ಮಹಿಳೆಯ ಕಿಡ್ನಾಪ್ ಪ್ರಕರಣ – ಮಾಜಿ ಸಚಿವ ಹೆಚ್.ಡಿ ರೇವಣ್ಣ ಜೈಲು ಪಾಲು
ಮಹಿಳೆಯ ಕಿಡ್ನಾಪ್ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರ ಕಸ್ಟಡಿಯ ಅವಧಿ ಅಂತ್ಯವಾದ ಹಿನ್ನೆಲೆಯಲ್ಲಿ SIT ಅಧಿಕಾರಿಗಳು ಇಂದು ಮತ್ತೆ ರೇವಣ್ಣ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ರೇವಣ್ಣ ಪರ ವಕೀಲರ ವಾದ ಮತ್ತು ಎಸ್ಐಟಿ ವಾದವನ್ನು ಆಲಿಸಿದ ನ್ಯಾಯಧೀಶ ರವೀಂದ್ರ ಬಿ ಕಟ್ಟಿಮನಿ ರೇವಣ್ಣರನ್ನ ಮೇ 14ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಅಂದರೆ ಇನ್ನೂ 6 ದಿನ ಮಾಜಿ ಸಚಿವ ರೇವಣ್ಣ ಪರಪ್ಪನ ಅಗ್ರಹಾರದಲ್ಲೇ ಕಳೆಯಬೇಕಿದೆ.
ಇದನ್ನೂ ಓದಿ: ವೋಟ್ ಮಾಡಲು ಬಂದವರಿಗೆ ಸಿಕ್ತು ವಜ್ರದ ಉಂಗುರ, ಟಿವಿ, ರೆಫ್ರಿಜರೇಟರ್!
ಕಸ್ಟಡಿ ವಿಚಾರಣೆ ವೇಳೆ ರೇವಣ್ಣ ತಮ್ಮ ಪ್ರಶ್ನೆಗೆ ಸರಿಯಾಗಿ ಸ್ಪಂಧಿಸಿಲ್ಲ, ಬಹುತೇಕ ಪ್ರಶ್ನೆಗಳಿಗೆ ಉತ್ತರವನ್ನೇ ನೀಡಿಲ್ಲ. ಒಂದು ವೇಳೆ ಜಾಮೀನು ಮಂಜೂರು ಮಾಡಿದರೆ ಸಾಕ್ಷ್ಯವನ್ನು ನಾಶ ಪಡಿಸುವ ಸಾಧ್ಯತೆ ಇದೆ. ಹಾಗಾಗಿ ಜಾಮೀನು ನೀಡದೆ , ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಮನವಿ ಮಾಡಿದೆ. ಎಸ್ಐಟಿ ಮನವಿ ಮೇರೆಗೆ 7 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕೋರ್ಟ್ ಆದೇಶಿಸಿದೆ.
ಇನ್ನು ರೇವಣ್ಣ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಕೋರ್ಟ್ ನಾಳೆಗೆ ಮುಂದೂಡಿಕೆ ಮಾಡಿದೆ. ಇನ್ನು ವಿಚಾರಣೆ ವೇಳೆ ರೇವಣ್ಣ ಕೈಕಟ್ಟಿ ನಿಂತಿದ್ದರು ಎನ್ನಲಾಗುತ್ತಿದೆ. ರೇವಣ್ಣ ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದರು. ಆದ್ರೆ ಕೊನೆ ಕ್ಷಣಲ್ಲಿ ನಿರಾಸೆ ಆಗಿದೆ.