ಸಾವಿರ ಕೋಟಿ ಕ್ಲಬ್ ಸೇರಿದ ಜವಾನ್ ಸಿನಿಮಾ ಕಲೆಕ್ಷನ್ – ಸಕ್ಸಸ್ ಖುಷಿಯಲ್ಲಿ ಮತ್ತೊಂದು ಗುಡ್ ನ್ಯೂಸ್ ನೀಡಿದ ನಿರ್ದೇಶಕ

ಸಾವಿರ ಕೋಟಿ ಕ್ಲಬ್ ಸೇರಿದ ಜವಾನ್ ಸಿನಿಮಾ ಕಲೆಕ್ಷನ್ – ಸಕ್ಸಸ್ ಖುಷಿಯಲ್ಲಿ ಮತ್ತೊಂದು ಗುಡ್ ನ್ಯೂಸ್ ನೀಡಿದ ನಿರ್ದೇಶಕ

ಕಿಂಗ್ ಖಾನ್ ಶಾರುಖ್ ಖಾನ್ ಅಭಿನಯದ ‘ಜವಾನ್’ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಇದೀಗ ಮತ್ತೊಂದು ದಾಖಲೆ ಬರೆದಿದ್ದು, ಸ್ವತಃ ನಿರ್ಮಾಣ ಸಂಸ್ಥೆಯೇ ಘೋಷಿಸಿದಂತೆ 1004.92 ಕೋಟಿ ರೂಪಾಯಿ ಕಮಾಯಿ ಮಾಡಿದೆ. ಈ ಮೂಲಕ ಅತೀ ವೇಗದಲ್ಲಿ ಸಾವಿರ ಕೋಟಿ ಕ್ಲಬ್ ಸೇರಿದ ಚಿತ್ರ ಎನ್ನುವ ದಾಖಲೆಗೂ ಕಾರಣವಾಗಿದೆ. ಭಾರತದಲ್ಲೇ 563 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದರೆ, ವಿಶ್ವದಾದ್ಯಂತ 1,004.92 ಕೋಟಿ ರೂಪಾಯಿ ಸಂಪಾದನೆ ಮಾಡಿದೆ.

ಇದನ್ನೂ ಓದಿ : ಬಿಡುಗಡೆಗೂ ಮುನ್ನವೇ ದಳಪತಿ ವಿಜಯ್ ಸಿನಿಮಾಗೆ ಆತಂಕ – ಕೇರಳದಲ್ಲಿ ಜೋರಾಯ್ತು ಲಿಯೋ ಬಾಯ್ಕಾಟ್ ಟ್ರೆಂಡ್!

ಜವಾನ್ ಸಿನಿಮಾ ಸಕ್ಸಸ್ ಬೆನ್ನಲ್ಲೇ ಸಿನಿಮಾ ನಿರ್ದೇಶಕ ಅಟ್ಲಿ (Atli) ತಮ್ಮ ಅಭಿಮಾನಿಗಳಿಗೆ ಭರ್ಜರಿ ಸುದ್ದಿಯೊಂದನ್ನು ನೀಡಿದ್ದಾರೆ. ‘ಜವಾನ್’ ಯಶಸ್ಸಿನ ಬೆನ್ನಲ್ಲೇ ಅವರು ‘ಜವಾನ್ 2’ (Jawan 2) ಸಿನಿಮಾ ಮಾಡಲು ಮುಂದಾಗಿದ್ದು, ಇದರ ಜೊತೆಗೆ ಶಾರುಖ್ ಖಾನ್ (Shahrukh Khan) ಅಭಿಮಾನಿಗಳಿಗೆ ಮತ್ತೊಂದು ಸರ್ ಪ್ರೈಸ್ ನೀಡಿದ್ದಾರೆ. ಜವಾನ್ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಸಾವಿರಾರು ಕೋಟಿ ಬ್ಯುಸಿನೆಸ್ ಮಾಡಿದೆ. ಈ ಖುಷಿಯಲ್ಲೇ ಅಟ್ಲಿ ಜವಾನ್ 2 ಸಿನಿಮಾ ಘೋಷಣೆ ಮಾಡಿದ್ದಾರೆ. ಜೊತೆಗೆ ಶಾರುಖ್ ಖಾನ್ ಮತ್ತು ವಿಜಯ್ ಕಾಂಬಿನೇಷನ್ ನಲ್ಲಿ ಮತ್ತೊಂದು ಸಿನಿಮಾ ಮಾಡುವ ಆಲೋಚನೆಯನ್ನೂ ಅವರು ಹೇಳಿಕೊಂಡಿದ್ದಾರೆ. ಜವಾನ್ 2 ಸಿನಿಮಾದಲ್ಲಿ ವಿಕ್ರಮ್ ರಾಥೋಡ್ ಪಾತ್ರದ ಮೇಲೆ ಹೆಚ್ಚು ಫೋಕಸ್ ಮಾಡಲಾಗುವುದು ಮತ್ತು ಈ ಸಿನಿಮಾ ಇನ್ನೂ ವಿಶೇಷವಾಗಿ ಇರುತ್ತದೆ ಎಂದು ಹೇಳಿಕೊಂಡಿದ್ದಾರೆ ಅಟ್ಲಿ. ಜವಾನ್ ಸಿನಿಮಾ ಭಾರೀ ಗೆಲುವು ಸಾಧಿಸುತ್ತಿದ್ದಂತೆಯೇ ಬಾಲಿವುಡ್ ನಲ್ಲೂ ಅಟ್ಲಿ ಅವರಿಗೆ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ.

Shantha Kumari