MI ಕ್ಯಾಪ್ಟನ್ಸಿಯಲ್ಲಿ ನಾಲ್ವರ ಭವಿಷ್ಯ‌ – ರೋಹಿತ್ Vs ಪಾಂಡ್ಯ.. ನಾಯಕನ್ಯಾರು?
ಕ್ಯಾಪ್ಟನ್ ಆಫರ್​.. RCBಗೆ ಬುಮ್ರಾ?

MI ಕ್ಯಾಪ್ಟನ್ಸಿಯಲ್ಲಿ ನಾಲ್ವರ ಭವಿಷ್ಯ‌ – ರೋಹಿತ್ Vs ಪಾಂಡ್ಯ.. ನಾಯಕನ್ಯಾರು?ಕ್ಯಾಪ್ಟನ್ ಆಫರ್​.. RCBಗೆ ಬುಮ್ರಾ?

ಐಪಿಎಲ್ ಫ್ರಾಂಚೈಸಿಗಳ ಪೈಕಿ ಮುಂಬೈ ಇಂಡಿಯನ್ಸ್ ಒನ್ ಆಫ್ ದಿ ಮೋಸ್ಟ್ ಸಕ್ಸಸ್ ಫುಲ್ ಟೀಂ. ಐಪಿಎಲ್ ಇತಿಹಾಸದಲ್ಲಿ ಬರೋಬ್ಬರಿ ಐದು ಬಾರಿ ಟ್ರೋಫಿ ಗೆದ್ದಿರೋ ತಂಡ. ಬಟ್ 2024ರ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಮುಂಬೈ ತಂಡದಲ್ಲಿ ಅಲ್ಲೋಲ ಕಲ್ಲೋಲವೇ ಆಗಿತ್ತು. ಹೊಸ ಕ್ಯಾಪ್ಟನ್ ಎಂಟ್ರಿ, ತಂಡದಲ್ಲಿ ಮಿಸ್ ಅಂಡರ್ ಸ್ಟಾಂಡಿಂಗ್ಸ್, ಡ್ರೆಸ್ಸಿಂಗ್ ರೂಮ್​ನಲ್ಲಿ ಕೋಲ್ಡ್ ವಾರ್, ತಂಡದ ಫ್ಲ್ಯಾಪ್ ಶೋ ಹೀಗೆ ಮುಂಬೈ ತಂಡ ಹಿಂದೆಂದಿಗಿಂತಲೂ ಕೆಟ್ಟ ಪರ್ಫಾಮೆನ್ಸ್ ನೀಡಿತ್ತು. ಬಟ್ 2025ಕ್ಕೆ ಮತ್ತೆ ಬಲಿಷ್ಠ ತಂಡವಾಗಿ ಕಣಕ್ಕಿಳಿಯೋಕೆ ನೀತಾ ಅಂಬಾನಿ ಬ್ರಿಗೇಡ್ ತಂತ್ರ ರೂಪಿಸಿದೆ. ಆದ್ರೆ ಅದು ಅಷ್ಟು ಸುಲಭ ಇಲ್ಲ. ಯಾಕಂದ್ರೆ ಕ್ಯಾಪ್ಟನ್ಸಿ ಅದಲು ಬದಲು ಆಟ ಇಡೀ ತಂಡವನ್ನೇ ಛಿದ್ರ ಮಾಡೋ ಆತಂಕ ಇದೆ. ಅದು ಹೇಗೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ನಾಗಚೈತನ್ಯ ಮದುವೆ ಡೇಟ್ ಫಿಕ್ಸ್? – ಶೋಭಿತಾ ಮಧ್ಯೆ ಏಜ್‌ ಗ್ಯಾಪ್‌ ಇಷ್ಟೊಂದಾ?

