ಅಮೆರಿಕದ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್ ನಿಧನ – ಭಾರತಕ್ಕೂ ಇದೇ ಇವರ ನಂಟು!
100 ವರ್ಷ ಪೂರೈಸಿದ್ದ ಅಮೆರಿಕದ ಮಾಜಿ ಅಧ್ಯಕ್ಷ
100 ವರ್ಷ ಪೂರೈಸಿದ್ದ ಅಮೆರಿಕದ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್ ನಿಧನರಾಗಿದ್ದಾರೆ. ಸೋಮವಾರ ತಮ್ಮ ನಿವಾಸದಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವರದಿಗಳಾಗಿವೆ. ಕಳೆದೊಂದು ವರ್ಷದಿಂದ ವಯೋಸಹಜ ಕಾಯಿಲೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ನಿಧನರಾಗಿದ್ದಾರೆ. 1977ರಿಂದ 1981ರ ವರೆಗೆ ಅವರು ಅಮೆರಿಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಇದನ್ನೂ ಓದಿ : ಸಿಲಿಕಾನ್ ಸಿಟಿ ಜನರಿಗೆ ಗುಡ್‌ನ್ಯೂಸ್ – ಹೊಸ ವರ್ಷಾಚರಣೆಗೆ ಮೆಟ್ರೋ ರೈಲು ಸೇವೆ ವಿಸ್ತರಣೆ
ಸಾರ್ವಜನಿಕ ಸೇವೆ ಮತ್ತು ಮಾನವತೆಯ ಸೇವೆಯ ಹಿನ್ನೆಲೆಯಿಂದ ಅಧ್ಯಕ್ಷೀಯ ಪದವಿಗೆ ಏರಿದವರು. ಅವರ ಅಧಿಕಾರವಧಿಯಲ್ಲಿ ಅಮೆರಿಕ ಮಾತ್ರವಲ್ಲ ಇಡೀ ವಿಶ್ವದಲ್ಲಿ ಅವರು ಹೆಸರಾಗಿದ್ದರು. ಪ್ರಮಾಣಿಕತೆ ಹಾಗೂ ಕೆಲಸದ ಕಡೆಗೆ ಅವರಿಗಿದ್ದ ಬದ್ಧತೆಯಿಂದ ಹೆಸರಾದರು. ಅವರ ಚುನಾವಣೆ ಪ್ರಚಾರಗಳಲ್ಲಿ ಕಾಣುತ್ತಿದ್ದ ವಿಶೇಷತೆಗಳಿಂದ ಸುದ್ದಿಯಾಗುತ್ತಿದ್ದರು.
ಅಮೆರಿಕ ಅಧ್ಯಕ್ಷೀಯ ಚುನಾವಣೆಗೂ ಮುನ್ನ ಅವರು ನೀಡಿದ್ದ ಆಶ್ವಾಸನೆಗಳನ್ನು ಪ್ರಾಮಾಣಿಕವಾಗಿ ಜನರಿಗೆ ನೀಡಿದ್ದ ಅಧ್ಯಕ್ಷ ಎಂಬ ಕೀರ್ತಿ ಪಡೆದಿದ್ದರು. ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲು ಅವರು ಜನರಿಂದಲೇ ಹಣ ಸಂಗ್ರಹ ಮಾಡಿದ್ದರು. ಈ ರೀತಿ ದೇಣಿಗೆ ಸಂಗ್ರಹಿಸಿ ಆ ಚುನಾವಣೆಯಲ್ಲಿ ಜಯಿಸಿ ಅಧ್ಯಕ್ಷರಾದ ಮೊದಲ ವ್ಯಕ್ತಿ ಎಂಬ ಕೀರ್ತಿ ಕೂಡ ಪಡೆದಿದ್ದರು. ಜಿಮ್ಮಿ ಕಾರ್ಟರ್ ಭಾರತದ ನಂಟು..! ಜಿಮ್ಮಿ ಕಾರ್ಟರ್ ಅಧ್ಯಕ್ಷರಾಗಿದ್ದಾಗ ಭಾರತಕ್ಕೆ ಬಂದಿದ್ದರು. ಅಮೆರಿಕದ ಮೂರನೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದ ಅವರು ಭಾರತದ ಹರಿಯಾಣಕ್ಕೆ ಭೇಟಿ ನೀಡಿದ್ದರು. ಹರಿಯಾಣದ ಸಣ್ಣ ಗ್ರಾಮವೊಂದಕ್ಕೆ ಅವರು ಆಡಳಿತಾತ್ಮಕ ಭೇಟಿ ಮಾಡಿದ್ದರು. ಅವರ ಭಾರತ ಭೇಟಿಯ ಸವಿ ನೆನಪಿಗಾಗಿ ಈ ಗ್ರಾಮಕ್ಕೆ ಕಾರ್ಟರ್‌ಪುರಿ ಎಂದು ಹೆಸರಿಡಲಾಗಿತ್ತು.