹೊಸ ತಲ್ಲಣಕ್ಕೆ ಕಾರಣವಾಗಿದೆ. ಯಾಕಂದ್ರೆ ಇಲ್ಲಿ, ಬಿಜೆಪಿ ಪಕ್ಷವು ದೊಡ್ಡ ಮಟ್ಟದ ಗೆಲುವು ಕಾಣುವ ನಿರೀಕ್ಷೆಯಲ್ಲಿ ಚುನಾವಣೆ ಅಖಾಡವನ್ನ ಪ್ರವೇಶ ಮಾಡಿತ್ತು. ಹಾಗೇ ಕಾಂಗ್ರೆಸ್‌ ಕೂಡ ಎರಡೂ ಕಡೆ ಗೆಲುವು ನಮ್ಮದೇ  ಅಂತಾ ಅಂದುಕೊಂಡಿತ್ತು.. ಆದರೆ ಇದೀಗ ನೋಡಿದರೆ ಎಲ್ಲಾ ಉಲ್ಟಾ ಪಲ್ಟಾ ಆಗಿದೆ. ಹರಿಯಾಣ ವಿಧಾನಸಭಾ ಚುನಾವಣೆಯ ಆರಂಭಿಕ ಮತ ಎಣಿಕೆ ವೇಳೆ ಕಾಂಗ್ರೆಸ್​​ ಮುಂದೆಯಿದ್ರೂ ನಂತ್ರ  ಬಿಜೆಪಿ ಮುನ್ನಡೆ ಸಾಧಿಸಿದೆ. ಆದ್ರೆ ಜಮ್ಮುಕಾಶ್ಮಿರದಲ್ಲಿ ಇಂಡಿಯಾ ಒಕ್ಕೂಟ ಭರ್ಜರಿ ಮುನ್ನಡೆ ಸಾಧಿಸಿದೆ. ಹಾಗಿದ್ರೆ ಈ ಎರಡು ರಾಜ್ಯದಲ್ಲಿ ಯಾರ ಬಲ ಎಷ್ಟೆಷ್ಟು..? ಕಾಶ್ಮಿರದಲ್ಲಿ ಬಿಜೆಪಿ, ಹರಿಯಾಣದಲ್ಲಿ ಕಾಂಗ್ರೆಸ್‌ ಸೋಲಲು ಕಾರಣವೇನು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ನವರಾತ್ರಿಯ 7ನೇ ದಿನ ಕಾಳರಾತ್ರಿಯ ಆರಾಧನೆ – ಅತ್ಯಂತ ಶಕ್ತಿಶಾಲಿ ದೇವತೆಯ ಪೂಜಾ ವಿಧಿವಿಧಾನಗಳ ವಿವರ ಇಲ್ಲಿದೆ.

ಆರ್ಟಿಕಲ್ 370 ರದ್ದಾದ ನಂತರ ಜಮ್ಮು ಮತ್ತು ಕಾಶ್ಮಿರದಲ್ಲಿ  ಮೊದಲ ಬಾರಿಗೆ ಚುನಾವಣೆಗಳು ನಡೆದಿದೆ. ಅಂದ್ರೆ ಸುಮಾರು 10 ವರ್ಷಗಳ ನಂತರ ಎಲೆಕ್ಷನ್ ನಡೆದಿದೆ. ಹೀಗಾಗಿ ಈ ಎಲೆಕ್ಷನ್ ಮೇಲೆ ಸಾಕಷ್ಟು ಕುತೂಹಲ ಮೂಡಿತ್ತು.. ಇಲ್ಲಿ ಯಾರಿಗೆ ಅಧಿಕಾರ ಸಿಗುತ್ತೆ ಅನ್ನೋ ಲೆಕ್ಕಚಾರ ಹಾಕಲಾಗುತಿತ್ತು.. ಅಂತಿಮವಾಗಿ ಚುನಾವಣಾ ಫಲಿಂತಾಶ ಹೊರ ಬಿದ್ದಿದ್ದು, ಇಂಡಿಯಾ ಒಕ್ಕೂಟ ಗದ್ದುಗೆ ಹಿಡಿದಿದೆ. ಎಕ್ಸಿಟ್ ಪೋಲ್​ನಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಮೈತ್ರಿಕೂಟ ಮುನ್ನಡೆ ಸಾಧಿಸುವ ನಿರೀಕ್ಷೆ ಇತ್ತು. ಅದು ನಿಜವಾಗಿದೆ.