ನೀತಾ ಅಂಬಾನಿ ಒಡೆತನದ ಮುಂಬೈ ಇಂಡಿಯನ್ಸ್ ತಂಡದಲ್ಲಿ ಸ್ಟಾರ್ ಆಟಗಾರರ ದಂಡೇ ಇದೆ. ಟೀಂ ಇಂಡಿಯಾ ಪರ ಆಡ್ತಿರೋ ಅತೀ ಹೆಚ್ಚು ಕ್ರಿಕೆಟರ್ಸ್ ಹಾಗೇ ಸ್ಟಾರ್ ಪ್ಲೇಯರ್ಸ್ ಇರೋದು ಮುಂಬೈ ಇಂಡಿಯನ್ಸ್ ತಂಡದಲ್ಲೇ. ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಭಾರತದ ಟಿ-20 ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್, ಜಗತ್ತಿನ ಶ್ರೇಷ್ಠ ಬೌಲರ್​ಗಳ ಪೈಕಿ ಟಾಪಲ್ಲಿರೋ ಜಸ್ಪ್ರೀತ್ ಬುಮ್ರಾ, ಭಾರತಕ್ಕೆ ಸದಾ ಆಸರೆಯಾಗುವ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ ಮುಂಬೈ ತಂಡದಲ್ಲೇ ಇದ್ದಾರೆ. ಇನ್ನು ಭಾರತ ತಂಡಕ್ಕೆ ಕಮ್ ಬ್ಯಾಕ್ ಮಾಡೋ ತವಕದಲ್ಲಿರೋ ಇಶಾನ್ ಕಿಶನ್ ಕೂಡ ಎಂಐ ಟೀಮ್​ನ ಸ್ಟಾರ್ ಆಟಗಾರ. ಆದ್ರೆ 2024ರ ಐಪಿಎಲ್ ಟೂರ್ನಿಯಲ್ಲಿ ಫ್ರಾಂಚೈಸಿ ಮಾಡಿದ ಒಂದೇ ಒಂದು ಎಡವಟ್ಟು ಇಡೀ ತಂಡಕ್ಕೇ ಎಫೆಕ್ಟ್ ಆಗುವಂತೆ ಮಾಡಿದೆ. ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್ ಮಾಡಿದ್ದಕ್ಕೆ ಒಡೆದ ಮನೆಯಂತಾಗಿದೆ. ಹೀಗಾಗಿ ಈ ಡ್ಯಾಮೇಜ್ ಕಂಟ್ರೋಲ್​ಗೆ ಫ್ರಾಂಚೈಸಿ ಮುಂದಾಗಿದ್ದು ಕ್ಯಾಪ್ಟನ್ ಬದಲಾವಣೆಗೆ ಮುಂದಾಗಿದೆ. ಬಟ್ ಬದಲಾವಣೆಯೂ ಅಷ್ಟು ಈಸಿ ಇಲ್ಲ.

ಕ್ಯಾಪ್ಟನ್ಸಿಯಿಂದ ಇಳಿಸಿದ್ದಕ್ಕೆ ತಂಡ ಬಿಡ್ತಾರಾ ರೋಹಿತ್ ಶರ್ಮಾ?

