‘ಜವಾನ್’ ಸಿನಿಮಾದಲ್ಲಿ ಟ್ರೈಲರ್ ರಿಲೀಸ್ – ಶಾರುಖ್ ಖಾನ್ ನಾನಾ ರೂಪ ನೋಡಿ ತಲೆಕೆಡಿಸಿಕೊಂಡ ಫ್ಯಾನ್ಸ್

‘ಜವಾನ್’ ಸಿನಿಮಾದಲ್ಲಿ ಟ್ರೈಲರ್ ರಿಲೀಸ್ –  ಶಾರುಖ್ ಖಾನ್ ನಾನಾ ರೂಪ ನೋಡಿ ತಲೆಕೆಡಿಸಿಕೊಂಡ ಫ್ಯಾನ್ಸ್

ಬಾಲಿವುಡ್ ಕಿಂಗ್‌ಖಾನ್ ಶಾರುಖ್ ಖಾನ್ ಬಹುನಿರೀಕ್ಷೆಯ ಜವಾನ್ ಸಿನಿಮಾ ಟ್ರೈಲರ್ ರಿಲೀಸ್ ಆಗಿದೆ. ಹಿಂದೆಂದೂ ನೋಡಿರದ ಶಾರುಖ್ ಖಾನ್ ಗೆಟಪ್ ಜವಾನ್ ಟ್ರೈಲರ್‌ನಲ್ಲಿ ರಿವೀಲ್ ಆಗಿದೆ. ಜವಾನ್ ಸಿನಿಮಾದಲ್ಲಿ ಶಾರುಖ್ ಖಾನ್ ಪಾತ್ರ ಏನು ಅನ್ನೋ ಕುತೂಹಲ ಟ್ರೈಲರ್‌ನಲ್ಲಿದೆ.

ಇದನ್ನೂ ಓದಿ: ಶಾರುಖ್ ಖಾನ್ ಮನೆ ಮುಂದೆ ಭಾರಿ ಪ್ರತಿಭಟನೆ – ನಟನ ಮನೆಗೆ ಪೊಲೀಸರಿಂದ ಹೆಚ್ಚಿನ ಭದ್ರತೆ

ಟ್ರೈಲರ್ ಮೂಲಕವೇ ಸಿನಿರಸಿಕರನ್ನು ಸೆಳೆಯಬಲ್ಲ ನಿರ್ದೇಶಕ ಅಟ್ಲಿ ಜವಾನ್ ಸಿನಿಮಾ ಟ್ರೈಲರ್ ಮೂಲಕ ಮತ್ತೊಮ್ಮೆ ಪ್ರೇಕ್ಷಕರಲ್ಲಿ ಸಿನಿಮಾ ಬಗ್ಗೆ ಕುತೂಹಲ ಕೆರಳಿಸಿದ್ದಾರೆ. ಟ್ರೈಲರ್‌ ನೋಡಿದರೆ ಜವಾನ್ ಸಿನಿಮಾದಲ್ಲಿ ಶಾರುಖ್ ಖಾನ್‌ಗೆ ಡಬಲ್ ರೋಲ್ ಇರಬಹುದು ಅಂತಾ ಅನಿಸದೆ ಇರಲ್ಲ. ಯಾಕೆಂದರೆ ಇಲ್ಲಿ ಶಾರುಖ್ ಖಾನ್ ನಾನಾ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಯೋಧನಾಗಿ ಕಾಣಿಸಿಕೊಳ್ಳುವ ಶಾರುಖ್ ಖಾನ್ ನಂತರ ಸೇಡು ತೀರಿಸಿಕೊಳ್ಳುವ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತಾರೆ. ಮೆಟ್ರೋ ಹೈಜಾಕ್ ಮಾಡುವ ಜವಾನ್ ನ ಮತ್ತೊಂದು ಮುಖ ಕೂಡಾ ಟ್ರೈಲರ್‌ನಲ್ಲಿ ಕಾಣಿಸಿದೆ. ಯೋಧನಾಗಿ ಕಾಣಿಸಿಕೊಂಡಿರುವ ದೃಶ್ಯ ಟ್ರೈಲರ್‌ನಲ್ಲಿ ರಿವೀಲ್ ಆಗಿದ್ದು, ‘ನಾವು ಯೋಧರು, ದೇಶಕ್ಕಾಗಿ ಒಂದು ಬಾರಿಯಲ್ಲ ಹಲವು ಬಾರಿ ಸಾಯುತ್ತೇವೆ’ ಎಂಬ ಡೈಲಾಗ್ ಈಗಾಗಲೇ ವೈರಲ್ ಆಗಿದೆ.

ಈ ಚಿತ್ರದ ಸೆಂಟರ್ ಆಫ್ ಅಟ್ರಾಕ್ಷನ್ ಅಂದರೆ ವಿಜಯ್ ಸೇತುಪತಿ. ವೆಪನ್‌ ಸರಬರಾಜು ಮಾಡುವ ಖಳನಾಯಕನಾಗಿ ಕಾಣಿಸಿಕೊಂಡಿರುವ ವಿಜಯ್ ಸೇತುಪತಿ ಕೂಡಾ ನಾನಾ ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ. ವಿಜಯ್ ಸೇತುಪತಿ ಕೂಡಾ ಯಂಗ್ ಆಗಿ ಹಾಗೂ ವೃದ್ಧನಾಗಿಯೂ ಸಿನಿಮಾದಲ್ಲಿ ಡಿಫರೆಂಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೈಲರ್‌ನಲ್ಲಿ ದೀಪಿಕಾ ಪಡುಕೋಣೆ,  ಶಾರುಖ್ ಖಾನ್‌ ಅವರನ್ನು ಸೋಲಿಸುವ ದೃಶ್ಯವಿದೆ. ಸಮಾಜದಲ್ಲಿನ ತಪ್ಪುಗಳನ್ನು ಸರಿಪಡಿಸಲು ಸಿದ್ಧವಾಗಿರುವ ವ್ಯಕ್ತಿಯೊಬ್ಬನ ಎಮೋಷನಲ್ ಜರ್ನಿಯು ಜವಾನ್ ಸಿನಿಮಾದಲ್ಲಿದೆ. ಅನಿರುದ್ಧ ರವಿಚಂದರ್ ಸಂಗೀತ ಸಂಯೋಜನೆಗೆ ಈಗಾಗಲೇ ಪ್ರೇಕ್ಷಕರಿಂದ ಫುಲ್ ಮಾರ್ಕ್ಸ್ ಸಿಕ್ಕಿದೆ.

ಸೆಪ್ಟೆಂಬರ್ 7ರಂದು ವಿಶ್ವದಾದ್ಯಂತ ಜವಾನ್ ಸಿನಿಮಾ ರಿಲೀಸ್ ಆಗಲಿದೆ.

suddiyaana