ಪಹಲ್ಗಾಮ್ನಂತೆ ಉ*ಗ್ರ ದಾಳಿಗೆ ಸ್ಕೆಚ್ – ಚಳಿಗಾಲದಲ್ಲೇ ಟಾರ್ಗೆಟ್ ಯಾಕೆ?
ಆಪರೇಷನ್ ಸಿಂಧೂರಕ್ಕೆ ರಿವೆೇಂಜ್?

ಪಹಲ್ಗಾಮ್ನಂತೆ ಉ*ಗ್ರ ದಾಳಿಗೆ ಸ್ಕೆಚ್  – ಚಳಿಗಾಲದಲ್ಲೇ ಟಾರ್ಗೆಟ್ ಯಾಕೆ?ಆಪರೇಷನ್ ಸಿಂಧೂರಕ್ಕೆ ರಿವೆೇಂಜ್?

ಪಹಲ್ಗಾಮ್ ದಾಳಿ.. ಇಡೀ ಭಾರತದ ದೇಶವನ್ನ ಕಣ್ಣೀರಿನಲ್ಲಿ ತೇಲಿಸಿದ ಘಟನೆ..  ನರ ರಾಕ್ಷಸರ ಅಟ್ಟಹಾಸಕ್ಕೆ ಇಡೀ ದೇಶವೇ ಮಮ್ಮಲ ಮರುಗಿತ್ತು. ಪಾಕಿಸ್ತಾನದ ಮೇಲೆ ಪ್ರತಿಯೊಬ್ಬ ಭಾರತೀಯನ ರಕ್ತ ಕೂಡ ಕೊತ ಕೊತ ಕುದಿಯುವಂತೆ ಮಾಡಿತ್ತು.  26 ಜನ ಪ್ರಾಣ ಕಳೆದುಕೊಂಡ ಕಹಿ ಘಟನೆ ಇನ್ನೂ ಯಾವ ಭಾರತೀಯರು ಕೂಡ  ಮರೆತಿಲ್ಲ. ಅಷ್ಟಾರಲ್ಲಾಗಲ್ಲೇ ಬಯೋತ್ಪಾದಕರು ಮತ್ತೊಂದು ಸ್ಕೆಚ್ ಹಾಕಿದ್ದಾರೆ. ಉಗ್ರ  ಸಂಘಟನೆಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಹೊಸ ದಾಳಿ ಮಾಡೋಕೆ ಪ್ಲ್ಯಾನ್ ರೂಪಿಸಿದ್ದಾರೆ.

ಪಹಲ್ಗಾಮ್ ದಾಳಿ ಪ್ರತಿಕಾರವಾಗಿ ನಡೆದಿರೋ ಆಪರೇಷನ್ ಸಿಂದೂರ್ ನಡೆದು ಆರು ತಿಂಗಳು ಕಳೆದಿದೆ. ಈ ನಡುವೆ  ಲಷ್ಕರ್-ಎ-ತೈಬಾ ಮತ್ತು ಜೈಶ್-ಎ-ಮೊಹಮ್ಮದ್ ಉಗ್ರ  ಸಂಘಟನೆಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಹೊಸ ದಾಳಿಗಳನ್ನು ನಡೆಸಲು ಸಿದ್ಧತೆ ನಡೆಸಿವೆ ಅನ್ನೋ ಆತಂಕಕಾರಿ ಮಾಹಿತಿ ಹೊರ ಬಿದ್ದಿದೆ. ಕ್ರೂರ ದಾಳಿ ನಡೆಸೋಕೆ  ಸೆಪ್ಟೆಂಬರ್‌ನಿಂದ ನುಸುಳುವಿಕೆ ಮತ್ತು ಗಡಿ ದಾಟುವ ಚಟುವಟಿಕೆ ಜಾಸ್ತಿಯಾಗಿದೆ.. ವಿಚಿತ್ರ ಏನಪ್ಪ ಅಂದ್ರೆ ಪಾಕಿಸ್ತಾನದ ಗುಪ್ತಚರ ಸಂಸ್ಥೆಗಳು ಉಗ್ರರಿಗೆ ಸಹಾಯ ಮಾಡುತ್ತಿವೆ. ಹೀಗಾಗಿ ಭಾರತೀಯ ಸೇನೆ  ಹದ್ದಿನ ಕಣ್ಣಿಟ್ಟು ಎಲ್ಲಾ ಕಡೆ ಎಚ್ಚರಿಕೆಯಲ್ಲಿದೆ. ಈಗ ಚಳಿ ಜಾಸ್ತಿ ಇರೋದ್ರಿಂದ ಈಗಲೇ ದಾಳಿ ಮಾಡೋಕೆ ಸ್ಕೆಚ್ ಹಾಕಿದ್ದಾರೆ ಅನ್ನೋ ಮಾಹಿತಿ ಹೊರ ಬಿದ್ದಿದೆ. ಈ ಮಾಹಿತಿಯನ್ನು ಸಂಗ್ರಹಿಸಿದ್ದು ಭಾರತೀಯ ಗುಪ್ತಚರ ಇಲಾಖೆ. ಇದೇ ಸೆಪ್ಟೆಂಬರ್‌ನಿಂದ ಈ ಸಂಘಟನೆಗಳು ನುಸುಳುವಿಕೆ, ಗೂಢಚಾರಿಕೆ ಮತ್ತು ಗಡಿ ದಾಟುವ ಚಟುವಟಿಕೆಗಳನ್ನು ಈಗಾಗಲೇ ಆರಂಭಿಸಿವೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಸೆಂಚುರಿ ಸ್ಟಾರ್ ಕರುಣ್ ನಾಯರ್‌ಗೆ ಮತ್ತೆ ಅನ್ಯಾಯ – ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲೂ ಸಿಗದ ಚಾನ್ಸ್