ಕಣಿವೆ ರಾಜ್ಯದಲ್ಲಿ ‘ಕೈ’ ಹಿಡಿದ ಮತದಾರ

ಜಮ್ಮು ಮತ್ತು ಕಾಶ್ಮಿರದಲ್ಲಿ  ಒಟ್ಟು ವಿಧಾನಸಭಾ ಕ್ಷೇತ್ರಗಳು 90.. ಇದ್ರಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 46.  ಅದ್ರಂತೆ ಇಂಡಿಯಾ ಮೈತ್ರಿಕೂಟ 49 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.  ಬಿಜೆಪಿ 29 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ಜಮ್ಮು ಕಾಶ್ಮೀರ ಚುನಾವಣೆಯಲ್ಲಿ ನ್ಯಾಷನಲ್‌ ಕಾನ್ಫರೆನ್ಸ್‌, ಕಾಂಗ್ರೆಸ್‌ ಮೈತ್ರಿಕೂಟ ಜಯಗಳಿಸಿದ ಬೆನ್ನಲ್ಲೇ ಕಾಶ್ಮೀರದ ಮಾಜಿ ಸಿಎಂ ಫಾರೂಖ್‌ ಅಬ್ದುಲ್ಲಾ ಅವರು ಒಮರ್‌ ಅಬ್ದುಲ್ಲಾ ಅವರನ್ನು ಮುಂದಿನ ಸಿಎಂ ಎಂದು ಘೋಷಣೆ ಮಾಡಿದ್ದಾರೆ.

ಎಲ್ಲಾ ಚುನಾವಣಾ ಪೂರ್ವ ಹಾಗೂ ಚುನಾವಣೋತ್ತರ ಲೆಕ್ಕಾಚಾರಗಳನ್ನು ಹಿಂದಿಕ್ಕಿ ಹರಿಯಾಣದಲ್ಲಿ ಬಿಜೆಪಿ ಮತ್ತೆ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಸತತ ಮೂರನೇ ಬಾರಿಗೆ ಇಲ್ಲಿ ಕಮಲ ಅರಳಿದೆ. ಈ ಬಾರಿ ಪ್ರತ್ಯೇಕವಾಗಿ ಕಣಕ್ಕಿಳಿದೆ ಬಿಜೆಪಿ ಗೆದ್ದು ಬಂದಿದೆ. ಆದರೆ ಅಧಿಕಾರ ಹಿಡಿದೇ ಬಿಟ್ಟಿತು ಎನ್ನುವ ಹಂತಕ್ಕೂ ಹೋಗಿ  ಕಾಂಗ್ರೆಸ್‌ ಮುಗ್ಗರಿಸಿದೆ. ಹರಿಯಾಣ ವಿಧಾನಸಭೆ ಚುನಾವಣೆ ಫಲಿತಾಂಶದಲ್ಲಿ ಬೆಳಗ್ಗೆ ಕಾಂಗ್ರೆಸ್ ಮುನ್ನಡೆ ಸಾಧಿಸಿದ್ದರೆ, 11 ಗಂಟೆ ನಂತರ ಟ್ರೆಂಡ್ ಬದಲಾಗಿ ಬಿಜೆಪಿ ಮುನ್ನಡೆ ಕಂಡಿದೆ.

ಹರಿಯಾಣದಲ್ಲಿ ಕಮಲ ಕಿಲಕಿಲ

ಹರಿಯಾಣದಲ್ಲಿ 90  ಕ್ಷೇತ್ರಗಳಿಗೆ ಎಲೆಕ್ಷನ್ ನಡೆದಿದ್ದು, ಮ್ಯಾಜೀಕ್ ನಂ 46  ಆಗಿದೆ. ಬಿಜೆಪಿ 51 ಸ್ಥಾನಗಳಲ್ಲಿ ಮುಂದಿದ್ದರೆ ಕಾಂಗ್ರೆಸ್  34 ರಲ್ಲಿ ಸ್ಥಾನ ಪಡೆದಿದೆ.  3ನೇ ಬಾರಿಗೆ ಬಿಜೆಪಿ ಹರಿಯಾಣದಲ್ಲಿ ಅಧಿಕಾರ ಹಿಡಿದಿದೆ.

ಹರಿಯಾಣದಲ್ಲಿ ‘ಕೈ’ ಕೊಡಲು ಕಾರಣ..?

