ಜಿಯೋಬ್ಲ್ಯಾಕ್ರಾಕ್ ಮ್ಯುಚುವಲ್ ಫಂಡ್ನ NFOಗೆ ಭರ್ಜರಿ ರೆಸ್ಪಾನ್ಸ್ – 3 ದಿನಕ್ಕೆ 17,800 ಕೋಟಿ ರೂ ಹೂಡಿಕೆ ಸಂಗ್ರಹ

ಜಿಯೋಬ್ಲ್ಯಾಕ್ರಾಕ್ ಮ್ಯುಚುವಲ್ ಫಂಡ್ನ NFOಗೆ ಭರ್ಜರಿ ರೆಸ್ಪಾನ್ಸ್ – 3 ದಿನಕ್ಕೆ   17,800 ಕೋಟಿ ರೂ ಹೂಡಿಕೆ ಸಂಗ್ರಹ

ಜಿಯೋ ಬ್ಲ್ಯಾಕ್​ರಾಕ್ ಮ್ಯುಚುವಲ್ ಫಂಡ್​ನ ನ್ಯೂ ಫಂಡ್ ಆಫರ್ ಅಥವಾ ಎನ್​​ಎಫ್​​ಒಗೆ ಒಳ್ಳೆಯ ಸ್ಪಂದನೆ ಸಿಕ್ಕಿದೆ. ಈ ಹೊಸ ಮ್ಯೂಚುವಲ್ ಫಂಡ್​​ನ ಚೊಚ್ಚಲ NFO ಮೂಲಕ ಒಟ್ಟಾರೆ 17,800 ಕೋಟಿ ರೂ ಹೂಡಿಕೆ ಬಂದಿದೆ. ಓವರ್​​ನೈಟ್ ಫಂಡ್, ಲಿಕ್ವಿಡ್ ಫಂಡ್ ಮತ್ತು ಮನಿ ಮಾರ್ಕೆಟ್ ಫಂಡ್ ಎನ್ನುವ ಮೂರು ಫಂಡ್ ಸ್ಕೀಮ್​​ಗಳಲ್ಲಿ ಈ ಬಂಡವಾಳ ಹರಿದು ಬಂದಿದೆ.  ಜೂನ್ 30ರಂದು ಆರಂಭವಾದ ಮೂರು ದಿನಗಳ ಜಿಯೋಬ್ಲ್ಯಾಕ್​ರಾಕ್ ಎನ್​ಎಫ್​​ಒ ಜುಲೈ 2ಕ್ಕೆ ಮುಗಿದಿತ್ತು. 90ಕ್ಕೂ ಅಧಿಕ ಸಾಂಸ್ಥಿಕ ಹೂಡಿಕೆದಾರರು ಈ ಮೂರು ಸ್ಕೀಮ್​​ಗಳಲ್ಲಿ ಹೂಡಿಕೆ ಮಾಡಿದ್ದಾರೆ. ರೀಟೇಲ್ ಹೂಡಿಕೆದಾರರಿಂದಲೂ ಉತ್ತಮ ಸ್ಪಂದನೆ ಸಿಕ್ಕಿದೆ. ವರದಿ ಪ್ರಕಾರ 67,000 ವ್ಯಕ್ತಿಗಳು ಈ ಮೂರು ಫಂಡ್​​ಗಳಲ್ಲಿ ಹೂಡಿಕೆ ಮಾಡಿದ್ದಾರೆ.

ಎನ್​​ಎಫ್​​ಒ ಎಂದರೇ ಏನು?

ಎನ್​​ಎಫ್​​ಒ ಎಂದರೆ ನ್ಯೂ ಫಂಡ್ ಆಫರ್. ಒಂದು ಮ್ಯೂಚುವಲ್ ಫಂಡ್ ಎಎಂಸಿ ಸಂಸ್ಥೆಯು ಹೊಸ ಸ್ಕೀಮ್ ಆರಂಭಿಸಿದಾಗ ಎನ್​​ಎಫ್​​ಒ ಆಫರ್ ಮಾಡುತ್ತದೆ. ಇದು ಮೊದಲ ಬಾರಿಗೆ ಸಾರ್ವಜನಿಕರಿಂದ ಬಂಡವಾಳ ಸಂಗ್ರಹಿಸಲು ಇರುವ ಯೋಜನೆ. ನಿರ್ದಿಷ್ಟ ಆರಂಭ ಬೆಲೆಗೆ ಸ್ಕೀಮ್​​ನ ಯುನಿಟ್​​ಗಳನ್ನು ಸಾರ್ವಜನಿಕರಿಗೆ ಮಾರಲಾಗುತ್ತೆ. ಸಾಮಾನ್ಯವಾಗಿ ಎನ್​ಎಫ್​​ಒದಲ್ಲಿ ಒಂದು ಯುನಿಟ್​​ಗೆ 10 ರೂ ಬೆಲೆ ಇರುತ್ತದೆ. ಜಿಯೋಬ್ಲ್ಯಾಕ್​ರಾಕ್ ಫಂಡ್​​ಗಳ ಒಂದು ಯುನಿಟ್ ಬೆಲೆ 1,000 ರೂ ನಿಗದಿಯಾಗಿದೆ.

Kishor KV