‘ಕನ್ನಡವೇ ಮೊದಲು, ಶಿಕ್ಷಣವೇ ಆಧುನಿಕ ಶಕ್ತಿ’ – ಚುನಾವಣೆಗೆ ಜೆಡಿಎಸ್ ನಿಂದ 12 ಭರವಸೆ

‘ಕನ್ನಡವೇ ಮೊದಲು, ಶಿಕ್ಷಣವೇ ಆಧುನಿಕ ಶಕ್ತಿ’ – ಚುನಾವಣೆಗೆ ಜೆಡಿಎಸ್ ನಿಂದ 12 ಭರವಸೆ

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಪ್ರಾರಂಭವಾಗಿದೆ. ಈ ಹೊತ್ತಲ್ಲಿ ಜನರ ವಿಶ್ವಾಸ ಗಳಿಸಲು ಮಾಜಿ ಪ್ರಧಾನಿ ದೇವೇಗೌಡ 12 ಭರವಸೆಗಳನ್ನು ಘೋಷಣೆ ಮಾಡಿದ್ದು, ಜೆಡಿಎಸ್​ ಅಧಿಕಾರಕ್ಕೆ ಬಂದರೆ ಭರವಸೆ ಈಡೇರಿಸುವುದಾಗಿ ಅಭಯ ನೀಡಿದ್ದಾರೆ.

ಈ ಸಂಬಂಧ ಬೆಂಗಳೂರಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡ, ಎಲ್ಲಾ ಹೊಣೆಗಾರಿಗೆ ಹೆಚ್​.ಡಿ ಕುಮಾರಸ್ವಾಮಿ ಅವರದ್ದು. ಮೂರು ಕ್ಷೇತ್ರಗಳಿಗೆ ಇಂದು ಹೆಚ್​​ಡಿ ಕುಮಾರಸ್ವಾಮಿ ಹೋಗುತ್ತಿದ್ದಾರೆ. ಇದು ಪ್ರಣಾಳಿಕೆ ಅಲ್ಲ ಭರವಸೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್‌ ಅಭ್ಯರ್ಥಿಗಳ 3ನೇ ಪಟ್ಟಿ ಬಿಡುಗಡೆ -‌ ಸಿದ್ದರಾಮಯ್ಯಗೆ ತಪ್ಪಿದ ಕೋಲಾರ ಟಿಕೆಟ್

ಹಾಸನದಲ್ಲಿ ಸ್ವರೂಪ್​ ಗೆಲುವಿಗೆ ಹೆಚ್​.ಡಿ.ರೇವಣ್ಣ ಶ್ರಮಿಸುತ್ತಾರೆ. ಸ್ವರೂಪ್​ ಗೆಲುವಿಗೆ ಶಕ್ತಿಮೀರಿ ಕೆಲಸ ಮಾಡುವುದಾಗಿ ಹೇಳಿದ್ದಾರೆ. ಎಲ್ಲರೂ ಒಟ್ಟಾಗಿ ಸ್ವರೂಪ್ ಗೆಲ್ಲಿಸಬೇಕು ಎಂದು ಸೂಚಿಸಿದ್ದೇನೆ. ರೇವಣ್ಣ ಹಾಸನಕ್ಕೆ ಹೋಗಿದ್ದಾರೆ. ಅವನ ಗೆಲುವಿಗೆ ಶಕ್ತಿ ಮೀರಿ ‌ಕೆಲಸ‌ ಮಾಡೋದಾಗಿ ರೇವಣ್ಣ ಹೇಳಿದ್ದಾರೆ ಎಂದರು. ಈ ವೇಳೆ ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಪರಿಷತ್‌ ಸದಸ್ಯ ಟಿ ಎ ಶರವಣ ಉಪಸ್ಥಿತರಿದ್ದರು.

ಜೆಡಿಎಸ್ 12 ಭರವಸೆಗಳು

  • ಮಾತೃಶ್ರೀ ಮತ್ತು ಮಹಿಳಾ ಸಬಲೀಕರಣ
  • ಕನ್ನಡವೇ ಮೊದಲು
  • ಶಿಕ್ಷಣವೇ ಆಧುನಿಕ ಶಕ್ತಿ
  • ಆರೋಗ್ಯ ಸಂಪತ್ತು
  • ರೈತ ಚೈತನ್ಯ
  • ಹಿರಿಯ ನಾಗರಿಕರಿಗೆ ಸನ್ಮಾನ
  • ಯುವಜನ ಸಬಲೀಕರಣ
  • ಧಾರ್ಮಿಕ ಅಲ್ಪಸಂಖ್ಯಾತರ ಏಳಿಗೆ ಹಾಗೂ ಪ್ರಗತಿ
  • ವಿಕಲಚೇತನರಿಗೆ ಆಸರೆ
  • ವೃತ್ತಿನಿರತ ವಕೀಲರ ಅಭ್ಯುದಯ
  • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಏಳಿಗೆ
  • ಆರಕ್ಷರಿಗೆ ಅಭಯ

suddiyaana