JDS 2 ನೇ ಪಟ್ಟಿ ಬಿಡುಗಡೆ – ಭವಾನಿ ವಿರುದ್ಧ ಹಠಸಾಧಿಸಿದ ಕುಮಾರಸ್ವಾಮಿ!

JDS 2 ನೇ ಪಟ್ಟಿ ಬಿಡುಗಡೆ – ಭವಾನಿ ವಿರುದ್ಧ ಹಠಸಾಧಿಸಿದ ಕುಮಾರಸ್ವಾಮಿ!

ಬೆಂಗಳೂರು: ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಜೆಡಿಎಸ್ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಶುಕ್ರವಾರ ರಿಲೀಸ್ ಮಾಡಿದೆ. ಭಾರೀ ಕುತೂಹಲ ಮೂಡಿಸಿದ್ದ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್.ಪಿ. ಸ್ವರೂಪ್ ಅವರಿಗೆ ಟಿಕೆಟ್ ನೀಡಲಾಗಿದೆ. ಹಾಸನ ಕ್ಷೇತ್ರದಿಂದ ಕಣಕ್ಕಿಳಿಯಲು ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರು ಭಾರಿ ಕಸರತ್ತು ನಡೆಸಿದ್ದರು. ಆದರೆ ಕುಮಾರಸ್ವಾಮಿ ಅವರು ಈ ಹಿಂದೆ ಹೇಳಿದಂತೆ ಸ್ವರೂಪ್ ಅವರಿಗೆ ಬಿ. ಫಾರ್ಮ್ ನೀಡಿದ್ದಾರೆ. ಕಡೂರು ಕ್ಷೇತ್ರದಲ್ಲಿ ಜೆಡಿಎಸ್ ಗೆ ಮರಳಿರುವ ವೈಎಸ್ ವಿ ದತ್ತ ಅವರಿಗೆ ಟಿಕೆಟ್ ನೀಡಲಾಗಿದೆ. ಸ್ವರೂಪ್ ಅವರಿಗೆ ಟಿಕೆಟ್ ಘೋಷಿಸುತ್ತಿದ್ದಂತೆ ಹಾಸನದಲ್ಲಿ ಜೆಡಿಎಸ್ ಕಾರ್ಯಕರ್ತರು ಮತ್ತು ಸ್ವರೂಪ್ ಅವರ ಅಭಿಮಾನಿಗಳು ಸಂಭ್ರಮಿಸಿದ್ದಾರೆ.

ಎರಡನೇ ಪಟ್ಟಿಯಲ್ಲಿ ಯಾರಿಗೆಲ್ಲ ಜೆಡಿಎಸ್ ಟಿಕೆಟ್?

