ಅಶ್ವಿನಿ ಗೌಡ, ಜಾಹ್ನವಿ ಫ್ರೆಂಡ್‌ಶಿಪ್ ಕಟ್! – ಜೋಡೆತ್ತುಗಳು ದೂರ ಆಗಿದ್ದು ಗೇಮ್ ಸ್ಟ್ರಾಟರ್ಜಿ?

ಬಿ ಗ್ ಬಾಸ್ ಮನೆಯಲ್ಲಿ ಅಸಲಿ ಆಟ ಶುರುವಾದಂತೆ ಕಾಣ್ತಿದೆ. ಇಷ್ಟು ದಿನ ಅಶ್ವಿನಿ ಗೌಡ ಹಾಗೂ ಜಾಹ್ನವಿ ಫುಲ್ ಕ್ಲೋಸ್ ಫ್ರೆಂಡ್ಸ್ ಆಗಿದ್ರು. ಇವರಿಬ್ಬರು ದೊಡ್ಮನೆಯಲ್ಲಿ ನೆಗೆಟಿವ್ ವಿಚಾರಕ್ಕೆ ಸುದ್ದಿಯಾಗಿದ್ರು. ರಕ್ಷಿತಾಳನ್ನ ಹೀಯಾಳಿಸಿ ಕರ್ನಾಟಕದ ಜನತೆ ಕೆಂಗಣ್ಣಿಗೆ ಗುರಿಯಾಗಿದ್ರು. ಕಿಚ್ಚ ಸುದೀಪ್ ಬೈದು ಬುದ್ದಿವಾದ ಸ್ನೇಹದ ಮಧ್ಯೆ ಈಗ ಬಿರುಕು ಹೇಳಿದ್ರೂ ಇವರಿಬ್ಬರು ಬದಲಾಗಿರ್ಲಿಲ್ಲ. ಆದ್ರೀಗ ತುಂಬಾನೇ ಕ್ಲೋಸ್ ಇದ್ದ ಅಶ್ವಿನಿ ಗೌಡ ಹಾಗೂ ಜಾನ್ವಿ ಸ್ನೇಹದ ಮಧ್ಯೆ ಈಗ ಬಿರುಕು ಮೂಡಿದೆ. ಒಬ್ಬರನ್ನೊಬ್ಬರು ಬೈದುಕೊಂಡಿದ್ದಾರೆ.
ಇದನ್ನೂ ಓದಿ:ODI ಕ್ರಿಕೆಟ್ ಗೂ ಅಭಿಷೇಕ್ ಎಂಟ್ರಿ? – HITಮ್ಯಾನ್ ರಿಪ್ಲೇಸ್ ಆಗ್ತಾರಾ ಶರ್ಮಾ?
ಬಿಗ್ ಬಾಸ್ ಇಂದಿನ ಸಂಚಿಕೆಯ ಪ್ರೋಮೋ ರಿಲೀಸ್ ಆಗಿದೆ. ತಮ್ಮ ಎದುರಾಳಿ ಸ್ಪರ್ಧಿ ಈ ಮನೆಯಲ್ಲಿ ಇರಲು ಏಕೆ ಯೋಗ್ಯರಲ್ಲ ಎಂದು ಸೂಕ್ತ ಕಾರಣ ನೀಡಿ ಹೇಳಬೇಕು ಎಂದು ಬಿಗ್ ಬಾಸ್ ಹೇಳಿದ್ದಾರೆ. ಈ ಸಂದರ್ಭ ಅಶ್ವಿನಿ ಗೌಡ ಅವರು ಜಾನ್ವಿ ಹೆಸರು ತೆಗೆದುಕೊಂಡಿದ್ದಾರೆ. ಜಾನ್ವಿ ಫ್ರೆಂಡ್ಶಿಪ್ನಿಂದ ನನಗೆ ಕಳಪೆ ಬಂದಿದೆ. ನನ್ನನ್ನ ಮುಂದೆ ಬಿಟ್ಟು ಹಿಂದೆಯಿಂದ ನೀವು ತಮಾಷೆ ನೋಡಿ ನನ್ನ ಬಿಗ್ ಬಾಸ್ ಮನೆಯಿಂದ ಹೊರಗೆ ಹಾಕಬೇಕು ಅಂತ ಕಾಯ್ತಾ ಇದ್ದೀರ ನೀವು.. ಫ್ರೆಂಡ್‌ಶಿಪ್ ಅಂತ ಹೇಳ್ಕೊಂಡು ನನಗೆ ಬಾವಿ ತೋಡ್ತಾ ಇದ್ದೀರಾ ಅಂತ ಗೊತ್ತಿರಲಿಲ್ಲ.. ಆ ತರದ ಒಂದು ಸ್ನೇಹಕ್ಕೆ ನಾವು ಬ್ರೇಕ್ ಕೋಡೋದು ಉತ್ತಮ ಎಂದು ನೇರವಾಗಿ ಹೇಳಿದ್ದಾರೆ.
ಇದರ ಮಧ್ಯೆ ಮಾತನಾಡಿದ ಜಾನ್ವಿ, ನಿಮ್ಮ ಆಟ ನೀವು ಆಡ್ತಾ ಇದ್ದೀರಾ.. ನನ್ನ ಆಟವನ್ನ ನಾನು ಆಟ ಆಡ್ತಾ ಇದ್ದೀನಿ.. ಕೆಲವರ ಆಟ ತುಂಬಾ ಫಾಸ್ಟ್ ಆಗಿ ಕಾಣಿಸಬಹುದು ಇನ್ನು ಕೆಲವರು ಸ್ಲೋ ಆಗಿ ಹೋಗಿ ಗುರಿ ತಲುಪಬಹುದು. ಅಶ್ವಿನಿ ಅವರು ನನ್ನ ಜೊತೆಗೆ ಇರೋದು ಕೂಡ ಒಂದು ಸ್ಟ್ರಾಟರ್ಜಿ ಎಂದು ಹೇಳಿದ್ದಾರೆ. ಒಟ್ಟಾರೆ ಬಿಗ್ ಬಾಸ್ ಮನೆ ಎಂತಾ ಸ್ನೇಹ-ಪ್ರೀತಿಯನ್ನು ಮುರಿಯುತ್ತೆ ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆ ಆಗಿದೆ. ಶೋ ಆರಂಭ ಆದಾಗಿನಿಂದ ಸದಾ ಕೀಟಲೆ ಮಾಡಿಕೊಂಡು, ಒಬ್ಬರಿಗೊಬ್ಬರು ಸ್ಟ್ಯಾಂಡ್ ತೆಗೆದುಕೊಳ್ಳುತ್ತಿದ್ದ ಸ್ನೇಹಿತರು ಈಗ ಸ್ಪರ್ಧಿಗಳಾಗಿ ತಮ್ಮ ಆಟವನ್ನು ಶುರುಮಾಡಿದಂತೆ ಕಾಣುತ್ತಿದೆ. ಆದ್ರೆ ವೀಕ್ಷಕರು ಮಾತ್ರ ಇದನ್ನ ನಂಬಲು ರೆಡಿಯಿಲ್ಲ.. ಇದು ಕೂಡ ಅವರ ಗೇಮ್ ಸ್ಟ್ರಾಟರ್ಜ.. ಸುದೀಪ್ ಬೈದಮೇಲೆ ಒಳ್ಳೆಯವರಂತೆ ನಟಿಸಲು ಶುರುಮಾಡಿದ್ದಾರೆ ಎಂದು ಕಮೆಂಟ್ ಮಾಡ್ತಿದ್ದಾರೆ.

ನೋಡಿರಿ

