‘ಕೈ’ ಗ್ಯಾರಂಟಿ ಕಾಪಿ ಪೇಸ್ಟ್ – ಗೆದ್ರೆ 2100 ರೂ.. ಫ್ರೀ LPG..
ಜಾರ್ಖಂಡ್‌ನಲ್ಲಿ ಭರ್ಜರಿ ಆಫರ್

‘ಕೈ’ ಗ್ಯಾರಂಟಿ ಕಾಪಿ ಪೇಸ್ಟ್ – ಗೆದ್ರೆ 2100 ರೂ.. ಫ್ರೀ LPG..ಜಾರ್ಖಂಡ್‌ನಲ್ಲಿ ಭರ್ಜರಿ ಆಫರ್

ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಂಕ್ಷೆಯ ಯೋಜನೆ ಅಂದ್ರೆ ಅದು ಗ್ಯಾರಂಟಿ ಯೋಜನೆ. ರಾಜ್ಯದ ಗೃಹಿಣಿಯರಿಗೆ ತಿಂಗಳಿಗೆ 2 ಸಾವಿರ ಹಣ ಬಸ್ ಫ್ರೀ. ಕರೆಂಟ್ ಫ್ರೀ ಅಂತಾ ಕೇಳಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ.. ಈ ಯೋಜನೆ  ಬಗ್ಗೆ ಬಿಜೆಪಿ ಅಪಹಾಸ್ಯ ಮಾಡುತ್ತಲೇ ಬಂದಿತ್ತು. ಜನರಿಗೆ ಫ್ರೀ ಕೊಟ್ಟು ಅಭಿವೃದ್ಧಿ ಕೆಲಸಗಳು ಮಾಡುತ್ತಿಲ್ಲ. ಸರ್ಕಾರದ ಬೊಕ್ಕಸವನ್ನ ಕಾಂಗ್ರೆಸ್ ಖಾಲಿ ಮಾಡುತ್ತಿದೆ ಅಂತಾ ಹೇಳುತ್ತಲೇ ಇತ್ತು.. ಈ ಬಿಜೆಪಿ ಕಾಂಗ್ರೆಸ್‌ ಯೋಜನೆಯನ್ನ ಕಾಪಿ ಮಾಡಿದೆ..

ಇದನ್ನೂ ಓದಿ: RCB ಗೇಮ್.. ಕಪ್ ನಮ್ದೇ! – KL, DP, ಚಹಲ್.. ಯಾರು ಬೆಸ್ಟ್?

ಜಾರ್ಖಂಡ್‌ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳಷ್ಟೇ ಬಾಕಿಯಿದ್ದು, ಎಲ್ಲಾ ರಾಜಕೀಯ ಪಕ್ಷಗಳು ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ಜಾರ್ಖಂಡ್ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಮಹಿಳೆಯರಿಗೆ ಮಾಸಿಕ ಭತ್ಯೆ, ಉಚಿತ ಎಲ್‌ಪಿಜಿ ಸಿಲಿಂಡರ್‌, ಉದ್ಯೋಗ ಸೃಷ್ಟಿ ಸೇರಿದಂತೆ ಹಲವು ಜನಪ್ರಿಯ ಯೋಜನೆಗಳನ್ನು ಘೋಷಿಸಿದೆ.

