ಬ್ಯಾಟಿಂಗ್ & ಕೀಪಿಂಗ್ ನಲ್ಲಿ ಬೆಸ್ಟ್ ಪರ್ಫಾಮೆನ್ಸ್ – ಜಿತೇಶ್ ಶರ್ಮಾ ಪರ್ಫೆಕ್ಟ್ ಪ್ಲೇಯರ್

ಬ್ಯಾಟಿಂಗ್ & ಕೀಪಿಂಗ್ ನಲ್ಲಿ ಬೆಸ್ಟ್ ಪರ್ಫಾಮೆನ್ಸ್ – ಜಿತೇಶ್ ಶರ್ಮಾ ಪರ್ಫೆಕ್ಟ್ ಪ್ಲೇಯರ್

ರಾಜಸ್ಥಾನ ರಾಯಲ್ಸ್ ತಂಡವನ್ನ ಬೆಂಗಳೂರಿನಲ್ಲಿ ಸೋಲಿಸಿದ ಬಳಿಕ ಜೋಶ್ ಹೇಜಲ್​ವುಡ್ ಮತ್ತು ಜಿತೇಶ್ ಶರ್ಮಾ ಆರ್​ಸಿಬಿ ಅಭಿಮಾನಿಗಳ ಪಾಲಿಗೆ ಹೀರೋಗಳಾಗಿದ್ದಾರೆ. ಅದ್ರಲ್ಲೂ ಜಿತೇಶ್ ಚಾಣಾಕ್ಷತನವನ್ನಂತೂ ಮೆಚ್ಚಲೇಬೇಕು. ವಿಕೆಟ್​ಗಳ ಹಿಂದೆ ನಿಂತು ಹಿಡಿಯೋ ಕ್ಯಾಚ್​ಗಳು, ಡಿಆರ್​ಎಸ್ ಬಗ್ಗೆ ನೀಡುವ ಸಜೇಷನ್ಸ್, ಸ್ಟಂಪಿಂಗ್, ರನ್ ಔಟ್ ಹೀಗೆ ತಮ್ಮ ರೋಲ್​ನ ಸಖತ್ತಾಗೇ ನಿಭಾಯಿಸ್ತಿದ್ದಾರೆ. ಗೇಮ್ ಚೇಂಜರ್ ಆಗ್ತಿದ್ದಾರೆ.

ಇದನ್ನೂ ಓದಿ : ಜಾರಿದ RCB.. ಮೇಲೇರಿದ MI..  ನೆಟ್ ರನ್ ರೇಟ್ ಚಾಲೆಂಜ್ ಆಗುತ್ತಾ? – ರೆಡ್ ಆರ್ಮಿಗೆ ಬೆಂಗಳೂರೇ ಟಾರ್ಗೆಟ್!

ರಾಜಸ್ಥಾನ ವಿರುದ್ಧದ ಮ್ಯಾಚಲ್ಲಿ ಜೋಶ್ ಹೇಜಲ್​ವುಡ್ ಬೌಲಿಂಗ್ ಎಷ್ಟು ಎಫೆಕ್ಟಿವ್ ಆಗಿ ಇತ್ತೋ ಜಿತೇಶ್ ಶರ್ಮಾ ರೋಲ್ ಕೂಡ ಅಷ್ಟೇ ಇಂಪಾರ್ಟೆಂಟ್ ಆಗಿತ್ತು. ಯಾಕಂದ್ರೆ ಬ್ಯಾಟಿಂಗ್ ಮತ್ತು ಕೀಪಿಂಗ್ ಎರಡ್ರಲ್ಲೂ ಬೆಸ್ಟ್ ಪರ್ಫಾಮೆನ್ಸ್ ಕೊಟ್ಟಿದ್ರು. ಮೊದಲಿಗೆ ಬ್ಯಾಟಿಂಗ್​ನಲ್ಲಿ ಮ್ಯಾಚ್ ಫಿನಿಶಿಂಗ್ ರೋಲ್​ನ ಅಚ್ಚುಕಟ್ಟಾಗಿ ನಿಭಾಯಿಸಿದರು. ಕೇವಲ 10 ಎಸೆತಗಳನ್ನು ಎದುರಿಸಿದ ಜಿತೇಶ್ ಶರ್ಮಾ 4 ಬೌಂಡರಿ ಸಹಿತ ಅಜೇಯ 20 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಇನ್ನು ವಿಕೆಟ್ ಹಿಂದೆ ಅದ್ಭುತ ಕೌಶಲ್ಯ ಪ್ರದರ್ಶಿಸಿದ ಜಿತೇಶ್ ಮೂರು ಕ್ಯಾಚ್ ಹಾಗೂ ಒಂದು ರನೌಟ್ ಮಾಡಿ ಗಮನ ಸೆಳೆದರು. ಅದರಲ್ಲೂ ಮಹತ್ವದ ಘಟ್ಟದಲ್ಲಿ ಧೃವ್ ಜುರೆಲ್ ಕ್ಯಾಚ್‌ ಹಿಡಿದು ಡಿಆರ್‌ಎಸ್ ನಿರ್ಧಾರ ಪಂದ್ಯದ ದಿಕ್ಕೆ ಬದಲಿಸುವಂತೆ ಮಾಡಿತು.