ಕಾಂಗ್ರೆಸ್‌ ನಾಯಕತ್ವವನ್ನು ಗುರುತಿಸುವಲ್ಲಿ ವಿಫಲವಾಗಿದ್ದು, ಚುನಾವಣೆ ಮೊದಲಿನಿಂದಲೂ ಸಿಎಂ ಹುದ್ದೆಯ ಮೇಲೆ ಹಲವರು ಕಣ್ಣಿಟ್ಟಿದ್ದರು. ಕಾಂಗ್ರೆಸ್‌ ಹಾಗೂ ಬಿಜೆಪಿಯ ನಡುವೆ  ಅಂತರ ಕಡಿಮೆಯಿದ್ದು,  20ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಕಡಿಮೆ ಅಂತರಗಳಲ್ಲಿ  ಕಾಂಗ್ರೆಸ್ ಸೋತಿದೆ. ಹರಿಯಾಣ ಜಾಟ್‌ ಸಮುದಾಯ ಪ್ರಭಾವ ಇರುವ ರಾಜ್ಯ ಆದ್ರೆ,  ಕೈ ಪಕ್ಷದಲ್ಲಿನ ನಾಯಕತ್ವ ಗೊಂದಲಗಳಿಂದ ಹೆಚ್ಚು ಮತ ಬಂದಿಲ್ಲ. ಅಲ್ಲದೇ ಕಾಂಗ್ರೆಸ್  ಗೆದ್ದೇ ಗೆಲ್ಲುತ್ತೇವೆ ಎನ್ನುವ ಉತ್ಸಾಹದಲ್ಲಿದ್ದತ್ತು.  ಹರಿಯಾಣದಲ್ಲಿ ಸರ್ಕಾರಿ ವಿರೋಧಿ ಅಲೆ ಇದೆ ಅನ್ನೋ ವಿಶ್ವಾಸ ಇಟ್ಟು, ಬಿಜೆಪಿ ಸರ್ಕಾರದ ಆಡಳಿತದ ವಿರುದ್ದ ಹೆಚ್ಚು ಮಾತನಾಡಿದ್ದು ಎಫೆಕ್ಟ್ ಆಗಿದೆ.  ಹಾಗೇ ಬಿಜೆಪಿ ಜಾಟೇತರ ಮತಗಳ ಕ್ರೋಡಿಕರಣಕ್ಕೆ ಇನ್ನಿಲ್ಲದ ಒತ್ತು ನೀಡಿತ್ತು.  ಜಾಟ್‌ ಅಲ್ಲದ ಹೆಚ್ಚು ಅಭ್ಯರ್ಥಿಗಳನ್ನು ಹೆಚ್ಚಿನ ಕ್ಷೇತ್ರಗಳಲ್ಲಿ ಕಣಕ್ಕಿಳಿಸಿ ತಂತ್ರ ರೂಪಿಸಿದೆ.  ಈ ಬಾರಿ ಚುನಾವಣೆ ಪ್ರಚಾರವನ್ನು ವ್ಯವಸ್ಥಿತವಾಗಿ ಬಿಜೆಪಿ ಮಾಡಿದೆ.

ಹಲವು ಅಚ್ಚರಿ ಮತ್ತು ತಿರುವುಗಳನ್ನು ಕಂಡ  ಹರಿಯಾಣದಲ್ಲಿ  ವಿನೇಶ್ ಫೋಗಟ್‌ ಭರ್ಜರಿ ಜಯಸಾಧಿಸಿದ್ದಾರೆ. ಜುಲಾನಾ ಕ್ಷೇತ್ರದಲ್ಲಿ ತಮ್ಮ ಎದುರಾಳಿ ಸ್ಪರ್ಧಿ ಬಿಜೆಪಿ ಅಭ್ಯರ್ಥಿ ಯೋಗೀಶ್ ಬೈರಾಗಿ ವಿರುದ್ಧ 6 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆಲುವು ಸಾಧಿಸಿದ್ದಾರೆ. ಕುಸ್ತಿಪಟು ವಿನೇಶ್ ಫೋಗಟ್ ಅವರು 2024 ರ ಒಲಿಂಪಿಕ್ಸ್‌ನಲ್ಲಿ 150 ಗ್ರಾಂ ಅಧಿಕ ತೂಕದ ಕಾರಣಕ್ಕಾಗಿ ಮಹಿಳೆಯರ 50 ಕೆಜಿ ಕುಸ್ತಿ ವಿಭಾಗದಿಂದ ಅನರ್ಹರಾಗಿದ್ದರು.  ಒಲಿಂಪಿಕ್ಸ್ ಪದಕ ಗೆಲ್ಲುವ ಕನಸನ್ನು ನುಚ್ಚುನೂರು ಮಾಡಿತ್ತು. ನಂತರ ವಿನೇಶ್ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾಗಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಗೆದ್ದು ತನ್ನ ತಾಕತ್ತು ತೋರಿಸಿದ್ದಾರೆ.

Shwetha M