ಜಸ್ಪ್ರೀತ್ ಬುಮ್ರಾ ಆಡದಿದ್ರೆ CUP ಗೆಲ್ಲಲ್ಲ – ಚಾಂಪಿಯನ್ಸ್ ಟ್ರೋಫಿ ಆಸೆ ಕಮರಿತಾ?

ಜಸ್ಪ್ರೀತ್ ಬುಮ್ರಾ ಆಡದಿದ್ರೆ CUP ಗೆಲ್ಲಲ್ಲ – ಚಾಂಪಿಯನ್ಸ್ ಟ್ರೋಫಿ ಆಸೆ ಕಮರಿತಾ?

ಫೆಬ್ರವರಿ 19ರಿಂದ ಶುರುವಾಗಲಿರುವ ಚಾಂಪಿಯನ್ಸ್ ಟ್ರೋಫಿ ಮೇಲೆ ಎಲ್ಲರು ಕಣ್ಣಿಟ್ಟಿದ್ದಾರೆ. ರೋಹಿತ್ ಶರ್ಮಾ ನೇತೃತ್ವದಲ್ಲಿ ಭಾರತ ತಂಡ ಐಸಿಸಿ 2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಅಬ್ಬರಿಸಲು ಸಜ್ಜಾಗಿದೆ. 15 ಜನರ ತಂಡವನ್ನ ಅನೌನ್ಸ್ ಮಾಡಿದ್ರೂ ಕೂಡ ಬಿಸಿಸಿಐಗೆ ಜಸ್ಪ್ರೀತ್ ಬುಮ್ರಾರದ್ದೇ ಟೆನ್ಷನ್ ಕಾಡ್ತಿದೆ. ಒಂದ್ಕಡೆ ಟಾಪ್ ಆರ್ಡರ್ ಬ್ಯಾಟರ್ಸ್ ಕಳಪೆ ಫಾರ್ಮ್​ನಲ್ಲಿದ್ದಾರೆ. ಮತ್ತೊಂದೆಡೆ ಬೌಲಿಂಗ್ ಬ್ರಹ್ಮಾಸ್ತ್ರವಾಗಿರುವಂತ ಜಸ್ಪ್ರೀತ್ ಬುಮ್ರಾ ಬೆನ್ನುನೋವಿನ ಸಮಸ್ಯೆಯಿಂದ ಬಳಲ್ತಿದ್ದು ಇನ್ನೂ ಕಂಪ್ಲೀಟ್ ಫಿಟ್ ಆಗಿಲ್ಲ. ಜಸ್ಪ್ರೀತ್ ಬುಮ್ರಾ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾ ಪರ ಆಡದಿದ್ರೆ ಅದೆಷ್ಟರ ಮಟ್ಟಿಗೆ ಎಫೆಕ್ಟ್ ಆಗುತ್ತೆ ಅನ್ನೋದನ್ನ ಟೀಮ್ ಇಂಡಿಯಾ ಮಾಜಿ ಹೆಡ್‌ಕೋಚ್ ರವಿಶಾಸ್ತ್ರಿ ಎಕ್ಸ್​ಪ್ಲೇನ್ ಮಾಡಿದ್ದಾರೆ. ನಿಜಕ್ಕೂ ಅವ್ರ ಪ್ರೆಡಿಕ್ಷನ್ ಕರೆಕ್ಟ್ ಅಂತಾ ಫ್ಯಾನ್ಸ್ ಗೂ ಅನ್ನಿಸಿದೆ.

ಇದನ್ನೂ ಓದಿ : ಅಬ್ಬಾ.. 8 ತಿಂಗಳ ಕುರಿಗೆ ಲಕ್ಷ ಲಕ್ಷ – ಸಖತ್ ಟ್ರೆಂಡ್ ಆಯ್ತು ಬಂಡೂರು ತಳಿ

ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಕಂಪ್ಲೀಟ್ ಫಿಟ್ ಆಗಿಲ್ಲದಿದ್ದರೆ, ಅವರನ್ನು ಚಾಂಪಿಯನ್ಸ್ ಟ್ರೋಫಿಗೆ ಕಣಕ್ಕಿಳಿಸುವಲ್ಲಿ ಆತುರಪಡಬಾರದು ಅಂತಾ ರವಿಶಾಸ್ತ್ರಿ ಎಚ್ಚರಿಸಿದ್ದಾರೆ. ಗಾಯಗೊಂಡಿದ್ದರೂ ಜಸ್‌ಪ್ರೀತ್ ಬುಮ್ರಾ ಅವರನ್ನು ಫೀಲ್ಡಿಂಗ್ ಮಾಡುವುದು ತುಂಬಾನೇ ಡೇಂಜರಸ್. ಬಟ್ ಜಸ್ಪ್ರೀತ್ ಬುಮ್ರಾ ಆಡಲು ಸಾಧ್ಯವಾಗದಿದ್ದರೆ, ಭಾರತ ಚಾಂಪಿಯನ್ಸ್ ಟ್ರೋಫಿ ಗೆಲ್ಲುವ ಸಾಧ್ಯತೆಗಳು 30-35% ರಷ್ಟು ಕಡಿಮೆಯಾಗಬಹುದು. ಜಸ್ಪ್ರೀತ್ ಬುಮ್ರಾ ಅವರನ್ನು ಮೈದಾನಕ್ಕೆ ಕರೆತರಲು ಅರ್ಜೆನ್ಸಿ ಮಾಡಿದ್ರೆ  ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು. ಇದು ತುಂಬಾ ಅಪಾಯಕಾರಿ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

