ಡಿಕೆ ಆಟ ನೆನಪಿಸಿದ ಜಿತೇಶ್ ಒಂದೊಂದು ಶಾಟ್ ಕೂಡ ಸೂಪರ್
RCBಗೆ ಜಿತೇಶ್ ಶರ್ಮಾ ಬಲ

ಜಿತೇಶ್ ಶರ್ಮಾ.. ಆರ್‌ಸಿಬಿ ಪರ ಸಖತ್ ಸೌಂಡ್ ಮಾಡುತ್ತಿದ್ದಾರೆ. ಮುಂಬೈ ವಿರುದ್ಧ ಆರ್‌ಸಿಬಿ ರೋಚಕವಾಗಿ ಗೆದ್ದಿದೆ. ಈ ಪಂದ್ಯದಲ್ಲಿ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 225 ರನ್ಗಳ ಬೃಹತ್ ರನ್ ಕಲೆಹಾಕ್ತು. ಈ ಮೂಲಕ ಎದುರಾಳಿಗೆ ಕಠಿಣ ಸವಾಲು ನೀಡಿತ್ತು.. ವಿರಾಟ್ ಕೊಹ್ಲಿ ಹಾಗೂ ನಾಯಕ ರಜತ್ ಪಾಟಿದಾರ್ ಅರ್ಧಶತಕ ಸಿಡಿಸಿದರೆ, ಮತ್ತೊಂದೆಡೆ ಎಲ್ಲರ ಗಮನ ಸೆಳೆದಿದ್ದ ಜಿತೇಶ್ ಶರ್ಮಾ ಅವರ ಸ್ಫೋಟಕ ಬ್ಯಾಟಿಂಗ್. ಇವರ ಆಟ ಆರ್ಸಿಬಿಯ ಮಾಜಿ ಬ್ಯಾಟರ್ ದಿನೇಶ್ ಕಾರ್ತಿಕ್ ಅವರನ್ನು ನೆನಪಿಸಿತು.
ಕೇವಲ 19 ಎಸೆತಗಳಲ್ಲಿ 2 ಫೋರ್ ಹಾಗೂ 4 ಅಮೋಘ ಸಿಕ್ಸ್ ಸಿಡಿಸಿ ಅಜೇಯ 40 ರನ್ ಗಳಿಸಿ ತಂಡದ ಮೊತ್ತವನ್ನು 221ಕ್ಕೆ ತಲುಪುವಲ್ಲಿ ಪ್ರಮುಖ ಪಾತ್ರವಹಿಸಿದರು. ಅದರಲ್ಲೂ ಜಸ್ಪ್ರಿತ್ ಬುಮ್ರಾ ರಂತಹ ವಿಶ್ವ ಶ್ರೇಷ್ಠಾ ಬೌಲರ್ನ 20ನೇ ಓವರ್ನಲ್ಲಿ ಜಿತೇಶ್ ಸಿಡಿಸಿದ ಸಿಕ್ಸ್ ಅದ್ಭುತವಾಗಿತ್ತು. ಇಲ್ಲಿ 200 ಮೇಲೆ ಸ್ಕೋರ್ ಬಂದಿರಲಿಲ್ಲ ಅಂದ್ರೆ ಮುಂಬೈ ಅರಮ್ ಆಗಿಯೇ ಚೇಸ್ ಮಾಡ್ತಾ ಇತ್ತು ಅನ್ಸುತ್ತೆ. ಬಟ್ ಅದ್ದಕ್ಕೆ ಆರ್‌ಸಿಬಿ ಅವಕಾಶನೇ ಕೊಟ್ಟಿಲ್ಲ.
ಮುಂಬೈ ಬೌಲರ್ಗಳ ಚೆಂಡಾಡಿದ ಜಿತೇಶ್ ಅವರ ಈ ಆಟ ನೋಡಲು ಥೇಟ್ ದಿನೇಶ್ ಕಾರ್ತಿಕ್ರಂತೇ ಇತ್ತು. ಕಳೆದ ಸೀಸನ್ಗಳಲ್ಲೆಲ್ಲ ಕಾರ್ತಿಕ್ ಆರ್ಸಿಬಿಗಾಗಿ ಫಿನಿಶಿಂಗ್ ಜವಾಬ್ದಾರಿ ಹೊತ್ತಿದ್ದರು. ಅಂತಿಮ ಹಂತದಲ್ಲಿ ಬಂದು ಸಿಕ್ಸರ್ಗಳ ಮಳೆ ಸುರಿಸಿ ತಂಡಕ್ಕೆ ನೆರವಾಗುತ್ತಿದ್ದರು. ಈ ಬಾರಿ ಅವರ ಸ್ಥಾನ ಯಾರು ತುಂಬ ಬಹುದು ಎಂಬುದು ದೊಡ್ಡ ಪ್ರಶ್ನೆಯಾಗಿತ್ತು. ಅದಕ್ಕೀಗ ಜಿತೇಶ್ ಶರ್ಮಾ ಮೂಲಕ ಉತ್ತರ ಸಿಕ್ಕಿದೆ. ಕಾರ್ತಿಕ್ರಂತೆ ಮಿಡ್ ವಿಕೆಟ್ ಮೇಲೆ, ಲಾಂಗ್ ಆನ್ ಮೇಲೆ ಶಾಟ್ ಬಾರಿಸಿ ಎಲ್ಲರ ಗಮನ ಸೆಳೆದಿದ್ದಾರೆ ಜಿತೇಶ್.
ದೇಶೀಯ ಕ್ರಿಕೆಟ್‌ನಲ್ಲಿ ವಿದರ್ಭ ಪರ ಆಕ್ರಮಣಕಾರಿಯಾಗಿ ಆಡುವ ಮೂಲಕ ಯುವ ಜಿತೇಶ್ ಶರ್ಮಾ ಒಂದು ಛಾಪು ಮೂಡಿಸಿದರು.. 20 ಲಕ್ಷಕ್ಕೆ 2022 ರಲ್ಲಿ PBKS ತಂಡ ಸೇರಿ ಅದ್ಭುತ ಪ್ರದರ್ಶನ ನೀಡಿದರು, ನಂತರ ಭಾರತಕ್ಕಾಗಿಯೂ ಆಡಿದರು. ಇನ್ನು ಈ ಭಾರಿ TATA IPL 2025ರಲ್ಲಿ 11 ಕೋಟಿಗೆ ಆರ್‌ಸಿಬಿ ತಂಡಕ್ಕೆ ಸೇರಿಕೊಂಡ್ರು. 11 ಕೋಟಿ ನೀಡಿದ್ದಕ್ಕೆ ಒಳ್ಳೆಯ ಆಟಗಾರನೇ ಬೆಂಗಳೂರಿಗೆ ಸಿಕ್ಕಿದ್ದಾನೆ. ಒಟ್ನಲ್ಲಿ ಐಪಿಲ್ ಯವ ಆಟಗಾರ ಜಿತೇಶ್ ಶರ್ಮಾ ಮಿಂಚುತಿದ್ದು, ಇವರ ಆಟ ಹೀಗೆ ಮುಂದುವರಿಯಲಿ.