T20I ಕ್ರಿಕೆಟ್‌ಗೆ ಬುಮ್ರಾ ಬ್ರೇಕ್! ಟೀಂ INDಗೆ 18 ತಿಂಗಳು ಶಾಕ್!
IPL ಆಡಲ್ವಾ ಬೂಂ.. ಬೂಂ.. ಬುಮ್ರಾ?

T20I ಕ್ರಿಕೆಟ್‌ಗೆ ಬುಮ್ರಾ ಬ್ರೇಕ್! ಟೀಂ INDಗೆ 18 ತಿಂಗಳು ಶಾಕ್!IPL ಆಡಲ್ವಾ ಬೂಂ.. ಬೂಂ.. ಬುಮ್ರಾ?

 

ಜಸ್ಪ್ರೀತ್ ಬುಮ್ರಾ..  ಟೀಂ ಇಂಡಿಯಾ ಪಾಲಿನ ದೇವರು.. ಆಪತ್ಬಾಂಧವ.. ಬುಮ್ರಾ ಮಾರಕ ಬೌಲಿಂಗ್ ದಾಳಿಗೆ ಭಾರತ ಅದೆಷ್ಟೋ ಪಂದ್ಯಗಳನ್ನ ಗೆದ್ದಿದೆ. ಬುಮ್ರಾ ಇದ್ದಾರೆ ಅಂದ್ರೆ ಭಾರತಕ್ಕೆ ಬ್ರಹ್ಮಾಸ್ತ್ರವಿದ್ದಂತೆ. ಬೌಲಿಂಗ್‌ಗೆ ಭೀಮ ಬಲವಿದ್ದಂತೆ. 2026ರ ವಿಶ್ವಕಪ್‌ ಟೀಂ ಇಂಡಿಯಾ ಗೆಲ್ಲೋಕೆ ಬುಮ್ರಾ ಬಲಿಷ್ಠ ಬೌಲಿಂಗ್ ಕೂಡ ಕಾರಣ. ಆದ್ರೆ ಈಗ ಬುಮ್ರಾ ಟೀಂ ಇಂಡಿಯಾಗೆ ಬಿಗ್ ಶಾಕ್ ನೀಡಿದ್ದಾರೆ. 18 ತಿಂಗಳ ಕಾಲ ಮುಂದಿನ ಟಿ20 ಪಂದ್ಯಗಳಲ್ಲಿ ಟೀಂ ಇಂಡಿಯಾದಲ್ಲಿ ಬುಮ್ರಾ ಕಾಣಲ್ಲ.

ಜಸ್ಪ್ರೀತ್ ಬುಮ್ರಾ ಬೌಲಿಂಗ್‌​ ಅಟ್ಯಾಕ್​ಗೆ ಎದುರಾಳಿ ಅಕ್ಷರಶಃ ಬೆಚ್ಚಿ ಬೀಳ್ತಾರೆ.  ಬೌಲಿಂಗ್​ನಲ್ಲಿ  ಮ್ಯಾಜೀಕ್ ಯಾರಾದ್ರೂ ಮಾಡ್ತಾರೆ ಅಂದ್ರೆ ಅದು ಜಸ್ಪ್ರೀತ್ ಬುಮ್ರಾ ಮಾತ್ರನೇ. ಇವರು ಹಾಕೋ ಪ್ರತೀ ಬಾಲ್​ ಕೂಡ ಬ್ಯಾಟರ್​ಗಳ ಎದೆ ನಡುಗಿಸಿ ಬಿಡುತ್ತೆ. ಅವ್ರ ಬೌಲಿಂಗ್​ನಲ್ಲಿ ಸಿಕ್ಸಸ್, ಫೋರ್ ಭಾರಿಸುವುದಿರಲಿ, ಡಿಫೆನ್ಸ್ ಮಾಡಿಕೊಂಡ್ರೆ ಸಾಕಪ್ಪ ಅಂತಾರೇ. ಆದ್ರೆ ಬುಮ್ರಾ ಮೇಲೆ ಈಗ ಬೆಟ್ಟದಷ್ಟು ಜವಾಬ್ದಾರಿಯಿದ್ದು, 18 ತಿಂಗಳು ಟಿ20ಯಲ್ಲಿ ಇಂಡಿಯಾದಲ್ಲಿ ಹೆಚ್ಚು ಕಾಣಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ.