ಚಾಂಪಿಯನ್ಸ್ ಟ್ರೋಫಿಗೆ ಬುಮ್ರಾ ಆಡುವುದು ಎಷ್ಟು ಇಂಪಾರ್ಟೆಂಟ್ ಅನ್ನೋದನ್ನ ರವಿಶಾಸ್ತ್ರಿ ಹೇಳಿದ್ದಾರೆ. ಜಸ್ಪ್ರೀತ್ ಬುಮ್ರಾ ಫಿಟ್ ಆಗಿಲ್ಲದಿದ್ದರೆ ಭಾರತ ಚಾಂಪಿಯನ್ಸ್ ಟ್ರೋಫಿ ಗೆಲ್ಲುವ ಸಾಧ್ಯತೆ ಶೇ. 30 ರಷ್ಟು ಕಡಿಮೆಯಾಗುತ್ತದೆ. ಸಂಪೂರ್ಣವಾಗಿ ಫಿಟ್ ಆಗಿರುವ ಜಸ್ಪ್ರೀತ್ ಬುಮ್ರಾ ಆಡುವುದರಿಂದ, ಡೆತ್ ಓವರ್‌ಗಳಲ್ಲಿ ಗೆಲುವು ಖಚಿತ. ಬುಮ್ರಾ ಇದ್ರೆ ಪಂದ್ಯದ ದಿಕ್ಕೇ ಬದಲಾಗುತ್ತೆ. ಇಲ್ಲದೇ ಇದ್ರೆ ಭಾರತ ತಂಡದ ಮೇಲೆ ಯಾವುದೇ ಹೋಪ್ಸ್ ಇಟ್ಟುಕೊಳ್ಳೋಕೆ ಆಲ್ಲ ಎಂದಿದ್ದಾರೆ. ಯಾಕಂದ್ರೆ 2024 ರಲ್ಲಿ ಅದ್ಭುತ ಪ್ರದರ್ಶನ ನೀಡಿದ ಜಸ್ಪ್ರೀತ್ ಬುಮ್ರಾ ಇತ್ತೀಚೆಗೆ ಐಸಿಸಿ ವರ್ಷದ ಪುರುಷರ ಕ್ರಿಕೆಟಿಗ ಮತ್ತು ಐಸಿಸಿ ವರ್ಷದ ಪುರುಷರ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

2024ರಲ್ಲಿ ಭಾರತ ಟಿ-20 ವಿಶ್ವಕಪ್ ಗೆದ್ದಿತ್ತು. ಭಾರತದ ಟಿ20 ವಿಶ್ವಕಪ್ ಗೆಲುವಿನಲ್ಲಿ ಜಸ್ಪ್ರೀತ್ ಬುಮ್ರಾ ಪ್ರಮುಖ ಪಾತ್ರ ವಹಿಸಿದ್ದರು. ಎಲ್ಲಾ ಸ್ವರೂಪಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಜನವರಿ 2025 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸಿಡ್ನಿ ಟೆಸ್ಟ್ ಪಂದ್ಯದ ಸಮಯದಲ್ಲಿ ಬೆನ್ನು ನೋವು ಕಾಣಿಸಿಕೊಂಡ ಕಾರಣ ಅವರನ್ನು ತಂಡದಿಂದ ಹೊರಗಿಡಲಾಯಿತು. ಇದೀಗ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಜಸ್ಪ್ರೀತ್ ಬುಮ್ರಾ ಅವರ ಫಿಟ್ನೆಸ್ ಆತಂಕ ತಂದಿಟ್ಟಿದೆ. ಐಸಿಸಿ ಟೂರ್ನಿಗೆ ಇನ್ನು 2 ವಾರಗಳೂ ಇಲ್ಲದೇ ಇರೋದ್ರಿಂದ ಕಮ್ ಬ್ಯಾಕ್ ಮಾಡ್ತಾರೋ ಇಲ್ವೋ ಹೇಳೋಕಾಗಲ್ಲ.

Shantha Kumari

Leave a Reply

Your email address will not be published. Required fields are marked *