ಅವೇಂಜರ್ಸ್ ಖ್ಯಾತಿಯ ಜೆರ್ಮಿ ರೆನ್ನರ್ ಸ್ಥಿತಿ ಚಿಂತಾಜನಕ- ಹಾಲಿವುಡ್ ನಟನಿಗೆ ಮುಂದುವರಿದ ಚಿಕಿತ್ಸೆ

ಅವೇಂಜರ್ಸ್ ಖ್ಯಾತಿಯ ಜೆರ್ಮಿ ರೆನ್ನರ್ ಸ್ಥಿತಿ ಚಿಂತಾಜನಕ- ಹಾಲಿವುಡ್ ನಟನಿಗೆ ಮುಂದುವರಿದ ಚಿಕಿತ್ಸೆ

ಹಾಲಿವುಡ್ ನಟ ಜೆರ್ಮಿ ರೆನ್ನರ್ ಪರಿಸ್ಥಿತಿ ಇನ್ನೂ ಗಂಭೀರವಾಗಿದೆ. ಅವೇಂಜರ್ಸ್ ಖ್ಯಾತಿಯ ಜೆರ್ಮಿ ರೆನ್ನರ್ ತೀವ್ರವಾಗಿ ಗಾಯಗೊಂಡಿದ್ದು, ಪರಿಸ್ಥಿತಿ ಚಿಂತಾಜನಕವಾಗಿದೆ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದರೂ, ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ ಎಂದು ಹೇಳಲಾಗುತ್ತಿದೆ. ಜೆರ್ಮಿ ರೆನ್ನರ್ ಅವೇಂಜರ್ಸ್ ಸರಣಿಯಲ್ಲಿ ಹ್ಯಾಕ್ ಐ ಪಾತ್ರ ನಿರ್ವಹಿಸುತ್ತಿದ್ದರು. ಅಮೆರಿಕದಲ್ಲಿ ಭೀಕರ ಚಳಿ ಚಂಡಮಾರುತದಿಂದಾಗಿ ನಿರಂತರ ಹಿಮ ಸುರಿಯುತ್ತಲೇ ಇದೆ. ಮನೆಗಳೆಲ್ಲಾ ಹಿಮಾವೃತವಾಗಿದೆ. ಹೀಗಾಗಿ ರೆನ್ನರ್ ತಮ್ಮ ಮನೆಯ ಆವರಣದಲ್ಲಿ ಹಿಮವನ್ನ ತೆರವುಗೊಳಿಸೋಕೆ ಮುಂದಾಗಿದ್ರು. ಈ ವೇಳೆ ಜೆರ್ಮಿ ರೆನ್ನರ್ ಗಾಯಗೊಂಡಿದ್ದಾರೆ. ಕೂಡಲೇ ಜೆರ್ಮಿ ರೆನ್ನರ್‌ ನ್ನು ಹೆಲಿಕಾಪ್ಟರ್ ಮೂಲಕ ಏರ್ಲಿಫ್ಟ್ ಮಾಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇದನ್ನೂ ಓದಿ :  ‘ಕೆಡಿ’ ಸಿನಿಮಾದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಖಡಕ್ ಲುಕ್ – ಪೋಸ್ಟರ್ ನೋಡಿ ಫ್ಯಾನ್ಸ್ ಫಿದಾ

ಜೆರ್ಮಿ ರೆನ್ನರ್ , ಸ್ಥಿತಿ ಗಂಭೀರವಾಗಿರುವುದರಿಂದ ಸದ್ಯಕ್ಕೆ ಏನೂ ಹೇಳಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಹಾಲಿವುಡ್ ನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಇವರು, ಆಸ್ಕರ್ ಪ್ರಶಸ್ತಿ ವಿಜೇತ ‘ಹರ್ಟ್ ಲಾಕರ್ ಸಿನಿಮಾದಲ್ಲೂ ನಟಿಸಿದ್ದಾರೆ. ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದರೂ, ಫೇಮಸ್ ಅಂತ ಆಗಿದ್ದು ಅವೇಂಜರ್ಸ್ ಸೀರಿಸ್ ಮೂಲಕ. ಟಾಮ್ ಕ್ರೂಸ್ರ ಮಿಷನ್ ಇಂಪಾಸಿಬಲ್, ಕ್ಯಾಪ್ಟನ್ ಅಮೆರಿಕ ಸೇರಿದಂತೆ ಹಲವು ಹಾಲಿವುಡ್ ಸಿನಿಮಾಗಳಲ್ಲಿ ಜೆರ್ಮಿ ರೆನ್ನರ್ ನಟಿಸಿದ್ರು.

suddiyaana