ಟಿ20 ಕ್ರಿಕೆಟ್​ನಿಂದ ಬುಮ್ರಾ 18 ತಿಂಗಳು ಬ್ರೇಕ್

ಭಾರತ ಟಿ20 ತಂಡದಿಂದ 18 ತಿಂಗಳುಗಳ ಕಾಲ ಹೊರಗುಳಿದರೂ ಜಸ್​ಪ್ರೀತ್ ಬುಮ್ರಾ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸುತ್ತಿಲ್ಲ. ಬದಲಿಗೆ ಕೇವಲ ತಮ್ಮ ಫಿಟ್‌ನೆಸ್ ಕಾಪಾಡಿಕೊಳ್ಳಲು ಈ ವಿರಾಮ ಪಡೆಯುತ್ತಿದ್ದಾರೆ . ಏಕದಿನ ವಿಶ್ವಕಪ್​ಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.  ಜಸ್​ಪ್ರೀತ್ ಬುಮ್ರಾ 2024ರ ಟಿ20 ವಿಶ್ವಕಪ್​ ಬಳಿಕ ಸತತ ಟಿ20 ಪಂದ್ಯಗಳನ್ನಾಡಿದ್ದಾರೆ. ಇದಕ್ಕೆ ಮುಖ್ಯ ಕಾರಣ 2026ರ ಟಿ20 ವಿಶ್ವಕಪ್. ಇದೀಗ ಈ ವಿಶ್ವಕಪ್​ನಲ್ಲಿ ಭಾರತ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಅಲ್ಲದೆ ಟೀಮ್ ಇಂಡಿಯಾದ ಮುಂದಿನ ಗುರಿ 2027ರ ಏಕದಿನ ವಿಶ್ವಕಪ್. ಹೀಗಾಗಿ ಬುಮ್ರಾಗೆ ಟಿ20ಗೆ ಬ್ರೇಕ್ ನೀಡುವುದ್ದಕ್ಕೆ ನಿರ್ಧರಿಸಲಾಗಿದೆ. Vis flow..

ಐಪಿಎಲ್ ಆಡಲ್ವಾ ಬುಮ್ರಾ?

 ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ಹೊರಗುಳಿದರೂ ಜಸ್​ಪ್ರೀತ್ ಬುಮ್ರಾ ಐಪಿಎಲ್ ಆಡ್ತಾರಾ ಇಲ್ವಾ ಅನ್ನೋ ಪ್ರಶ್ನೆ ಎದ್ದಿದೆ. ಐಪಿಎಲ್‌ ಕಂಟಿನ್ಯೂ ಮ್ಯಾಚ್ ಇರುತ್ತೆ, ಇಂಜುರಿ ಆದ್ರೆ ಕಥೆಯೇನು ಪ್ರಶ್ನೆ ಬರುವುದು ಸಾಮಾನ್ಯ. ಆದ್ರೆ ಬುಮ್ರಾ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಮಾತ್ರ ಬ್ರೇಕ್ ತೆಗೆದುಕೊಳ್ಳಲಿದ್ದು,  ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಮುಂಬೈ ಇಂಡಿಯನ್ಸ್ ತಂಡದಲ್ಲಿರುವ ಬುಮ್ರಾ ಈ ಬಾರಿಯ ಐಪಿಎಲ್​ ಟೂರ್ನಿಯಲ್ಲೂ ಕಣಕ್ಕಿಳಿಯಲಿದ್ದಾರೆ.

ಒಲಿಂಪಿಕ್ಸ್​ನಲ್ಲೂ ಆಡಲಿದ್ದಾರೆ ಬುಮ್ರಾ

ಇನ್ನೂ  ಜಸ್​ಪ್ರೀತ್ ಬುಮ್ರಾ ಮುಂದಿನ 18 ತಿಂಗಳುಗಳ ಕಾಲ ಭಾರತದ ಪರ ದ್ವಿಪಕ್ಷೀಯ ಟಿ20 ಸರಣಿಗಳನ್ನು ಆಡುವುದಿಲ್ಲ. ಆದಾಗ್ಯೂ, 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಆಡುವ ಆಸಕ್ತಿಯನ್ನು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಮುಂಬರುವ ಒಲಿಂಪಿಕ್ಸ್​ ತಂಡದಲ್ಲಿ ಬುಮ್ರಾ ಆಡಲಿದ್ದಾರೆ. ಬುಮ್ರಾ ಬ್ರೇಕ್ ತೆಗೆದುಕೊಳ್ಳುತ್ತಿರುವುದು ಭಾರತ ತಂಡದ ಟಿ20 ಸರಣಿಗಳಿಂದ ಮಾತ್ರ. ಅಲ್ಲದೆ 2027ರ ಏಕದಿನ ವಿಶ್ವಕಪ್ ಹಾಗೂ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಬಳಿಕ ಅವರು ಮತ್ತೆ ಭಾರತ ಟಿ20 ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಮಸ್ಕಾರ.

Kishor KV