  • ಕುಡುಚಿ- ಆನಂದ ಮಾಳಗಿ
  • ರಾಯಭಾಗ-ಪ್ರದೀಪ ಮಾಳಗಿ
  • ಸವದತ್ತಿ ಯಲ್ಲಮ್ಮ-ಸೌರಭ್ ಆನಂದ ಚೋಪ್ರಾ
  • ಅಥಣಿ – ಶ್ರೀ ಶಶಿಕಾಂತ ಪಡಸಲಗಿ ಗುರುಗಳು
  • ಹುಬ್ಬಳ್ಳಿ ಧಾರವಾಡ ಪೂರ್ವ-ವೀರಭದ್ರಪ್ಪ ಹಾಲಹರವಿ
  • ಕುಮಟಾ -ಸೂರಜ್ ಸೋನಿ ನಾಯ್ಕ
  • ಹಳಿಯಾಳ-ಎಸ್.ಎಲ್. ಘೋಟ್ನೆಕರ್
  • ಭಟ್ಕಳ -ನಾಗೇಂದ್ರ ನಾಯಕ
  • ಶಿರಸಿ- ಉಪೇಂದ್ರ ಪೈ
  • ಯಲ್ಲಾಪುರ-ಡಾ.ನಾಗೇಶ್ ನಾಯಕ್
  • ಚಿತ್ತಾಪುರ- ಸುಭಾಷ್ ಚಂದ್ರ ರಾಥೋಡ್
  • ಕಲಬುರಗಿ ಉತ್ತರ-ನಾಸಿರ್ ಹುಸೇನ್ ಉಸ್ತಾದ್
  • ಬಳ್ಳಾರಿ ನಗರ-ಅಲ್ಲಾಭಕ್ಷ ಅಲಿಯಾಸ್ ಮುನ್ನಾ
  • ಹಗರಿಬೊಮ್ಮನಹಳ್ಳಿ-ಪರಮೇಶ್ವರಪ್ಪ
  • ಹರಪನಹಳ್ಳಿ- ಎನ್ .ಎಂ. ನೂರ್ ಅಹ್ಮದ್
  • ಸಿರಗುಪ್ಪ-ಪರಮೇಶ್ವರ ನಾಯಕ
  • ಹೊಳೆನರಸೀಪುರ-ಹೆಚ್.ಡಿ.ರೇವಣ್ಣ
  • ಪುತ್ತೂರು-ದಿವ್ಯಪ್ರಭಾ
  • ಬೇಲೂರು-ಕೆ.ಎಸ್.ಲಿಂಗೇಶ್
  • ಸಕಲೇಶಪುರ-ಹೆಚ್.ಕೆ.ಕುಮಾರಸ್ವಾಮಿ
  • ಅರಕಲಗೂಡು-ಎ. ಮಂಜು
  • ಶ್ರವಣಬೆಳಗೊಳ-ಸಿ. ಎನ್. ಬಾಲಕೃಷ್ಣ
  • ಮಹಾಲಕ್ಷ್ಮೀ ಲೇಔಟ್ – ರಾಜಣ್ಣ
  • ಹಿರಿಯೂರು-ರವೀಂದ್ರಪ್ಪ
  • ಮಾಯಕೊಂಡ-ಆನಂದಪ್ಪ
  • ಕಂಪ್ಲಿ-ರಾಜು ನಾಯಕ್
  • ಕೊಳ್ಳೇಗಾಲ-ಪುಟ್ಟಸ್ವಾಮಿ
  • ಗುಂಡ್ಲುಪೇಟೆ-ಕಡಬೂರು ಮಂಜುನಾಥ್
  • ಕಾಪು-ಕು.ಸಬೀನಾ ಸಮದ್
  • ಕಾರ್ಕಳ-ಶ್ರೀಕಾಂತ ಕುಚ್ಚೂರ್
  • ಉಡುಪಿ-ದಕ್ಷತ್ ಆರ್. ಶೆಟ್ಟಿ
  • ಬೈಂದೂರು-ಮನ್ಸೂರ್ ಇಬ್ರಾಹಿಂ
  • ಕುಂದಾಪುರ- ರಮೇಶ್ ಕುಂದಾಪುರ
  • ಮಂಗಳೂರು ದಕ್ಷಿಣ-ಸುಮತಿ ಹೆಗಡೆ
  • ಕನಕಪುರ-ನಾಗರಾಜ
  • ಯಲಹಂಕ-ಎಂ.ಮುನೇಗೌಡ
  • ಸರ್ವಜ್ಞನಗರ- ಮೊಹ್ಮದ್ ಮುಸ್ತಾಫ್
  • ಯಶವಂತಪುರ -ಜವರಾಯಿ ಗೌಡ
  • ತಿಪಟೂರು-ಶಾಂತಕುಮಾರ
  • ಶಿರಾ-ಆರ್. ಉಗ್ರೇಶ್
  • ಹಾನಗಲ್-ಮನೋಹರ್ ತಹಶೀಲ್ದಾರ್
  • ಸಿಂಧಗಿ-ವಿಶಾಲಾಕ್ಷಿ ಶಿವಾನಂದ
  • ಗಂಗಾವತಿ-ಹೆಚ್.ಆರ್.ಚನ್ನಕೇಶವ
  • ಹೆಚ್.ಡಿ.ಕೋಟೆ- ಜಯಪ್ರಕಾಶ್ ಸಿ
  • ಜೇವರ್ಗಿ- ದೊಡ್ಡಪ್ಪಗೌಡ ಶಿವಲಿಂಗಪ್ಪ ಗೌಡ
  • ಶಹಾಪೂರ-ಗುರುಲಿಂಗಪ್ಪಗೌಡ
  • ಕಾರವಾರ-ಚೈತ್ರಾ ಕೋಟ ಕಾರ
  • ಸೊರಬ – ಚಂದ್ರೇಗೌಡ

ರಾಜ್ಯದ ಒಟ್ಟು 143 ಕ್ಷೇತ್ರಗಳಿಗೆ 2 ಹಂತದಲ್ಲಿ ಟಿಕೆಟ್ ಘೋಷಿಸಿರುವ ಜೆಡಿಎಸ್ ಉಳಿದ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹುಡುಕಾಟದಲ್ಲಿದೆ.

suddiyaana