ಆಪರೇಷನ್ ಸಿಂಧೂರಕ್ಕೆ ರಿವೆಂಜ್?

ಆರು ತಿಂಗಳ ಹಿಂದೆ ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತ  ‘ಆಪರೇಷನ್ ಸಿಂದೂರ್’ ಕಾರ್ಯಾಚರಣೆಗೆ ನಡೆಸಿತ್ತು. ರಾಕ್ಷಸರ ಮೇಲೆ ಯುದ್ಧ ಸಾರಿತ್ತು, ನೀಚರ ಮೇಲೆ ಅಟ್ಯಾಕ್ ಮಾಡಿತ್ತು.. ಇದ್ದಕ್ಕೆ ಪ್ರತೀಕಾರವಾಗಿ, LET ಮತ್ತು JEM ಸಂಘಟನೆಗಳು ಮತ್ತೆ ಸಂಘಟಿತ ದಾಳಿಗಳಿಗೆ ಸಿದ್ಧತೆ ನಡೆಸಿವೆ ಅನ್ನೋ ವರದಿ ಈಗ ಹೊರ ಬಿದ್ದಿದೆ.

ಭಯೋತ್ಪಾದಕ ಸಂಘಟನೆಗಳು ಸೆಪ್ಟೆಂಬರ್‌ನಿಂದ ಗಡಿ ನಿಯಂತ್ರಣ ರೇಖೆ ಮೂಲಕ ನುಸುಳುವಿಕೆ, ಗೂಢಚಾರಿಕೆ ಮತ್ತು ಗಡಿ ದಾಟುವ ವ್ಯವಸ್ಥೆಗಳನ್ನು ಹೆಚ್ಚಿಸಿವೆ. ಬಯೋತ್ಪಾದಕ  ಘಟಕಗಳು ಪಾಕಿಸ್ತಾನದ ಸ್ಪೆಷಲ್ ಸರ್ವಿಸಸ್ ಗ್ರೂಪ್  ಮತ್ತು ಇಂಟರ್-ಸರ್ವಿಸಸ್ ಇಂಟೆಲಿಜೆನ್ಸ್ ಅಧಿಕಾರಿಗಳ ಸಹಾಯದಿಂದ ಎಲ್ಒಸಿ ಯಲ್ಲಿನ ಅಂತರಗಳ ಮೂಲಕ ಜಮ್ಮು ಮತ್ತು ಕಾಶ್ಮೀರಕ್ಕೆ ನುಸುಳಿವೆ.