ಐಪಿಎಲ್ ಇತಿಹಾಸದಲ್ಲೇ ರೋಹಿತ್ ಶರ್ಮಾ ಯಶಸ್ವಿ ನಾಯಕರಲ್ಲಿ ಒಬ್ರು. 2011ರ ಐಪಿಎಲ್ ಟೂರ್ನಿಯ ಮೆಗಾ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಂಡಿದ್ದ ರೋಹಿತ್ ಶರ್ಮಾ, ಆಟಗಾರ ಹಾಗೂ ನಾಯಕನಾಗಿ ಅತ್ಯದ್ಭುತ ಪ್ರದರ್ಶನ ನೀಡಿದ್ದಾರೆ. ವಿಶ್ವಕಪ್ ವಿಜೇತ ನಾಯಕ ರಿಕಿ ಪಾಂಟಿಂಗ್ ಅವರಿಂದ 2013ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ಕ್ಯಾಪ್ಟನ್ಸಿ ಪಡೆದಿದ್ದ ರೋಹಿತ್ ಶರ್ಮಾ, ತಂಡಕ್ಕೆ ಅತ್ಯಮೋಘ ಯಶಸ್ಸು ತಂದುಕೊಟ್ಟಿದ್ದಾರೆ. ಎಂಐ ತಂಡವನ್ನು 10 ವರ್ಷಗಳ ಕಾಲ ನಾಯಕನಾಗಿ ಮುನ್ನಡೆಸಿದ್ದ ರೋಹಿತ್ ತಮ್ಮ ಚೊಚ್ಚಲ ಕ್ಯಾಪ್ಟನ್ಸಿಯಲ್ಲೇ ಮುಂಬೈ ಫ್ರಾಂಚೈಸಿಗೆ ಟ್ರೋಫಿ ಗೆದ್ದುಕೊಟ್ಟಿದ್ದರು. ಬಳಿಕ 2015, 2017, 2019 ಹಾಗೂ 2020ರಲ್ಲೂ ತಂಡಕ್ಕೆ ಚಾಂಪಿಯನ್ ಪಟ್ಟ ದಕ್ಕಿಸಿಕೊಟ್ಟಿದ್ರು. ಹೀಗಿದ್ರೂ 17ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರೋಹಿತ್ ಶರ್ಮಾರಿಂದ ಕ್ಯಾಪ್ಟನ್ಸಿ ಕಸಿದು ಹಾರ್ದಿಕ್ ಪಾಂಡ್ಯಗೆ ನೀಡಲಾಗಿತ್ತು. ಹೀಗಾಗಿ 2025ರ ಸೀಸನ್​ಗೆ ಬೇರೆ ತಂಡ ಸೇರಲು ರೋಹಿತ್ ಶರ್ಮಾ ನಿರ್ಧಾರ ಮಾಡಿದ್ದಾರೆ. ಆದ್ರೆ ರೋಹಿತ್​ರನ್ನ ತಂಡದಲ್ಲೇ ಉಳಿಸಿಕೊಳ್ಬೇಕು ಅಂತಾ ಅಂಬಾನಿ ಬ್ರಿಗೇಡ್ ಮತ್ತೆ ಕ್ಯಾಪ್ಟನ್ಸಿ ಪಟ್ಟ ಕಟ್ಟಲು ರೆಡಿಯಾಗಿದೆ.

ಪಾಂಡ್ಯನೇ ನಾಯಕನಾಗಿದ್ರೆ ಸೂರ್ಯ & ಬುಮ್ರಾ ಔಟ್!

ಮುಂಬೈ ತಂಡದ ಸ್ಟಾರ್ ಆಟಗಾರರಾದ ಸೂರ್ಯಕುಮಾರ್ ಯಾದವ್ ಮತ್ತು ಜಸ್ಪ್ರೀತ್ ಬುಮ್ರಾಗೂ ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್ಸಿ ಇಷ್ಟ ಇರಲಿಲ್ಲ. ಯಾಕಂದ್ರೆ ಈ ಇಬ್ಬರೂ ಕೂಡ ಮುಂಬೈ ಕ್ಯಾಪ್ಟನ್ಸಿ ಮೇಲೆ ಕಣ್ಣಿಟ್ಟವರು. ರೋಹಿತ್ ಬಳಿಕ ತಮಗೆ ಸಾರಥ್ಯ ಸಿಗುತ್ತೆ ಅನ್ನೋ ನಿರೀಕ್ಷೆಯಲ್ಲಿದ್ರು. ಅದೆಲ್ಲಕ್ಕಿಂತ ಹೆಚ್ಚಾಗಿ ಈ ಇಬ್ಬರು ಆಟಗಾರರಿಗೂ ಪಾಂಡ್ಯ ಕ್ಯಾಪ್ಟನ್ಸಿ ಅಡಿ ಆಡೋಕೆ ಇಷ್ಟ ಇರಲಿಲ್ಲ. ಹೀಗಾಗಿ 2025ಕ್ಕೂ ಪಾಂಡ್ಯ ಕ್ಯಾಪ್ಟನ್ ಆಗಿ ಮುಂದುವರಿದ್ರೆ ಬೇರೆ ಫ್ರಾಂಚೈಸಿ ಸೇರಿಕೊಳ್ಳೋದು ಪಕ್ಕಾ. ಅಷ್ಟೇ ಅಲ್ಲದೆ ಜಸ್ಪ್ರೀತ್ ಬುಮ್ರಾ ನಾಯಕನಾಗಬೇಕು ಅನ್ನೋ ಮಹದಾಸೆ ಇಟ್ಟುಕೊಂಡಿದ್ದಾರೆ. ಸಾಕಷ್ಟು ಸಂದರ್ಶನಗಳಲ್ಲೂ ಇದನ್ನ ಹೇಳಿ ಕೊಂಡಿದ್ದಾರೆ. ಹೀಗಾಗಿ ಐಪಿಎಲ್​ ಮೂಲಕವೇ ಕ್ಯಾಪ್ಟನ್ ಪಟ್ಟಕ್ಕೇರೋ ಇಂಟೆನ್ಷನ್ ಇಟ್ಕೊಂಡಿದ್ದಾರೆ.

