ಸರ್ಕಾರಿ ನೌಕರರಿಗೆ ಡ್ರೆಸ್ ಕೋಡ್ – ಟೀ ಶರ್ಟ್, ಜೀನ್ಸ್ ಪ್ಯಾಂಟ್ ಧರಿಸಿದ್ರೆ ದಂಡ!

ಸರ್ಕಾರಿ ನೌಕರರಿಗೆ ಡ್ರೆಸ್ ಕೋಡ್ – ಟೀ ಶರ್ಟ್, ಜೀನ್ಸ್ ಪ್ಯಾಂಟ್ ಧರಿಸಿದ್ರೆ ದಂಡ!

ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಡ್ರೆಸ್ ಕೋಡ್ ಇರುವುದು ಸಾಮಾನ್ಯ. ಇನ್ನು ಕೆಲ ಕಂಪನಿಗಳಲ್ಲೂ ಕೂಡ ಉದ್ಯೋಗಿಗಳಿಗೆ ಸಮವಸ್ತ್ರಗಳನ್ನು ನೀಡಲಾಗಿರುತ್ತದೆ. ಕಳೆದ ವರ್ಷ ಉತ್ತರ ಪ್ರದೇಶದ ಮುಜಾಫರ್ ನಗರದಲ್ಲೂ ಸರ್ಕಾರಿ ಶಾಲೆಗಳಲ್ಲಿ ಕೆಲಸ ಮಾಡುವ ಶಿಕ್ಷಕರು ಜೀನ್ಸ್ ಪ್ಯಾಂಟ್  ಮತ್ತು ಟೀ ಶರ್ಟ್ ಧರಿಸಿ ಕರ್ತವ್ಯಕ್ಕೆ ಹಾಜರಾಗಬಾರದು ಅಂತಾ ಅಲ್ಲಿನ ಸರ್ಕಾರ ಆದೇಶ ನೀಡಿತ್ತು. ಇದೀಗ ಬಿಹಾರದ ಸರನ್ ಜಿಲ್ಲೆಯಲ್ಲಿಯೂ ಇಂತಹದ್ದೇ  ನಿಯಮ ಜಾರಿಗೆ ಬರಲಿದೆ.

ಇದನ್ನೂ ಓದಿ: ಸ್ನೇಹಕ್ಕೂ ಸೈ.. ಸಂಬಂಧಕ್ಕೂ ಸೈ – ದೇಶದಲ್ಲಿ ಸಂತೋಷವಾಗಿರುವ ರಾಜ್ಯಗಳಲ್ಲಿ ಮಿಜೋರಾಂ ನಂಬರ್ 1..!

ಬಿಹಾರದ ಸರನ್ ಜಿಲ್ಲೆಯಲ್ಲಿರುವ ಸರ್ಕಾರಿ ನೌಕರರು ಜೀನ್ಸ್ ಪ್ಯಾಂಟ್, ಟೀ ಶರ್ಟ್ ಧರಿಸಿ ಕಚೇರಿಗೆ ಬರಬಾರದು. ಎಲ್ಲಾ ನೌಕರರು ಫಾರ್ಮಲ್ಸ್ ಧರಿಸಬೇಕು  ಅಂತಾ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಸರ್ಕಾರಿ ಕಚೇರಿಗೆ ಅನೇಕ ಜನರು ಬರುತ್ತಾರೆ. ಈ ವೇಳೆ ಅಧಿಕಾರಿ ಯಾರು ಅಂತಾ ಜನ ಸುಲಭವಾಗಿ ಗುರುತಿಸಬೇಕು. ಅಧಿಕಾರಿಗಳು ಯಾರು ಅಂತಾ ಜನರು ನೆನಪಿನಲ್ಲಿಟ್ಟುಕೊಳ್ಳಲು ಈ ಡ್ರೆಸ್ ಕೋಡ್ ಉಪಯುಕ್ತವಾಗಲಿದೆ ಅಂತಾ  ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಅಧಿಕಾರಿಗಳು ಉತ್ತಮ ಬಟ್ಟೆ ಧರಿಸಿ ಐಡಿ ಕಾರ್ಡ್​ ಕೂಡ ಧರಿಸುವಂತೆ ಸೂಚಿಸಲಾಗಿದೆ. ಅದಕ್ಕಾಗಿಯೇ ಎಲ್ಲ ನೌಕರರಿಗೂ ಗುರುತಿನ ಚೀಟಿ ನೀಡಲಾಗಿದೆ. ಎಲ್ಲಾ ನೌಕರರು ಬೆಳಗ್ಗೆ 10 ರಿಂದ ಸಂಜೆ 4 ರವರೆಗೆ ಕಚೇರಿಗಳಲ್ಲಿ ಔಪಚಾರಿಕ ಬಟ್ಟೆಗಳನ್ನು ಧರಿಸಬೇಕು ಎಂದು ಮ್ಯಾಜಿಸ್ಟ್ರೇಟ್ ಸಲಹೆ ನೀಡಿದರು.

ಇನ್ನು ಅಧಿಕಾರಿಗಳು ಕಚೇರಿಗಳಲ್ಲಿ ಕಡ್ಡಾಯವಾಗಿ ಡ್ರೆಸ್ ಕೋಡ್ ಪಾಲಿಸಬೇಕು. ಅಧಿಕಾರಿಗಳು ಡ್ರೆಸ್ ಕೋಡ್ ಅನುಸರಿಸುತ್ತಿದ್ದಾರಾ ಅಂತಾ ಪರೀಕ್ಷಿಸಲು ದಿಢೀರ್ ಆಗಿ ಕಚೇರಿಗಳಿಗೆ ಭೇಟಿ ನೀಡಲಾಗುತ್ತದೆ. ಈ ವೇಳೆ ಅಧಿಕಾರಿಗಳು ನಿಯಮ ಉಲ್ಲಂಘಿಸಿರುವುದು ಕಂಡು ಬಂದರೆ ದಂಡ ವಿಧಿಸಲಾಗುವುದು ಅಂತಾ ಎಚ್ಚರಿಕೆ ನೀಡಲಾಗಿದೆ.

suddiyaana