ಡ್ರೋನ್‌ಗಳನ್ನು ಬಳಸಿ ವೈಮಾನಿಕ ಗೂಢಚಾರಿಕೆ

LeT ಭಯೋತ್ಪಾದಕರ ನೇತೃತ್ವದ ಒಂದು ತಂಡವು ಡ್ರೋನ್‌ಗಳನ್ನು ಬಳಸಿ ವೈಮಾನಿಕ ಗೂಢಚಾರಿಕೆ ನಡೆಸಿದೆ. ಈ ತಂಡವು LoC ಯಲ್ಲಿನ ದುರ್ಬಲ ಸ್ಥಳಗಳನ್ನು ಗುರುತಿಸಿದೆಯಂತೆ. ಮುಂದಿನ ವಾರಗಳಲ್ಲಿ ಆತ್ಮಹತ್ಯಾ ದಾಳಿಗಳು ಅಥವಾ ಶಸ್ತ್ರಾಸ್ತ್ರಗಳ ಹಸ್ತಾಂತರ ಡ್ರೋನ್ ಮೂಲಕವೇ ನಡೆಸಲು ಉಗ್ರವಾದಿಗಳು ಪ್ರಯತ್ನಿಸಿದ್ದಾರೆ ಎಂದು ಹೇಳಿರುವ ಗುಪ್ತಚರ ಮಾಹಿತಿಗಳು,  ಪಿಒಕೆ  ಪಾಕಿಸ್ತಾನದ ಬಾರ್ಡರ್ ಆಕ್ಷನ್ ಟೀಮ್‌ಗಳನ್ನು ಮರು ನಿಯೋಜಿಸಲಾಗಿದೆ. ಈ ಬ್ಯಾಟ್ ಗಳು ಮಾಜಿ ಎಸ್ಎಸ್ ಜಿ ಸೈನಿಕರು ಮತ್ತು ಭಯೋತ್ಪಾದಕರನ್ನು ಒಳಗೊಂಡಿವೆ ಎಂದು ಮಾಹಿತಿಗಳು ಹೇಳಿವೆ.

POKಯಲ್ಲಿ ಉಗ್ರರ ಉನ್ನತ ಮಟ್ಟದ ಸಭೆ

2025ರ ಅಕ್ಟೋಬರ್ ನಲ್ಲಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆದ ಉನ್ನತ ಮಟ್ಟದ ಸಭೆಗಳಲ್ಲಿ, ಜಮಾತ್-ಎ-ಇಸ್ಲಾಮಿ, ಹಿಜ್ಬುಲ್ ಮುಜಾಹಿದ್ದೀನ್‌ನ ಹಿರಿಯ ಸದಸ್ಯರು ಮತ್ತು ಐಎಸ್ಐ ಅಧಿಕಾರಿಗಳು ಭಾಗವಹಿಸಿದ್ದರು. ಆ ಸಭೆಗಳಲ್ಲಿ, , ‘ಆಪರೇಷನ್ ಸಿಂಧೂರ್’ ನಿಂದಾಗಿ ಭಯೋತ್ಪಾದಕ ಗುಂಪುಗಳನ್ನು ಪುನರುಜ್ಜೀವನಗೊಳಿಸುವ, ಮಾಜಿ ಕಮಾಂಡರ್‌ಗಳಿಗೆ ಮಾಸಿಕ ಭತ್ಯೆ ನೀಡುವ ಮತ್ತು ‘ಆಪರೇಷನ್ ಸಿಂಧೂರ್’ ನಲ್ಲಿ ಆದ ನಷ್ಟಗಳಿಗೆ ಪ್ರತೀಕಾರ ತೀರಿಸಿಕೊಳ್ಳುವ ಯೋಜನೆಗಳ ಬಗ್ಗೆ ಚರ್ಚಿಸಲಾಗಿದೆ. ಇದೇ ವೇಳೆ, ಭಾರತೀಯ ಭದ್ರತಾ ಪಡೆಗಳು ಮತ್ತು ರಾಜಕೀಯ ಕಾರ್ಯಕರ್ತರ ವಿರುದ್ಧ  ಪ್ರತೀಕಾರದ ದಾಳಿಗಳನ್ನು  ತೀವ್ರಗೊಳಿಸುವಂತೆ ಸಭೆಯಲ್ಲಿ ಸೂಚಿಸಿದ್ದಾರೆ ಎಂದು ಗುಪ್ತಚರ ವರದಿಗಳು ಹೇಳಿವೆ. ಆ ಸಭೆಯ ಬಳಿಕ, ಎಲ್ ಇಟಿ ಭಯೋತ್ಪಾದಕರ ತಂಡವೊಂದು, ಕಾಶ್ಮೀರ ಕಣಿವೆಯಾದ್ಯಂತ ತಮ್ಮ ದಾಳಿಗೆ ಬೆಂಬಲ ಕೊಡಬಹುದಾದ ಸ್ಥಳೀಯರನ್ನು ಗುರುತಿಸುವ ಕೆಲಸವನ್ನು ಪ್ರಾರಂಭಿಸಿದ್ದಾರೆ.  ಒಟ್ನಲ್ಲಿ ಪಹಲ್ಗಾಮ್ ಅಟ್ಯಾಕ್ ನಂತ್ರ ಮತ್ತೊಂದು ದಾಳಿ ನಡೆಸೋಕೆ ಪಾಪಿಗಳು ಪ್ಲ್ಯಾನ್ ಮಾಡಿದ್ದು, ಸೇನಾ ಕೂಡ ಎಲ್ಲಾ ಕಡೆ ಹದ್ದಿನ ಕಣ್ಣು ಇಟ್ಟಿದೆ.

Kishor KV