ಆರ್ ಸಿಬಿ ಕ್ಯಾಪ್ಟನ್ ಆಗಲು ಬುಮ್ರಾ ಪ್ರಯತ್ನ?

ಬೌಲರ್‌ಗಳಿಗೆ ಕಡಿಮೆ ನಾಯಕತ್ವದ ಅವಕಾಶಗಳು ಸಿಗುತ್ತಿವೆ ಎಂದು ಅಸಮಾಧಾನ ತೋಡಿಕೊಂಡಿದ್ದ ಬುಮ್ರಾ ರೋಹಿತ್ ಶರ್ಮಾ ನಂತರ ಟೀಮ್‌ ಇಂಡಿಯಾದ ನಾಯಕತ್ವ ವಹಿಸಿಕೊಳ್ಳುವ ಟಾರ್ಗೆಟ್ ಇಟ್ಟುಕೊಂಡಿದ್ದಾರೆ.  ಕಪಿಲ್ ದೇವ್ ಮತ್ತು ಇಮ್ರಾನ್ ಖಾನ್ ನಾಯಕರಾಗಿ ವಿಶ್ವಕಪ್ ಗೆದ್ದಿದ್ದಾರೆ ಮತ್ತು ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್ ಕೂಡ ವಿಶ್ವಕಪ್ ಗೆದ್ದಿದ್ದಾರೆ ಎನ್ನುವ ಮೂಲಕ ತಮ್ಮ ಆಸೆಯನ್ನ ಸಂದರ್ಶನವೊಂದರಲ್ಲಿ ಬಿಚ್ಚಿಟ್ಟಿದ್ದಾರೆ. ಹೀಗಾಗಿ ಐಪಿಎಲ್​ನಲ್ಲೇ ಇದನ್ನ ಪ್ರೂವ್ ಮಾಡೋ ಯೋಜನೆಯಲ್ಲಿದ್ದಾರೆ. ಯಾವುದೇ ತಂಡದ ನಾಯಕನಾಗಿ ಕಾರ್ಯನಿರ್ವಹಿಸುವ ಮೂಲಕ ಟೀಮ್ ಇಂಡಿಯಾದ ಸಾರಥ್ಯ ವಹಿಸಲು ಸಿದ್ಧ ಎಂದಿದ್ದಾರೆ. ಅದ್ರಲ್ಲೂ ಬುಮ್ರಾ ಆರ್‌ಸಿಬಿ ಸೇರಲು ಪ್ರಯತ್ನಿಸುತ್ತಿದ್ದಾರೆ ಎಂದು ವರದಿಯಾಗಿದೆ. ವಿರಾಟ್ ಕೊಹ್ಲಿ ನಂತರ ಆರ್‌ಸಿಬಿ ನಾಯಕತ್ವ ವಹಿಸಿಕೊಂಡಿರುವ ಫಾಫ್ ಡುಪ್ಲೆಸಿಸ್ ಅವರ ವಯಸ್ಸಿನ ಕಾರಣದಿಂದ ಅವರನ್ನು ಉಳಿಸಿಕೊಳ್ಳುವ ಸಾಧ್ಯತೆ ಕಡಿಮೆ ಇದೆ. ಹೀಗಾಗಿ ಬುಮ್ರಾರನ್ನ ಆರ್​ಸಿಬಿಗೆ ತಗೊಂಡ್ರೆ ಬೌಲಿಂಗ್ ಸ್ಟ್ರೆಂತ್ ಹೆಚ್ಚಾಗಲಿದೆ. ಹೀಗಾಗಿ ಟ್ರೇಡಿಂಗ್ ವಿಂಡೋ ಮೂಲಕ ಅಥವಾ ಹರಾಜಿನಲ್ಲಿ ಬುಮ್ರಾ ಅವರನ್ನು ಖರೀದಿಸಲು ಆರ್‌ಸಿಬಿ ಫ್ರಾಂಚೈಸಿ ಹಣ ಮೀಸಲಿಟ್ಟಿದೆ. ನಾಯಕತ್ವ ಆಫರ್ ನೀಡಿದ್ರೆ ಬುಮ್ರಾ ಬೆಂಗಳೂರು ತಂಡಕ್ಕೆ ಬರೋದು ಕೂಡ ಕನ್ಫರ್ಮ್.