ವಿಕೆಟ್ ಕೀಪರ್ ಆಗಿ ಆರ್ ಸಿಬಿ ಪರ ಉತ್ತಮ ಪ್ರದರ್ಶನ ನೀಡ್ತಿರುವ ಜಿತೇಶ್ ಆರ್ ಸಿಬಿ ಪರ ಕಳೆದ 9 ಪಂದ್ಯಗಳಲ್ಲಿ 12 ಕ್ಯಾಚ್​ಗಳನ್ನ ಹಿಡಿದಿದ್ದಾರೆ. ಹಾಗೇ 1 ಸ್ಟಂಪ್ ಔಟ್ ಕೂಡ ಮಾಡಿದ್ದಾರೆ. ಅದ್ರಲ್ಲೂ ಬ್ಯಾಟ್ ಎಡ್ಜ್ ಕ್ಯಾಚ್​ಗಳಲ್ಲಿ ರಿವ್ಯೂ ತೆಗೆದುಕೊಳ್ಳಬೇಕಾದ ಡೌಟ್ ಬಂದಾಗ ನಾಯಕ ರಜತ್ ಪಾಟಿದಾರ್ ಅವ್ರಿಗೆ ಕರೆಕ್ಟ್ ಆದ ಸಜೇಷನ್ಸ್ ನೀಡ್ತಿದ್ದಾರೆ. ಫೀಲ್ಡಿಂಗ್​ನಲ್ಲಿ ತುಂಬಾನೇ ಌಕ್ಟಿವ್ ಆಗಿದ್ದು ವಿಕೆಟ್ ಗಳ ಹಿಂದೆ ಬರೋ ಬಾಲ್​ನ ಕ್ವಿಕ್ ಆಗಿ ಕಂಟ್ರೋಲ್ ಮಾಡ್ತಿದ್ದಾರೆ. ಹೀಗಾಗಿ ಜಿತೇಶ್ ರ ಪರ್ಫಾಮೆನ್ಸ್ ಆರ್ ಸಿಬಿ ಕಾನ್ಫಿಡೆನ್ಸ್ ನ ಜಾಸ್ತಿ ಮಾಡ್ತಿದೆ.

ಜಿತೇಶ್ ಅದ್ಭುತ ಬ್ಯಾಟರ್ ಕೂಡ ಆಗಿದ್ದು ಮಿಡಲ್ ಆರ್ಡರ್​ನಲ್ಲಿ ಪವರ್ ಹಿಟ್ಟಿಂಗ್ ಗೆ ಜಾಸ್ತಿ ಕಾನ್ಸಂಟ್ರೇಟ್ ಮಾಡ್ತಾರೆ. 7 ಪಂದ್ಯಗಳಲ್ಲಿ ಬ್ಯಾಟ್ ಬೀಸಿರೋ ಜಿತೇಶ್ 147.56ರ ಸ್ಟ್ರೈಕ್ ರೇಟ್​ನಲ್ಲಿ 121 ರನ್ ಕಲೆ ಹಾಕಿದ್ದಾರೆ. ಸಿಎಸ್ ಕೆ ವಿರುದ್ಧ 12 ರನ್, ಗುಜರಾತ್ ವಿರುದ್ಧ 33 ರನ್, ಮುಂಬೈ ವಿರುದ್ಧ 40 ರನ್, ಡಿಸಿ ವಿರುದ್ಧ 3 ರನ್, ಪಂಜಾಬ್ ವಿರುದ್ಧ 2 ರನ್, ಹಾಗೇ ಪಂಜಾಬ್ ನಲ್ಲೇ ನಡೆದ ಪಂದ್ಯದಲ್ಲಿ 11 ರನ್, ಈಗ ರಾಜಸ್ಥಾನ ವಿರುದ್ಧ 20 ರನ್ ಬಾರಿಸಿದ್ದಾರೆ. ಸೋ ತುಂಬಾ ಸ್ಟ್ರಗಲ್ಸ್ ಇರೋ ಅಂತಾ ಟೈಮಲ್ಲಿ ಜಿತೇಶ್ ಮೇಲೆ ನಂಬಿಕೆ ಇಡ್ಬೋದು. ಹಾಗೇ ಸ್ಟ್ರೈಕ್ ರೇಟ್ ಕೂಡ ಚೆನ್ನಾಗಿದೆ.

2022ರಲ್ಲಿ ಪಂಜಾಬ್ ಪರ ಐಪಿಎಲ್ ಕರಿಯರ್ ಶುರು ಮಾಡಿದ್ದ ಜಿತೇಶ್ ಮೂರು ವರ್ಷಗಳ ಕಾಲ 20 ಲಕ್ಷ ರೂಪಾಯಿಗೆ ಪಂಜಾಬ್ ಪರ ಕಣಕ್ಕಿಳಿದಿದ್ರು. ಬಟ್ 2025ರ ಹರಾಜಿನಲ್ಲಿ ಆರ್ ಸಿಬಿ ಫ್ರಾಂಚೈಸಿ ಬರೋಬ್ಬರಿ 11 ಕೋಟಿ ರೂಪಾಯಿ ನೀಡಿ ಅವ್ರನ್ನ ಖರೀದಿ ಮಾಡಿತ್ತು. ಎಲ್ಲಿಯ 20 ಲಕ್ಷ ಎಲ್ಲಿಯ 11 ಕೋಟಿ. ಜಿತೇಶ್​ಗೆ ಇಷ್ಟು ದೊಡ್ಡ ಮೊತ್ತ ಬೇಕಿತ್ತಾ ಅಂತಾ ಸಾಕಷ್ಟು ಕ್ರಿಕೆಟ್ ಎಕ್ಸ್​​ಪರ್ಟ್ಸ್ ಬೆಂಗಳೂರು ಫ್ರಾಂಚೈಸಿಯನ್ನ ಗೇಲಿ ಮಾಡಿದ್ರು. ಬಟ್ ಈಗ ಅವ್ರಿಗೂ ಕೂಡ ಜಿತೇಶ್ ವ್ಯಾಲ್ಯೂ ಏನೂ ಅಂತಾ ಗೊತ್ತಾಗಿರುತ್ತೆ.

Shantha Kumari

Leave a Reply

Your email address will not be published. Required fields are marked *