ಜಾರ್ಖಂಡ್ ಕಮಲ ಗ್ಯಾರಂಟಿ

ರಾಜ್ಯದಲ್ಲೂ ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡಲಿದ್ದು, ಇಧು ಆದಿವಾಸಿಗಳಿಗೆ ಅನ್ವಯವಾಗಲಿದೆ ಎಂದು ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಹೇಳಿದೆ. ಹಾಗೇ  ಪದವಿ, ಸ್ನಾತಕೋತ್ತರ ಪದವೀಧರರಿಗೆ 2 ವರ್ಷಗಳವರೆಗೆ ಮಾಸಿಕ 2000 ರೂ. ನೆರವು ನೀಡಲಾಗುತ್ತೆ.  ಗೋಗೋ – ದೀದಿ ಯೋಜನೆಯಡಿ ಮಹಿಳೆಯರಿಗೆ ಮಾಸಿಕ 2100 ರೂ.ಆರ್ಥಿಕ ನೆರವು. 500 ರೂ.ಗೆ ಎಲ್‌ಪಿಜಿ ಸಿಲಿಂಡರ್‌ ವಿತರಣೆ ಮಾಡುತ್ತೇವೆ ಹಾಗೇ  ಈ ಪೈಕಿ ವರ್ಷದಲ್ಲಿ  ದೀಪಾವಳಿ ಮತ್ತು ರಕ್ಷಾಬಂಧನ ವೇಳೆ ಎರಡು ಉಚಿತ ಸಿಲಿಂಡರ್ ಮಾಡಲಾಗುತ್ತೆ ಅಂತಾ ಬಿಜೆಪಿ ಹೇಳಿದೆ. ಹಾಗೇ ಮಾಸಿಕ 300 ಯುನಿಟ್‌ವರೆಗೆ ಉಚಿತ ವಿದ್ಯುತ್‌ ಪೂರೈಕೆ ಮಾಡಲಿದ್ದು,  50 ಲಕ್ಷ ರು.ವರೆಗಿನ, ಮಹಿಳೆಯರ ಹೆಸರಲ್ಲಿನ ಆಸ್ತಿ ನೋಂದಣಿಗೆ ಕೇವಲ 1 ರೂ. ನೋಂದಣಿ ಶುಲ್ಕ ಮಾತ್ರ ಮಾಡುತ್ತೇವೆ.  2.87 ಲಕ್ಷ ಸರ್ಕಾರಿ ಹುದ್ದೆ ಭರ್ತಿಗೆ ಕ್ರಮ ಕೈಗೊಂಡು 5 ಲಕ್ಷ ಸ್ವಯಂ ಉದ್ಯೋಗ ಸೃಷ್ಟಿಗೆ ಸೂಕ್ತ ಯೋಜನೆ ರೂಪಿಸುವ ಭರವಸೆ ನೀಡಲಾಗಿದೆ. ಅಗ್ನಿವೀರರಿಗೆ ಖಚಿತ ಉದ್ಯೋಗದ ಭರವಸೆ. 1.25 ಕೋಟಿ ಮನೆಗಳಿಗೆ ಸೌರಶಕ್ತಿ ವಿದ್ಯುತ್‌ ಸಂಪರ್ಕ ನೀಡಲಾಗುತ್ತೆ. ಅಕ್ರಮ ವಲಸಿಗರ ಗಡಿಪಾರು ಹಾಗೂ ವಲಸಿಗರ ಪಾಲಾದ ಭೂಮಿ ಮರಳಿ ಪಡೆಯಲು ವಿಶೇಷ ಕಾಯ್ದೆ ಜಾರಿ. ಆದಿವಾಸಿಗಳ ಮಕ್ಕಳ ಮದುವೆ ಆಗುವ ಅಕ್ರಮ ವಲಸಿಗರಿಗೆ ಆದಿವಾಸಿಗಳ ಸ್ಥಾನಮಾನ ಇಲ್ಲ. ಹಾಗೇ  ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಉಚಿತ ಡಯಾಲಿಸಿಸ್‌ ವ್ಯವಸ್ಥೆ ಮಾಡುತ್ತೇವೆ. ಪ್ರಶ್ನೆ ಪ್ರತ್ರಿಕೆ ಸೋರಿಕೆ ಹಗರಣದ ಕುರಿತು ಎಸ್‌ಐಟಿ ಮತ್ತು ಸಿಬಿಐ ಮೂಲಕ ತನಿಖೆ ಮಾಡುವ ಭರವಸೆ ನೀಡಲಾಗಿದೆ. 10 ವೈದ್ಯಕೀಯ ಕಾಲೇಜು ಸ್ಥಾಪನೆ. ಪ್ರವಾಸೋದ್ಯಮ ಕೇಂದ್ರವಾಗಿ ರಾಜ್ಯ ಅಭಿವೃದ್ಧಿ ಮಾಡುತ್ತೇವೆ ಎಂದು ಭರವಸೆ ನೀಡಲಾಗಿದೆ.  ರಾಜ್ಯದ ಎಲ್ಲಾ ಬಡವರಿಗೂ ಉಚಿತವಾಗಿ ಮನೆ ನಿರ್ಮಾಣ. 25000 ಕಿ.ಮೀ ಹೆದ್ದಾರಿ ನಿರ್ಮಾಣ ಮಾಡಲಾಗುತ್ತೆ. ಗ್ರಾಮ ಪಂಚಾಯತ್‌ ಮುಖ್ಯಸ್ಥರಿಗೆ ಮಾಸಿಕ 5000 ರು. ವೇತನ ಪಾವತಿ ಮಾಡುವ ಭರವಸೆ ನೀಡಲಾಗಿದೆ.  ಉನ್ನತ ಶಿಕ್ಷಣಕ್ಕೆ ಬಡ್ಡಿರಹಿತವಾಗಿ 10 ಲಕ್ಷ ರೂ.ವರೆಗಿನ ಸಾಲ ಮಂಜೂರು ಮಾಡಲಾಗುತ್ತೆ.  ಪ್ರಾಂತೀಯ ಜಾರ್ಖಂಡ್‌ ಭಾಷೆಯಲ್ಲೇ ಶಾಲೆಯಲ್ಲಿ ಶಿಕ್ಷಣ ಬೋಧನೆ ಮಾಡಲಾಗುತ್ತೆ ಅಂತಾ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಹೇಳಿದೆ.

ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳ ಭರವಸೆ ನೀಡಿದ ಕಾಂಗ್ರೆಸ್ ಸರ್ಕಾರ ಅಧಿಕಾರವನ್ನ ನೀಡಿದಿದೆ.. ಅದೇ ದಾರಿಯನ್ನ ಹಿಡಿದಿರೋ ಬಿಜೆಪಿ ಜಾರ್ಖಂಡ್‌ನಲ್ಲಿ ಉಚಿತ ಯೋಜನೆಗಳ ಭರವಸೆಯನ್ನ ನೀಡಿದೆ. ಆದ್ರೆ ಇದು ಎಷ್ಟರ ಮಟ್ಟಿಗೆ ಸಕಸ್ಸ್ ಆಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

Shwetha M