ಕ್ಯಾಪ್ಟನ್ಸಿಯಿಂದ ಇಳಿಸಿದ್ರೆ ಬೇರೆ ತಂಡಕ್ಕೆ ಹಾರ್ದಿಕ್ ಪಾಂಡ್ಯ

ಸದ್ಯ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಆಗಿರೋ ಹಾರ್ದಿಕ್ ಪಾಂಡ್ಯರನ್ನ ಮುಂದಿನ ಸೀಸನ್​ಗೆ ನಾಯಕತ್ವದಿಂದ ಇಳಿಸೋಕೆ ಫ್ರಾಂಚೈಸಿ ಮುಂದಾಗಿದೆ. ಹಾಗೇನಾದ್ರೂ ನಾಯಕತ್ವ ಹೋದ್ರೆ ಪಾಂಡ್ಯ ಆಟಗಾರನಾಗಿ ಮುಂಬೈ ತಂಡದಲ್ಲಿ ಮುಂದುವರಿಯಲ್ಲ. ಯಾಕಂದ್ರೆ ಈಗಾಗ್ಲೇ 2022, 23ರಲ್ಲಿ ಗುಜರಾತ್ ಟೈಟಾನ್ಸ್ ಮುನ್ನಡೆಸಿದ್ದ ಪಾಂಡ್ಯ 2024ರಲ್ಲಿ ಮುಂಬೈ ಕ್ಯಾಪ್ಟನ್ ಆಗಿದ್ರು. ಈಗಾಗ್ಲೇ ಮೂರು ವರ್ಷಗಳಿಂದ ಕ್ಯಾಪ್ಟನ್ಸಿಯ ರುಚಿ ಕಂಡಿದ್ದಾರೆ. ಅಲ್ದೇ ಟೀಂ ಇಂಡಿಯಾದ ಟ-20 ಫಾರ್ಮೆಟ್ ಕ್ಯಾಪ್ಟನ್ಸಿ ಸಿಗಲಿಲ್ಲ ಅನ್ನೋ ಬೇಸರ ಇದೆ. ಹೀಗಾಗಿ ಮುಂಬೈ ಸಾರಥ್ಯದಿಂದ ಇಳಿಸಿದ್ರೆ ನಾಯಕನ ಆಫರ್ ನೀಡಿದ ತಂಡಕ್ಕೆ ಪಾಂಡ್ಯ ಹಾರೋದು ಕನ್ಫರ್ಮ್ ಆಗಿದೆ..

ಫೈನಲಿ 2025ರ ಐಪಿಎಲ್​ಗೆ ಮುಂಬೈ ಫ್ರಾಂಚೈಸಿಯಲ್ಲಿ ದೊಡ್ಡ ದೊಡ್ಡ ಬದಲಾವಣೆಗಳೇ ನಡೆಯಲಿವೆ. ಯಾರನ್ನೇ ಕ್ಯಾಪ್ಟನ್ ಮಾಡಿದ್ರೂ ಒಂದಷ್ಟು ಪ್ಲೇಯರ್ಸ್ ತಂಡ ಬಿಡೋದಂತೂ ಪಕ್ಕಾ.

Shwetha M