ಈ ಗ್ರಾಮದಲ್ಲಿ ಪಕ್ಷಿಗಳೂ ಆತ್ಮಹತ್ಯೆ ಮಾಡಿಕೊಳ್ಳುತ್ತವೆ – ಹಿಂಡು ಹಿಂಡು ಪಕ್ಷಿಗಳನ್ನು ಕೊಲ್ಲುತ್ತಿವೆಯಾ ಆತ್ಮಗಳು..?
ಮನುಷ್ಯರು ಆತ್ಮಹತ್ಯೆ ಮಾಡಿಕೊಳ್ಳೋದನ್ನ ಕೇಳಿದ್ದೇವೆ. ಆದರೆ ಈ ಗ್ರಾಮದಲ್ಲಿ ಪಕ್ಷಿಗಳೂ ಸೂಸೈಡ್ ಮಾಡಿಕೊಳ್ಳುತ್ತವೆ. ಭಾರತದ ಅಸ್ಸಾಂ ರಾಜ್ಯದ ಪರ್ವತದ ಮೇಲೊಂದು ಜತಿಂಗ ಅನ್ನೋ ಪುಟ್ಟ ಹಳ್ಳಿ ಇದೆ. ಇದೊಂದು ಸಣ್ಣ ಬುಡಕಟ್ಟು ಗ್ರಾಮ. ಇದೇ ಊರಲ್ಲಿ ಪಕ್ಷಿಗಳು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುತ್ತವೆ ಎಂದು ನಂಬಲಾಗಿದೆ.
ಇದನ್ನೂ ಓದಿ : 1 ಕೆಜಿ ಮಶ್ರೂಮ್ ಬೆಲೆಗೆ ಕಾರು ಕೊಳ್ಳಬಹುದು – ವಿಶ್ವದ ದುಬಾರಿ ಅಣಬೆ ಯಾವುದು ಗೊತ್ತಾ?
ವಿವಿಧ ಜಾತಿಯ ಪಕ್ಷಿಗಳು ಆಗಸ್ಟ್ ಮತ್ತು ನವೆಂಬರ್ ತಿಂಗಳಲ್ಲಿ ನಿಗೂಢವಾಗಿ ಸಾಯುತ್ತವೆ. ಅಮಾವಾಸ್ಯೆಯ ದಿನವೇ ಈ ವಿಚಿತ್ರ ಘಟನೆ ನಡೆಯುತ್ತೆ. ಇಲ್ಲಿನ ಆದಿವಾಸಿಗಳು ಪಕ್ಷಿಗಳನ್ನ ಆತ್ಮಗಳು ಕೊಲ್ಲುತ್ತವೆ ಎಂದು ನಂಬಿದ್ದಾರೆ. ಈ ಬಗ್ಗೆ ಹಲವು ವರ್ಷಗಳ ಸುದೀರ್ಘ ಅಧ್ಯಯನಗಳು ನಡೆದಿದ್ದು, ಪಕ್ಷಿ ಆತ್ಮಹತ್ಯೆ ಸಿದ್ಧಾಂತವನ್ನು ಪಕ್ಷಿ ವಿಜ್ಞಾನಿಗಳು ತಳ್ಳಿಹಾಕಿದ್ದಾರೆ. ಹಳ್ಳಿಯ ಜನರು ಪಕ್ಷಿಗಳನ್ನ ತಿನ್ನಲು ಅವುಗಳನ್ನ ಸಾಮೂಹಿಕವಾಗಿ ಕೊಲ್ಲುತ್ತಾರೆ. ಕೃತಕ ದೀಪಗಳನ್ನು ಬಳಸಿ ಪಕ್ಷಿಗಳನ್ನು ಆಕರ್ಷಿಸುತ್ತಾರೆ. ನಂತರ ಬಿದಿರಿನ ಕೋಲುಗಳನ್ನು ಬಳಸಿ ಅವುಗಳನ್ನು ಕೊಲ್ಲುತ್ತಾರೆ ಎಂದಿದ್ದಾರೆ. ಆದ್ರೆ ಇಲ್ಲಿನ ಸ್ಥಳೀಯರು ಮಾತ್ರ ಇದನ್ನ ಒಪ್ಪೋಕೆ ರೆಡಿ ಇಲ್ಲ. ಇದು ಪಕ್ಷಿಗಳ ಆತ್ಮಹತ್ಯೆ ಎಂದೇ ವಾದಿಸುತ್ತಾರೆ.