ವಿಶ್ವದ ನಂ.1 ಬೌಲರ್ ಜಸ್ಪ್ರೀತ್ ಬುಮ್ರಾ.. ವೇಗದ ಬೌಲರ್ ಎಷ್ಟು ಕೋಟಿಯ ಒಡೆಯ ಗೊತ್ತಾ?
ಜಸ್ಪ್ರೀತ್ ಬುಮ್ರಾ.. ಭಾರತೀಯ ಕ್ರಿಕೆಟ್ ಪ್ರೇಮಿಗಳ ಹಾಟ್ ಫೇವರೇಟ್ ವೇಗದ ಬೌಲರ್… ಬೂಮ್ ಬೂಮ್ ಬೂಮ್ರಾ ಎಂದು ಅಭಿಮಾನಿಗಳ ಬಾಯಲ್ಲಿ ಕರೆಸಿಕೊಳ್ಳುವ ಬೂಮ್ರ ಎದುರಾಳಿ ಬ್ಯಾಟ್ಸ್ಮನ್ಗಳ ಎದೆಯಲ್ಲಿ ನಡುಕ ಹುಟ್ಟಿಸಬಲ್ಲ ಬೌಲರ್.. ಕ್ರಿಕೆಟ್ ನಲ್ಲಿ ಸಾಧನೆ ಮಾಡ್ತಾ ಇರೋ ಬೂಮ್ರಾ ಗಳಿಕೆಯಲ್ಲೂ ಹಿಂದೆ ಬಿದ್ದಿಲ್ಲ. ಒಂದು ಕಾಲದಲ್ಲಿ ಬ್ರೂಮ್ರಾ ಬಳಿ ಶೂ ಖರೀದಿ ಮಾಡಲು ಕೂಡ ದುಡ್ಡಿರ್ಲಿಲ್ಲ.. ಆದ್ರೆ ಈಗ ಕೋಟಿಗಳ ಒಡೆಯ.
ಇದನ್ನೂ ಓದಿ: ವಿಕಸಿತ ಭಾರತಕ್ಕಾಗಿ ಎನ್ಡಿಎ ಅಭ್ಯರ್ಥಿಗಳನ್ನು ಬೆಂಬಲಿಸಿ – ಪ್ರಧಾನಿ ಮೋದಿ
ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿಯುವ ಯಾರ್ಕರ್ ಕಿಂಗ್, 2013ರಲ್ಲಿ ಶ್ರೀಮಂತ ಲೀಗ್ ಗೆ ಪದಾರ್ಪಣೆ ಮಾಡಿದ್ದರು. ಮೊದಲು ಮುಂಬೈ ಇಂಡಿಯನ್ಸ್ಗೆ ನೆಟ್ಸ್ನಲ್ಲಿ ಬೌಲಿಂಗ್ ಮಾಡ್ತಿದ್ದ ಬುಮ್ರಾ ಪ್ರತಿಭೆಯನ್ನು ಸಚಿನ್ ತೆಂಡುಲ್ಕರ್ ಗುರುತಿಸಿ, ತಂಡದಲ್ಲಿ ಸ್ಥಾನ ಕೊಟ್ಟಿದ್ದರು.. ಅಂದು 10 ಲಕ್ಷ ರುಪಾಯಿ ಸಂಭಾವನೆ ಪಡೆಯುತ್ತಿದ್ದ ಬುಮ್ರಾ ಇಂದು 12 ಕೋಟಿ ಪಡೆಯುತ್ತಿದ್ದಾರೆ. 2018ರಲ್ಲಿ ತನ್ನ ಸಂಬಳವನ್ನು 7 ಕೋಟಿಗೆ ಏರಿಸಿಕೊಂಡರು. ಇದೀಗ ಅವರ ವೇತನದಲ್ಲಿ ಮತ್ತಷ್ಟು ಏರಿಕೆ ಕಂಡಿದೆ. 2013 ರಿಂದ 2023ರ ನಡುವೆ ಐಪಿಎಲ್ ನಿಂದಲೇ 56 ಕೋಟಿಗೂ ಹೆಚ್ಚಿನ ಆದಾಯ ಗಳಿಸಿದ್ದಾರೆ. ಐಪಿಎಲ್ ನಲ್ಲಿ ಪ್ರತಿ ಸೀಸನ್ ಗೆ 12 ಕೋಟಿ ಪಡೆದರೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಜೊತೆಗಿನ ವಾರ್ಷಿಕ ಒಪ್ಪಂದದಲ್ಲಿ ಈ ವೇಗದ ಬೌಲರ್ 7 ಕೋಟಿ ವೇತನ ಪಡೆಯುವ ಮೂವರು ಕ್ರಿಕೆಟಿಗರಲ್ಲಿ ಒಬ್ಬರು. ಇಷ್ಟೇ ಅಲ್ಲದೆ, ಭಾರತ ತಂಡದ ಪರ ಕಣಕ್ಕಿಳಿಯುವ ಟೆಸ್ಟ್, ಏಕದಿನ ಮತ್ತು ಟಿ20 ಪಂದ್ಯಗಲ್ಲಿ ಕ್ರಮವಾಗಿ 15 ಲಕ್ಷ, 7 ಲಕ್ಷ, 3 ಲಕ್ಷ ರೂಪಾಯಿಯನ್ನು ಪಂದ್ಯ ಶುಲ್ಕವಾಗಿ ಪಡೆದುಕೊಳ್ಳುತ್ತಾರೆ.
ಹಾಗೆಯೇ ಜಾಹೀರಾತು ಮೂಲಕವೂ ದೊಡ್ಡ ಮೊತ್ತದ ಆದಾಯ ಗಳಿಸುತ್ತಿದ್ದಾರೆ. ಸದ್ಯ ಬುಮ್ರಾ 14 ಕಂಪನಿಗಳ ರಾಯಭಾರಿಯಾಗಿದ್ದು, ಒಂದು ದಿನದ ಕಾಲ್ ಶೀಟ್ ಗೆ ಬುಮ್ರಾ 1.5 ರಿಂದ 2 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ ಎಂದು ವರದಿಗಳು ಹೇಳುತ್ತಿವೆ. ಹುಟ್ಟಿ ಬೆಳೆದ ಗುಜರಾತ್ ನ ಅಹ್ಮದಾಬಾದ್ನಲ್ಲಿ 3 ಕೋಟಿ ಬೆಲೆ ಬಾಳುವ ಐಷರಾಮಿ ಮನೆ ಹೊಂದಿರುವ ಬುಮ್ರಾ, ಮುಂಬೈನಲ್ಲಿ 2 ಕೋಟಿಯ ಮನೆಯನ್ನು ಹೊಂದಿದ್ದಾರೆ ಎಂಬುದು ವಿಶೇಷ.