ಸೆಲ್ಫಿ ತೆಗೆದುಕೊಳ್ಳಲು ಬಂದ ವ್ಯಕ್ತಿಯನ್ನ ಜೋರಾಗಿ ತಳ್ಳಿದ ಜಯಾ ಬಚ್ಚನ್‌!

ಸೆಲ್ಫಿ ತೆಗೆದುಕೊಳ್ಳಲು ಬಂದ ವ್ಯಕ್ತಿಯನ್ನ ಜೋರಾಗಿ ತಳ್ಳಿದ ಜಯಾ ಬಚ್ಚನ್‌!

ಬಾಲಿವುಡ್ ಹಿರಿಯ ನಟಿ ಮತ್ತು ಸಮಾಜವಾದಿ ಪಕ್ಷದ ರಾಜ್ಯಸಭೆ ಸಂಸದೆ ಜಯಾ ಬಚ್ಚನ್‌ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರ್ತಾರೆ. ಇದೀಗ ಜಯಾ ಬಚ್ಚನ್‌ ಸೆಲ್ಫಿ ತೆಗೆದುಕೊಳ್ಳಲು ಬಂದ ವ್ಯಕ್ತಿಯನ್ನ ದೂರಕ್ಕೆ ತಳ್ಳಿದ್ದಾರೆ. ಇದ್ರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಸಂಸದೆ ವಿರುದ್ಧ ಅನೇಕರು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಏಷ್ಯಾಕಪ್ ನಲ್ಲಿ ಭಾರತ-ಪಾಕಿಸ್ತಾನ ಫೈನಲ್ ಆಡೇ ಇಲ್ಲ – ಟೂರ್ನಿಯಲ್ಲಿ ಯಶಸ್ವೀ ತಂಡ ಇಂಡಿಯಾ!

ಜಯಾ ಬಚ್ಚನ್‌ ಇಂದು ಮಧ್ಯಾಹ್ನ ದೆಹಲಿಯ ಸಂವಿಧಾನ ಕ್ಲಬ್‌ನಲ್ಲಿ ಗಣ್ಯರೊಂದಿಗೆ ಸಂವಾದ ನಡೆಸುತ್ತಿದ್ರು. ಈ ವೇಳೆ ಸಂಸದೆಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ವ್ಯಕ್ತಿಯೊಬ್ಬರು ಪ್ರಯತ್ನಿಸಿದ್ದಾರೆ. ಈ ವೇಳೆ ತಾಳ್ಮೆ ಕಳೆದುಕೊಂಡ ಜಯಾಬಚ್ಚನ್‌ ಆ ವ್ಯಕ್ತಿಗೆ ಗದರಿಸಿ, ಜೋರಾಗಿ ತಳ್ಳಿದ್ದಾರೆ.

ಇದೀಗ ಜಯಾ ಬಚ್ಚನ್‌ ವ್ಯಕ್ತಿಯನ್ನ ಹಿಡಿದು ತಳ್ಳಿದ 32 ಸೆಕೆಂಡುಗಳ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಜಯಾಬಚ್ಚನ್‌ ಅವರ ನಡೆ ಬಗ್ಗೆ ಪರ ವಿರೋಧ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಅನುಮತಿಯಿಲ್ಲದೇ ಏಕೆ ಸೆಲ್ಫಿ ಕ್ಲಿಕ್ಕಿಸಬೇಕು? ಅಂತ ಕೇಳಿದ್ರೆ, ಇನ್ನೂ ಕೆಲವರು ಇದು ದುರಹಂಕಾರಿ ನಡವಳಿಕೆ ಎಂದಿದ್ದಾರೆ. ಮತ್ತೊಬ್ಬರು ಜನರಿಗಾಗಿ ಹೋರಾಡುತ್ತೇನೆ ಅನ್ನುವವರು ಮತ್ತೊಬ್ಬ ವ್ಯಕ್ತಿಯನ್ನ ಹೀಗೆ ತಳ್ಳೋದು ಸರಿಯೇ? ಅಂತ ಪ್ರಶ್ನೆ ಮಾಡಿದ್ದಾರೆ.

Shwetha M